newsfirstkannada.com

ಭಾರತದ ರಸ್ತೆಗಿಳಿದ ಹೊಸ ವೆಸ್ಪಾ 946 ಡ್ರ್ಯಾಗನ್ ಸ್ಕೂಟರ್! ಇದರ ಬೆಲೆಗೆ ಕಾರು ಖರೀದಿಸಬಹುದು ಕಣ್ರಿ!

Share :

Published July 2, 2024 at 12:53pm

Update July 2, 2024 at 1:11pm

    ಜನಪ್ರಿಯ ಇಟಾಲಿಯನ್​ ವಾಹನ ತಯಾರಕ ಪಿಯಾಜಿಯೊ

    ಸೀಮಿತ ಆವೃತ್ತಿಯ ವೆಸ್ಪಾ 946 ಡ್ರ್ಯಾಗನ್ ಸ್ಕೂಟರ್ ಬಿಡುಗಡೆ

    ನೂತನ ಸ್ಕೂಟರ್​ನ ಬೆಲೆ ಎಷ್ಟು? ಫೀಚರ್ಸ್​ ಹೇಗಿದೆ? ಇಲ್ಲಿದೆ ಮಾಹಿತಿ

ಜನಪ್ರಿಯ ಇಟಾಲಿಯನ್​ ವಾಹನ ತಯಾರಕ ಪಿಯಾಜಿಯೊ ಕಂಪನಿಯ ವೆಸ್ಪಾ ಸ್ಕೂಟರ್​ ಬಗ್ಗೆ ಬಹುತೇಕರೀಗೆ ತಿಳಿಸಿದೆ. ಆದರೀಗ ಈ ಕಂಪನಿ ಭಾರತದಲ್ಲಿ ವೆಸ್ಪಾ 946 ಡ್ರ್ಯಾಗನ್ ಸ್ಕೂಟರ್​ ಅನ್ನು ಪರಿಚಯಿಸಿದೆ. ಅಚ್ಚರಿ ಎಂದರೆ ಈ ಸ್ಕೂಟರ್​ ಬೆಲೆ ಕೇಳಿದ್ರೆ ಹೊಸ ಕಾರು ಖರೀದಿಸಬಹುದಾಗಿದೆ.

ವೆಸ್ಪಾ 946 ಡ್ರ್ಯಾಗನ್ ಸೀಮಿತ ಆವೃತ್ತಿಯ ಸ್ಕೂಟರ್​ ಭಾರತದಲ್ಲಿ ಬಿಡುಗಡೆಗೊಂಡಿದೆ. ಭಾರತೀಯ ವಾಹನ ಪ್ರಿಯರಿಗಾಗಿ ಪರಿಚಯಿಸಿದ ಈ ಸ್ಕೂಟರ್​ ಬೆಲೆ ಬರೋಬ್ಬರಿ 14.28 ಲಕ್ಷ ರೂಪಾಯಿಯಾಗಿದೆ. ಮೋಟೋಪ್ಲೆಕ್ಸ್​ ಶೋರೂಂಗಳಲ್ಲಿ ಈ ನೂತನ ಸ್ಕೂಟರನ್ನು ಬುಕ್​ ಮಾಡಿ ಖರೀದಿಸಬಹುದಾಗಿದೆ.

ಇದನ್ನೂ ಓದಿ: ಹುಟ್ಟುಹಬ್ಬದಂದು ಎಣ್ಣೆ ಕಡಿಮೆಯಾಗಿದ್ದಕ್ಕೆ ಗಲಾಟೆ! ಬರ್ತ್​ಡೇ ಬಾಯನ್ನು 4 ಮಹಡಿಯಿಂದ ಬಿಸಾಕಿದ ಸ್ನೇಹಿತರು

ಹೊಸ ವೆಸ್ಪಾ 946 ಡ್ರ್ಯಾಗನ್ ಸ್ಕೂಟರ್​ 150cc ait-ಕೂಲ್ಡ್ ಎಂಜಿನ್ ಹೊಂದಿದ್ದು, ನಾಲ್ಕು ವಾಲ್ವ್‌ಗಳನ್ನು ಹೊಂದಿದೆ. ಈ ಎಂಜಿನ್ ಸಂರಚನೆಯು 10.3Nm ಟಾರ್ಕ್ ಜೊತೆಗೆ 11.1bhp ನ ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ.

ಇದನ್ನೂ ಓದಿ: ಒಡಲು ತುಂಬಿಸುತ್ತಿದ್ದಾಳೆ ಕಾವೇರಿ.. ಹೆಚ್ಚುತ್ತಿದೆ KRS ಡ್ಯಾಂನ ನೀರಿನ ಮಟ್ಟ; ಇಂದು ಎಷ್ಟಿದೆ ನೋಡೋಣ

12-ಇಂಚಿನ ಚಕ್ರಗಳನ್ನು ಹೊಂದಿರುವ ವೆಸ್ಪಾ ನೂತನ ಸ್ಕೂಟರ್​, 220mm ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು ಡ್ಯುಯಲ್-ಚಾನೆಲ್ ABS ನೀಡಲಾಗಿದೆ. ಜೊತೆಗೆ ಸ್ಕೂಟರ್​ನಲ್ಲಿ ಎಲ್ಇಡಿ ದೀಪ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಎಳೆತ ನಿಯಂತ್ರಣದಂತಹ ಆಧುನಿಕ ವೈಶಿಷ್ಟ್ಯಗಳನ್ನು ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರತದ ರಸ್ತೆಗಿಳಿದ ಹೊಸ ವೆಸ್ಪಾ 946 ಡ್ರ್ಯಾಗನ್ ಸ್ಕೂಟರ್! ಇದರ ಬೆಲೆಗೆ ಕಾರು ಖರೀದಿಸಬಹುದು ಕಣ್ರಿ!

https://newsfirstlive.com/wp-content/uploads/2024/07/Vespa.jpg

Load More