ಅಮೆರಿಕ ಕ್ರಿಕೆಟ್ ತಂಡದಲ್ಲಿ ಭಾರತೀಯ ಆಟಗಾರರು
ಭಾರತೀಯ ಮೂಲದ ಕ್ರಿಕೆಟಿಗರು ಎಷ್ಟಿದ್ದಾರೆ ಗೊತ್ತಾ..?
ಸೂಪರ್ ಓವರ್ನಲ್ಲಿ ನಡೆದ ಮ್ಯಾಜಿಕ್ ಹೇಗಿತ್ತು..?
ಗುರುವಾರ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕ್ಗೆ ಭಾರೀ ಮುಖಭಂಗವಾಗಿದೆ. ಅಮೆರಿಕಾದ ವಿರುದ್ಧ ಸೂಪರ್ ಓವರ್ನಲ್ಲಿ ಪಾಕ್ ಸೋತಿದ್ದು, ಕ್ರಿಕೆಟ್ ಲೋಕದಲ್ಲಿ ಅಮೆರಿಕ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.

ಡಲ್ಲಾಸ್ನ ಗ್ರ್ಯಾಂಡ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಅಮೆರಿಕ ತಂಡ ಪಾಕ್ ತಂಡವನ್ನು ಮಣಿಸಿದೆ. ಅದಕ್ಕೂ ಮುನ್ನ ಟಾಸ್ ಗೆದ್ದು ಜಾಣತನದಿಂದ ಬೌಲಿಂಗ್ ಆಯ್ದುಕೊಂಡ ಅಮೆರಿಕ ತಂಡ 20 ಓವರ್ನಲ್ಲಿ ಪಾಕ್ ತಂಡವನ್ನು 159 ರನ್ಗೆ ಹಿಡಿದಿಟ್ಟುಕೊಂಡಿತ್ತು.
ಶಾಬಾದ್ ಖಾನ್ 25 ಎಸೆತಕ್ಕೆ 40 ರನ್ ಒಂದು ಬೌಂಡರಿ ಮತ್ತು 6 ಸಿಕ್ಸ್ ಬಾರಿಸಿದ್ರು. ಆದರೆ ಉಳಿದ ಆಟಗಾರರ ಪರ್ಫಾಮೆನ್ಸ್ ಅಷ್ಟೇನು ಚೆನ್ನಾಗಿರಲಿಲ್ಲ. ಅಮೆರಿಕ ಬೌಲರ್ಸ್ ನೋಸ್ತೂಶ್ ಕೆಂಜಿಗೆ 3, ಸೌರಭ್ ನೇತ್ರವಾಲ್ಕರ್ 2, ಅಲಿಖಾನ್ ಮತ್ತು ಜಸ್ದೀಪ್ ಸಿಂಗ್ ತಲಾ 1 ವಿಕೆಟ್ ಕಬಳಿಸುವ ಮೂಲಕ ಪಾಕ್ಗೆ ಕಾಡಿದರು.
ಇದನ್ನೂ ಓದಿ:ಆ 4 ಖಾತೆ ಕೇಳಂಗಿಲ್ಲ ಎಂದ ಬಿಜೆಪಿ.. ಚೌಕಾಸಿ ಮಾಡಿ ಹೊಸ ಫಾರ್ಮೂಲ ಮುಂದಿಟ್ಟ ನಾಯ್ಡು..!
ಅತ್ತ ಪಾಕ್ ನೀಡಿದ ಟಾರ್ಗೆಟ್ ಬೆನ್ನತ್ತಿದ ಅಮೆರಿಕ ಮಾತ್ರ ಗೆಲುವನ್ನು ಸಂಭ್ರಮಿಸುವ ಗುರಿ ಹೊಂದಿತ್ತು. ಅದರಲ್ಲೂ ಮೋನಾಂಕ್ ಪಟೇಲ್ 38 ಎಸೆತಕ್ಕೆ 7 ಬೌಂಡರಿ, 1 ಸಿಕ್ಸ್ ಬಾರಿ ಅರ್ಧ ಶತಕ ಪೂರೈಸಿದರು. ಅತ್ತ ಆ್ಯಂಡ್ರಿಸ್ ಗಸ್ ಮತ್ತು ಆ್ಯರೋನ್ ಜೋನ್ಸ್ ಇಬ್ಬರು 26 ಎಸೆತಕ್ಕೆ 35, 36 ರನ್ ಬಾರಿಸಿದರು. ಕೊನೆಗೆ ಪಾಕ್ ನೀಡಿದ ಟಾರ್ಗೆಟ್ಗೆ ಬಂದು ಮುಟ್ಟಿಸುವ ಮೂಲಕ ಪಂದ್ಯ ಟೈ ಆಯಿತು. ವಿಶೇಷ ಅಂದರೆ ಭಾರತೀಯ ಮೂಲದ ಮೋನಾಂಕ್ ಪಟೇಲ್ ಅವರು 38 ಎಸೆತಗಳಲ್ಲಿ 50 ರನ್ಗಳಿಸಿರೋದು ತಂಡದ ಗೆಲುವಿಗೆ ಸಹಾಯವಾಯಿತು. ಅದೇ ರೀತಿ ನಿತೀಶ್ ಕುಮಾರ್ ಕೂಡ ಅಮೆರಿಕ ಪರ ಬ್ಯಾಟಿಂಗ್ ಮಾಡಿದರು. ಅವರು ಬಾರಿಸಿದ ಒಂದು ಬೌಂಡರಿಯಿಂದಲೇ ಅಮೆರಿಕ ಗೆಲುವು ಸಾಧಿಸಿದೆ.
ಸೂಪರ್ ಓವರ್ ಸೂಪರ್ ಮ್ಯಾಜಿಕ್
ಪಂದ್ಯ ಟೈ ಆದ ಬಳಿಕ ಸೂಪರ್ ಓವರ್ಗೆ ಕೊಂಡೊಯ್ಯಿತು. ಇದರಲ್ಲಿ ಪಾಕ್ 1 ವಿಕೆಟ್ ಒಪ್ಪಿಸಿ 13 ರನ್ ಟಾರ್ಗೆಟ್ ನೀಡಿತು. ಆದರೆ ಅಮೆರಿಕ ತಂಡ ಒಂದು ವಿಕೆಟ್ ನೀಡಿದರು 18 ರನ್ ಕಬಳಿಸಿತು. ಒಟ್ಟಿನಲ್ಲಿ ಪಾಕ್ಗೆ ಅಮೆರಿಕ ತಾವೇನು ಕಡಿಮೆ ಇಲ್ಲ ಎಂಬುದನ್ನು ನಿನ್ನೆಯ ಪಂದ್ಯದಲ್ಲಿ ತೋರಿಸಿಕೊಟ್ಟಿದೆ.
ಇದನ್ನೂ ಓದಿ:IND vs PAK ಪಂದ್ಯಕ್ಕೆ ಭಾರೀ ಡಿಮ್ಯಾಂಡ್.. ಜಸ್ಟ್ 10 ಸೆಕೆಂಡ್ಸ್ ಜಾಹೀರಾತಿಗೆ 10, 20 ಲಕ್ಷ ಅಲ್ಲವೇ ಅಲ್ಲ..!
ಅಮೆರಿಕ ತಂಡದಲ್ಲಿ ಭಾರತೀಯರು..!
ಇನ್ನು ಅಮೆರಿಕ ಕ್ರಿಕೆಟ್ ತಂಡದಲ್ಲಿ ಭಾರತೀಯ ಮೂಲದವರೇ ಹೆಚ್ಚಾಗಿದ್ದಾರೆ. ಮೋನಾಕ್ ಪಟೇಲ್ ಅವರು ಗುಜರಾತ್ನ ಆನಂದ್ ಮೂಲದವರಾಗಿದ್ದಾರೆ. ಬೌಲರ್ ಹರ್ಮೀತ್ ಸಿಂಗ್ ಮುಂಬೈ ಮೂಲದವರಾದ್ರೆ, ಸೌರಭ್ ಕೂಡ ಮಹಾರಾಷ್ಟ್ರದವರು. ಇನ್ನು ಮಿಲಿಂದ್ ಕುಮಾರ್ ದೆಹಲಿ ಮೂಲದವರಾಗಿದ್ದಾರೆ. ನಿಸ್ಸಾರ್ಗ್ ಪಟೇಲ್ ಗುಜರಾತಿನವರಾಗಿದ್ದಾರೆ. ಇನ್ನು ಅಲಿ ಖಾನ್ ಮತ್ತು ಶಯಾನ್ ಜಹಂಗೀರ್ ಅವರು ಪಾಕಿಸ್ತಾನ ಮೂಲದವರಾಗಿದ್ದಾರೆ.
ಇದನ್ನೂ ಓದಿ:ಅಪ್ಪ, ಅಮ್ಮ ಇಬ್ಬರೂ IAS; 10ನೇ ಮಹಡಿಯಿಂದ ಜಿಗಿದು ಪುತ್ರಿ ಸಾವು.. ಡೆತ್ನೋಟ್ನಲ್ಲಿ ಕಾರಣ ರಿವೀಲ್..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ