ಪಾಕ್ ವಿರುದ್ಧ ಪಂದ್ಯದಲ್ಲಿ ರೆಕಾರ್ಡ್ ಬರೆಯಲು ಸಜ್ಜಾದ ವಿರಾಟ್
ಶ್ರೀಲಂಕಾದ ಬ್ಯಾಟ್ಸ್ಮನ್ ರೆಕಾರ್ಡ್ ಬ್ರೇಕ್ ಮಾಡ್ತಾರಾ ಕೊಹ್ಲಿ?
ಪಾಕಿಸ್ತಾನದ ವಿರುದ್ಧ ವಿರಾಟ್ ಕೊಹ್ಲಿ ಯಾವ ದಾಖಲೆ ಮಾಡ್ತಾರೆ?
ಭಾರತ-ಪಾಕಿಸ್ತಾನ ಕ್ರಿಕೆಟ್ ಲೋಕದ ಬದ್ಧ ವೈರಿಗಳು. ಈಗಾಗಲೇ ಈ ಪರಮವೈರಿಗಳ ಕಾದಾಟಕ್ಕೆ ನಸ್ಸೌ ಕೌಂಟಿ ಕ್ರಿಕೆಟ್ ಮೈದಾನ ಸಜ್ಜಾಗಿದೆ. ಪಾಕಿಸ್ತಾನದ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ವಿಶ್ವ ದಾಖಲೆ ಬರೆಯುವ ನಿರೀಕ್ಷೆಯಲ್ಲಿದ್ದಾರೆ. ಈ ದಾಖಲೆಯನ್ನು ಕೇವಲ ಪಾಕ್ ವಿರುದ್ಧ ಮಾತ್ರ ಕೊಹ್ಲಿ ನಿರ್ಮಿಸುತ್ತಿರುವ ಮಹತ್ತರ ರೆಕಾರ್ಡ್ ಆಗಿದೆ. ಸದ್ಯ ಈ ರೆಕಾರ್ಡ್ ಯಾವುದೆಂದು ಇಲ್ಲಿ ವಿವರ ಕೊಡಲಾಗಿದೆ.
ಇದನ್ನೂ ಓದಿ: ನಾಳೆ ರೋಹಿತ್ ಶರ್ಮಾ ಮೈದಾನಕ್ಕೆ ಇಳಿಯದಿದ್ರೆ ಕ್ಯಾಪ್ಟನ್ ಯಾರು.. ಪಾಂಡ್ಯನಾ, ವಿರಾಟ್ ಕೊಹ್ಲಿನಾ?
ಪಾಕಿಸ್ತಾನದ ತಂಡದ ವಿರುದ್ಧ ಇಲ್ಲಿವರೆಗೆ ಅತಿ ಹೆಚ್ಚು ಬೌಂಡರಿಗಳನ್ನು ಬಾರಿಸಿದ ಪಟ್ಟಿಯಲ್ಲಿ ಶ್ರೀಲಂಕಾದ ಮಾಜಿ ಬ್ಯಾಟ್ಸ್ಮನ್ ಮಹೇಲಾ ಜಯವರ್ಧನೆ ಮೊದಲನೇಯವರು ಆಗಿದ್ದಾರೆ. ಜಯವರ್ಧನೆ ಒಟ್ಟು 31 ಇನ್ನಿಂಗ್ಸ್ನಲ್ಲಿ 111 ಬೌಂಡರಿಗಳನ್ನು ಬಾರಿಸಿ ರೆಕಾರ್ಡ್ ಮಾಡಿದ್ದಾರೆ. ಸದ್ಯ ಈ ದಾಖಲೆಯನ್ನು ಹಿಂದಿಕ್ಕುವಲ್ಲಿ ಕಿಂಗ್ ಕೊಹ್ಲಿ ಮುಂಚೂಣಿಯಲ್ಲಿದ್ದಾರೆ. ಏಕೆಂದರೆ ನಾಳೆ ನಡೆಯುವ ಪಂದ್ಯದಲ್ಲಿ 9 ಫೋರ್ಗಳನ್ನು ವಿರಾಟ್ ಬಾರಿಸಿದರೆ ಪಾಕ್ ವಿರುದ್ಧ ಅತಿ ಹೆಚ್ಚು ಬೌಂಡರಿಗಳನ್ನು ಬಾರಿಸಿರುವ ಹೆಸರಲ್ಲಿ ಮೊದಲಿಗರು ಆಗಲಿದ್ದಾರೆ.
ಇದನ್ನೂ ಓದಿ: ಪಾಕ್ ವಿರುದ್ಧ ಟೀಮ್ ಇಂಡಿಯಾ ಎಷ್ಟು T20 ವಿಶ್ವಕಪ್ ಪಂದ್ಯಗಳನ್ನ ಗೆದ್ದಿದೆ.. ಡ್ರಾ ಆಗಿದ್ದು ಯಾವ ಪಂದ್ಯ?
ಅಂದರೆ ಇಲ್ಲಿವರೆಗೆ ವಿರಾಟ್ ಕೊಹ್ಲಿ ಪಾಕ್ ವಿರುದ್ಧ 103 ಬೌಂಡರಿಗಳನ್ನು ಬಾರಿಸಿದ್ದಾರೆ. ಇನ್ನು 9 ಫೋರ್ಗಳನ್ನು ಹೊಡೆದರಿ ಒಟ್ಟು 112 ಫೋರ್ ಬಾರಿಸಿದಂತೆ ಆಗುವುದರಿಂದ ಕೊಹ್ಲಿ, ಜಯವರ್ಧನೆ ದಾಖಲೆಯನ್ನು ಬ್ರೇಕ್ ಆದಂತೆ ಆಗುತ್ತದೆ. ಹೀಗಾಗಿ ನಾಳೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ 9 ಫೋರ್ಗಳನ್ನು ಬಾರಿಸಿದರೆ ರೆಕಾರ್ಡ್ ಮಾಡಿದಂತೆ ಆಗುತ್ತದೆ. 2022ರಲ್ಲಿ ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ನ ಪಂದ್ಯದಲ್ಲಿ ಭಾರತ ಸಂಕಷ್ಟಕ್ಕೆ ಸಿಲುಕಿದ್ದಾಗ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಅಜೇಯ 82 ರನ್ ಬಾರಿಸಿ ಪಾಕ್ ಅನ್ನು ಸೋಲಿಸಿದ್ದರು. ಹೀಗಾಗಿ ಅಂದಿನ ವಿರಾಟ್ ಬ್ಯಾಟಿಂಗ್ ಮತ್ತೆ ಮರುಕಳಿಸುತ್ತಾ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ