ಹೆಂಡತಿಗೆ ಡಿವೋರ್ಸ್ ನೀಡಲು ಮುಂದಾದ ಗಂಡ
ಮನನೊಂದು ಫ್ಲೈಓವರ್ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಹೆಂಡತಿ
3 ವರ್ಷದ ಮಗನನ್ನು ಬಿಟ್ಟು 40 ಅಡಿ ಎತ್ತರದ ಫ್ಲೈಓವರ್ನಿಂದ ಜಿಗಿದ ಮಹಿಳೆ
ಪತಿ ವಿಚ್ಛೇದನ ನೀಡಲು ಮುಂದಾಗಿರುವುದಕ್ಕೆ ಬೇಸರಗೊಂಡ ಹೆಂಡತಿ ಫ್ಲೈಓವರ್ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಚೆನ್ನೈನ ವೆಲಚೇರಿಯಲ್ಲಿ ದುರ್ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಶೋಭಾ (40) ಎಂದು ಗುರುತಿಸಲಾಗಿದೆ. ತಾಂಬರಂ ಸಮೀಪದ ಸೆಂಬಕ್ಕಂನಲ್ಲಿ ವಾಸಿಸುತ್ತಿದ್ದರು. ನಾಲ್ಕು ವರ್ಷದ ಹಿಂದೆ ಶೋಭಾಗೆ ಕಾರ್ತಿಕ್ (33) ಎಂಬವರ ಜೊತೆ ವಿವಾಹವಾಗಿತ್ತು. ಈ ದಂಪತಿಗೆ 3 ವರ್ಷದ ಮಗನಿದ್ದಾನೆ.
ಇದನ್ನೂ ಓದಿ: ಬಾರೋ ಬಾರೋ ಮಳೆರಾಯ.. ಹೆಚ್ಚುತ್ತಿದೆ KRS ಡ್ಯಾಂನ ನೀರಿನ ಮಟ್ಟ! ಇಂದು ಎಷ್ಟಿದೆ?
ದಂಪತಿ ನಡುವೆ ಭಿನ್ನಾಬಿಪ್ರಾಯವಿದ್ದ ಕಾರಣ ಕಾರ್ತಿಕ್ ಡಿವೋರ್ಸ್ ನೀಡಲು ಮುಂದಾಗಿದ್ದನು. ಶೋಭಾ ಆತನ ಜೊತೆಗೆ ರಾಜಿ ಮಾಡಿಕೊಳ್ಳಲು ಯತ್ನಿಸಿದಾಗ ಅವನು ನಿರಾಕರಿಸಿದನು. ಕೊನೆಗೆ ಶೋಭಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇದನ್ನೂ ಓದಿ: ಸೋತು ಕಣ್ಣೀರು ಹಾಕುತ್ತಾ ಹೊರಟ ಪಾಕ್ ಆಟಗಾರ.. ನಸೀಮ್ ಶಾ ಹೋರಾಟ ವ್ಯರ್ಥ
ಶೋಭಾ ವೃತ್ತಿಯಲ್ಲಿ ಟೆಕ್ಕಿಯಾಗಿದ್ದು, ಬೇಸರಗೊಂಡಿದ್ದ ಆಕೆ ಸ್ಕೂಟರ್ನಲ್ಲಿ ವೆಲಚೇರಿ ಫ್ಲೈಓವರ್ ಬಳಿ ಬಂದಿದ್ದಾಳೆ. ಫ್ಲೈಓವರ್ನ ತಡೆಗೋಡೆ ಏರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ