newsfirstkannada.com

×

ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ಪ್ರಾಣಬಿಟ್ಟ ಕರು.. ಜನರ ಕಣ್ಣಲ್ಲಿ ನೀರು ತರಿಸಿದ ತಾಯಿ ಹಸುವಿನ ಮೂಕ ರೋದನೆ

Share :

Published June 29, 2024 at 7:32am

    ಖಾಸಗಿ ಬಸ್​​ ಡ್ರೈವರ್​​ ವಿರುದ್ಧ ಭಾರೀ ಆಕ್ರೋಶ

    ಎಷ್ಟೇ ಮೇಲೆ ಎತ್ತಲು ಪ್ರಯತ್ನಿಸಿದ್ದರೂ ಸಾಧ್ಯವಾಗಲಿಲ್ಲ

    ಕರು ಕಳೆದುಕೊಂಡು ಮೌನವಾಗಿ ನಿಂತ ತಾಯಿ ಹಸು

ಬಳ್ಳಾರಿ: ನಗರದ ಮೋಕಾ ರಸ್ತೆಯ ಬಸವೇಶ್ವರ ಸರ್ಕಲ್ ಬಳಿ ಮನಕಲುವ ಘಟನೆಯೊಂದು ತಡರಾತ್ರಿ ನಡೆದಿದೆ. ಖಾಸಗಿ ಬಸ್ ಚಾಲಕನ ಅಜಾಗರೂಕತೆಗೆ ಕರುವಿಗೆ ಡಿಕ್ಕಿಯಾಗಿದೆ. ಮಗುವನ್ನು ಕಳೆದುಕೊಂಡ ತಾಯಿ ಹಸು ರಸ್ತೆಯಲ್ಲಿ ಕಣ್ಣೀರು ಇಡುತ್ತ ಮರುಕ ವ್ಯಕ್ತಪಡಿಸಿದೆ. ಈ ದೃಶ್ಯ ಅಲ್ಲಿನ ಸ್ಥಳೀಯರ ಕಣ್ಣಾಲೆಗಳು ಒದ್ದೆಯಾಗುವಂತೆ ಮಾಡಿದೆ.

ಆಗಿದ್ದು ಏನು..?
ಹಸುಗಳು ರಸ್ತೆ ದಾಟುವ ವೇಳೆ ಖಾಸಗಿ ಬಸ್​ ಬಸ್ ಕರುವಿಗೆ ಡಿಕ್ಕಿ ಹೊಡೆದಿದೆ. ನೆಲಕ್ಕೆ ಬಿದ್ದ ಕರು, ತೀವ್ರ ರಕ್ತಸ್ರಾವ ಉಂಟಾಗಿ ಅಲ್ಲೇ ಪ್ರಾಣಬಿಟ್ಟಿದೆ. ಮಗುವನ್ನು ಕಳೆದುಕೊಳ್ತಿದ್ದಂತೆಯೇ ತಾಯಿ ಹಸು ಕಣ್ಣೀರು ಇಟ್ಟಿದೆ. ಬಾಯಿಯಿಂದ ಕರುವನ್ನ ಎಚ್ಚರಗೊಳಿಸಲು ಮುಂದಾಗಿದೆ. ಸಾಧ್ಯವಾಗದಿದ್ದಾಗ ತಾಯಿ ಹಸು ಮೌನವಾಗಿ ನಿಂತು ಬಿಕ್ಕಳಿಸಿದೆ.

ಇದನ್ನೂ ಓದಿ:9 ಜನರ ಬಲಿ ಪಡೆದ ಮಳೆರಾಯ.. ಭರ್ಜರಿ ಮಳೆಯಿಂದ ಎಲ್ಲೆಲ್ಲಿ ಏನೆಲ್ಲ ಆಗೋಯ್ತು..!

ಜಿಂದಾಲ್ ಕಾರ್ಖಾನೆಯ ಬಸ್ ಡಿಕ್ಕಿ ಹೊಡೆದಿದೆ. ಸಂಸ್ಥೆಯ ಓರ್ವ ಸಿಬ್ಬಂದಿಯನ್ನ ಪಿಕಪ್ ಮಾಡಲು ವಾಹನ ಬಂದಿತ್ತು. ಈ ವೇಳೆ ಚಾಲಕನ ಅಜಾಗರೂಕತೆಯಿಂದ ಆಕಳು ಕರು ಸಾವನ್ನಪ್ಪಿದೆ. ಬಸ್ ಚಾಲಕನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಮನೆ ದೇವರ ಪೂಜೆಗೆ ಹೊರಟಿದ್ದ 13 ಮಂದಿ ದಾರುಣ ಸಾವು.. ಕರುಳು ಚುರ್ ಎನ್ನುತ್ತೆ ಈ ಘೋರ ದುರಂತ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ಪ್ರಾಣಬಿಟ್ಟ ಕರು.. ಜನರ ಕಣ್ಣಲ್ಲಿ ನೀರು ತರಿಸಿದ ತಾಯಿ ಹಸುವಿನ ಮೂಕ ರೋದನೆ

https://newsfirstlive.com/wp-content/uploads/2024/06/BLY-COW-1.jpg

Load More