ನಾಗ್ ಅಶ್ಚಿನ್ ನಿರ್ದೇಶನದಲ್ಲಿ ಬರುತ್ತಿದೆ ‘Kalki 2898AD’
ಭೈರವನ ರೂಪದಲ್ಲಿ ಅಬ್ಬರಿಸಲಿದ್ದಾರೆ ಡಾರ್ಲಿಂಗ್ ಪ್ರಭಾಸ್
ಕಲ್ಕಿ ಮೇಲೆ ಆಪಾದನೆ ಹೊರಿಸಿದ ಹಾಲಿವುಡ್ ಕಲಾವಿದರು
‘ಸಲಾರ್’ ಸಿನಿಮಾದ ಬಳಿಕ ಪ್ರಭಾಸ್ ಮತ್ತೆ ಅಬ್ಬರಿಸಲು ಮುಂದಾಗಿದ್ದಾರೆ. ಈ ಬಾರಿ ಬಿಗ್ ಬಜೆಟ್ನಲ್ಲಿ Kalki 2898AD ಅವತಾರವೆತ್ತಿ ಬರುತ್ತಿದ್ದಾರೆ. ಅಂದಹಾಗೆಯೇ ಈ ಸಿನಿಮಾದ 2ನೇ ಟ್ರೇಲರ್ ರಿಲೀಸ್ ಆಗಿದ್ದು, ರಿಲೀಸ್ ಆದ ಬೆನ್ನಲ್ಲೇ ಈ ಚಿತ್ರದ ಕುರಿತಾಗಿ ಹಾಲಿವುಡ್ ಕಲಾವಿದರು ಮಾಡಿರುವ ಆಪಾದನೆಯೊಂದು ಬೆಳಕಿಗೆ ಬಂದಿದೆ!.
ಕಲ್ಕಿ ಪ್ರಭಾಸ್ ನಟನೆಯ ಬಹು ನಿರೀಕ್ಷಿತ ಸಿನಿಮಾ. ‘ರಾಧೆ ಶ್ಯಾಮ್’ ನಿರ್ದೇಶಿಸಿದ ನಿರ್ದೇಶಕ ನಾಗ್ ಅಶ್ಚಿನ್ ಕಲ್ಕಿ ಅವತಾರದಲ್ಲಿ ಪ್ರಭಾಸ್ ಅವರನ್ನು ತೋರಿಸಲು ಮುಂದಾಗಿದ್ದಾರೆ. ಭೈರವನ ರೂಪದಲ್ಲಿ ಪ್ರಭಾಸ್ ಕಾಣಿಸಿಕೊಳ್ಳಲಿದ್ದಾರೆ.
ಇಷ್ಟೆಲ್ಲಾ ಕುತೂಹಲ ಕೆರಳಿಸಿರುವ ಸಿನಿಮಾದಲ್ಲಿ ಪ್ರಭಾಸ್ಗೆ ನಾಯಕಿಯಾಗಿ ದೀಪಿಕಾ ಕಾಣಿಸಿಕೊಂಡಿದ್ದಾರೆ. ಸುಮತಿ ರೂಪದಲ್ಲಿ ದೀಪಿಕಾ ನಟಿಸಿದ್ದಾರೆ. ಮಾತ್ರವಲ್ಲದೆ. ಬಾಲಿವುಡ್ ಬಿಗ್ ಬಿ ಅಮಿತಾ ಬಚ್ಚನ್ ಅಶ್ವತ್ಥಾಮನಾಗಿ ಬಣ್ಣ ಹಚ್ಚಿದ್ದಾರೆ. ಇವಿಷ್ಟು ಮಾತ್ರವಲ್ಲ, ಕಮಲ್ ಹಾಸನ್, ದಿಶಾ ಪಟಾನಿ. ಶೋಭನಾ, ಬ್ರಹ್ಮಾನಂದಂ, ಅನ್ನಾ ಬೆನ್ ಹೀಗೆ ಬಹುತಾರಗಣದ ಸಿನಿಮಾ ಇದಾಗಿದೆ.
ಇದನ್ನೂ ಓದಿ: Kalki 2898 AD 2ನೇ ಟ್ರೇಲರ್ ರಿಲೀಸ್.. ಪೌರಾಣಿಕ ಪಾತ್ರದಲ್ಲಿ ಗಮನ ಸೆಳೆದ ಮಾಳವಿಕಾ..!
Sad to see that some of the work I did for Star Trek: Prodigy got stolen by Vyjayanthi movies in their trailer:https://t.co/KWrFKJkksn
This is the matte painting I did for Star Trek under direction of Ben Hibon and Alessandro Taini and then as it appears in the trailer. pic.twitter.com/CYFP008Rd7
— Oliver Beck (@OliverBeckArt) June 13, 2024
ಅಭಿಮಾನಿಗಳಿಗಂತೂ ಪ್ರಭಾಸ್ ಅವತಾರವನ್ನು ಕಾಣಲು ಕಾತುರರಾಗಿದ್ದು, ಚಿತ್ರತಂಡ ಜೂನ್ 10 ರಂದು ಕಲ್ಕಿ ಸಿನಿಮಾದ ಟ್ರೈಲರ್ ಲಾಂಚ್ ಮಾಡಿತ್ತು. ಇದಾದ ಬಳಿಕ ನಿನ್ನೆ ಸಿನಿಮಾದ ಮತ್ತೊಂದು ಟ್ರೇಲರ್ ಲಾಂಚ್ ಮಾಡಿದೆ. ಆದರೆ ಮೊದಲ ಟ್ರೇಲರ್ ಬಿಡುಗಡೆ ಗೊಂಡಂತೆ ಹಾಲಿವುಡ್ ಕಲಾವಿದರಾದ ಆಲಿವರ್ ಬೆಕ್ ಮತ್ತು ಸುಂಗ್ ಚೋಯ್ ಈ ಸಿನಿಮಾದ ಮೇಲೆ ಕೃತಿಚೌರ್ಯದ ಆರೋಪ ಹೊರಿಸಿದ್ದಾರೆ.
ಆಲಿವರ್ ಬೆಕ್ ಮತ್ತು ಸುಂಗ್ ಚೋಯ್ ಇಬ್ಬರು ಟ್ರೇಲರ್ನ ಫ್ರೇಮ್ಗಳನ್ನು ಇಟ್ಟುಕೊಂಡು ಹೋಲಿಕೆ ಮಾಡಿದ್ದಾರೆ. ಮಾತ್ರವಲ್ಲದೆ ಈ ಸಂಗತಿಯನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಬಂಧನದ ಬಳಿಕ ಸರಿಯಾಗಿ ಆಹಾರ ತಿನ್ನದ ದರ್ಶನ್.. ಇಳಿಕೆ ಕಂಡ ತೂಕ! ಸದ್ಯ ಎಷ್ಟು KG ಇದ್ದಾರೆ ಗೊತ್ತಾ?
ಟ್ವಿಟ್ಟರ್ನಲ್ಲಿ ಸುಂಗ್ ಚೋಯ್ ‘‘ಕಲ್ಕಿ ಟ್ರೇಲರ್ನಲ್ಲಿ ತನ್ನ ಕೃತಿಯನ್ನು ಕದ್ದಿದ್ದಾರೆ. ನಾನು ಟ್ರೇಲರನ್ನು ಕ್ಲಿಕ್ ಮಾಡಿದ್ದೇನೆ. ಅದು ನನ್ನ ಕೆಲಸದಿಂದ ಪ್ರೇರಿತವಾಗಿದೆ ಎಂದು ಗೊತ್ತಾಯ್ತು’’ ಎಂದು ಬರೆದುಕೊಂಡಿದ್ದಾರೆ.
ಸುಂಗ್ ಚೋಯ್ ‘‘ನನ್ನ ಕಲಾಕೃತಿಯ ನೇರ ನಕಲು ಇಲ್ಲದೇ ಇರುವಾಗ ನಾನು ಕಾನೂನಿನ ಆಶ್ರಯ ಪಡುವುದು ಸವಾಲಾಗಬಹುದು’’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದರ್ಶನ್ ಬೇಡ, ಡಿ ಬಾಸ್ ಬೇಡ.. ವಾಹನಕ್ಕೆ ಅಂಟಿಸಿರೋ ಸ್ಟಿಕ್ಕರ್ ಕಿತ್ತೆಸೆದ ಫ್ಯಾನ್ಸ್
ಆಲಿವರ್ ಕೂಡ ಈ ಬಗ್ಗೆ ಆಪಾದಿಸಿದ್ದು, ‘‘ ನನ್ನ ಕಲಾಕೃತಿಯನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ನಕಲು ಮಾಡಿದ್ದು ಇದೇ ಮೊದಲು. ಭಾರತೀಯ ಸಿನಿಮಾವೊಂದು ನನ್ನ ಕೆಲಸ ನಕಲು ಮಾಡಿರುವುದು ಇದೇ ಫಸ್ಟ್’’ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ