newsfirstkannada.com

×

ಬೆಂಗಳೂರು: ನೌಕರನ ಮೇಲೆ ಮನಬಂದಂತೆ ಹಲ್ಲೆ, ನಗ್ನಗೊಳಿಸಿ ವಿಡಿಯೋ ಮಾಡಿದ ಮಾಲೀಕ 

Share :

Published August 14, 2024 at 11:19am

    ಬೆತ್ತದಿಂದ ವ್ಯಕ್ತಿ ಮೇಲೆ ಮನ ಬಂದಂತೆ ಹಲ್ಲೆ ಮಾಡಿದ ಮಾಲೀಕ

    ಹಲ್ಲೆ ಮಾಡಿದ ಬಳಿಕ ನಗ್ನಗೊಳಿಸಿ ವಿಡಿಯೋ ಮಾಡಿದ ಮಾಲೀಕ

    ಹೆಚ್ಚಿಗೆ ಕೆಲಸ ಕೊಟ್ಟು ಕಡಿಮೆ ಸಂಬಳ ಕೊಡುತ್ತಿದ್ದ ಮಾಲೀಕನಿಂದ ಈ ಕೃತ್ಯ

ಬೆಂಗಳೂರಿನಲ್ಲೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಯುವಕನಿಗೆ ಮನಬಂದಂತೆ ಹಲ್ಲೆ ಮಾಡಿ ಬಳಿಕ ನಗ್ನಗೊಳಿಸಿ ವಿಡಿಯೋ ಮಾಡಿದ ಘಟನೆ ನಡೆದಿದೆ.

ಬೆಂಗಳೂರಿನ ಸುಬ್ರಮಣ್ಯಪುರದ ಉತ್ತರಹಳ್ಳಿಯ ಅಂಗಡಿಯೊಂದರಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಬೆತ್ತದಿಂದ ವ್ಯಕ್ತಿ ಮೇಲೆ ಮನ ಬಂದಂತೆ ಹಲ್ಲೆ ಮಾಡಲಾಗಿದೆ.

ಹಲ್ಲೆಗೊಳಗಾದ ವ್ಯಕ್ತಿಯನ್ನು ಆಂಧ್ರಪ್ರದೇಶ ಮೂಲದ ಶರೀಫ್ ಎಂದು ಗುರುತಿಸಲಾಗಿದೆ. ಉತ್ತರಹಳ್ಳಿಯ ಹಾಸಿಗೆ ವ್ಯಾಪಾರಿ ಶೆಕ್ಷಾವಲಿಯಿಂದ ಆತನ ಮೇಲೆ ಹಲ್ಲೆ ನಡೆದಿದೆ.

ಇದನ್ನೂ ಓದಿ: ಮಗನಿಂದಲೇ ತಂದೆಯ ಕೊಲೆ.. ಮಚ್ಚಿನಿಂದ ಕೊಚ್ಚಿ ಸಾಯಿಸಿದ ದುರುಳ

ಶರೀಫ್ ಶೆಕ್ಷಾವಲಿಯ ಸಂಬಂಧಿಯಾಗಿದ್ದು, ಹಾಸಿಗೆ ಕೆಲಸಕ್ಕೆಂದು ಆಂಧ್ರದಿಂದ ಬಂದಿದ್ದನು. ಕೆಲಸಕ್ಕೆಂದು ಬಂದವನಿಗೆ ಹೆಚ್ಚಿಗೆ ಕೆಲಸ ಕೊಟ್ಟು ಕಡಿಮೆ ಸಂಬಳ ನೀಡಿದ್ದನು.

ಶೆಕ್ಷಾವಲಿ ಆತನಿಗೆ ಹಗಲು ರಾತ್ರಿ ಎನ್ನದೇ ಹೆಚ್ಚು ಕೆಲಸ ನೀಡುತಿದ್ದನು. ಇದರಿಂದ ಬೇಸತ್ತು ಶರೀಫ್ ಕೆಲಸ ಬಿಟ್ಟಿದ್ದನು. ಬಳಿಕ ಬಾಬು ಎಂಬ ಮತ್ತೋರ್ವನ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದನು. ಈ ವಿಚಾರ ತಿಳಿದು ಶರೀಫ್​ಗೆ ಶೆಕ್ಷಾವಲಿ ಕರೆ ಮಾಡಿದ್ದಾನೆ.  ಬಳಿಕ ಮಾತಿಗೆ ಮಾತು ಬೆಳೆದು ಶರೀಫ  ಶೆಕ್ಷಾವಲಿಯ ತಾಯಿ ಬಗ್ಗೆ ನಿಂದಿಸಿದ್ದಾನೆ.

ಇದನ್ನೂ ಓದಿ: ಮೈಕ್ರೋಸಾಫ್ಟ್ ಬಳಕೆದಾರರೇ.. ನವೆಂಬರ್​​ನಿಂದ ಈ ಅಪ್ಲಿಕೇಶನ್​ ಕೆಲಸ ಮಾಡಲ್ಲ!

ಶೆಕ್ಷಾವಲಿ ಜುಲೈ 24ರಂದು ಶರೀಫನನ್ನು ಉತ್ತರಹಳ್ಳಿಯ ಬಟ್ಟೆ ಅಂಗಡಿಗೆ ಕರೆಸಿಕೊಂಡಿದ್ದಾನೆ. ಆತನಿಗೆ ಬಾಕಿ ಸಂಬಳ ಕೊಡೊದಾಗಿ ಕರೆ ಮಾಡಿದ್ದಾನೆ. ಆದರೆ ಹಣ ಕೊಡೊದಾಗಿ ಕರೆಸಿ ಅಂಗಡಿಯ ಶೆಟರ್ ಎಳೆದು ಮಾಲೀಕ ಹಲ್ಲೆ ಮಾಡಿದ್ದಾನೆ. ಹಲ್ಲೆ ಬಳಿಕ ನಗ್ನಗೊಳಿಸಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ.

ಶರೀಫ್​​ನನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ವಿಚಾರ ಬಳಿಕ ಸಾಮಾಜಿಕ ಕಾರ್ಯಕರ್ತರೊಬ್ಬರಿಗೆ ಗೊತ್ತಾಗಿದೆ. ಲಕ್ಷಿ ನಾರಾಯಣ್ ಶೆಟ್ಟಿ ಎಂಬ ಸಾಮಾಜಿಕ ಕಾರ್ಯಕರ್ತರೊಬ್ಬರಿಗೆ ಈ ವಿಚಾರ ತಿಳಿಯಿತು. ಲಕ್ಷ್ಮಿ ನಾರಾಯಣ್ ಶೆಟ್ಟಿ ಮಾನವಹಕ್ಕುಗಳ ಡಿಫೆನ್ಸ್ ಎಂಬ ಆರ್ಗನೈಸೇಷನ್ ನಡೆಸುತ್ತಿದ್ದರು. ಶರೀಫ್ ರಕ್ಷಿಸಿ ಬಳಿಕ ದೂರು ನೀಡುವಂತೆ ಹೇಳಿದ್ದಾರೆ.

ಇದನ್ನೂ ಓದಿ: ಗಾಂಜಾ ಸೇದ್ತಿದ್ದ, ತನ್ನದೇ ಮನೆಯಲ್ಲೇ ಕಳ್ಳತನ ಮಾಡ್ತಿದ್ದ! ದುನಿಯಾ ವಿಜಯ್​ ಜೊತೆ ಸತ್ಯ ಬಿಚ್ಚಿಟ್ಟ 16 ವರ್ಷದ ಬಾಲಕ

ಅತ್ತ ಶೆಕ್ಷಾವಲಿ ಕೃತ್ಯಕ್ಕೆ ಹೆದರಿ ಶರೀಫ ಊರು ಬಿಟ್ಟಿದ್ದಾನೆ. ಇತ್ತ ಶರೀಫ್ ಊರು ಬಿಟ್ಟ ಬಳಿಕ ಶೆಕ್ಷಾವಲಿಯಿಂದ ಪೊಲೀಸರಿಗೆ ಮೊದಲ ದೂರು ಸಲ್ಲಿಕೆಯಾಗಿದೆ. ತನ್ನ ತಾಯಿ ಬಗ್ಗೆ ಅವಾಚ್ಯ ಪದಗಳ ಬಳಸಿ ನಿಂದಿಸಿದ್ದಾನೆಂದು ದೂರು ನೀಡಿದ್ದಾನೆ. ದೂರು ಹಿನ್ನಲೆ‌ ಶರೀಫ್ ಕರೆಸಿ ಪೊಲೀಸರು ಬುದ್ದಿ ಹೇಳಿದ್ದಾರೆ. ಬಳಿಕ ನಾನು ಬೆಂಗಳೂರಿಗೆ ಬರೊಲ್ಲ ಎಂದು ಹೇಳಿ ಹೋಗಿದ್ದಾನೆ.

ಪೊಲೀಸರ ಮುಂದೆ ನಿಂತರೂ ಹಲ್ಲೆ ಮಾಡಿ ನಗ್ನಗೊಳಿಸಿದ ವಿಚಾರ ಶರೀಫ ಬಿಚ್ಚಿಡಲಿರಲಿಲ್ಲ. ಆದರೇ ಕೆಲದಿನಗಳ ಬಳಿಕ ಮಾಲೀಕ ಹಲ್ಲೆ ಮಾಡಿದ ವಿಡಿಯೋ ಪೊಲೀಸರಿಗೆ ಸಿಕ್ಕಿದೆ. ನಂತರ ಪೊಲೀಸರೇ ಶರೀಫನಿಗೆ ಬೆಂಗಳೂರಿಗೆ ಬರುವಂತೆ ಒತ್ತಾಯಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಲಕ್ಷಿ ನಾರಾಯಣ್ ಶೆಟ್ಟಿ ಪೊಲೀಸರಿಗೆ ವಿಡಿಯೋ ತಲುಪಿಸಿದ್ದಾರೆ.  ಬಳಿಕ ಹಲ್ಲೆಗೊಳಗಾದ ಶರೀಫ್ ನಿಂದ ಕೃತ್ಯ ಸಂಬಂಧ ದೂರು ದಾಖಲಾಗಿದೆ. ದೂರು ಹಿನ್ನಲೆ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು: ನೌಕರನ ಮೇಲೆ ಮನಬಂದಂತೆ ಹಲ್ಲೆ, ನಗ್ನಗೊಳಿಸಿ ವಿಡಿಯೋ ಮಾಡಿದ ಮಾಲೀಕ 

https://newsfirstlive.com/wp-content/uploads/2024/08/Assult-rape-Crime-Murder.jpg

Load More