newsfirstkannada.com

ಮ್ಯಾಕ್ಸ್​ವೆಲ್​ಗೆ ಗೇಟ್​ಪಾಸ್.. ರಿಲೀಸ್​​ಗೆ ಇಲ್ಲಿದೆ ಪ್ರಮುಖ 3 ಕಾರಣ..!

Share :

Published August 5, 2024 at 9:39am

Update August 5, 2024 at 10:04am

    ಮುಂದಿನ ಐಪಿಎಲ್​ನಲ್ಲಿ RCB ತಂಡದಲ್ಲಿ ಮ್ಯಾಕ್ಸ್​ವೆಲ್ ಇರಲ್ಲ

    ಸ್ಫೋಟಕ ಬ್ಯಾಟ್ಸ್​ಮನ್ ಮೂರು ಸೀಸನ್​ನಲ್ಲಿ ಭರ್ಜರಿ ಆಟ

    ಐಪಿಎಲ್-2024ರಲ್ಲಿ ಮ್ಯಾಕ್ಸ್​​ವೆಲ್ ಪ್ರದರ್ಶನ ಕೆಟ್ಟದಾಗಿತ್ತು

ಮುಂದಿನ ಐಪಿಎಲ್​ನಲ್ಲಿ ಮ್ಯಾಕ್ಸ್​ವೆಲ್ ಆರ್​ಸಿಬಿ ತಂಡದಲ್ಲಿ ಇರೋದಿಲ್ಲ. ಮ್ಯಾಕ್ಸಿಗೆ ಗೇಟ್​ಪಾಸ್ ನೀಡಲು ಆರ್​ಸಿಬಿ ನಿರ್ಧಾರ ಮಾಡಿದೆ. ಅಂದ್ಹಾಗೆ ಹಿಂದಿನ ಮೂರು ಸೀಸನ್​ಗಳಲ್ಲಿ ಮ್ಯಾಕ್ಸ್​ವೆಲ್ ಆರ್​ಸಿಬಿಯ ಡೈನಾಮಿಕ್ ಸ್ಟಾರ್ ಆಗಿದ್ದರು. ಆರ್​ಸಿಬಿ ಬ್ಯಾಟಿಂಗ್​ ವಿಭಾಗದ ಬೆನ್ನೆಲುಬು ಆಗಿರುವ ಮ್ಯಾಕ್ಸಿ 2024ರ ಐಪಿಎಲ್​​ನಲ್ಲಿ ಭಾರೀ ಕೆಟ್ಟದಾಗಿ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಅವರನ್ನು ತಂಡದಿಂದ ಕೈಬಿಡಲು ಆರ್​​ಸಿಬಿ ನಿರ್ಧರಿಸಿದೆ.

ಬೆಂಗಳೂರು ಫ್ರಾಂಚೈಸಿಯು 14.25 ಕೋಟಿ ರೂಪಾಯಿ ಮ್ಯಾಕ್ಸಿಯನ್ನು ಖರೀದಿ ಮಾಡಿತ್ತು. ಆರ್​ಸಿಬಿಯ ಮೊದಲ ಸೀಸನ್​​ನಲ್ಲಿ 513 ರನ್ಸ್​, ಎರಡನೇ ಸೀಸನ್​​ನಲ್ಲಿ 301 ರನ್ಸ್, ಮೂರನೇ ಸೀಸನ್​​ನಲ್ಲಿ 400 ರನ್ಸ್ ಬಾರಿಸಿದ್ದರು.

ಇದನ್ನೂ ಓದಿ:ಮ್ಯಾಕ್ಸ್​ವೆಲ್, ಆಕಾಶ್ ದೀಪ್​ಗೆ ಗೇಟ್​ಪಾಸ್; RCB ಮತ್ತೆ ಖರೀದಿಸುವ 5 ಆಟಗಾರರ ಲಿಸ್ಟ್..!

2024ರ IPLನಲ್ಲಿ ಫೇಲ್​..!
ಮ್ಯಾಕ್ಸ್​​ವೆಲ್ ಕಳೆದ ಐಪಿಎಲ್​ನಲ್ಲಿ ನಿರೀಕ್ಷೆಗೂ ಮೀರಿ ಕಳಪೆ ಪ್ರದರ್ಶನ ನೀಡಿದ್ದಾರೆ. ಪವರ್​ಫುಲ್ ಬ್ಯಾಟ್ಸ್​​​ಮನ್​​ನ ಫಾರ್ಮ್ ಡಲ್ ಆಗಿತ್ತು. 10 ಪಂದ್ಯಗಳನ್ನು ಆಡಿ ಕೇವಲ 52 ರನ್​ಗಳಿಸಿ ಕೆಟ್ಟ ದಾಖಲೆ ಬರೆದಿದ್ದಾರೆ. ಇದರಿಂದಾಗಿ ಆರ್​ಸಿಬಿ ಮಿಡಲ್ ಆರ್ಡರ್​ನಲ್ಲಿ ಬಲ ಕಳೆದುಕೊಂಡಿತ್ತು.

ಮ್ಯಾಜಿಕ್ ಮಾಡದ ಬೌಲಿಂಗ್..!
ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್​ ಮೂರು ವಿಭಾಗದಲ್ಲೂ ಆಲ್​ರೌಂಡರ್​ ಆಟ ಪ್ರದರ್ಶನ ನೀಡುತ್ತಿದ್ದ ಮ್ಯಾಕ್ಸ್​​ವೆಲ್ 2024ರ ಐಪಿಎಲ್​​ನಲ್ಲಿ ಝೀರೋ. ಬೌಲಿಂಗ್​ ಮಾಡಿ ವಿಕೆಟ್ ಪಡೆಯುವಲ್ಲಿ ಫೇಲ್ ಆಗಿದ್ದಾರೆ. ಸರಾಸರಿ 8 ರನ್​​ ನೀಡಿ ಕೇವಲ 6 ವಿಕೆಟ್ ಪಡೆದು ನಿರಾಸೆ ಮೂಡಿಸಿದ್ದಾರೆ. ಹೀಗಾಗಿ ಮ್ಯಾಕ್ಸ್​ವೆಲ್​ ಬದಲಿಗೆ ಬೇರೆ ಆಟಗಾರನ ಹುಡುಕಾಟದಲ್ಲಿ ಆರ್​​ಸಿಬಿ ಇದೆ. ಹರಾಜು ವೇಳೆ ಹೊಸ ಆಟಗಾರನನ್ನು ಖರೀದಿ ಮಾಡಲಿದೆ.

ಇದನ್ನೂ ಓದಿ:ಸೂರ್ಯ, ಬೂಮ್ರಾ ಗ್ಯಾರಂಟಿ.. ಈ ನಾಲ್ಕು ಆಟಗಾರರ ರಿಟೈನ್ ಮಾಡಿಕೊಳ್ಳಲು MI ನಿರ್ಧಾರ

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕ ಹಿಂಟ್:
ತಮ್ಮ ಕಳಪೆ ಫಾರ್ಮ್​​ನಿಂದಾಗಿ ಮ್ಯಾಕ್ಸ್​ವೆಲ್​ ಆರ್​ಸಿಬಿ ಜೊತೆಗಿನ ಸಂಬಂಧವನ್ನೂ ಹಾಳು ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಅವರು ಆರ್​ಸಿಬಿ ಸೋಶಿಯಲ್ ಮೀಡಿಯಾವನ್ನು ಅನ್​ಫಾಲೋ ಮಾಡಿ ಸುದ್ದಿಯಾಗಿದ್ದಾರೆ. ಅನ್​ಫಾಲೋ ಮಾಡುತ್ತಿದ್ದಂತೆಯೇ, ತಂಡದಿಂದ ಅವರು ಹೊರಗೆ ಹೋಗುತ್ತಿದ್ದಾರೆ ಎಂಬ ಸುಳಿವು ಸಿಕ್ಕಿದೆ. ಮೆಗಾ ಹರಾಜಿನ ವೇಳೆ ಅವರನ್ನು ಖರೀದಿ ಮಾಡುವುದಿಲ್ಲ. ಆರ್​​ಸಿಬಿ ಅವರನ್ನು ಕೈಬಿಡಲು ನಿರ್ಧರಿಸಿದೆ. ಅದೇ ಕಾರಣಕ್ಕೆ ಅನ್​ಫಾಲೋ ಮಾಡಿದ್ದಾರೆ ಎಂಬ ಅನುಮಾನ ದಟ್ಟವಾಗಿದೆ.

ಇದನ್ನೂ ಓದಿ:ಲಂಕಾ ವಿರುದ್ಧ ಸೋಲ್ತಿದ್ದಂತೆ ಗಂಭೀರ್ ಮೇಲೆ ಭುಗಿಲೆದ್ದ ಆಕ್ರೋಶ.. ವಜಾ ಮಾಡುವಂತೆ ಆಗ್ರಹ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಮ್ಯಾಕ್ಸ್​ವೆಲ್​ಗೆ ಗೇಟ್​ಪಾಸ್.. ರಿಲೀಸ್​​ಗೆ ಇಲ್ಲಿದೆ ಪ್ರಮುಖ 3 ಕಾರಣ..!

https://newsfirstlive.com/wp-content/uploads/2024/05/Maxwell_RCB-win.bmp

Load More