ಹೊಸ ಫೋಟೋಸ್ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಗೊಂಬೆ
ಶಾಂತಿನಗರ ಕೋರ್ಟ್ನಲ್ಲಿ ಡಿವೋರ್ಸ್ಗಾಗಿ ಅರ್ಜಿ ಸಲ್ಲಿಸಿದ ದಂಪತಿ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿತ್ತು ನಿವೇದಿತಾ ಗೌಡ ರೀಲ್ಸ್
ಕನ್ನಡದ ಖ್ಯಾತ ಱಪರ್ ಚಂದನ್ ಶೆಟ್ಟಿ ಹಾಗೂ ಗಿಚ್ಚಿಗಿಲಿಗಿಲಿ ಖ್ಯಾತಿಯ ನಿವೇದಿತಾ ಗೌಡ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಶಾಂತಿನಗರ ಕೋರ್ಟ್ನಲ್ಲಿ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದಾರೆ. ಜೂನ್ 6ಂದು ಫ್ಯಾಮಿಲಿ ಕೋರ್ಟ್ನಲ್ಲಿ ಚಂದನ್ ಶೆಟ್ಟಿ ದಂಪತಿ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದಾರೆ. ಇವರಿಬ್ಬರ ವಿಚ್ಛೇದನಕ್ಕೆ ಕೋರ್ಟ್ ಅನುಮತಿ ನೀಡಿದ್ದು, ಆದೇಶದ ಪ್ರತಿ ಸಿಕ್ಕ ಮೇಲೆ ಡಿವೋರ್ಸ್ ಅಧಿಕೃತವಾಗಲಿದೆ.
ಇದನ್ನೂ ಓದಿ: ಚಂದನ್ ಶೆಟ್ಟಿ, ನಿವೇದಿತಾ ಡಿವೋರ್ಸ್ಗೆ ಮುಂದಾಗಿದ್ದೇಕೆ? ಫ್ಯಾಮಿಲಿ ಕೋರ್ಟ್ನಲ್ಲಿ ಹೇಳಿದ್ದೇನು?
ಗಾಯಕ ಚಂದನ್ ಶೆಟ್ಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ಅವರು ಮದುವೆ ಆಗಿ ಸುಖ ಸಂಸಾರ ನಡೆಸುತ್ತಿದ್ದರು. ಬಿಗ್ ಬಾಸ್ ಮನೆಯಲ್ಲಿ ಪರಿಚಯಗೊಂಡು, ನಂತರ ಆ ಪರಿಚಯ ಪ್ರೀತಿಗೆ ತಿರುಗಿ, ಕೊನೆಗೆ ಇಬ್ಬರೂ ಮದುವೆ ಆದರು. ನಿವೇದಿತಾ ಅವರಿಗೆ ದಸರಾ ವೇದಿಕೆ ಮೇಲೆ ಚಂದನ್ ಪ್ರಪೋಸ್ ಮಾಡಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೊಂದು ಅದ್ಭುತ ಕ್ಷಣವಾಗಬೇಕಿತ್ತಾದರೂ, ಕಾಂಟ್ರವರ್ಸಿಯಿಂದಾಗಿ ನಿವೇದಿತಾ ನೊಂದುಕೊಂಡರು. 2020ರಲ್ಲಿ ಚಂದನ್ ಶೆಟ್ಟಿ ನಿವೇದಿತಾ ಗೌಡ ಅವರ ಮದುವೆಯನ್ನು ಕುಟುಂಬಸ್ಥರು ಬಹಳ ಅದ್ಧೂರಿಯಾಗಿ ಮಾಡಿದ್ದರು. ಈ ತಾರಾ ಜೋಡಿ ರಾಜ-ರಾಣಿ ಸೇರಿದಂತೆ ಕನ್ನಡದ ಹಲವು ರಿಯಾಲಿಟಿ ಶೋಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು.
ಹೊಸ ಹೊಸ ರೀಲ್ಸ್ ಮಾಡುಲ ಮೂಲಕ ಸಖತ್ ಫೇಮಸ್ ಕೂಡ ಆದರು. ಹೀಗೆ ಚಂದನ್ ಸಿನಿಮಾ ಶೂಟಿಂಗ್ನಲ್ಲಿ ಬ್ಯೂಸಿಯಾದರು. ಆದರೆ ನಿವೇದಿತಾ ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟೀವ್ ಆಗಿದ್ದರು. ಜೊತೆಗೆ ಹಾಟ್ ಆಗಿರೋ ಫೋಟೋ ಮತ್ತು ವಿಡಿಯೋಗಳನ್ನು ನಿವೇದಿತಾ ಗೌಡ ಶೇರ್ ಮಾಡಿಕೊಳ್ಳುತ್ತಿದ್ದರು. ಇನ್ನು ಇದೇ ಹಾಟ್ ವಿಡಿಯೋಗಳನ್ನು ನೋಡಿದ ನೆಟ್ಟಿಗರು ಬೇಸರ ಹೊರ ಹಾಕಿದ್ದರು.
ನೀವು ಏಕೆ ಈ ರೀತಿಯಲ್ಲಿ ಬಟ್ಟೆ ಹಾಕಿಕೊಳ್ಳುತ್ತೀರಾ? ನಿಮ್ಮ ಮನೆಯಲ್ಲಿ ಯಾರು ಕೇಳುವುದಿಲ್ಲವೇ? ಚಂದನ್ ಗೌಡ ನೀವು ವಿಡಿಯೋಗಳನ್ನು ನೋಡಿ ಅಂತ ಹೀಗೆ ಸಾಕಷ್ಟು ನೆಗೆಟಿವ್ ಕಾಮೆಂಟ್ಸ್ಗಳು ಬರುತ್ತಿದ್ದವು. ಆದರೆ ಇದ್ಯಾವುದಕ್ಕೂ ಕ್ಯಾರೆ ಎನ್ನದೇ ನಿವೇದಿತಾ ಗೌಡ ಇನ್ನೂ ಹತ್ತು ಹಲವಾರು ಹಾಟ್ ಫೋಟೋಸ್ಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು. ಆದರೆ ಇದೀಗ ಈ ಇಬ್ಬರು ನಮ್ಮ ಕರಿಯರ್ ಬದಲಾವಣೆ ಬಯಸಿದ್ದೇವೆ. ನಿವೇದಿತಾ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಾಳೆ. ಕೆಲ ಭಿನ್ನಾಭಿಪ್ರಾಯಗಳ ಬಗ್ಗೆ ಉಲ್ಲೇಖಿಸಿದ ದಂಪತಿ ಕೋರ್ಟ್ನಲ್ಲಿ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ