newsfirstkannada.com

ಬರೀ 7 ಗಂಟೆ ನಡೆದರೆ ಸಾಕು.. ದಿನಕ್ಕೆ 28 ಸಾವಿರ ರೂಪಾಯಿ ಸ್ಯಾಲರಿ ನೀಡುತ್ತೆ ಟೆಸ್ಲಾ! ಈ ಅವಕಾಶ ಮಿಸ್​ ಮಾಡ್ಬೇಡಿ

Share :

Published August 20, 2024 at 12:43pm

    ಏಳು ಗಂಟೆಗಳ ಕಾಲ ನಡೆಯಲು ಸಿದ್ಧರಿದ್ದೀರಾ?

    ಗಂಟೆಗೆ 4 ಸಾವಿರ, 7 ಗಂಟೆಗೆ 28 ಸಾವಿರ ರೂಪಾಯಿ ಸಂಬಳ

    ಕೆಲಸ ಹುಡುಕುತ್ತಿರೋರು ಈ ಅವಕಾಶ ಮಿಸ್​​ ಮಾಡ್ಬೇಡಿ

ಇದೆಂಥಾ ಅವಕಾಶ! ಇದೆಂಥಾ ಆಫರ್​! ದಿನಕ್ಕೆ 28 ಸಾವಿರ ರೂಪಾಯಿ ಸಂಬಳ ನೀಡುತ್ತೆ ಅಂದ್ರೆ ಯೋಚನೆ ಮಾಡಿ. ಹೀಗೊಂದು ಆಫರ್​ ತೆರೆದಿಟ್ಟಿರೋದು ಬೇರೆ ಯಾವುದು ಅಲ್ಲ. ಎಲಾನ್​ ಮಸ್ಕ್​ ಒಡೆತನದ ಟೆಸ್ಲಾ ಕಂಪನಿ.

ಹೌದು. ಜಾಗತಿಕ ಎಲೆಕ್ಟ್ರಿಕ್​ ವಾಹನ ದೈತ್ಯ ಟೆಸ್ಲಾ ದಿನಕ್ಕೆ 7 ಗಂಟೆಗಳ ಕಾಲ ನಡೆಯಲು ಸಿದ್ಧರಿರುವ ವ್ಯಕ್ತಿಗಳಿಗೆ ಬೆಸ್ಟ್​ ಆಫರ್​ ತೆರೆದಿಟ್ಟಿದೆ. ಅಂದರೆ ಗಂಟೆಗೆ 4 ಸಾವಿರ ರೂಪಾಯಿಯಂತೆ 7 ಗಂಟೆಗೆ 28 ಸಾವಿರ ರೂಪಾಯಿಯನ್ನು ನೀಡುವುದಾಗಿ ಹೇಳಿದೆ.

ಇದನ್ನೂ ಓದಿ: ಆಸನವೂ ಇಲ್ಲ, ಬಾತ್​ ರೂಂ ಇಲ್ಲ! 2025ರ ಚಾಂಪಿಯನ್​ ಟ್ರೋಫಿಯನ್ನು ನಡೆಸಲು ಮುಂದಾದ ಪಾಕ್​!

ಟೆಸ್ಲಾ ತನ್ನ ಹುಮನಾಯ್ಡ್​​ ರೋಬೋಟ್​​ ಆಪ್ಟಿಮಸ್​​ ಅಭಿವೃದ್ಧಿ ಪಡಿಸಿದ್ದು, ಅದರ ಅಭಿವೃದ್ಧಿಯ ಭಾಗವಾಗಿ ಮೋಷನ್​​ ಕ್ಯಾಪ್ಚರ್​​ ತಂತ್ರಜ್ಞಾನ ಬಳಸಿಕೊಂಡ ರೋಬೋಟ್​ಗೆ ತರಬೇತಿ ನೀಡುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ಉದ್ಯೋಗಿಗಳನ್ನು ಬಯಸುತ್ತಿದೆ. ಆಯ್ಕೆಯಾದ ಉದ್ಯೋಗಿಗಳಿಗೆ ದಿನಕ್ಕೆ 28 ಸಾವಿರ ರೂಪಾಯಿ ನೀಡುವುದಾಗಿ ತಿಳಿಸಿದೆ.

ಇದನ್ನೂ ಓದಿ: ಓಲಾ ಪರಿಚಯಿಸಿದೆ ಹೊಸ ಎಲೆಕ್ಟ್ರಿಕ್​ ಬೈಕ್​​.. ಜಸ್ಟ್​​ 75 ಸಾವಿರಕ್ಕೆ ಸಿಗುತ್ತೆ! ಮೈಲೇಜ್​ ಎಷ್ಟು ಗೊತ್ತಾ?

ಟೆಸ್ಲಾ ಸಿಇಒ ಎಲಾನ್​ ಮಸ್ಕ್​​ 2021ರಲ್ಲಿ ಆಪ್ಟಿಮಸ್​​​ ಪರಿಕಲ್ಪನೆಯನ್ನು ಪರಿಚಯಿಸಿದರು. ಇದು ಬಹು ಕ್ರಿಯಾತ್ಮಕ ರೋಬೋಟ್​ ಆಗಿದ್ದು, ಕಾರ್ಖಾನೆ ಕೆಲಸದಿಂದ ಹಿಡಿದು ಆರೈಕೆಯವರೆಗೆ ಕಾರ್ಯ ನಿರ್ವಹಿಸುತ್ತದೆ. ಆದರೀಗ ಈ ರೋಬೋಟ್​​ ಕಳೆದ ವರ್ಷದಿಂದ ಈ ವರ್ಷ ಅಪ್ಡೇಟ್​ ಆಗಿದ್ದು, ಮೋಷನ್​​ ಕ್ಯಾಪ್ಟರ್​ ಸೂಟ್​ಗಳ ಮೂಲಕ ಆಪ್ಟಿಮಸ್​ ತರಬೇತಿ ಪಡೆಯಲು ಮುಂದಾಗಿದೆ. ಅದರ ಸಹಾಯಕ್ಕಾಗಿ ಕೆಲಸಗಾರರನ್ನು ಆಹ್ವಾನಿಸಿದೆ.

ಕೆಲಸ ಹೇಗಿರುತ್ತೆ?

ಡೇಟಾ ಕಲೆಕ್ಷನ್​ ಆಪರೇಟರ್​ ಆಗಿ ಕೆಲಸ ಮಾಡಬೇಕಿದೆ. ಅಂದರೆ ವ್ಯಕ್ತಿ ಮೋಷನ್​ ಕ್ಯಾಪ್ಚರ್​ ಸೂಟ್​ ಮತ್ತು ವರ್ಚುವಲ್​ ರಿಯಾಲಿಟಿ ಹೆಡ್​​ಸೆಟ್​​​ ಅನ್ನು ಪ್ರತಿದಿನ 7 ಗಂಟೆಗಳಿಗೂ ಹೆಚ್ಚು ಕಾಲ ಧರಿಸಿ ಪರೀಕ್ಷಾ ಮಾರ್ಗದಲ್ಲಿ ನಡೆಯಬೇಕಿದೆ. ಪಾತ್ರಕ್ಕೆ ತಕ್ಕಂತೆ ಡೇಟಾ ಸಂಗ್ರಹ ಮತ್ತು ಅದರ ವಿಶ್ಲೇಷನೆ ಇರುತ್ತೆ. ವಿಶೇಷವಾಗಿ ವ್ಯಕ್ತಿ 5’7 ಮತ್ತು 5’11 ನಡುವಿನ ಎತ್ತರವನ್ನು ಹೊಂದಿರಬೇಕು. 30 ಪೌಂಡುಗಳವರೆಗೆ ಸಾಗಿಸುವ ಸಾಮರ್ಥ್ಯ ಮತ್ತು ವಿಆರ್​ ಉಪಕರಣಗಳನ್ನ ನಿರ್ವಹಿಸಲು ತಿಳಿದಿರಬೇಕು.

ಇದನ್ನೂ ಓದಿ: ನಿನ್ನೆಗಿಂತ ಇಂದು ಜಾಸ್ತಿ! ಒಳಹರಿವು ಹೆಚ್ಚಿಸುತ್ತಿದ್ದಾಳೆ ತುಂಗಭದ್ರೆ.. ಸದ್ಯ ನೀರಿನ ಪ್ರಮಾಣ ಎಷ್ಟಿದೆ?

ಆಯ್ಕೆಯಾದ ಉದ್ಯೋಗಿಗಳಿಗೆ ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾಗಿ ಸಂಜೆ 4:30ರವರೆಗೆ ಅಥವಾ ಸಂಜೆ 4ರಿಂದ 12;30ರವರೆಗೆ ಅಥವಾ ರಾತ್ರಿ 12 ಗಂಟೆಯಿಂದ ಬೆಳಗ್ಗಿನ ಜಾವ 8;30ರವರೆಗೆ ಕೆಲಸ ಮಾಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೀ 7 ಗಂಟೆ ನಡೆದರೆ ಸಾಕು.. ದಿನಕ್ಕೆ 28 ಸಾವಿರ ರೂಪಾಯಿ ಸ್ಯಾಲರಿ ನೀಡುತ್ತೆ ಟೆಸ್ಲಾ! ಈ ಅವಕಾಶ ಮಿಸ್​ ಮಾಡ್ಬೇಡಿ

https://newsfirstlive.com/wp-content/uploads/2024/08/Headphone.jpg

Load More