newsfirstkannada.com

×

ಹೈಕೋರ್ಟ್​​ನಲ್ಲಿ ದರ್ಶನ್​​ಗೆ ಭಾರೀ ನಿರಾಸೆ.. ಜುಲೈ 18 ವರೆಗೆ ಕಾಯಲೇಬೇಕು..!

Share :

Published July 10, 2024 at 12:23pm

    ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ

    ದರ್ಶನ್​​ನಿಂದ ಮನೆ ಊಟ, ಹಾಸಿಗೆ, ಪುಸ್ತಕ ನೀಡಲು ಮನವಿ

    ದರ್ಶನ್ ಪರ ಹಿರಿಯ ವಕೀಲ ಕೆ.ಎನ್.ಫಣೀಂದ್ರ ವಾದ

ಬೆಂಗಳೂರು: ಮನೆಯಿಂದ ಊಟ, ಬಟ್ಟೆ, ಚಮಚ, ಪುಸ್ತಕಗಳನ್ನು ನಿರೀಕ್ಷೆ ಮಾಡಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್​ಗೆ ನಿರಾಸೆಯಾಗಿದೆ.

ಕೊಲೆ ಕೇಸ್​ನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್, ತನಗೆ ಮನೆಯಿಂದ ಊಟ, ಹಾಸಿಗೆ, ದಿಂಬು, ಪುಸ್ತಕ ನೀಡುವಂತೆ ಹೈಕೋರ್ಟ್​​ನಲ್ಲಿ ಮನವಿ ಮಾಡಿಕೊಂಡಿದ್ದರು. ಇದರ ವಿಚಾರಣೆಯು ಹೈಕೋರ್ಟ್​ನ ಏಕಸದಸ್ಯ ಪೀಠದಲ್ಲಿ ನಡೆಯಿತು. ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ನೇತೃತ್ವದ ಪೀಠದಲ್ಲಿ ನಡೆದ ವಿಚಾರಣೆಯಲ್ಲಿ ದರ್ಶನ್ ಪರ ಹಿರಿಯ ವಕೀಲರಾದ ಕೆ.ಎನ್.ಫಣೀಂದ್ರ ವಾದ ಮಂಡಿಸಿದರು. ವಾದ ಆರಂಭ ಆಗ್ತಿದ್ದಂತೆಯೇ ಕೋರ್ಟ್​, ಜೈಲು ನಿಯಮಗಳನ್ನು ತೋರಿಸುವಂತೆ ಹೇಳಿತು. ಜೈಲಿನ ಮಾರ್ಗಸೂಚಿ ನೀಡುವಂತೆ ದರ್ಶನ್ ಪರ ವಕೀಲರಿಗೆ ಹೈಕೋರ್ಟ್ ಸೂಚನೆ ನೀಡಿತು.

ಇದನ್ನೂ ಓದಿ:ಐದು ಕೋಟಿ ಹಣ ನನಗೆ ಬೇಡ ಎಂದ ದ್ರಾವಿಡ್.. ಅದಕ್ಕೆ ಕಾರಣವೂ ಇದೆ.. ಮತ್ತೊಮ್ಮೆ ಹೃದಯಗೆದ್ದ ಕನ್ನಡಿಗ..!

ಜೈಲಿನಲ್ಲಿರುವ ಪರಿಷ್ಕರಣೆ ನಿಯಮ ಎಂದು ಇದೆಯಲ್ವಾ? ಅದನ್ನು ಮೊದಲು ನಮಗೆ ತೋರಿಸಿ. ಆ ನಿಯಮಗಳನ್ನು ತೋರಿಸಿದ್ರೆ ಆದೇಶ ನೀಡಬಹುದು. ಅಲ್ಲದೇ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕು. ಆ ನಂತರ ನಾವು ಆದೇಶವನ್ನು ಮಾಡಬಹುದು ಎಂದು ನ್ಯಾಯಮೂರ್ತಿ ಕೃಷ್ಣ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕೇಸ್​​ಗೆ ಸಂಬಂಧಿಸಿದ ಎಲ್ಲಾ ನಿಬಂಧನೆಗಳನ್ನ ಒಟ್ಟಿಗೆ ಮಾಡಿ ಸಲ್ಲಿಸಬೇಕು. ಜೈಲು ಅಧಿಕಾರಿಗಳಿಗೆ ಕೋರಿಕೆ ಸಲ್ಲಿಸಲಾಗಿದೆಯಾ? ವಿಚಾರಣಾಧೀನ ಕೋರ್ಟ್​ನಲ್ಲಿ ಈ ಕೋರಿಕೆ ಸಲ್ಲಿಸಲಾಗಿದೆಯಾ? ಅದಕ್ಕೂ ಸಹ ಉತ್ತರ ನೀಡಬೇಕು ಎಂದು ದರ್ಶನ್ ಪರ ವಕೀಲ ಫಣೀಂದ್ರ ಅವರಿಗೆ ಹೈಕೋರ್ಟ್ ಸೂಚನೆ ನೀಡಿತು. ಬಳಿಕ ಅರ್ಜಿ ವಿಚಾರಣೆಯನ್ನು ಜುಲೈ 18ಕ್ಕೆ ವಿಚಾರಣೆನ್ನು ಮುಂದೂಡಿತು. ಈ ಮೂಲಕ ಜುಲೈ 18ರ ತನಕ ದರ್ಶನ್​ಗೆ ಮನೆ ಊಟ, ಬಟ್ಟೆ, ಚಮಚ ಮತ್ತು ಪುಸ್ತಕ ಸಿಗಲ್ಲ.

ಇದನ್ನೂ ಓದಿ:IND vs ZIM: ಜೈಸ್ವಾಲ್, ದುಬೆ, ಸಂಜು ತಂಡಕ್ಕೆ ಎಂಟ್ರಿ.. ಪ್ಲೇಯಿಂಗ್​-11ನಿಂದ ಮೂವರು ಔಟ್​..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೈಕೋರ್ಟ್​​ನಲ್ಲಿ ದರ್ಶನ್​​ಗೆ ಭಾರೀ ನಿರಾಸೆ.. ಜುಲೈ 18 ವರೆಗೆ ಕಾಯಲೇಬೇಕು..!

https://newsfirstlive.com/wp-content/uploads/2024/06/DARSHAN-JAIL-2.jpg

Load More