newsfirstkannada.com

ಇಲ್ಲಿ ಸಹೋದರನಿಗೆ ರಾಖಿ ಕಟ್ಟಲ್ಲ, ಬದಲಾಗಿ ಮರಗಳಿಗೆ ಕಟ್ಟುತ್ತಾರೆ.. ಯಾಕೆ ಗೊತ್ತಾ..?

Share :

Published August 19, 2024 at 8:03am

Update August 19, 2024 at 1:58pm

    ಇಂದು ದೇಶದಾದ್ಯಂತ ರಕ್ಷಾಬಂಧನ ಆಚರಿಸಲಾಗುತ್ತಿದೆ

    ಸಹೋದರ-ಸಹೋದರಿಯರ ನಡುವಿನ ಪವಿತ್ರ ಸಂಬಂಧದ ಸಂಕೇತ

    ವಿಶೇಷ ಮರ’ ಒಂದಕ್ಕೆ ರಾಖಿ ಕಟ್ಟಿ ಹಬ್ಬ ಆಚರಿಸೋದು ಯಾಕೆ?

ಇಂದು ದೇಶದಾದ್ಯಂತ ರಕ್ಷಾಬಂಧನ ಆಚರಿಸಲಾಗುತ್ತಿದೆ. ರಕ್ಷಾಬಂಧನ ಸಹೋದರ ಸಹೋದರಿಯರ ನಡುವಿನ ಪವಿತ್ರ ಸಂಬಂಧದ ಸಂಕೇತ. ಈ ದಿನ ಸಹೋದರಿಯರು ತಮ್ಮ ಸಹೋದರನ ಕೈಗೆ ರಕ್ಷಾಸೂತ್ರವನ್ನು ಕಟ್ಟುತ್ತಾರೆ. ಜೊತೆಗೆ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ.

ರಾಖಿ ಕಟ್ಟಿಸಿಕೊಂಡ ಸಹೋದರ ತನ್ನ ಪ್ರೀತಿಯ ತಂಗಿ, ಅಕ್ಕನಿಗೆ ಉಡುಗೊರೆ ನೀಡುತ್ತಾನೆ. ಜೊತೆಗೆ ಆಕೆಯ ರಕ್ಷಣೆಯ ಭರವಸೆ ನೀಡುತ್ತಾನೆ. ಇನ್ನು ರಕ್ಷಾಬಂಧನ ಆಚರಣೆಯು ಹೇಗೆ ಪ್ರಾರಂಭವಾಯಿತು ಅನ್ನೋದ್ರ ಬಗ್ಗೆ ಪುರಾಣಗಳಲ್ಲಿ ಅನೇಕ ನಂಬಿಕೆಗಳು ಇವೆ. ಇನ್ನು ಪಾಕಿಸ್ತಾನದ ಮಹಿಳೆಯರು ಈ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ.

ಇದನ್ನೂ ಓದಿ:IPL ತಂಡಗಳು ಇಂಗ್ಲೆಂಡ್​ ಲೀಗ್​​ನಲ್ಲಿ ಆಡಲಿವೆ..! ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯಿಂದ ಹೊಸ ನಿಯಮ!

ಪಾಕಿಸ್ತಾನದ ಮಹಿಳೆಯರು ‘ವಿಶೇಷ ಮರ’ ಒಂದಕ್ಕೆ ರಾಖಿ ಕಟ್ಟಿ ಹಬ್ಬ ಆಚರಿಸುತ್ತಾರೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಥಾರ್ಪಾರ್ಕರ್ ಜಿಲ್ಲೆಯಲ್ಲಿ ಮಹಿಳೆಯರು ಗುಗ್ಗುಳು ಮರಕ್ಕೆ ರಾಖಿ ಕಟ್ಟುವ ಮೂಲಕ ರಕ್ಷಾಬಂಧನ ಆಚರಿಸುತ್ತಿದ್ದಾರೆ. ಈ ಮರಗಳಿಗೆ ರಾಖಿ ಕಟ್ಟುವ ಉದ್ದೇಶ ಕೂಡ ರಕ್ಷಣೆಗಾಗಿಯೇ. ಇಲ್ಲಿನ ಶೇ 80 ರಷ್ಟು ಜನ ಪಶುಪಾಲನೆಯನ್ನು ನೆಚ್ಚಿಕೊಂಡಿದ್ದಾರೆ. ಗುಗ್ಗುಳ ಮರಗಳು ಉತ್ತಮ ಮತ್ತು ಉಚಿತ ಮೇವನ್ನು ನೀಡುತ್ತವೆ.

ಗುಗ್ಗುಲು ಮರಗಳ ಉಪಯೋಗವೇನು?
ಗುಗ್ಗುಳ ಬರ ಅಂಟಿನ ರೂಪದ ದ್ರವವನ್ನು ನೀಡುತ್ತದೆ. ಅದಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಈ ಮರಗಳು ಅಪಾಯದಲ್ಲಿವೆ. ಒಣ ಮತ್ತು ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಬೆಳೆಯುತ್ತವೆ. 3 ರಿಂದ 4 ಮೀಟರ್ ಎತ್ತರಕ್ಕೆ ಈ ಮರ ಬೆಳೆಯುತ್ತದೆ. ಇದರ ಎಲೆ ಕೂಡ ಔಷಧಿಯ ಗುಣವನ್ನು ಹೊಂದಿದೆ. ಸೋಂಕು ನಿವಾರಕ, ಹೃದಯಾಘಾತ ಮತ್ತು ಕ್ಯಾನ್ಸರ್ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಇದನ್ನು ದೈವಿಕ ಔಷಧವೆಂದು ಪರಿಗಣಿಸಲಾಗಿದೆ. ಪಾಕಿಸ್ತಾನ ಮಾತ್ರವಲ್ಲ ಭಾರತದ ಕೆಲವು ಭಾಗಗಳಲ್ಲೂ ಮರಕ್ಕೆ ರಾಖಿ ಕಟ್ಟುತ್ತಾರೆ.

ಇದನ್ನೂ ಓದಿ:Raksha Bandhan: ಬಂದೇ ಬಿಡ್ತು ರಕ್ಷಾ ಬಂಧನ.. ರಾಖಿ ಕಟ್ಟೋ ಮುನ್ನ ತಿಳಿಯಬೇಕಾದ ಪ್ರಮುಖ ವಿಚಾರ ಇಲ್ಲಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಲ್ಲಿ ಸಹೋದರನಿಗೆ ರಾಖಿ ಕಟ್ಟಲ್ಲ, ಬದಲಾಗಿ ಮರಗಳಿಗೆ ಕಟ್ಟುತ್ತಾರೆ.. ಯಾಕೆ ಗೊತ್ತಾ..?

https://newsfirstlive.com/wp-content/uploads/2024/08/RAKSHA-BHANDAN.jpg

Load More