newsfirstkannada.com

ಕುಕ್ಕರ್ ಸ್ಫೋಟಗೊಂಡು ಇಬ್ಬರು ಮಹಿಳೆಯರು ಗಂಭೀರ; ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಬಂದಿದ್ದ ಭಕ್ತರು

Share :

Published August 13, 2024 at 12:34pm

Update August 13, 2024 at 12:35pm

    ಕುಟುಂಬ ಸಮೇತ ಸವದತ್ತಿ ಯಲ್ಲಮ್ಮ ದೇವಿ ದರ್ಶನಕ್ಕೆ ಬಂದಿದ್ದರು

    ಸಣ್ಣಪುಟ್ಟ ಗಾಯ, 6 ಜನರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ

    ಏಕಾಏಕಿ ಸ್ಫೋಟಗೊಂಡ ಕುಕ್ಕರ್, ಸ್ಥಳದಲ್ಲಿ ಭಾರೀ ಡ್ಯಾಮೇಜ್​

ಬೆಳಗಾವಿ: ಕುಕ್ಕರ್ ಬ್ಲಾಸ್ಟ್ ಆಗಿ ಇಬ್ಬರು ಗಂಭೀರವಾಗಿ ಗಾಯಗೊಂಡಿರೋ ಘಟನೆ ಸವದತ್ತಿಯ ಹೋಟೆಲ್​​​​ ರೂಮ್​ನಲ್ಲಿ ನಡೆದಿದೆ.

ಕುಟುಂಬ ಸಮೇತರಾಗಿ ಸವದತ್ತಿ ಯಲ್ಲಮ್ಮದೇವಿ ದರ್ಶನಕ್ಕೆ ಬಂದಿದ್ದರು. ಅವರಲ್ಲಿ ಬೆಂಗಳೂರಿನಿಂದ 5 ಜನ, ಯಾದಗಿರಿ ಜಿಲ್ಲೆಯಿಂದ 3 ಭಕ್ತರು ಬಂದಿದ್ದರು. ಹೀಗಾಗಿ ಹೋಳಿಗೆ ಮಾಡಲು ಕುಕ್ಕರ್​ನಲ್ಲಿ ಬೇಳೆ ಬೇಯಿಸಲು ಗ್ಯಾಸ್ ಹೊತ್ತಿಸಿದ್ದರು. ಈ ವೇಳೆ ಕುಕ್ಕರ್ ಎರಡು ಸೀಟಿ ಹೊಡೆದ ಬಳಿಕ ಸ್ಫೋಟಗೊಂಡಿದೆ. ಆ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಇದನ್ನೂ ಓದಿ: ನೈಟ್ ಡ್ಯೂಟಿ ವೈದ್ಯೆಗೆ ರೇಪ್‌ ಆದ್ರೆ ಇನ್ನೆಲ್ಲಿ ರಕ್ಷಣೆ; ಸಿಡಿದೆದ್ದ ಆಶಿಕಾ ರಂಗನಾಥ್; ಹೇಳಿದ್ದೇನು?

ಪರಿಣಾಮ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡವರನ್ನು ಹುಬ್ಬಳ್ಳಿ ಕೀಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಕ್ಕರ್ ಸ್ಫೋಟಗೊಂಡು ಇಬ್ಬರು ಮಹಿಳೆಯರು ಗಂಭೀರ; ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಬಂದಿದ್ದ ಭಕ್ತರು

https://newsfirstlive.com/wp-content/uploads/2024/08/cooker.jpg

Load More