newsfirstkannada.com

ಜಿಮ್​ ವಸ್ತುಗಳ ಸೇಲ್ಸ್​ಮ್ಯಾನ್​ ಮೃತದೇಹ ಪತ್ತೆ.. ಪ್ರಕರಣ ಬೆನ್ನ ಹತ್ತಿದ್ದ ಪೊಲೀಸರಿಗೆ ಶಾಕ್​ ಮೇಲೆ ಶಾಕ್​!

Share :

Published August 4, 2024 at 6:31pm

    ಅಪಾರ್ಟ್​​ಮೆಂಟ್​ನ ಫ್ಲಾಟ್​​ನಲ್ಲಿ ಪತ್ನಿ ಹತ್ಯೆ ಆಗಿರುವುದು ಹೇಗೆ?

    ರಸ್ತೆಯಲ್ಲಿ ಪತ್ತೆಯಾದ ಮೃತದೇಹದ ಕುತ್ತಿಗೆಯಲ್ಲಿ ಇದ್ದವು 2 ಕೀಗಳು

    ಮಗನಿಗೆ ವಾಟ್ಸ್​ ಮೂಲಕ ತಂದೆ ಏನೇನು ಮೆಸೇಜ್ ಮಾಡಿದ್ದನು?

ಮುಂಬೈ: ಗೋರೆಗಾಂವ್​ನ ಜವಾಹರ್ ನಗರದ ಟೋಪಿವಾಲಾ ಮ್ಯಾನ್ಷನ್​ ಅಪಾರ್ಟ್​ಮೆಂಟ್​ ಮುಂಭಾದ ರಸ್ತೆಯೊಂದರಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು ಹಲವು ಅನುಮಾನಗಳನ್ನ ಉಂಟು ಮಾಡಿದೆ.

ಇದನ್ನೂ ಓದಿ: Olympics; ಗ್ರೇಟ್​ ಬ್ರಿಟನ್​ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು.. ಸೆಮಿಸ್​​ಗೆ ಎಂಟ್ರಿ ಕೊಟ್ಟ ಟೀಮ್ ಇಂಡಿಯಾ

ಸಾವನ್ನಪ್ಪಿದವರು ಕಿಶೋರ್ ಪೆಡ್ನೇಕರ್ (58) ಎಂದು ಗುರುತಿಸಲಾಗಿದೆ. ಇವರು ಜಿಮ್​ ವಸ್ತುಗಳನ್ನು ಮಾರಾಟ ಮಾಡುವ ಸೇಲ್ಸ್​ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಮೃತದೇಹ ಪತ್ತೆಯಾಗುತ್ತಿದ್ದಂತೆ ಇವರ ಪತ್ನಿ ರಾಜಶ್ರೀಗೆ ಸಾಕಷ್ಟು ಬಾರಿ ಫೋನ್ ಮಾಡಲಾಗಿದೆ. ಆದರೆ ಯಾವುದೇ ಪ್ರತಿಕ್ರಿಯೇ ಆ ಕಡೆಯಿಂದ ಬಂದಿಲ್ಲ. ಮನೆಗೆ ಹೋಗಿ ನೋಡಿದರೆ ಮನೆ ಬಾಗಿಲು ಒಳಗಡೆಯಿಂದ ಲಾಕ್ ಹಾಕಿತ್ತು. ಹೀಗಾಗಿ ಪತ್ನಿ ಮೇಲೆಯೇ ಅನುಮಾನ ವ್ಯಕ್ತಪಡಿಸಲಾಗಿತ್ತು. ಆದರೆ ಕಿಶೋರ್ ಮೃತದೇಹದ​ ಕುತ್ತಿಗೆಯಲ್ಲಿದ್ದ ಲಾಕೆಟ್​ನಲ್ಲಿ ಎರಡು ಕೀಗಳು ಕಂಡು ಬಿಂದಿದ್ದು ಅವುಗಳನ್ನ ತೆಗೆದುಕೊಂಡು ಹೋಗಿ ಅಪಾರ್ಟ್​​ಮೆಂಟ್​ನಲ್ಲಿದ್ದ ಮನೆಯ ಬಾಗಿಲನ್ನು ಪೊಲೀಸರು ಓಪನ್ ಮಾಡಿದ್ದಾರೆ. ಆಗ ಪೊಲೀಸರು ಫುಲ್ ಶಾಕ್ ಆಗಿದ್ದಾರೆ.

ಇದನ್ನೂ ಓದಿ: ಕಾವೇರಿ ದಡದ ಮೇಲೆ ಕುಡುಕರ ಅಟ್ಟಹಾಸ.. ಕಾಲೇಜು ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿ, ಕೊಂದ ಗ್ಯಾಂಗ್ 

ಪೊಲೀಸರು ಮನೆಯನ್ನು ಓಪನ್ ಮಾಡಿದಾಗ ಕಿಶೋರ್ ಪೆಡ್ನೇಕರ್ ಪತ್ನಿ ರಾಜಶ್ರೀ (57) ಕೊಲೆಯಾಗಿದ್ದರು. ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವುದು ಗೊತ್ತಾಗಿದೆ. ಕಿಶೋರ್​ ಮೊದಲು ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಆ ನಂತರ ತಾನು ಅಪಾರ್ಟ್​​ಮೆಂಟ್​ ಮೇಲಿನಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಇದನ್ನೂ ಓದಿ: 100km ವೇಗದಲ್ಲಿ ಕಾರು ಸ್ಟಂಟ್ ಮಾಡ್ತಿದ್ದ ಅಪ್ರಾಪ್ತ.. ಸ್ಕೂಟರ್​ಗೆ ಡಿಕ್ಕಿಯಾಗಿ ತಾಯಿ ಸಾವು, ಮಗಳು ಚಿಂತಾಜನಕ

ಪೊಲೀಸರ ಪ್ರಾಥಮಿಕ ವರದಿ ಪ್ರಕಾರ, ಶುಗರ್​​ನಿಂದಾಗಿ ಕಿಶೋರ್ ಅವರು ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ ಅವರು ಸಾವಿನ ಬಗ್ಗೆ ಪ್ಲಾನ್ ರೂಪಿಸಿದ್ದರು. ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಮಗನಿಗೆ ವಾಟ್ಸ್​ ಆಪ್​ ಮೂಲಕ ತಮ್ಮ ಬ್ಯಾಂಕ್​ ಖಾತೆಗಳ ಬಗೆಗಿನ ಎಲ್ಲ ವಿವರಗಳನ್ನು ಸೆಂಡ್ ಮಾಡಿದ್ದರು. ಅಲ್ಲದೇ ಸಾವಿಗೂ ಮೊದಲೇ ದೆಹಲಿಯಿಂದ ಮುಂಬೈಗೆ ಬರಲು ಮಗನಿಗೆ ವಿಮಾನದ ಟಿಕೆಟ್​ ಅನ್ನು ಬುಕ್​ ಮಾಡಿದ್ದರು. ಇನ್ನು ಅವರ ಫ್ಲಾಟ್​ನಲ್ಲಿ ಖಿನ್ನತೆ ಹಾಗೂ ಸಕ್ಕರೆ ಕಾಯಿಲೆಗೆ ಸಂಬಂಧಿಸಿದ ಹಲವಾರು ಔಷಧಿಗಳು ಸಿಕ್ಕಿವೆ. ಸದ್ಯ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಿಮ್​ ವಸ್ತುಗಳ ಸೇಲ್ಸ್​ಮ್ಯಾನ್​ ಮೃತದೇಹ ಪತ್ತೆ.. ಪ್ರಕರಣ ಬೆನ್ನ ಹತ್ತಿದ್ದ ಪೊಲೀಸರಿಗೆ ಶಾಕ್​ ಮೇಲೆ ಶಾಕ್​!

https://newsfirstlive.com/wp-content/uploads/2024/08/MUMBAI_WIFE_HUSBAND.jpg

Load More