newsfirstkannada.com

ಹೆಡ್​ ಮಾಸ್ಟರ್ ಆದ್ಮೇಲೆ ಕಂಪ್ಲೀಟ್ ಬದಲಾದ ಗಂಭೀರ್.. ಅಂದ್ಕೊಂಡ ಹಾಗೆ ಇಲ್ಲವೇ ಇಲ್ಲ ಅವರು..!

Share :

Published August 4, 2024 at 8:17am

    ಅಂದು ಗಂಭೀರತೆ.. ಇಂದು ಸದಾ ಕಿಲ ಕಿಲ..!

    ಗಂಭೀರವಾಗಿದ್ದ ಗೌತಿ ಈಗ ನಗುನಗುತ್ತಿರೋದ್ಯಾಕೆ..?

    ಹೊಟ್ಟೆ ಹುಣ್ಣಾಗುವಷ್ಟು ನಗಾಡಿದ ಗಂಭೀರ್​​​-ಕೊಹ್ಲಿ..!

ಆನ್​​ಫೀಲ್ಡ್​ನಲ್ಲಿ ಗೌತಮ್​ ಗಂಭೀರ್​ರ ಕೋಪಾವತಾರ ಅನೇಕ ಬಾರಿ ದರ್ಶನವಾಗಿದೆ. ಹೆಸರಿಗೆ ತಕ್ಕಂತೆ ಸದಾ ಗಂಭೀರವಾಗೇ ಯಾವಾಗ್ಲೂ ಕಾಣಿಸಿಕೊಳ್ಳೋದು. ಸದಾ ಅಗ್ರೆಸ್ಸಿವ್​ ಆ್ಯಟಿಟ್ಯೂಡ್​ನಲ್ಲೇ​ ಕಾಣುವ ಗಂಭೀರ್​​ ಟೀಮ್​​ ಇಂಡಿಯಾ ಹೆಡ್​ಕೋಚ್ ಆಗ್ತಿದ್ದಂತೆ ಬದಲಾಗಿ ಬಿಟ್ರಾ ಅನ್ನೋ ಪ್ರಶ್ನೆ ಕಾಡ್ತಿದೆ.

ಗೌತಮ್ ಗಂಭೀರ್​​​ ಆಟದಷ್ಟೇ ಕಿರಿಕ್​​ನಿಂದಲೇ ಹೆಚ್ಚು ಫೇಮರ್ಸ್​ ಆಗಿದ್ರು. ಶಾರ್ಟ್​ ಟೆಂಪರ್​​ ಗಂಭೀರ್​​ ಆನ್​ಫೀಲ್ಡ್​​ನಲ್ಲಿ ಮಾಡಿಕೊಂಡ ಕಿರಿಕ್ ಒಂದಾ, ಎರಡಾ? ಪಟ್ಟಿ ಹೇಳ್ತಾ ಹೋದ್ರೆ ದೊಡ್ಡ ಲಿಸ್ಟ್​ ಇದೆ. ಹೆಸರಿನಂತೆಯೇ ಸದಾ ಗಂಭೀರವಾಗಿ ಇರುತ್ತಿದ್ರು. ಕ್ರಿಕೆಟ್​​​​ಗೆ ಗುಡ್ ​ಬೈ ಹೇಳಿ, ಐಪಿಎಲ್​​ನಲ್ಲಿ ಕೋಚ್ ಆದರೂ ಆಕ್ರಮಣಕಾರಿ ಸ್ವಭಾವ ಬಿಟ್ಟಿರಲಿಲ್ಲ. ಟೀಮ್ ಇಂಡಿಯಾ ಹೆಡ್​ಕೋಚ್​ ಹುದ್ದೆಗೇರುತ್ತಿದ್ದಂತೆ ಸಂಪೂರ್ಣ ಬದಲಾಗಿದ್ದಾರೆ.

ಇದನ್ನೂ ಓದಿ:ಟೀಂ ಇಂಡಿಯಾದಲ್ಲಿ ಬದಲಾವಣೆ! ಪಂತ್​ಗೆ ಅವಕಾಶ? ಇದು 2ನೇ ಪಂದ್ಯದಲ್ಲಿ ಆಡುವ XI..!

ಬದಲಾದ್ರಾ ಗಂಭೀರ್?
ಆನ್​​ಫೀಲ್ಡ್​​ನಲ್ಲಿ ಸದಾ ಉರಿದು ಬೀಳ್ತಿದ್ದ ಗಂಭೀರ್​​​ಗೆ ಈಗ ಅದೇನಾಗಿದೇಯೋ ಗೊತ್ತಿಲ್ಲ. ಭಾರತ ತಂಡದ ನೂತನ ಹೆಡ್​ಕೋಚ್ ಹುದ್ದೆ ಅಲಂಕರಿಸಿದ ಬಳಿಕ ನಡವಳಿಕೆಯಲ್ಲಿ ಸಾಕಷ್ಟು ಬದಲಾಗಿದ್ದಾರೆ. ಸದಾ ಗಂಭೀರವಾಗಿ ಇರುತ್ತಿದ್ದ ಮೊಗದಲ್ಲಿ ಈಗ, ನಗುವೇ ತುಂಬಿಕೊಂಡಿದೆ. ಅಗ್ರೆಸ್ಸಿವ್​ ಗಂಭೀರ್​​ ಈಗ, ನಗುಮೊಗದ ಸರದಾರನಾಗಿ ಬದಲಾಗಿದ್ದಾರೆ. ಈಗಿನ ಗಂಭೀರ್ ನೋಡಿದೋರೆಲ್ಲಾ ಇದೇನಾ ಆ ಹಳೇ ಗಂಭೀರ್ ಎಂದು ಮಾತನಾಡಿಕೊಳ್ತಿದ್ದಾರೆ.

ಹೊಟ್ಟೆ ಹುಣ್ಣಾಗುವಷ್ಟು ನಗಾಡಿದ ಗಂಭೀರ್​​​-ಕೊಹ್ಲಿ
ಕಿಂಗ್ ಕೊಹ್ಲಿ ಹಾಗೂ ಗಂಭೀರ್​ಗೆ ಒಬ್ಬರನ್ನ ಕಂಡ್ರೆ ಒಬ್ಬರಿಗೆ ಆಗ್ತಿರ್ಲಿಲ್ಲ. ಆನ್​​ಫೀಲ್ಡ್​​​​​​ನಲ್ಲಿ ಇಬ್ಬರು ಅನೇಕ ಬಾರಿ ವಾಗ್ವಾದಕ್ಕಿಳಿದಿದೆ. ಆದ್ರೀಗ ಗಂಭೀರ್​ ಕೊಹ್ಲಿ ಜೊತೆಗಿನ ಮನಸ್ತಾಪಕ್ಕೆ ಬ್ರೇಕ್ ಹಾಕಿದ್ದಾರೆ. ವಿರಾಟ್​ ಜೊತೆ ಹೊಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ.
ನಿನ್ನೆಯ ಪಂದ್ಯಕ್ಕೂ ಮುನ್ನ ಕೊಲಂಬೋದಲ್ಲಿ ಅಭ್ಯಾಸದ ವೇಳೆ ಇಬ್ಬರು ಆತ್ಮೀಯವಾಗಿ ಮಾತನಾಡಿದ್ರು. ಅದ್ಯಾವ ಮಟ್ಟಿಗೆ ಅಂದ್ರೆ ಮಾತನಾಡುತ್ತ ಜಗತ್ತನ್ನೆ ಮರೆತಿದ್ರು. ಇಬ್ಬರ ಮೊಗದಲ್ಲಿ ನಗು ತುಂಬಿ ತುಳುಕುತ್ತಿತ್ತು. ಗಂಭೀರ್​​-ಕೊಹ್ಲಿ ನಗುವಿನ ಫೋಟೋಗಳು ಸೋಷಿಯಲ್​​​​ ಮೀಡಿಯಾದಲ್ಲಿ ಸದ್ದು ವೈರಲ್ ಆದ್ವು.

ಇದನ್ನೂ ಓದಿ:ಧೋನಿ ಉಳಿಸಿಕೊಳ್ಳಲು BCCI ಮುಂದೆ ಹಳೇ ಅಸ್ತ್ರ ಇಟ್ಟ CSK ; ಕಾವ್ಯ ಮಾರನ್ ತೀವ್ರ ವಿರೋಧ..!

ರೋಹಿತ್​​ ಮಾತಿಗೆ ನಕ್ಕು ನಕ್ಕು ಸುಸ್ತಾದ ಗಂಭೀರ್​​
ಅಭ್ಯಾಸಕ್ಕಾಗಿ ಟೀಮ್ ಇಂಡಿಯಾ ಆಟಗಾರರು ಟೀಮ್​ ಬಸ್​​ಗಾಗಿ ಕಾಯ್ತಿದ್ರು. ಈ ವೇಳೆ ಕ್ಯಾಪ್ಟನ್​ ಹಾಗೂ ಹೆಡ್​ಕೋಚ್​​​ ಮಾತುಕತೆಯಲ್ಲಿ ತೊಡಗಿದ್ರು. ಜಾಲಿ ಪರ್ಸನ್ ರೋಹಿತ್​ ಹೇಳಿದ ಮಾತಿಗೆ ಗಂಭೀರ್​​​​​ ನಗೆಗಡಲಲ್ಲಿ ತೇಲಾಡಿದ್ರು. ಇಬ್ಬರು ನಗಾಡುವುದನ್ನ ಕಂಡು ಉಳಿದ ಆಟಗಾರರು ಕೂಡ ನಕ್ಕು ನಲಿದ್ರು.

ನಗುತ್ತಲೇ ಆಟಗಾರರಿಗೆ ಮಾರ್ಗದರ್ಶನ
ಬರೀ ಕಿಂಗ್ ಕೊಹ್ಲಿ ,ರೋಹಿತ್ ಶರ್ಮಾ ಅಷ್ಟೇ ಅಲ್ಲ, ಇಡೀ ತಂಡದ ಜೊತೆ ಆತ್ಮೀಯವಾಗಿ ಬೆರೆಯುತ್ತಿದ್ದಾರೆ. ಕೋಪ, ಆಕ್ರಮಣಕಾರಿ ಸ್ವಭಾವ ಬಿಟ್ಟು ನಗುತ್ತಲೆ ಎಲ್ಲಾ ಆಟಗಾರರಿಗೆ ಮಾರ್ಗದರ್ಶನ ನೀಡ್ತಿದ್ದಾರೆ.

ಇದನ್ನೂ ಓದಿ:ಒಂದೇ ವರ್ಷಕ್ಕೆ ಬೇಡವಾದ ಪಾಂಡ್ಯ.. ಮುಂಬೈ ಇಂಡಿಯನ್ಸ್​ನಿಂದ ಶಾಕಿಂಗ್ ನಿರ್ಧಾರ..!

ಗಂಭೀರ್​​​​​ ನಗುವಿನ ಹಿಂದಿದ್ಯಾ ಸಕ್ಸಸ್​ ಮಂತ್ರ..!
ಸದಾ ಗಂಭೀರವಾಗೇ ಇರುತ್ತಿದ್ದ ಗಂಭೀರ್​​​ ಟೀಮ್ ಇಂಡಿಯಾದ ದ್ರೋಣಾಚಾರ್ಯ ಆಗ್ತಿದ್ದಂತೆ ಕಂಪ್ಲೀಟ್​ ಬದಲಾಗಿ ಬಿಟ್ಟಿದ್ದಾರೆ. ಕೋಪವಿದ್ದ ಮುಖದಲ್ಲೀಗ ನಗು ಅರಳಿದೆ. ಈ ಬದಲಾವಣೆಗೆ ಕಾರಣ ಸಕ್ಸಸ್​​. ಮಾಜಿ ಕೋಚ್​​​ ರಾಹುಲ್​ ದ್ರಾವಿಡ್​​ ಎಲ್ಲರ ಜೊತೆ ನಗುತ್ತಲೇ ಉತ್ತಮ ಬಾಂಧವ್ಯ ವೃದ್ಧಿಸಿಕೊಂಡಿದ್ರು. ಇದರಿಂದಾಗಿ ಟೀಮ್ ಇಂಡಿಯಾ ಟಿ20 ವಿಶ್ವಕಪ್​ ಗೆದ್ದು ಹೊಸ ಚರಿತ್ರೆ ಸೃಷ್ಟಿಸಿತ್ತು.
ಇದೀಗ ಮಾಜಿ ಕೋಚ್​ ದ್ರಾವಿಡ್​ ಅನುಸರಿಸಿದ ತಂತ್ರವನ್ನೇ ಹಾಲಿ ಹೆಡ್​ಕೋಚ್​​​ ಫಾಲೋ ಮಾಡ್ತಿದ್ದಾರೆ. ಆ ಮೂಲಕ ದಿ ವಾಲ್​ ಹುಟ್ಟು ಹಾಕಿದ ಪರಂಪರೆಯನ್ನ ಗೌತಿ ಮುಂದುವರಿಸಿದ್ದು, ಇದರಲ್ಲಿ ಯಾವ ಮಟ್ಟಕ್ಕೆ ಸಕ್ಸಸ್ ಕಾಣ್ತಾರೆ ಅನ್ನೋದನ್ನ ಕಾದು ನೋಡಬೇಕು.

ಇದನ್ನೂ ಓದಿ:ರೋಹಿತ್​ಗೆ ಬೇಕಿತ್ತು ಪಂತ್.. ರಾಹುಲ್​ಗೆ ಚಾನ್ಸ್​ ಸಿಕ್ಕಿರುವ ಹಿಂದಿದೆ ಓರ್ವ ಸೂತ್ರಧಾರನ ಕೈವಾಡ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಹೆಡ್​ ಮಾಸ್ಟರ್ ಆದ್ಮೇಲೆ ಕಂಪ್ಲೀಟ್ ಬದಲಾದ ಗಂಭೀರ್.. ಅಂದ್ಕೊಂಡ ಹಾಗೆ ಇಲ್ಲವೇ ಇಲ್ಲ ಅವರು..!

https://newsfirstlive.com/wp-content/uploads/2024/08/KOLHI-GAMBHIR.jpg

Load More