newsfirstkannada.com

×

iPhone ಪ್ರಿಯರಿಗೆ ಗುಡ್​ನ್ಯೂಸ್.. ಆ್ಯಪಲ್ ಫೋನ್‌ಗಳ ದರ ಇಳಿಕೆ; ಎಷ್ಟಿತ್ತು? ಈಗ ಎಷ್ಟಾಗಿದೆ?

Share :

Published July 26, 2024 at 8:05pm

Update July 26, 2024 at 8:09pm

    13, 14 ಮತ್ತು 15 ಸೇರಿ ಎಲ್ಲಾ ಮಾದರಿ ಐಫೋನ್‌ ಬೆಲೆ ಎಷ್ಟು?

    ಐಫೋನ್​ 15 ಪ್ರೊ ಖರೀದಿಸುತ್ತಿದ್ದೀರಾ? ಹಾಗಿದ್ರೆ ಸ್ಟೋರಿ ಓದಿ

    ಐಫೋನ್​ ಗ್ರಾಹಕರು ಫುಲ್​ ಖುಷಿ ಪಡೋ ಸುದ್ದಿ ಇದಾಗಿದೆ

ಈಗಂತೂ ಯುವಕ ಯುವತಿಯರು ಜೀವನದಲ್ಲಿ ಒಂದು ಬಾರಿಯಾದ್ರೂ ಐಫೋನ್​ ಖರೀದಿಸಬೇಕು ಎಂಬ ಆಸೆ ಇದ್ದೇ ಇರುತ್ತದೆ. ಹೀಗಾಗಿ ಐಫೋನ್​ ಖರೀದಿಸಬೇಕು ಅಂತ ಹಣ ಕೂಡಿಟ್ಟಿರುತ್ತಾರೆ. ಇದೀಗ ಐಫೋನ್​ ಗ್ರಾಹಕರಿಗೆ ಖುಷಿ ಸುದ್ದಿ ಬಂದಿದೆ. ಭಾರತದಲ್ಲಿ ಆ್ಯಪಲ್ ಫೋನ್ ದರ ಕಡಿಮೆ ಆಗಿದೆ.

ಇದನ್ನೂ ಓದಿ: ಅಬ್ಬಾ.. ಐಫೋನ್​ಗಾಗಿ ಭಾರತೀಯರು ಪಾವತಿಸುವ ತೆರಿಗೆ ಎಷ್ಟು ಗೊತ್ತಾ? ಯಾಕಿಷ್ಟು ವ್ಯತ್ಯಾಸ?

ಹೌದು, ಆಪಲ್ ಕಂಪನಿ ತನ್ನ ಎಲ್ಲ ಐಫೋನ್‌ಗಳ ಬೆಲೆಗಳನ್ನು ಶೇಕಡಾ 3-4 ರಷ್ಟು ಕಡಿತಗೊಳಿಸಿದೆ. ಪ್ರೊ ಅಥವಾ ಪ್ರೊ ಮ್ಯಾಕ್ಸ್ ಮಾದರಿಯನ್ನು ಖರೀದಿಸಿದರೆ 5100 ರೂಪಾಯಿಯಿಂದ 6000 ರೂಪಾಯಿ ತನಕ ರಿಯಾಯಿತಿ ಪಡೆಯಬಹುದು. IPHONE 13, 14 ಮತ್ತು 15 ಸೇರಿ ಎಲ್ಲ ಮಾದರಿಯ ಐಫೋನ್‌ಗಳು ಕನಿಷ್ಠ 300 ರೂಪಾಯಿ ಅಗ್ಗವಾಗಿದ್ದು, ಐಫೋನ್‌ ಎಸ್‌ಇ 2,300 ರೂಪಾಯಿ ಅಗ್ಗವಾಗಿದೆ ಎಂದು ಕಂಪನಿ ತಿಳಿಸಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 23ರಂದು 2024ರ ಕೇಂದ್ರ ಬಜೆಟ್ ಭಾಷಣದಲ್ಲಿ ಮೊಬೈಲ್ ಫೋನ್‌ಗಳ ಮೇಲಿನ ಸುಂಕವನ್ನು ಶೇಕಡ 20 ರಿಂದ ಶೇಕಡ 15ಕ್ಕೆ ಇಳಿಸಿದ್ದರು. ಇದಲ್ಲದೆ, ಮೊಬೈಲ್ ಫೋನ್ ಸರ್ಕ್ಯೂಟ್ ಬೋರ್ಡ್‌ ಅಸೆಂಬಲ್‌, ಮೊಬೈಲ್ ಫೋನ್ ಚಾರ್ಜರ್‌ಗಳ ಮೇಲಿನ ಸುಂಕವನ್ನು ಕಡಿಮೆ ಮಾಡಿದ್ದರು. ಇದಾದ ಬೆನ್ನಲ್ಲೇ ಐಫೋನ್‌ಗಳ ದರ ಇಳಿಕೆ ಕಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

iPhone ಪ್ರಿಯರಿಗೆ ಗುಡ್​ನ್ಯೂಸ್.. ಆ್ಯಪಲ್ ಫೋನ್‌ಗಳ ದರ ಇಳಿಕೆ; ಎಷ್ಟಿತ್ತು? ಈಗ ಎಷ್ಟಾಗಿದೆ?

https://newsfirstlive.com/wp-content/uploads/2023/09/Iphone-15.jpg

Load More