ಬ್ಲೂ ಜೆರ್ಸಿಯಲ್ಲಿ ಕಾಣಲ್ಲ ರೋಹಿತ್-ವಿರಾಟ್
6 ತಿಂಗಳು ಏಕದಿನ ಫಾರ್ಮೆಟ್ನಿಂದ ದೂರ
2025ರ ಫೆಬ್ರವರಿ ತನಕ ಕಾಯಬೇಕು ಫ್ಯಾನ್ಸ್
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಶಾಕ್ ಕೊಟ್ರು. ಟಿ20 ಇಂಟರ್ನ್ಯಾಷನಲ್ಸ್ಗೆ ದಿಢೀರ್ ಗುಡ್ ಬೈ ಹೇಳಿದ್ರು. ಆ ಸುದ್ದಿಯನ್ನ ಈಗಲೂ ಕ್ರಿಕೆಟ್ ಫ್ಯಾನ್ಸ್ಗಳ ಕೈಯಲ್ಲಿ ಅರಿಗಿಸಿಕೊಳ್ಳಲು ಆಗ್ತಿಲ್ಲ. ಇದ್ರ ಬೆನ್ನಲ್ಲೇ ಇದೀಗ ಮತ್ತೊಂದು ಶಾಕಿಂಗ್ ನ್ಯೂಸ್ ಇದೆ.
ರೋಹಿತ್ ಶರ್ಮಾ ಅಂಡ್ ವಿರಾಟ್ ಕೊಹ್ಲಿ.. ಟೀಮ್ ಇಂಡಿಯಾದ ಭಲೇ ಜೋಡಿ. ಇವರಿಬ್ಬರ ಜುಗಲ್ಬಂದಿಯಲ್ಲಿ ಟೀಮ್ ಇಂಡಿಯಾ ಮಾಡಿದ ಸಾಧನೆ ಅಷ್ಟಿಷ್ಟಲ್ಲ. ಈ ಜೋಡಿ ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಟಿ20 ಇಂಟರ್ನ್ಯಾಷನಲ್ ಕ್ರಿಕೆಟ್ಗೆ ಗುಡ್ ಬೈ ಹೇಳಿದೆ. ವಿದಾಯ ಹೇಳಿ 11 ದಿನಗಳು ಕಳೆದ್ರೂ ಕೆಲ ಫ್ಯಾನ್ಸ್ಗೆ ಆ ಸುದ್ದಿಯನ್ನ ಅರಗಿಸಿಕೊಳ್ಳಲು ಆಗಿಲ್ಲ. ಅದ್ರ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ನ್ಯೂಸ್ ಎದುರಾಗಿದೆ.
ಇದನ್ನೂ ಓದಿ:ಕಡಲತೀರ.. ಕೋಟಿಗಟ್ಟಲೇ ಖರ್ಚು.. ಕೊಹ್ಲಿ ಕಟ್ಟಿಸಿದ ಬಂಗಲೆ ವಾವ್ಹ್ .. ಅದ್ಭುತ..! ವಿಡಿಯೋ
ಬ್ಲೂ ಜೆರ್ಸಿಯಲ್ಲಿ ಕಾಣಲ್ಲ ರೋಹಿತ್-ವಿರಾಟ್..!
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಟಿ20ಗೆ ಗುಡ್ ಬೈ ಹೇಳಿ ಏಕದಿನ ಹಾಗೂ ಟೆಸ್ಟ್ಗೆ ಮಾತ್ರ ಸೀಮಿತವಾಗಿದ್ದಾರೆ. ಟಿ20 ಕ್ರಿಕೆಟ್ನಿಂದ ದೂರ ಸರಿದಿರೋದ್ರಿಂದ ಇವ್ರ ಆಟವನ್ನ ಫ್ಯಾನ್ಸ್ ಹೆಚ್ಚು ಮಿಸ್ ಮಾಡಿಕೊಳ್ಳಲಿದ್ದಾರೆ. ಈ ಬೇಸರದ ನಡುವೆ ಮತ್ತೊಂದು ಶಾಕ್ ಎದುರಾಗಿದೆ. ಕೊಹ್ಲಿ, ರೋಹಿತ್ ಜೋಡಿ ಮುಂದಿನ 6 ತಿಂಗಳ ಕಾಲ ಬ್ಲೂ ಜರ್ಸಿಯಿಂದ ದೂರವಾಗಲಿದ್ದಾರೆ. ವೈಟ್ ಬಾಲ್ ಫಾರ್ಮೆಟ್ನ ಈ ಶ್ರೇಷ್ಠ ಆಟಗಾರರನ್ನ ಬ್ಲೂ ಜರ್ಸಿಯಲ್ಲಿ ನೋಡಬೇಕು ಅಂದ್ರೆ 2025ರ ಫೆಬ್ರವರಿ ತನಕ ಕಾಯಬೇಕಿದೆ.
ಟೆಸ್ಟ್ ಮೇಲೆಯೇ ರೋಹಿತ್-ಕೊಹ್ಲಿ ಫೋಕಸ್
2023-25ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ನಲ್ಲಿ ಟೀಮ್ ಇಂಡಿಯಾ ನಂ.1 ಸ್ಥಾನದಲ್ಲಿದೆ. WTC ಟೂರ್ನಿಯಲ್ಲಿ ಫೈನಲ್ ತಲುಪಬೇಕಾದ್ರೆ, ಮುಂದಿನ ಬಾಂಗ್ಲಾದೇಶ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಎದುರಿನ ಟೆಸ್ಟ್ ಸರಣಿಗಳು ಮೋಸ್ಟ್ ಇಂಪಾರ್ಟೆಂಟ್ ಆಗಿದೆ. ಹೀಗಾಗಿ ಟೆಸ್ಟ್ ಫಾರ್ಮೆಟ್ನತ್ತ ಕೊಹ್ಲಿ-ರೋಹಿತ್ ಜೋಡಿ ಕಂಪ್ಲೀಟ್ ಚಿತ್ತ ಹರಿಸಲಿದೆ. ಸುದೀರ್ಘ ವಿಶ್ರಾಂತಿ ಪಡೆಯೋ ಜೋಡಿ, ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿರುವ ಬಾಂಗ್ಲಾದೇಶ ಎದುರಿನ ಟೆಸ್ಟ್ ಸರಣಿಯಲ್ಲಿ ಅಂಗಳಕ್ಕಿಳಿಯಲಿದ್ದಾರೆ. ಅಲ್ಲಿಯ ತನಕ ಟೀಮ್ ಇಂಡಿಯಾದಿಂದ ದೂರ ಉಳಿಯಲಿದ್ದಾರೆ.
ಇದನ್ನೂ ಓದಿ:IND vs ZIM: ಜೈಸ್ವಾಲ್, ದುಬೆ, ಸಂಜು ತಂಡಕ್ಕೆ ಎಂಟ್ರಿ.. ಪ್ಲೇಯಿಂಗ್-11ನಿಂದ ಮೂವರು ಔಟ್..?
10 ಟೆಸ್ಟ್ನಲ್ಲಿ 5 ಗೆಲುವು ಅನಿವಾರ್ಯ..!
ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಶಿಫ್ ಫೈನಲ್ಗೆ ಎಂಟ್ರಿ ನೀಡುವುದು ಟಫ್ ಟಾಸ್ಕ್ ಆಗಿದೆ. ಸ್ವದೇಶದಲ್ಲಿ ಬಾಂಗ್ಲಾ ಎದುರು 2 ಟೆಸ್ಟ್, ನ್ಯೂಜಿಲೆಂಡ್ ಎದುರು 3 ಟೆಸ್ಟ್ ಪಂದ್ಯಗಳನ್ನಾಡಲಿರುವ ಟೀಮ್ ಇಂಡಿಯಾ, ನಂತರ 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಲಿದೆ. ಈ 10 ಟೆಸ್ಟ್ಗಳಲ್ಲಿ ಟೀಮ್ ಇಂಡಿಯಾ, ಕನಿಷ್ಠ 5 ಪಂದ್ಯಗಳನ್ನ ಗೆಲ್ಲಬೇಕಿದೆ. ಇಲ್ಲದಿದ್ರೆ ಟೀಮ್ ಇಂಡಿಯಾದ WTC ಫೈನಲ್ ಕನಸು ಅಂತತ್ರಕ್ಕೆ ಸಿಲುಕಲಿದೆ.
ಚಾಂಪಿಯನ್ಸ್ ಟ್ರೋಫಿಗೂ ಮುನ್ನ ವೈಟ್ಬಾಲ್ಗೆ ಕಮ್ಬ್ಯಾಕ್
ಜನವರಿ 7ರ ತನಕ ಟೆಸ್ಟ್ ಫಾರ್ಮೆಟ್ನಲ್ಲೇ ಬ್ಯುಸಿಯಾಗಲಿರುವ ರೋಹಿತ್ ಅಂಡ್ ವಿರಾಟ್, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಕಮ್ಬ್ಯಾಕ್ ಮಾಡೋ ಸಾಧ್ಯತೆ ಇದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಫೆಬ್ರವರಿಯಲ್ಲಿ 3 ಪಂದ್ಯಗಳ ಸರಣಿ ನಡೆಯಲಿದೆ. ಇಂಗ್ಲೆಂಡ್ ವಿರುದ್ಧದ ಈ ಸರಣಿ ವೇಳೆ ರೋಹಿತ್ ಶರ್ಮಾ ಆ್ಯಂಡ್ ವಿರಾಟ್ ಕೊಹ್ಲಿ ಕಣಕ್ಕಿಳಿಯಲಿದ್ದಾರೆ. ಅಲ್ಲಿಯ ತನಕ ಬ್ಲೂ ಜರ್ಸಿಯಿಂದ ದೂರವೇ ಇರೋದು ಬಹುತೇಕ ಪಕ್ಕಾ.
ಇದನ್ನೂ ಓದಿ:Audi, BMW, 5 ಕೆಜಿ ಬೆಳ್ಳಿ! ಐಷಾರಾಮಿ ಬಂಗಲೆಗಳು.. ಕೋಚ್ ಗಂಭೀರ್ ಆಸ್ತಿ ಅಬ್ಬಾಬ್ಬ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್