newsfirstkannada.com

ರಾಜ್ಯದಲ್ಲಿ ಮಳೆಯ ಅವಾಂತರ; ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಈ ನದಿ! ಸೇತುವೆ ಮುಳುಗಡೆ

Share :

Published July 10, 2024 at 6:44am

  ವರ್ಷಧಾರೆಯ ಆಗಮನ.. ರೈತನ ಬಿತ್ತನೆ ಕಾರ್ಯ ಚುರುಕು

  ಕಾರದಗಾ-ಬೋಜ್ ಸಂಪರ್ಕಿಸುವ ಸೇತುವೆ ಮುಳುಗಡೆ

  ಕೃಷ್ಣಾ ನದಿಗೆ ಬಿಡುಗಡೆಯಾಯ್ತು 71 ಸಾವಿರ ಕ್ಯೂಸೆಕ್ಸ್ ನೀರು

ದಿನದಿಂದ ದಿನಕ್ಕೆ ಮಳೆಯ ಅಬ್ಬರ ಜೋರಾಗುತ್ತಿದೆ. ದೇಶಾದ್ಯಂತ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಅನೇಕ ರಾಜ್ಯಗಳಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಏತನ್ಮಧ್ಯೆ ರಾಜ್ಯದಲ್ಲಿ ಎಲ್ಲೆಲ್ಲಿ ಏನ್​ ಆಗಿದೆ ಅನ್ನೋ ಮಾಹಿತಿ ಇಲ್ಲಿದೆ.

ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಈ ಕಾರಣದಿಂದ ಬಾಗಲಕೋಟೆಯ ಜಿಲ್ಲೆಯ ಹಿಪ್ಪರಗಿ ಜಲಾಶಯದಿಂದ 71 ಸಾವಿರ ಕ್ಯೂಸೆಕ್ಸ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತಿದೆ. ಪರಿಣಾಮ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಬಳಿಕ ರೈತರೇ ನಿರ್ಮಿಸಿರುವ ಶ್ರಮಬಿಂದು ಸೇತುವೆ ಮುಳುಗಡೆ ಹಂತಕ್ಕೆ ತಲುಪಿದೆ.

ಇದನ್ನೂ ಓದಿ: ಆತನಿಗೂ ನನಗೂ ಯಾವುದೇ ಸಂಬಂಧವಿಲ್ಲ’; ಬಿಗ್​ಬಾಸ್​ ಸ್ಪರ್ಧಿ ಮೇಲೆ ಗಾಯಕ​ ಅರ್ಮಾನ್ ಮಲಿಕ್​ ಕೆಂಡಾಮಂಡಲ

ಕಬ್ಬಿನ ಬೆಳೆಗೆ ನೀರು.. ನದಿ ಪಾತ್ರದ ಜನ ಕಂಗಾಲು

ಇತ್ತ ಚಿಕ್ಕೋಡಿ ಭಾಗದಲ್ಲಿ ಕೃಷ್ಣಾ ನದಿಗೆ ಅಂದಾಜು 65 ಸಾವಿರ ಕ್ಯೂಸೇಕ್​ ನೀರಿನ ಒಳ ಹರಿವಿದೆ. ಚಿಕ್ಕೋಡಿಯಲ್ಲಿ ನದಿತೀರದ ಜಮೀನುಗಳಿಗೆ ನೀರು ನುಗ್ಗಿದೆ. ಕಬ್ಬು ಬೆಳೆಗೆ ನೀರು ನುಗ್ಗಿದ್ರಿಂದ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಇದನ್ನೂ ಓದಿ: ಕಿಡ್ನಿ ದಾನ ಮಾಡಿ ಮೋಸ ಹೋದ ಆಟೋ ಡ್ರೈವರ್‌.. 30 ಲಕ್ಷ ರೂ. ಕೊಡ್ತೀನಿ ಅಂದವ್ರು ಮಾಡಿದ್ದೇನು ಗೊತ್ತಾ?

ಕಾರದಗಾ-ಬೋಜ್ ಸಂಪರ್ಕಿಸುವ ಸೇತುವೆ ಮುಳುಗಡೆ

ದೂದಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪರಿಣಾಮ, ಕಾರದಗಾ-ಬೋಜ್ ಸಂಪರ್ಕಿಸುವ ಸೇತುವೆ ಮುಳುಗಡೆಯಾಗಿದೆ. ಮುಳುಗಡೆಯಾದ ಸೇತುವೆ ಮೇಲೆಯೇ ಜನ ಸಂಚಾರ ಮುಂದುವರಿದಿದೆ. ಈ ಬಗ್ಗೆ ನ್ಯೂಸ್ ಫಸ್ಟ್​ ವರದಿ ಕೂಡ ಬಿತ್ತರಿಸಿದ ಬೆನ್ನಲ್ಲೇ ಪೊಲೀಸ್ ಇಲಾಖೆ ಎಚ್ಚೆತ್ತಿದೆ. ಬ್ಯಾರಿಕೇಡ್ ಅಳವಡಿಸಿ ಜನರನ್ನ ನದಿ ಪಾತ್ರಕ್ಕೆ ತೆರಳದಂತೆ ಸೂಚಿಸಿದೆ..

ರಾಯಚೂರು ಜಿಲ್ಲೆಯ ವಿವಿಧೆಡೆ ವರುಣ ಅಬ್ಬರಿಸಿದ್ದಾನೆ. ಲಿಂಗಸುಗೂರು, ಮುದಗಲ್, ಮಾಕಾಪುರ ಸೇರಿದಂತೆ ವಿವಿಧೆಡೆ ಧಾರಾಕಾರ ಮಳೆಯಾಗಿದೆ. ಇನ್ನು ಮುಂಗಾರು ಮಳೆ ಆಗ್ತಿದ್ದಂತೆ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಇದನ್ನೂ ಓದಿ: ರೆಬಲ್ ಆಗ್ತಾರಾ ಬೆಳಗಾವಿ ನಾಯಕ? HDK, ಸತೀಶ್ ಜಾರಕಿಹೊಳಿ ರಹಸ್ಯ ಭೇಟಿ; ಏನಿದರ ಗುಟ್ಟು?

ಮೋಜು-ಮಸ್ತಿ ಮಾಡುವವರಿಗೆ ಪೊಲೀಸ್ ಇಲಾಖೆ ಬ್ರೇಕ್

ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಿರಂತರ ಮಳೆಯಾಗ್ತಿದೆ. ಇದರಿಂದ ಟೂರಿಸ್ಟ್ ಪ್ಲೇಸ್​ನಲ್ಲಿ ಪ್ರವಾಸಿಗರ ಡ್ಯಾನ್ಸ್, ಎಣ್ಣೆ ಪಾರ್ಟಿ, ಕಿರಿಕಿರಿ ಸಂಖ್ಯೆ ಕೂಡ ಹೆಚ್ಚಳವಾಗ್ತಿದೆ. ಇದನ್ನ ತಡೆಗಟ್ಟೋ ಸಲುವಾಗಿ ಕೆಪಿಎ ಆ್ಯಕ್ಟ್, ಕೊಟ್ಪಾ ಆ್ಯಕ್ಟ್​ನಲ್ಲಿಯೇ ಕೇಸ್ ಹಾಕೋದಕ್ಕೆ ಪೊಲೀಸರು ನಿರ್ಧರಿಸಿದ್ದಾರೆ. ಪ್ರವಾಸಿ ಮಿತ್ರ ಅನ್ನೋ ಹೊಸ ಹುದ್ದೆಯು ನೂತನವಾಗಿ ಜಿಲ್ಲೆಯಲ್ಲಿ ಮಾಡಲಾಗುತ್ತಿದೆ.

ಇದನ್ನೂ ಓದಿ: ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿಕೊಟ್ಟ ಬಿಗ್​ಬಾಸ್​ ಪ್ರಥಮ್​​.. ಯಾವ ಸೀರಿಯಲ್​​ ಗೊತ್ತಾ?

ಒಟ್ಟಿನಲ್ಲಿ, ನಿರಂತರವಾಗಿ ಸುರಿಯುತ್ತಿರೋ ಮಳೆಗೆ ಹಲವೆಡೆ ಕಟ್ಟೆಚ್ಚರ ವಹಿಸಲಾಗಿದ್ದು, ನದಿ ಪಾತ್ರದ ತಗ್ಗುಪ್ರದೇಶಗಳಿಗೆ ನದಿ ನೀರು ನುಗ್ಗುವ ಭೀತಿ ಹೆಚ್ಚಾಗಿದೆ. ಸರ್ಕಾರ ಮತ್ತು ಸ್ಥಳೀಯ ಆಡಳಿತ ಸೂಕ್ತ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳೋದು ಉತ್ತಮ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದಲ್ಲಿ ಮಳೆಯ ಅವಾಂತರ; ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಈ ನದಿ! ಸೇತುವೆ ಮುಳುಗಡೆ

https://newsfirstlive.com/wp-content/uploads/2024/07/CKD-Krihna-River.jpg

Load More