150 ದೇಶದ ಟೆಲಿಕಾಂ ಕಂಪನಿಯ ಜೊತೆಗೆ ಪಾಲುದಾರಿಕೆ
ಇ-ಸಿಮ್ ಡಿಜಿಟಲ್ ಆವೃತ್ತಿಯಾಗಿದ್ದು, ಎಂಬೆಡ್ ಸಿಮ್ ಆಗಿದೆ
2028ಕ್ಕೆ eSim ಬಳಕೆದಾರರ ಸಂಖ್ಯೆ 268 ಮಿಲಿಯನ್ ತಲುಪುವ ನಿರೀಕ್ಷೆಯಿದೆ
ಭಾರತಕ್ಕೆ 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ದೇಶವು ಸಾಕಷ್ಟು ಏರಿಳಿತದ ಜೊತೆಗೆ ಪ್ರಗತಿಯನ್ನು ಸಾಧಿಸುತ್ತಾ ಬಂದಿದೆ. ಇದೀಗ ನೆಟ್ವರ್ಕ್ನಲ್ಲಿ ಕ್ರಾಂತಿಯನ್ನು ಉಂಟುಮಾಡಲು ಭಾರತದ ಮೊದಲ ಇ-ಸಿಮ್ ಸೇವೆಯನ್ನು ಪ್ರಾರಂಭಿಸಿದೆ. ಮಾತ್ರವಲ್ಲದೆ ಅಂತರಾಷ್ಟ್ರೀಯ ಸಂಪರ್ಕ ಸಾಧಿಸಲು ಹೊಸ ಅಧ್ಯಾಯಕ್ಕೆ ಮುನ್ನುಡಿ ಇಟ್ಟಿದೆ.
ದೆಹಲಿ ಮೂಲದ ಮ್ಯಾಟ್ರಿಕ್ಸ್ ಸೆಲ್ಯುಲರ್ ಕಂಪನಿ ಭಾರತದ ಮೊದಲ ಇ-ಸಿಮ್ ಸೇವೆಯನ್ನು ಪ್ರಾರಂಭಿಸಿದೆ. 150 ದೇಶದ ಟೆಲಿಕಾಂ ಕಂಪನಿಯ ಜೊತೆಗೆ ಪಾಲುದಾರಿಕೆ ಹೊಂದಲು ಮುಂದಾಗಿದೆ. ಅಂದಹಾಗೆಯೇ ಇ-ಸಿಮ್ ಡಿಜಿಟಲ್ ಆವೃತ್ತಿಯಾಗಿದ್ದು, ಎಂಬೆಡ್ ಸಿಮ್ ಆಗಿದೆ. ನೇರವಾಗಿ ಸಾಧನಗಳಲ್ಲಿ ಎಂಬೆಡ್ ಮಾಡಲಾಗಿದೆ.
ಇದನ್ನೂ ಓದಿ: ಶಿವ ಶಿವ! ಆಗಸ್ಟ್ 17ಕ್ಕೆ ಕಾದಿದೆಯಾ ಗಂಡಾಂತರ.. ನಾಸಾ ಕೊಟ್ಟಿದೆ ಎಚ್ಚರಿಕೆ ಸಂದೇಶ
ಮ್ಯಾಟ್ರಿಕ್ಸ್ ಸೆಲ್ಯುಲರ್ ಕಂಪನಿ ಪರಿಚಯಿಸಿದ ಭಾರತದ ಮೊದಲ ಇ-ಸಿಮ್ ಸಾಫ್ಟ್ವೇರ್ ಆಧಾರಿತ ಸಿಸ್ಟಮ್ ಆಗಿದ್ದು, ಸೆಲ್ಯುಲರ್ ಮಾಹಿತಿಯನ್ನು ಒದಗಿಸುತ್ತದೆ.
ಇದನ್ನೂ ಓದಿ: ಕೆಂಪು ಕೋಟೆಗೆ ಮೋದಿ ಆಗಮಿಸಿದ್ದ ಕಾರು ಅಂತಿಂಥದ್ದಲ್ಲ.. ಕುಗ್ಗಲ್ಲ, ಬಗ್ಗಲ್ಲ, ಜಗ್ಗೋದೆ ಇಲ್ಲ.. ಬೆಲೆ ಎಷ್ಟು?
ಜಾಗತಿಕ ಮಾರುಕಟ್ಟೆಯಲ್ಲಿ ಇ-ಸಿಮ್ ತನ್ನದೇ ಆದ ಬೆಳವಣಿಗೆ ಹೊಂದುತ್ತಿದೆ. 2028ರ ವೇಳೆಗೆ ಇ-ಸಿಮ್ ಬಳಕೆದಾರರ ಸಂಖ್ಯೆ 268 ಮಿಲಿಯನ್ ತಲುಪುವ ನಿರೀಕ್ಷೆಯಿದೆ. ಅಂತರಾಷ್ಟ್ರೀಯ ರೋಮಿಂಗ್ ವೆಚ್ಚದಿಂದಾಗಿ ಬೆಳವಣಿಗೆ ಕ್ಷಿಪ್ರಗತಿಯಲ್ಲಿ ಸಾಗಲಿದೆ ಎನ್ನಲಾಗುತ್ತಿದೆ. ರೋಮಿಂಗ್ ಸೇವೆಗಳಿಗೆ ಹೋಲಿಸಿದಾಗ ಇ-ಸಿಮ್ ಮೂಲಕ ಗಮನಾರ್ಹವಾಗಿ ಉಳಿಸಬಹುದಾಗಿದೆ. ಅಂದರೆ ಪ್ರತಿ ಜಿಬಿ ಡೇಟಾಗೆ 35 ಪ್ರತಿಶತದಷ್ಟು ವೆಚ್ಚವಾಗಲಿದೆ. ಇದರ ಮೂಲಕ ರೋಮಿಂಗ್ ಶುಲ್ಕವನ್ನು ಕಡಿಮೆ ಮಾಡಲಿದೆ.
ಇದನ್ನೂ ಓದಿ: ಬರೀ 4 ನಿಮಿಷದಲ್ಲಿ ಚಾರ್ಜ್ ಫುಲ್.. 320w ಚಾರ್ಜಿಂಗ್ ವೈಶಿಷ್ಟ್ಯ ಪರಿಚಯಿಸುತ್ತಿದೆ ರಿಯಲ್ಮಿ! ಎಷ್ಟು ಸುರಕ್ಷಿತ?
ಮತ್ತೊಂದೆಡೆ ಡೇಟಾ ಬೇಡಿಕೆ ಹೆಚ್ಚಾಗುತ್ತಿದೆ. 2028ರ ವೇಳೆಗೆ 1.5 ಶತಕೋಟಿ ಪೆಟಾಬೈಟ್ಗಳಷ್ಟು ಡೇಟಾ ಬಳಕೆಯಾಗುವ ನಿರೀಕ್ಷೆಯಿದೆ. ಸಿನಿಮಾ ಸ್ಟ್ರೀಮಿಂಗ್, ಸಾಮಾಜಿಕ ಜಾಲತಾಣ , ಮೊಬೈಲ್ ಗೇಮಿಂಗ್ ಹೆಚ್ಚುತ್ತಿರುವ ಕಾರಣ ಡೇಟಾ ಬಳಕೆಗೆ ಹೆಚ್ಚು ಉತ್ತೇಜನ ಸಿಗಲಿದೆ.
ಇನ್ನು ಭಾರತದಲ್ಲಿ ಇ-ಸಿಮ್ ಮಾರುಕಟ್ಟೆ ದೊಡ್ಡಗತಿಯಲ್ಲಿ ಬೆಳೆಯಲಿದೆ ಎಂದು ಅಂದಾಜಿಸಲಾಗಿದೆ. 2032ರ ಅಂತ್ಯಕ್ಕೆ $21.24 ಶತಕೋಟಿ ಮೌಲ್ಯವನ್ನು ಮೀರಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ