newsfirstkannada.com

×

ಸ್ಕೂಟರ್​ಗೆ BMW ಡಿಕ್ಕಿ.. ಮಹಿಳೆಯನ್ನ ಒಂದೂವರೆ ಕಿ.ಮೀ ಎಳೆದೊಯ್ದ ಕಾರು.. ಭಾರೀ ಸೌಂಡ್​ ಮಾಡ್ತಿದೆ ಹಿಟ್​ ಅಂಡ್​ ರನ್ ಕೇಸ್

Share :

Published July 9, 2024 at 7:28am

Update July 9, 2024 at 12:44pm

    ಆರೋಪಿಯ ಬಾರ್​ ಬಿಲ್​ ಸೋಶಿಯಲ್​ ಮೀಡಿಯಾದಲ್ಲಿ ವೈರಲ್

    14 ದಿನಗಳ ನ್ಯಾಯಾಂಗ ಬಂಧನ ಬೆನ್ನಲ್ಲೇ ಆರೋಪಿಗೆ ಜಾಮೀನು

    ‘ಪತ್ನಿಯನ್ನ ಎಳೆದೊಯ್ದ ರೀತಿಯೇ ಆರೋಪಿನಾ ಎಳೆದೊಯ್ಯುತ್ತೇನೆ’

ಒಂದೂವರೆ ಕಿಲೋ ಮೀಟರ್​​ವರೆಗೆ ಮಹಿಳೆಯನ್ನು ಕಾರೊಂದು ಎಳೆದೊಯ್ದಿದೆ. ಈ ಕಾರು ಅಪಘಾತಕ್ಕೂ ಮೊದಲು ಶಿವಸೇನೆ ನಾಯಕ ಪಾನಮತ್ತನಾಗಿದ್ದನು. ಪಬ್​ನಿಂದ ಆಚೆ ಬರುವ ಸಿಸಿಟಿದೃಶ್ಯ, ಬಾರ್​ ಬಿಲ್​ ಎಲ್ಲ ವೈರಲ್ ಆಗಿವೆ. ​ನಾಪತ್ತೆಯಾಗಿರುವ ಶಿವಸೇನಾ ನಾಯಕನ ಮಗನ ವಿರುದ್ಧ ಲುಕೌಟ್​ ನೋಟಿಸ್​ ಜಾರಿ ಮಾಡಲಾಗಿದೆ.

ಇದನ್ನೂ ಓದಿ: ಇಂದು ಕೂಡ ಈ ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ರಜೆ.. ಭಾರೀ ಮಳೆ ಆಗೋ ಮುನ್ಸೂಚನೆ

ಪುಣೆಯಲ್ಲಿ ಸಂಭವಿಸಿದ ಪೋರ್ಶೆ ಕಾರು ಅಪಘಾತ ಪ್ರಕರಣ ದೇಶಾದ್ಯಂತ ಆಕ್ರೋಶದ ಅಲೆ ಎಬ್ಬಿಸಿತ್ತು. ಈ ಘಟನೆ ಇನ್ನೂ ಹಸಿ ಹಸಿಯಾಗಿರುವಾಗಲೇ ಮುಂಬೈನಲ್ಲಿ ಬಿಎಂಡಬ್ಲ್ಯೂ ಕಾರು ಆರ್ಭಟಿಸಿದೆ. ಶಿವಸೇನೆ ನಾಯಕ ರಾಜೇಶ್ ಶಾ ಅವರ ಪುತ್ರ ಮಿಹಿರ್ ಶಾ ಚಲಾಯಿಸುತ್ತಿದ್ದ ಬಿಎಂಡಬ್ಲ್ಯೂ ಕಾರು, ಸ್ಕೂಟರ್​ಗೆ ಡಿಕ್ಕಿ ಹೊಡೆದು ಮಹಿಳೆಯೊಬ್ಬರ ಸಾವಿಗೆ ಕಾರಣವಾಗಿದೆ. ಇನ್ನು ಪ್ರಕರಣದ ತನಿಖೆಯೂ ತೀವ್ರಗೊಂಡಿದ್ದು, ಬಗೆದಷ್ಟು ಬಯಲಾಗುತ್ತಿದೆ.

ಇದನ್ನೂ ಓದಿ: ವಿರಾಟ್​ ಕೊಹ್ಲಿ ಮೊಬೈಲ್​ ವಾಲ್​ಪೇಪರ್​ಗೆ ಯಾರ ಫೋಟೋ ಇದೆ..? ಫ್ಯಾಮಿಲಿದಂತೂ ಅಲ್ವೇ ಅಲ್ಲ!

ಕಾರಿನಡಿ ಸಿಲುಕಿದ ಮಹಿಳೆಯನ್ನ ಒಂದೂವರೆ ಕಿ.ಮೀ ಎಳೆದೊಯ್ದಿದ್ದ

ಮೀನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಕಾವೇರಿ ಮತ್ತು ಪ್ರದೀಪ್ ದಂಪತಿ ಸಾಸೂನ್ ಡಾಕ್‌ನಿಂದ ಮೀನು ತರುತ್ತಿದ್ದರು. ಆಗ ವೇಗವಾಗಿ ಬಂದ ಬಿಎಂಡಬ್ಲ್ಯೂ ಕಾರು ಅವರ ಸ್ಕೂಟರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿತ್ತು. ಈ ವೇಳೆ ಕಾವೇರಿ ಅವರ ಮೇಲೆಯೇ ಹತ್ತಿದ್ದು, ಮೊದಲಿಗೆ ನೂರು ಮೀಟರ್​ವರೆಗೆ ಎಳೆದುಕೊಂಡು ಹೋಗಿತ್ತು ಎನ್ನಲಾಗಿದೆ. ಆದ್ರೆ ಸುಮಾರು ಒಂದೂವರೆ ಕಿ.ಮೀ. ವರೆಗೂ ಮಹಿಳೆಯನ್ನು ಎಳೆದುಕೊಂಡು ಹೋಗಿರೋದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಮದ್ಯಪಾನ ಮಾಡಿದ್ದ ಮಿಹಿರ್ ಶಾ.. ಬಾರ್​ ಬಿಲ್​ ವೈರಲ್​

ಜುಹು ಪ್ರದೇಶದ ಬಾರ್ ಒಂದರಲ್ಲಿ ಶನಿವಾರ ರಾತ್ರಿ ಮದ್ಯಪಾನ ಮಾಡಿದ್ದ ಮಿಹಿರ್, ಚಾಲಕನ ಜತೆಗೆ ಹೈ ಎಂಡ್ ಬಿಎಂಡಬ್ಲ್ಯೂ ಕಾರಿನಲ್ಲಿ ತೆರಳಿದ್ದ. ವರ್ಲಿ ಪ್ರದೇಶದ ಬಳಿ ಬಂದಾಗ ತಾನೇ ಚಾಲನೆ ಮಾಡುವುದಾಗಿ ಪಟ್ಟು ಹಿಡಿದಿದ್ದ. ಇನ್ನು ಮಿಹಿರ್​ ಪಬ್​ ಒಂದರಿಂದ ಹೊರಗೆ ಬರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಾಗೂ ಬಾರ್​ ಬಿಲ್​ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಶಿವಸೇನಾ ನಾಯಕ ರಾಜೇಶ್ ಶಾಗೆ ಜಾಮೀನು

ಬಿಎಂಡಬ್ಲ್ಯು ಕಾರು ಹಿಟ್ ಆಂಡ್ ರನ್ ಪ್ರಕರಣದಲ್ಲಿ ಕೋರ್ಟ್​, ಆರೋಪಿ ಮಿಹಿರ್ ಶಾ ತಂದೆ ಶಿವಸೇನಾ ನಾಯಕ ರಾಜೇಶ್ ಶಾಗೆ ಜಾಮೀನು ನೀಡಿದೆ. ಇದಕ್ಕೂ ಮೊದಲು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿತ್ತು. ಕೂಡಲೇ ಜಾಮೀನು ಅರ್ಜಿ ಸಲ್ಲಿಸಿದ್ರು. ಈ ವೇಳೆ ಕೋರ್ಟ್​ 15 ಸಾವಿರ ನಗದು ಪಾವತಿಸಿ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದೆ. ಚಾಲಕ ರಾಜರುಷಿ ಬಿಡಾವತ್ ಅವರನ್ನು ಒಂದು ದಿನದ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ರಸೆಲ್.. ಹೃದಯ ಗುಜರಾತಿ, ಆತ್ಮ ಮಾತ್ರ ಕೆರಿಬಿಯನ್ ಅನ್ನೋದ್ಯಾಕೆ..?

ಪೊಲೀಸ್​ ತನಿಖೆ ಬಗ್ಗೆ ಮೃತ ಮಹಿಳೆಯ ಪತಿ ಆಕ್ರೋಶ

ವರ್ಲಿ ಅಪಘಾತದಲ್ಲಿ ಪತ್ನಿಯನ್ನು ಕಳೆದುಕೊಂಡ ಪತಿ ಕಣ್ಣೀರು ಹಾಕ್ತಿದ್ದಾರೆ.. ಹಾಗೂ ಅಪಘಾತದ ಪ್ರಕರಣದ ಆರೋಪಿ ಮಿಹಿತ್​ ಬಂಧನ ವಿಳಂಬ ಆಗಿರುವುದಕ್ಕೆ ಆಕ್ರೋಶ ವ್ಯಕ್ತಪಡಡಿಸಿದ್ದಾರೆ. ತನ್ನ ಪತ್ನಿಯನ್ನು ಎಳೆದುಕೊಂಡು ಹೋದ ರೀತಿಯಲ್ಲೇ ಮಿಹಿರ್​ನನ್ನು ಎಳೆದುಕೊಂಡು ಹೋಗ್ತೀನಿ ಎಂದು ಆಕ್ರೋಶ ಹೊರಹಾಕಿದ್ದಾರೆ.

ಮುಂಬೈನ ಹಿಟ್​ ಅಂಡ್​ ರನ್​ ಪ್ರಕರಣ ಭಾರೀ ಸದ್ದು ಮಾಡ್ತಿದೆ. ಇನ್ನು ನಾಪತ್ತೆ ಆಗಿರುವ ಶಿವಸೇನೆ ನಾಯಕರ ಮಗ ಮಿಹಿರ್​ಗಾಗಿ ಪೊಲೀಸರು 6 ತಂಡಗಳನ್ನು ರಚಿಸಿಕೊಂಡು ಶೋಧ ಮಾಡ್ತಿದ್ದಾರೆ. ಹಾಗೂ ಲುಕೌಟ್​ ನೋಟಿಸ್​ ಕೂಡ ಹೊರಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಕೂಟರ್​ಗೆ BMW ಡಿಕ್ಕಿ.. ಮಹಿಳೆಯನ್ನ ಒಂದೂವರೆ ಕಿ.ಮೀ ಎಳೆದೊಯ್ದ ಕಾರು.. ಭಾರೀ ಸೌಂಡ್​ ಮಾಡ್ತಿದೆ ಹಿಟ್​ ಅಂಡ್​ ರನ್ ಕೇಸ್

https://newsfirstlive.com/wp-content/uploads/2024/07/BMW_CAR_MUMBAI.jpg

Load More