newsfirstkannada.com

ಮಿಷನ್ ಅನ್​ಸ್ಟಾಪಬಲ್.. ಟೀಂ ಇಂಡಿಯಾ ಟಾರ್ಗೆಟ್ 5.. ಇನ್ಮೇಲೆ ಬೇರೆಯದ್ದೇ ಲೆಕ್ಕ..!

Share :

Published June 18, 2024 at 7:48am

Update June 18, 2024 at 7:53am

    ಐದು ಪಂದ್ಯ.. ಟಾರ್ಗೆಟ್​ ಟಿ20 ವಿಶ್ವಕಪ್​..!

    10 ದಿನ.. 5 ಪಂದ್ಯ.. ಎಲ್ಲಾ ಸವಾಲಿಗೂ ಇರಬೇಕು ಸಿದ್ಧ

    ಡಿಫರೆಂಟ್​ ಟೀಮ್ಸ್ ಅಂಡ್ ಕಂಡೀಷನ್​.. ಬೇಕಿದೆ ಪಕ್ಕಾ ಪ್ಲಾನ್

ಟೀಮ್ ಇಂಡಿಯಾ ಸೂಪರ್​-8ರ ಘಟ್ಟಕ್ಕೆ ತಲುಪಿದ್ದಾಯ್ತು. ಇನ್ನೇನ್ನಿದ್ದರೂ ಟೀಮ್ ಇಂಡಿಯಾ ದೃಷ್ಟಿ ಟಿ20 ವಿಶ್ವ ಕಿರೀಟ ಗೆಲ್ಲೋದು ಮಾತ್ರ. ಶತಯಾ ಗತಾಯ ಚುಟುಕು ಟ್ರೋಫಿಗೆ ಮುತ್ತಿಡುವ ಹಂಬಲದಲ್ಲಿರುವ ಟೀಮ್ ಇಂಡಿಯಾ, ಮಿಷನ್-5 ಸೂತ್ರದೊಂದಿಗೆ ಹೋರಾಡಲು ಸಜ್ಜಾಗಿದೆ. ಏನಿದು ಮಿಷನ್-5..?

ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಸೋಲಿಲ್ಲದ ಸರದಾರನಾಗಿ ಮುನ್ನುಗ್ಗುತ್ತಿದೆ. ಸೂಪರ್-8ಕ್ಕೆ ಗ್ರ್ಯಾಂಡ್​ ಎಂಟ್ರಿ ನೀಡಿರುವ ಟೀಮ್ ಇಂಡಿಯಾ, ಈ ಸಲ ಶತಯಾಗತಾಯ ವಿಶ್ವ ಕಿರೀಟಕ್ಕೆ ಮುತ್ತಿಡುವ ಲೆಕ್ಕಚಾರದಲ್ಲಿದೆ. ಇದಕ್ಕಾಗಿಯೇ ತೆರೆ ಹಿಂದೆ ಸ್ಟ್ರಾಟರ್ಜಿ ಪ್ಲಾನಿಂಗ್​ ನಡೀತಿದೆ. ಅಂದುಕೊಂಡಂತೆ ಎಲ್ಲಾ ಆಗಬೇಕಂದ್ರೆ, ಟೀಮ್ ಇಂಡಿಯಾ, ಮಿಷನ್-5 ಸೂತ್ರವನ್ನ ಅನುಸರಿಸಬೇಕಿದೆ.

ಇದನ್ನೂ ಓದಿ:‘ನೀನ್ಯಾರು? ನಿನ್ ಕಥೆ ಎಲ್ಲಾ ಗೊತ್ತು..’ ಬಂಧನದ ವೇಳೆ ಖಡಕ್ ಅಧಿಕಾರಿ ದರ್ಶನ್​ಗೆ ಕೊಟ್ಟ ವಾರ್ನಿಂಗ್ ಏನು..?

ಮಿಷನ್ ಅನ್​ಸ್ಟಾಪಬಲ್​.. ಇದು ಟೀಮ್ ಇಂಡಿಯಾ ಧ್ಯೇಯ..!
ಲೀಗ್​ ಸ್ಟೇಜ್​ನಲ್ಲಿ ಅನ್​ಸ್ಟಾಪಬಲ್ ಆಗಿ ಮೆರೆದಾಡಿರುವ ಟೀಮ್ ಇಂಡಿಯಾ, ಈಗ ಹೊಸ ಸವಾಲಿಗೆ ಸಜ್ಜಾಗಿದೆ. ಸೂಪರ್​​-8ನ ಒಂದೊಂದು ಪಂದ್ಯವೂ, ರೋಹಿತ್ ಬಾಯ್ಸ್​ಗೆ ಕಲ್ಲು ಮುಳ್ಳಿನ ಹಾದಿಯೇ ಆಗಿದೆ. ಒಂದೇ ಒಂದು ಪಂದ್ಯದಲ್ಲಿ ಎಡವಿದ್ರೂ, ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಲಿದೆ. ಆಟಗಾರರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತೆ. ಹೀಗಾಗಿ ಸೋಲಿಲ್ಲದ ಸರದಾರನಂತೆಯೇ ಟಿ20 ವಿಶ್ವಕಪ್​​​​ ಫೈನಲ್ಸ್​ಗೆ ಎಂಟ್ರಿ ನೀಡಿ, ವಿಶ್ವ ಕಿರೀಟ ಮುಡಿಗೇರಿಸಿಕೊಳ್ಳಬೇಕಿದೆ.

10 ದಿನ.. 5 ಪಂದ್ಯ.. ಎಲ್ಲಾ ಸವಾಲಿಗೂ ಇರಬೇಕು ಸಿದ್ಧ..!
ಟೀಮ್ ಇಂಡಿಯಾಗೆ ಸೂಪರ್​-8 ಸವಾಲು ಇದೇ 20ರಿಂದ ಆರಂಭಗೊಳ್ಳಲಿದೆ. ಮೊದಲ ಪಂದ್ಯದಲ್ಲೇ ಅಫ್ಘನ್ ಎದುರು ಸೆಣಸಾಡಲಿರುವ ಟೀಮ್ ಇಂಡಿಯಾ, ನಂತರ ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ ಎದುರು ಹೋರಾಟ ನಡೆಸಲಿದೆ. ಆ ಬಳಿಕ ಸೆಮಿಫೈನಲ್​ ನಡೆಯಲಿದ್ದು, ವಿಶ್ವಕಪ್​ ಫೈನಲ್​ 29ರಂದು ನಡೆಯಲಿದೆ. ಹೀಗಾಗಿ 10 ದಿನಗಳ ಅಂತರದಲ್ಲೇ 5 ಪಂದ್ಯಗಳನ್ನಾಡಬೇಕಿದೆ. ಹೀಗಾಗಿ ಎಲ್ಲಾ ಐದು ಪಂದ್ಯಗಳ ಸವಾಲಿಗೂ ಆಟಗಾರರು ಮೆಂಟಲಿ ಸ್ಟ್ರಾಂಗ್ ಇರಬೇಕಿದೆ.

ಇದನ್ನೂ ಓದಿ:Rain News: ಮಲೆನಾಡು.. ಈಗ ಮಳೆನಾಡು.. ಭಾರೀ ಮಳೆ.. ರಾಜ್ಯದಲ್ಲಿ ಎಲ್ಲೆಲ್ಲಿ ಏನೆಲ್ಲಾ ಆಯ್ತು..

ಡಿಫರೆಂಟ್​ ಟೀಮ್ಸ್ ಅಂಡ್ ಕಂಡೀಷನ್​.. ಬೇಕಿದೆ ಪಕ್ಕಾ ಪ್ಲಾನ್..!
ಇಷ್ಟು ದಿನ ಟೀಮ್ ಇಂಡಿಯಾ ಆಡಿದ ಕಂಡೀಷನ್ಸ್​ ಬೇರೆ. ಈಗ ಎದುರಾಗುತ್ತಿರುವ ಕಂಡೀಷನ್ಸ್​ ಬೇರೆಯದ್ದಾಗಿದೆ. ಕಂಡೀಷನ್ಸ್​ ಮಾತ್ರವೇ ಅಲ್ಲ. ತಂಡಗಳೂ ಕೂಡ ಭಿನ್ನವಿಭಿನ್ನ. ಮುಂದೆ ಟೀಮ್ ಇಂಡಿಯಾ ಎದುರಿಸಲಿರುವ ತಂಡಗಳ ಸ್ಟ್ರೆಂಥ್​ಗೆ ನೋಡಿದ್ರೆ, ಗ್ರೂಪ್​ ಸ್ಟೇಜ್​ನಲ್ಲಿ ಟೀಮ್ ಇಂಡಿಯಾ ಎದುರಿಸಿದ​​ ತಂಡಗಳ ಬಲ ಏನೇನು ಅಲ್ಲ.. ಹೀಗಾಗಿ ಈ ಮದಗಜಗಳನ್ನ ಹೊಡೆದುರುಳಿಸಬೇಕಾದ್ರೆ, ಪಕ್ಕ ಪ್ಲಾನ್ ಇರಬೇಕಿದೆ.

ಬದಲಾಗಬೇಕಿದೆ ಸ್ಟ್ರಾಟರ್ಜಿ ಅಂಡ್ ಪ್ಲೇಯಿಂಗ್-XI..!
ಟೀಮ್ ಇಂಡಿಯಾದ ಸ್ಟ್ರಾಟರ್ಜಿ ಇಲ್ಲಿಂದ ಕಂಪ್ಲೀಟ್ ಬದಲಾಗಬೇಕಿದೆ. ಎದುರಾಳಿಗಳ ಸ್ಟ್ರೆಂಥ್​ ಅಂಡ್ ವಿಕ್ನೇಸ್​ಗೆ ತಕ್ಕಂತೆ ಒಂದೊಳ್ಳೆ ಕಾಂಬಿನೇಷನ್ ಸೆಟ್ ಮಾಡಬೇಕಿದೆ. ಕೂಲ್ ಆ್ಯಂಡ್ ಡಿಫೆನ್ಸಿವ್ ಅಪ್ರೋಚ್ ಬದಲಾಗಿ ಅಟ್ಯಾಕಿಂಗ್​ ಮೂಡ್​ನಲ್ಲೇ ಎದುರಾಳಿ ಮೇಲೆ ಮುಗಿಬೀಳಬೇಕಿದೆ. ಆ ಮೂಲಕ ಎದುರಾಳಿಗಳ ಮೇಲೆ ಒತ್ತಡ ಹೇರುವ ತಂತ್ರವನ್ನು ಅನುಸರಿಸಬೇಕಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಕಂಡೀಷನ್ಸ್​ ಅಡ್ವಾಂಟೇಜ್​ನ ಎನ್​ಕ್ಯಾಶ್​ ಮಾಡಿಕೊಳ್ಳುವಂತ ಪ್ಲೇಯಿಂಗ್ ಇಲೆವೆನ್​ ಇರಬೇಕಿದೆ.

ಇದನ್ನೂ ಓದಿ:ಚಿಕ್ಕಣ್ಣರನ್ನೂ ಫಜೀತಿಗೆ ಸಿಲುಕಿಸಿದ ದರ್ಶನ್.. ಪೊಲೀಸರು ಹಾಸ್ಯ ನಟನಿಗೆ ಕೇಳಿದ ಖಡಕ್ ಪ್ರಶ್ನೆಗಳೇನು?

ಬ್ಯಾಟಿಂಗ್​​ಗೆ ಬೇಕು ಬಲ.. ಸಂಘಟಿತ ಆಟವೂ ಮುಖ್ಯ..!
ಇಲ್ಲಿಯ ತನಕ ಟೀಮ್ ಇಂಡಿಯಾ ಬ್ಯಾಟರ್​ಗಳಿಂದ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್​ ಬಂದಿಲ್ಲ. ನ್ಯೂಯಾರ್ಕ್​ನ ಅನ್​​ಪ್ರಿಡಿಕ್ಟಬಲ್​ ಪಿಚ್ ಕೂಡ ಇದಕ್ಕೆ ಒಂದು ಕಾರಣ​. ಹೀಗಾಗಿ ಗೆಲುವಿಗಾಗಿ ಬೌಲರ್​ಗಳನ್ನೇ ಟೀಮ್ ಇಂಡಿಯಾ ನೆಚ್ಚಿಕೊಳ್ಳುವಂತಾಗಿತ್ತು. ಇದೀಗ ಬೌಲರ್​ಗಳು ಅದೇ ಖದರ್​ ಉಳಿಸಿಕೊಳ್ಳುವುದರ ಜೊತೆ ಜೊತೆಗೆ ಬ್ಯಾಟ್ಸ್​ಮನ್​ಗಳು, ಸಿಕ್ಸರ್​​, ಬೌಂಡರಿಗಳ ಬೊರ್ಗೆರೆತದ ಸುನಾಮಿ ಸೃಷ್ಟಿಸಬೇಕು. ಆಗ ಮಾತ್ರ ವಿಶ್ವ ಕಿರೀಟಕ್ಕೆ ಮುತ್ತಿಡಲು ಸಾಧ್ಯ.

ಇದನ್ನೂ ಓದಿ:ಮಗನ ಮದ್ವೆಗೆ ತಯಾರಿ ನಡೆದಿತ್ತು..’ ಒಬ್ಬಾಕೆಯಿಂದ ಏನೆಲ್ಲ ಆಗೋಯ್ತು..? ಪವಿತ್ರ ಗೌಡ ಕೊಟ್ಟ 10 ಪಂಚ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಮಿಷನ್ ಅನ್​ಸ್ಟಾಪಬಲ್.. ಟೀಂ ಇಂಡಿಯಾ ಟಾರ್ಗೆಟ್ 5.. ಇನ್ಮೇಲೆ ಬೇರೆಯದ್ದೇ ಲೆಕ್ಕ..!

https://newsfirstlive.com/wp-content/uploads/2024/06/ಖೋಃಳೀ-ಫಾಣಧೈಆ.jpg

Load More