newsfirstkannada.com

×

ವರುಣಾರ್ಭಟಕ್ಕೆ ಮುಂಬೈ, ಅಸ್ಸಾಂ ತತ್ತರ.. ಸಾಲು ಸಾಲು ಸಾವು ನೋವು

Share :

Published July 10, 2024 at 7:48am

    ದೇವಭೂಮಿ ಉತ್ತರಾಖಂಡದಲ್ಲಿ ವರುಣಾಘಾತ

    ನೋಡ ನೋಡ್ತಿದ್ದಂತೆ ರಸ್ತೆ ಮೇಲೆ ಕುಸಿದು ಬಿದ್ದ ಗುಡ್ಡ

    ಕೃಷ್ಣ ನದಿಯಲ್ಲಿ ನೀರಿನ ಮಟ್ಟ ಏರಿಕೆ.. ಚಿಕ್ಕೋಡಿಯಲ್ಲಿ ಪ್ರವಾಹದ ಭೀತಿ

ಕೆಲ ದಿನಗಳ ಹಿಂದೆ ಬಿರುಬಿಸಿಲಿಗೆ ಕಂಗೆಟ್ಟಿದ್ದ ಉತ್ತರ ಭಾರತ ಮಹಾ ಮಳೆಗೆ ತತ್ತರಿಸಿ ಹೋಗಿದೆ. ನಿರಂತರ ಮಳೆಯಿಂದಾಗಿ ಉತ್ತರಾಖಂಡ, ಅಸ್ಸಾಂ ರಾಜ್ಯಗಳ ಪರಿಸ್ಥಿತಿ ಅಯೋಮಯವಾಗಿದೆ. ವರುಣನ ರಣಪ್ರವಾಹಕ್ಕೆ ಸಾವು-ನೋವುಗಳ ಸಂಖ್ಯೆ ಹೆಚ್ಚಾಗಿದೆ.

ಉತ್ತರ ಭಾರತದ ಹಲವೆಡೆ ಮಳೆ ಅಬ್ಬರ.. ಅವಾಂತರ

ಅಂದಹಾಗೆಯೇ, ಇವೆಲ್ಲಾ ಉತ್ತರ ಭಾರತದಲ್ಲಿ ಮಳೆರಾಯ ಸೃಷ್ಟಿಸಿದ ಅವಾಂತರಗಳು. ರಣಭೀಕರ ಮಳೆಗೆ ಉತ್ತರ ಭಾರತದ ಹಲವು ರಾಜ್ಯಗಳು ಪ್ರವಾಹಕ್ಕೆ ಸಿಲುಕಿ ತತ್ತರಿಸಿ ಹೋಗಿದೆ.

ಇದನ್ನೂ ಓದಿ: ರಾಮನಗರ ಹೆಸರು ಬದಲಾವಣೆ.. ಡಿಕೆಶಿ ಲೆಕ್ಕಾಚಾರವೇನು? ಜನರು ಎಲ್ಲಾ ದಾಖಲೆಗಳನ್ನು ಬದಲಾವಣೆ ಮಾಡ್ಬೇಕಾಗುತ್ತಾ?

ಮಳೆ ಆರ್ಭಟಕ್ಕೆ ಅಸ್ಸಾಂ ತತ್ತರ.. ಮತ್ತೆ 7 ಮಂದಿ ಸಾವು

ಕಳೆದೊಂದು ವಾರದಿಂದ ಅಸ್ಸಾಂನಲ್ಲಿ ಸುರಿಯುತ್ತಿರುವ ಮಳೆ ಅಪಾರ ಹಾನಿ ಸೃಷ್ಟಿ ಮಾಡಿದೆ. ಸುಮಾರು 26 ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ನದಿಗಳು ಉಕ್ಕಿ ಹರಿಯುತ್ತಿವೆ. ನದಿ ತೀರದ ಪ್ರದೇಶಗಳು ಜಲಾವೃತವಾಗಿದೆ. ರಣಭೀಕರ ಮಳೆಯಿಂದಾಗಿ ಅಸ್ಸಾಂನಲ್ಲಿ ಮತ್ತೆ 7 ಮಂದಿ ಸಾವನ್ನಪ್ಪಿದ್ದು, ಮಳೆ ಕಾರಣದಿಂದಾಗಿ ಇದುವರೆಗೂ ಸಾವನ್ನಪ್ಪಿದ್ದವರ ಸಂಖ್ಯೆ 92ಕ್ಕೆ ಏರಿಕೆ ಆಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮಳೆಯ ಅವಾಂತರ; ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಈ ನದಿ! ಸೇತುವೆ ಮುಳುಗಡೆ

ಇನ್ನು, ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿಯ ರೌದ್ರಾವತಾರಕ್ಕೆ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಸಂಪೂರ್ಣ ಮುಳುಗಡೆಯಾಗಿದೆ. ಪ್ರವಾಹಕ್ಕೆ ಸಿಲುಕಿ ಸುಮಾರು 130ಕ್ಕೂ ಹೆಚ್ಚು ಕಾಡುಪ್ರಾಣಿಗಳ ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ.

ಪವಿತ್ರ ಚಾರ್​ಧಾಮ್​ ಯಾತ್ರೆ ತಾತ್ಕಾಲಿಕವಾಗಿ ಸ್ಥಗಿತ

ದೇವಭೂಮಿ ಉತ್ತರಾಖಂಡದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರಿಯುತ್ತಿದ್ದಾನೆ. ನಿರಂತರ ಮಳೆಯಿಂದಾಗಿ ಉತ್ತರಾಖಂಡದ ಹಲವು ಪ್ರದೇಶಗಳು ಜಲಾವೃತವಾಗಿದೆ. ಭಾರೀ ಮಳೆಯಿಂದಾಗಿ ಕೆಲವೆಡೆ ಗುಡ್ಡ ಕುಸಿತ ಕಂಡು ಬಂದಿದ್ದು, ಪವಿತ್ರ ಚಾರ್​ಧಾಮ್ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಚಮೋಲಿ, ರುದ್ರಪ್ರಯಾಗ, ಪೌರಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಪ್ರಯಾಣಿಕರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಆತನಿಗೂ ನನಗೂ ಯಾವುದೇ ಸಂಬಂಧವಿಲ್ಲ’; ಬಿಗ್​ಬಾಸ್​ ಸ್ಪರ್ಧಿ ಮೇಲೆ ಗಾಯಕ​ ಅರ್ಮಾನ್ ಮಲಿಕ್​ ಕೆಂಡಾಮಂಡಲ

ವಾಣಿಜ್ಯ ನಗರಿ ಮುಂಬೈನಲ್ಲಿ ಆರೆಂಜ್​​​ ಅಲರ್ಟ್​ ಘೋಷಣೆ

ಮಹಾ ಮಳೆಯಿಂದ ತತ್ತರಿಸಿ ಹೋಗಿದ್ದ ವಾಣಿಜ್ಯ ನಗರಿ ಮುಂಬೈಗೆ ವರುಣ ಕೊಂಚ ರಿಲೀಫ್ ಕೊಟ್ಟಿದ್ದಾನೆ.. ಮಳೆರಾಯನ ಅಬ್ಬರ ಕಡಿಮೆಯಾಗಿದ್ದು, ಜುಲೈ 12ರವರೆಗೆ ಆರೆಂಜ್​ ಅಲರ್ಟ್​ ಎಚ್ಚರಿಕೆ ನೀಡಲಾಗಿದೆ. ಜೊತೆಗೆ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೃಷ್ಣ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಕೊಯ್ನಾ ಜಲಾನಯನ ಪ್ರದೇಶದಲ್ಲಿ ಸುಮಾರು 73 ಮಿಲಿ ಮೀಟರ್​​ ಮಳೆಯಾಗಿದ್ದು, ಒಂದು ವೇಳೆ ನೀರಿನ ಮಟ್ಟ ಏರಿಕೆಯಾದ್ರೇ ಬೆಳಗಾವಿ, ಚಿಕ್ಕೋಡಿಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಲಿದೆ.

ಇದನ್ನೂ ಓದಿ: ರೆಬಲ್ ಆಗ್ತಾರಾ ಬೆಳಗಾವಿ ನಾಯಕ? HDK, ಸತೀಶ್ ಜಾರಕಿಹೊಳಿ ರಹಸ್ಯ ಭೇಟಿ; ಏನಿದರ ಗುಟ್ಟು?

ಒಟ್ಟಾರೆ ಧಾರಾಕಾರ ಮಳೆಯಿಂದಾಗಿ ಉತ್ತರ ಭಾರತದ ಹಲವು ರಾಜ್ಯಗಳು ತತ್ತರಿಸಿ ಹೋಗಿದ್ದು, ಮಳೆ ಮುಂದುವರಿದರೇ ಮತ್ತಷ್ಟು ಅವಾಂತರಗಳು ಸೃಷ್ಟಿಯಾಗಲಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವರುಣಾರ್ಭಟಕ್ಕೆ ಮುಂಬೈ, ಅಸ್ಸಾಂ ತತ್ತರ.. ಸಾಲು ಸಾಲು ಸಾವು ನೋವು

https://newsfirstlive.com/wp-content/uploads/2024/07/Assam-Rain.jpg

Load More