ಕನ್ನಡದಲ್ಲೂ ಸಿನಿಮಾ ಮಾಡಿದ್ದ ರಾಮೋಜಿ ರಾವ್
ಒಂದೆರಡಲ್ಲ ಅನೇಕ ಸಂಸ್ಥೆಗಳನ್ನು ಹುಟ್ಟು ಹಾಕಿದ ಧುರೀಣ
ಸುದ್ಧಿ ಸಂಸ್ಥೆ, ವಿಶ್ವ ವಿಖ್ಯಾತ ಫಿಲ್ಮ್ ಸಿಟಿಯನ್ನು ನಿರ್ಮಾಣ ಮಾಡಿದ್ದಾರೆ
ರಾಮೋಜಿ ಫಿಲ್ಮ್ ಸಿಟಿಯ ಮುಖ್ಯಸ್ಥ ರಾಮೋಜಿ ರಾವ್ ನಿಧನರಾಗಿದ್ದಾರೆ. ಅಧಿಕ ರಕ್ತದೊತ್ತಡ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗಿನ ಜಾವ 4.30ಕ್ಕೆ ಹೈದರಾಬಾದ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕೃಷಿ ಕುಟುಂಬದಿಂದ ಬಂದ ಅನ್ನದಾತ
ರಾಮೋಜಿ ರಾವ್ ಅವರ ಪೂರ್ತಿ ಹೆಸರು ಚೆರಕುರಿ ರಾಮೋಜಿ ರಾವ್. 16 ನವೆಂಬರ್ 1936ರಲ್ಲಿ ಆಂಧ್ರಪ್ರದೇಶ ಕೃಷ್ಣಾ ಜಿಲ್ಲೆಯ ಪೆದಪುರಿಯಲ್ಲಿ ಜನಿಸಿದರು. ಕೃಷಿ ಕುಟುಂಬದಿಂದ ಬಂದ ಇವರು ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮೆರೆದರು. ಭಾರತೀಯ ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರ.
ರಾಮೋಜಿ ಗ್ರೂಪ್ನ ನಿರ್ಮಾಣ
ಉದ್ಯಮ ಕ್ಷೇತ್ರದಲ್ಲಿ, ಮಾಧ್ಯಮ ಮತ್ತು ಸಿನಿಮಾ ನಿರ್ಮಾಣ ಕ್ಷೇತ್ರದಲ್ಲೂ ಇವರು ಕೆಲಸ ಮಾಡಿದ್ದಾರೆ. ರಾಮೋಜಿ ಗ್ರೂಪ್ನ ಅಧ್ಯಕ್ಷರಾಗುವ ಮೂಲಕ ಅನೇಕ ಜನರಿಗೆ ಉದ್ಯೋಗ ನೀಡಿ ಅವರ ಜೀವನಕ್ಕೆ ಬೆಳಕು ಚೆಲ್ಲಿದ್ದಾರೆ.
ಅನೇಕ ಸಂಸ್ಥೆಗಳನ್ನು ಕಟ್ಟಿದ ಪುಣ್ಯಾತ್ಮ
ವಿಶ್ವ ವಿಖ್ಯಾತ ರಾಮೋಜಿ ರಾವ್ ಫಿಲ್ಮ್ ಸಿಟಿ, ಈನಾಡು ಪತ್ರಿಕೆ, ಈಟಿವಿ ನೆಟ್ವರ್ಕ್, ಅನ್ನದಾತ-ನಿಯತಕಾಲಿಕೆ, ಉಷಾ ಕಿರಣ್ ಮೂವೀಸ್, ಚಿಟ್ಫಂಡ್, ಡಾಲ್ಫಿನ್ ಗ್ರೂಪ್ ಆಫ್ ಹೋಟೆಲ್ಗಳು, ಕಲಾಂಜಲಿ ಶಾಪಿಂಗ್ ಮಾಲ್, ಪ್ರಿಯಾ ಉಪ್ಪಿನಕಾಯಿ, ಮಯೂರಿ ಡಿಸ್ಟ್ರಿಬ್ಯೂಟರ್ಸ್ಗಳನ್ನು ನಿರ್ಮಿಸಿ ಮುನ್ನೆಸುತ್ತಿದ್ದರು.
ಇದನ್ನೂ ಓದಿ: 5 ಗಂಟೆಗಳ ಕಾಲ ಭವಾನಿ ರೇವಣ್ಣ ವಿಚಾರಣೆ.. ತನಿಖೆ ವೇಳೆ ಏನು ಹೇಳಿದ್ರು ಗೊತ್ತಾ?
ಪ್ರಶಸ್ತಿಗಳ ಸುರಿಮಳೆ
ಚೆರಕುರಿ ರಾಮೋಜಿ ರಾವ್ ಅವರ ಸಾಧನೆಗೆ ಪದ್ಮ ವಿಭೂಷಣವನ್ನು ನೀಡಿ ಗೌರವಿಸಲಾಗಿದೆ. ಇದಲ್ಲದೆ ಸಿನಿಮಾ ಕ್ಷೇತ್ರದಲ್ಲೂ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನಾಲ್ಕು ಫಿಲ್ಮ್ಫೇರ್ ಪ್ರಶಸ್ತಿ, 5 ನಂದಿ ಪ್ರಶಸ್ತಿ, ತೆಲುಗು ಚಿತ್ರರಂಗದಿಂದ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಇದನ್ನೂ ಓದಿ: ದೂರವಾದ ಚಂದನ್-ನಿವೇದಿತಾ ಜೋಡಿಹಕ್ಕಿ.. ಇವ್ರ ಮೇಲೆ ಯಾರ ಕಣ್ಣು ಬಿತ್ತೋ ಎಂದ ಫ್ಯಾನ್ಸ್!
ಕನ್ನಡದಲ್ಲೂ ಸಿನಿಮಾ ಮಾಡಿದ ಖ್ಯಾತಿ
ಇನ್ನು ಕನ್ನಡ ಸಿನಿಮಾ ರಂಗಕ್ಕೂ ರಾಮೋಜಿ ರಾವ್ ಕೊಡುಗೆ ನೀಡಿದ್ದಾರೆ. ಕನ್ನಡದಲ್ಲಿ ನಿನಗಾಗಿ, ಚಿತ್ರಾ, ಆನಂದ, ಸವಾರಿ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.
ಮಗನನ್ನು ಕಳೆದುಕೊಂಡಿದ್ದರು
ರಾಮೋಜಿ ರಾವ್ ಅವರ ಬಾಳ ಸಂಗಾತಿ ರಮಾ ದೇವಿ. ಇವರ ಕಿರಿಯ ಮಗ ಚೆರಕುರಿ ಸುಮನ್ 7 ಸೆಪ್ಟೆಂಬರ್ 2012ರಲ್ಲಿ ಲ್ಯುಕೇಮಿಯಾದಿಂದ ಕೊನೆಯುಸಿರೆಳೆದರು.
ಉಸಿರು ಚೆಲ್ಲಿದ ರಾಮೋಜಿ ರಾವ್
ಇಂದು ರಾಮೋಜಿ ರಾವ್ ನಿಧನರಾಗಿದ್ದು, ಓರ್ವ ಮಗ ಕಿರಣ್ ಪ್ರಭಾಕರನ್ನು ಅಗಲಿದ್ದಾರೆ. ಇವರ ಸಾವಿಗೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ