ಟೀಂ ಇಂಡಿಯಾದ ಮೇಲೆ ಎಲ್ಲರ ಕಣ್ಣು.. ಗೆಲ್ಲುವ ನಿರೀಕ್ಷೆ
ಭಾರತ ಮಾತ್ರವಲ್ಲ ವಿದೇಶದಲ್ಲೂ ಇಂಡಿಯಾದ ಮೇಲೆ ಬೆಟ್ಟಿಂಗ್
ಒಂದೆರಡಲ್ಲ, 5 ಕೋಟಿ ಬಾಜಿ ಕಟ್ಟಿದ ಈ ರ್ಯಾಪರ್ ಯಾರು ಗೊತ್ತಾ?
ಇಂದು ಎಲ್ಲರ ಕಣ್ಣು ಟೀಂ ಇಂಡಿಯಾದ ಮೇಲಿದೆ. ಕಾರಣ 2024ರ ಟಿ20 ವಿಶ್ವಕಪ್ನಲ್ಲಿ ರೋಹಿತ್ ಪಡೆ ಪಾಕಿಸ್ತಾನವನ್ನು ಮೊದಲ ಬಾರಿಗೆ ಎದುರಿಸುತ್ತಿದೆ. ಹಾಗಾಗಿ ಭಾರತ ತಂಡದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಅನೇಕರು ಟೀಂ ಇಂಡಿಯಾ ಗೆಲ್ಲುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಹಲವರು ಈಗಾಗಲೇ ಬೆಟ್ಟಿಂಗ್ಗೂ ಇಳಿದಿದ್ದಾರೆ. ಕೋಟ್ಯಾಂತರ ರೂಪಾಯಿ ಮುಂದಿಟ್ಟು ಟೀಂ ಇಂಡಿಯಾ ಇಂದು ಜಯಿಸುತ್ತದೆ ಎಂದು ಬಾಜಿ ಕಟ್ಟಿದ್ದಾರೆ.
ಹೌದು. ಭಾರತ ಮತ್ತು ಪಾಕ್ ಪಂದ್ಯ ರಣರೋಚಕದಿಂದ ಕೂಡಿರುತ್ತದೆ. ಅದರಂತೆಯೇ ಇಂದು ನಡೆಯುವ ಪಂದ್ಯದ ಮೇಲೆ ಎಲ್ಲರ ಕಣ್ಣಿದೆ. ನ್ಯೂಯಾರ್ಕ್ನ ನಸ್ಸೌ ಕೌಂಟಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಪಂದ್ಯ ಏರ್ಪಡಲಿದೆ. ಆದರೆ ಇಂದಿನ ಪಂದ್ಯದಲ್ಲಿ ಭಾರತ ಗೆಲ್ಲುತ್ತೆ ಅಂತ ಭಾರತೀಯರು ಮಾತ್ರವಲ್ಲ, ವಿದೇಶಿಗರು ಬೆಟ್ಟಿಂಗ್ ಕಟ್ಟಿದ್ದಾರೆ. ಅದರಂತೆಯೇ ಕೆನಡಾದ ಖ್ಯಾತ ರ್ಯಾಪರ್ ಆಬ್ರೆ ಡ್ರೇಕ್ ಗ್ರಹಾಂ 5 ಕೋಟಿ ಬೆಟ್ಟಿಂಗ್ ಕಟ್ಟಿದ್ದಾರೆ.
ಇದನ್ನೂ ಓದಿ: INDvsPAK ಪಂದ್ಯಕ್ಕೆ ಭಾರೀ ಡಿಮ್ಯಾಂಡ್! ಬರೀ 10 ಸೆಕೆಂಡ್ ಜಾಹೀರಾತಿಗೆ ಇಷ್ಟೊಂದು ಪಾವತಿಸಬೇಕಾ?
ಡ್ರೇಕ್ ಬೆಟ್ಟಿಂಗ್ ಕಟ್ಟಿದ್ದು ಇದೇ ಮೊದಲಲ್ಲ. IPL 2024 ರ ಫೈನಲ್ಗೆ ಮುಂಚಿತವಾಗಿ, ಕೆನಡಾದ ರ್ಯಾಪರ್ ಕೋಲ್ಕತ್ತಾ ನೈಟ್ ರೈಡರ್ಸ್ ಚಾಂಪಿಯನ್ ಆಗಿ ಹೊರಹೊಮ್ಮುತ್ತೆ ಎಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 2 ಕೋಟಿ ಪಂತವನ್ನು ಕಟ್ಟಿದ್ದರು. ಇದೀಗ ಟೀಂ ಇಂಡಿಯಾದ ಮೇಲೆ ಬೆಟ್ಟಿಂಗ್ ಕಟ್ಟಿದ್ದಾರೆ.
ಅಚ್ಚರಿ ಸಂಗತಿ ಎಂದರೆ ಟೀಂ ಇಂಡಿಯಾ ಮತ್ತು ಪಾಕ್ ಟಿ20 ವಿಶ್ವಕಪ್ನಲ್ಲಿ 9ನೇ ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಮೆನ್ ಇನ್ ಬ್ಲೂ 8 ಬಾರಿ ಜಯಿಸಿದೆ. ಪಾಕಿಸ್ತಾನ 2021ರಲ್ಲಿ ಒಮ್ಮೆ ಮಾತ್ರ ಗೆದ್ದಿತ್ತು.
ಇದನ್ನೂ ಓದಿ: ಧೋನಿ, ಯುವಿ, ಗಂಭೀರ್ಗಿಂತ ಪಾಕ್ ವಿರುದ್ಧ ಕೊಹ್ಲಿಯೇ ಬೆಸ್ಟ್.. ಟ್ರ್ಯಾಕ್ ರೆಕಾರ್ಡ್ ಕೇಳಿದ್ರೆ ಶಾಕ್ ಆಗ್ತೀರಾ!
ಇಂದಿನ ಪಂದ್ಯದ ಮೇಲೆ ಎಲ್ಲರ ನಿರೀಕ್ಷೆ ಇದೆ. ಅದರಲ್ಲೂ ಭಾರತ ಸರಳವಾಗಿ ಗೆಲ್ಲಲಿದೆ ಎಂದು ಹೇಳಲಾಗುತ್ತಿದೆ. ಆದರೂ ಇಂದು ಸಂಜೆ ನಡೆಯುತ್ತಿರುವ ಪಂದ್ಯವನ್ನು ಕಾಣಲು ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ