newsfirstkannada.com

ಖ್ಯಾತ ನಟರಿಂದಲೇ ಲೈಂಗಿಕ ಕಿರುಕುಳ.. ಮಲಯಾಳಂ ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ಹೇಮಾ ಕಮಿಟಿ; ವರದಿಯಲ್ಲಿ ಏನಿದೆ?

Share :

Published August 20, 2024 at 4:20pm

Update August 20, 2024 at 4:21pm

    ಮಾಲಿವುಡ್ ಅಂಗಳದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಹೇಮಾ ಕಮಿಟಿ ವರದಿ

    ಮಲಯಾಳಂ ಚಿತ್ರರಂಗದಲ್ಲಿ ನಟಿಯರು ಎದುರಿಸುತ್ತಿದ್ದಾರೆ ವಿಪರೀತ ಕಾಸ್ಟ್ ಕೌಚಿಂಗ್

    ಜಸ್ಟಿಸ್​ ಹೇಮಾ ಕಮಿಟಿ ಸಲ್ಲಿಸಿದ ವರದಿಯಲ್ಲಿ ಕರಾಳ ಮುಖ ಅನಾವರಣ

ತಿರುವಂತನಪುರಂ: ಮಲಯಾಳಂ ಚಿತ್ರರಂಗ ಅಂದ್ರೆ ಸದ್ಯ ಜಗತ್ತಿನಲ್ಲಿ ಅತ್ಯಂತ ಕ್ರಿಯಾಶೀಲ ಸಿನಿಮಾಗಳನ್ನು ನೀಡುವ, ಹೊಸ ಬಗೆಯ ಟ್ರೆಂಡ್ ಸೃಷ್ಟಿಸುವ ಸಿನಿಮಾ ರಂಗ ಎಂದೇ ಖ್ಯಾತಿ ಪಡೆದಿದೆ. ಅನೇಕ ರಾಜ್ಯದ ಚಿತ್ರರಂಗಳು ಮಲಾಯಳಂ ಸಿನಿಮಾಗಳಿಂದ ನಾವು ಕಲಿಯುವುದು ತುಂಬಾ ಇದೆ ಎಂಬ ಮಾತುಗಳು ಕೂಡ ಕೇಳಿ ಬಂದಿವೆ. ಹೀಗೆ ಸದಾ ಕಾಲ ಹೊಸತನಕ್ಕೆ ತುಡಿಯುವ, ಹೊಸ ಮಾದರಿಯ ಸಿನಿಮಾಗಳಿಗೆ ಸಾಕ್ಷಿಯಾಗುವ ಮಲಯಾಳಂ ಚಿತ್ರರಂಗಕ್ಕೆ ಈಗ ಕಪ್ಪುಚುಕ್ಕೆಯೊಂದು ಅಂಟಿಕೊಂಡಿದೆ.

ಇದನ್ನೂ ಓದಿ: ‘ದರ್ಶನ್‌ಗೆ ಹಾಲು, ಮೊಟ್ಟೆ, ಬ್ರೆಡ್ ಕೊಡುತ್ತಿದ್ದೇವೆ’- ಮನೆ ಊಟದ ಅರ್ಜಿಗೆ ಹೊಸ ಟ್ವಿಸ್ಟ್ ಕೊಟ್ಟ ಜೈಲಾಧಿಕಾರಿಗಳು!

ಮಲಯಾಳಂ ಚಿತ್ರರಂಗದ ಅಸಲಿ ಬಣ್ಣ ಬಯಲು
ಕಳೆದ ಹಲವು ವರ್ಷಗಳಿಂದ ಮಲಯಾಳಿ ಚಿತ್ರರಂಗದಲ್ಲಿ ಹೊಸ ನಟಿಯರು ಹಾಗೂ ಚಾಲ್ತಿಯಲ್ಲಿರುವ ನಟಿಯರು ಲೈಂಗಿಕ ಕಿರುಕುಳದಂತಹ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ವು. ಅವಕಾಶ ಸಿಗಬೇಕು ಅಂದ್ರೆ ಚಿತ್ರರಂಗದ ದಿಗ್ಗಜ ನಟರು, ನಿರ್ಮಾಪಕರು ನಿರ್ದೇಶಕರೊಂದಿಗೆ ದೈಹಿಕವಾಗಿ ಸಹಕರಿಬೇಕಾದ ಅನಿವಾರ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೇರಳದ ಸಿಎಂ ಪಿಣರಾಯಿ ವಿಜಯನ್ ಸರ್ಕಾರ ಜಸ್ಟಿಸ್​ ಹೇಮಾ ನೇತೃತ್ವದ ಕಮಿಟಿಯೊಂದನ್ನು ರಚನೆ ಮಾಡಿ ಕೇಳಿ ಬರುತ್ತಿರುವ ಆರೋಪಗಳ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿತ್ತು. ಅದಕ್ಕೆ ಹೇಮಾ ಕಮಿಟಿ ಎಂದೇ ಹೆಸರಿಡಲಾಗಿತ್ತು. ಸದ್ಯ ಹೇಮಾ ಕಮಿಟಿ ವರದಿ ಸರ್ಕಾರದ ಕೈ ಸೇರಿದೆ. ಚಿತ್ರರಂಗದಲ್ಲಿ ಕೇಳಿ ಬಂದ ಆರೋಪಗಳು ಅಕ್ಷರಶಃ ಸತ್ಯ ಎಂದೇ ವರದಿಯಲ್ಲಿ ಉಲ್ಲೇಖಿಸಿಲಾಗಿದೆ.
.

ಏನಿದೆ ಹೇಮಾ ಕಮಿಟಿಯಲ್ಲಿ? 

ಕೇರಳ ಸರ್ಕಾರ ನೇಮಕ ಮಾಡಿದ್ದ ಹೇಮಾ ಕಮಿಟಿ ವರದಿಯಲ್ಲಿ ಮಾಲಿವುಡ್ ಅಂಗಳದಲ್ಲಿ ನಡೆಯುತ್ತಿರುವ ಅನಾಚಾರದ ಒಂದೊಂದು ಪುಟವನ್ನು ತೆರೆದಿಡಲಾಗಿದೆ. ಆಗಸ್ಟ್ 19 ರಂದು ಸಿಎಂ ಪಿಣರಾಯಿ ವಿಜಯನ್ ಎದುರು ಸಲ್ಲಿಸಲಾಗಿರುವ ವರದಿಯಲ್ಲಿ, ಮಲಯಾಳಂ ಸಿನಿಮಾ ರಂಗದಲ್ಲಿ ನಟಿಯರು ವಿವಿಧ ರೀತಿಯ ಶೋಷಣೆಯನ್ನು ಎದುರಿಸುತ್ತಿದ್ದಾರೆ. ಅನೇಕ ನಟಿಯರು ತಮಗಾದ ಅನ್ಯಾಯವನ್ನು ನಮ್ಮೆದುರು ಹೇಳಲು ಹಿಂದೇಟು ಹಾಕುತ್ತಿದ್ದಾರೆ. ಆಗಷ್ಟೇ ಸಿನಿಮಾಗೆ ಬಂದಿರುವ ನಟಿಯರಿಂದ ಹಿಡಿದು ಸದ್ಯ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿಯರಿಗೂ ಕೂಡ ಕಿರುಕುಳಗಳು ಆಗುತ್ತವೆ ಎಂದು ಹೇಳಲಾಗಿದೆ. ಅದರಲ್ಲೂ ಜನಪ್ರಿಯ ನಟರು, ಹಾಗೂ ಸಿನಿಮಾ ರಂಗದಲ್ಲಿ ಹೆಸರು ಮಾಡಿರುವ ಅನೇಕ ಗಣ್ಯರಿಂದಲೇ ಈ ರೀತಿಯ ಶೋಷಣೆ ಆಗುತ್ತಿದೆ ಎಂದು ಜಸ್ಟಿಸ್ ಹೇಮಾ ಕಮಿಟಿ ವರದಿ ಬಹಿರಂಗಗೊಳಿಸಿದೆ.

ಇದನ್ನು ಓದಿ: ಮತ್ತೊಂದು ರೋಡ್​ ರೇಜ್​ ಪ್ರಕರಣ.. ಕಾರನ್ನ ಫಾಲೋ ಮಾಡ್ಕೊಂಡು ಬಂದು ದುರ್ವರ್ತನೆ ತೋರಿದ ಕಿಡಿಗೇಡಿಗಳು

ಹೊಂದಾಣಿಕೆ ರಾಜೀ ಮಾಡಿಕೊಳ್ಳುವುದು ಅನಿವಾರ್ಯ
ಮಲಯಾಳಂನಲ್ಲಿ ಕಾಮಕೇಳಿ ಕೆಲಸ ಬೇಡಿಕೊಂಡು ಇಂಡಸ್ಟ್ರಿಗೆ ಕಾಲಿಡುವುದರಿಂದ ಶುರುವಾಗುತ್ತೆ ಎಂದು ಅನೇಕ ನಟಿಯರು ಹೇಳಿದ್ದಾರೆ. ಕೆಲಸ ಮಾಡಬೇಕು ಅಂದ್ರೆ, ಅತ್ಯುತ್ತಮ ಅವಕಾಶ ಸಿಗಬೇಕು ಅಂದ್ರೆ ಅವರೊಂದಿಗೆ ದೈಹಿಕ ಸಂಪರ್ಕಕ್ಕೆ ನಾವು ಅನಿವಾರ್ಯವಾಗಿ ಹೊಂದಾಣಿಕೆ ಮಾಡಿಕೊಳ್ಳಬೇಕು ರಾಜೀ ಆಗಲೇಬೇಕು. ಇಲ್ಲವಾದಲ್ಲಿ ಚಿತ್ರರಂಗದಿಂದ ನಿಷೇಧದಂತ ಬೆದರಿಕೆ ಸೇರಿದಂತೆ ಅನೇಕ ಬೆದರಿಕೆಗಳು ಬರುತ್ತವೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಇದನ್ನೂ ಓದಿ: ಟ್ರೆಂಡಿಂಗ್ ಸಾಂಗ್​​ಗೆ ಚಂದನ್ ಶೆಟ್ಟಿ ಭರ್ಜರಿ ಸ್ಟೆಪ್​; ಅಣ್ಣನ ಹೊಸ ಅಧ್ಯಾಯ ಶುರು ಕಣ್ರೋ ಅಂದ್ರು ಫ್ಯಾನ್ಸ್​

ಸ್ಕ್ರಿಪ್ಟ್​ ಬಗ್ಗೆ ಚರ್ಚೆ ವೇಳೆಯೇ ಶುರುವಾಗುತ್ತದೆ ಅಸಲಿ ಆಟ
ಸಿನಿಮಾ ರಂಗ ಅನ್ನೋದು ಪುರುಷಪ್ರಧಾನವಾದ ಒಂದು ರಂಗ. ಇಲ್ಲಿ ಸಿನಿಮಾಗಳನ್ನು ನಿರ್ಮಿಸುವವರು ನಿರ್ದೇಶಿಸುವವರು ಹೆಚ್ಚಾಗಿ ಪುರುಷರೇ ಆಗದ್ದಾರೆ. ಅನೇಕ ಬಾರಿ ಸ್ಕ್ರಿಪ್ಟ್​ ಡಿಸ್ಕಷನ್​ ಸಮಯದಲ್ಲಿ ಮದ್ಯಸೇವನೆ ಅನ್ನೋದು ಸಹಜವಾದ ಒಂದು ಭಾಗ. ಕುಡಿತದೊಂದಿಗೆ ಆರಂಭವಾಗುವ ಸ್ಕ್ರಿಪ್ಟ್ ಡಿಸ್ಕಷನ್ ಕ್ರಮೇಣ ಬೇರೆಯ ಹಾದಿ ಹಿಡಿಯುತ್ತದೆ. ಅಶ್ಲೀಲ ಜೋಕ್​ಗಳು ಶುರುವಾಗುತ್ತವೆ. ಅಲ್ಲಿಂದಲೇ ಲೈಗಿಂಕ ಶೋಷಣೆಗೆ ವೇದಿಕೆಯೊಂದು ಸಿದ್ಧವಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆಗಸ್ಟ್ 19 ರಂದು ಸರ್ಕಾರಕ್ಕೆ ಸಲ್ಲಿಸಲಾದ ಜಸ್ಟಿಸ್ ಹೇಮಾ ಕಮಿಟಿ ವರದಿ ಹೇಳುವ ಪ್ರಕಾರ ಮಲಯಾಳಂ ಚಿತ್ರರಂಗದಲ್ಲಿ ಸದ್ಯ ನಡೆಯುತ್ತಿರುವ ಕಾಸ್ಟ್ ಕೌಚಿಂಗ್ ಬಗ್ಗೆ ಬಹಿರಂಗವಾಗಿ ಮಾತನಾಡಲು ನಟಿಯರು ಎರಡು ಕಾರಣಗಳಿಂದ ಹೆದರುತ್ತಾರೆ. ಒಂದು ಮಲಯಾಳಂ ಚಿತ್ರರಂಗದಲ್ಲಿ ಹಲವು ನಟರ ನಿರ್ಮಾಪಕರ ನಿರ್ದೇಶಕರ ಹಿಡಿತವಿದೆ. ಅಂತವರ ವಿರುದ್ಧ ಏನಾದರೂ ಧ್ವನಿಯೆತ್ತಿದಲ್ಲಿ, ಚಿತ್ರರಂಗದಿಂದ ಬ್ಯಾನ್ ಆಗುವ ಭಯ ನಟಿಯರಿಗಿದೆ. ಮತ್ತೊಂದು ಭಯ ಅಂದ್ರೆ ನಟರ ಅಭಿಮಾನಿಗಳು, ಒಂದು ವೇಳೆ ಈ ಬಹಿರಂಗವಾಗಿ ನಾವು ಸಿನಿಮಾರಂಗದಲ್ಲಿ ನಡೆಯುತ್ತಿರುವ ಅಸಲಿಯತ್ತನ್ನು ಮಾತನಾಡಿದಲ್ಲಿ ನಟರ ಅಭಿಮಾನಿಗಳು ಹಾಗೂ ಅಭಿಮಾನಿ ಸಂಘಗಳು ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಇನ್ನೊಂದು ರೀತಿಯಲ್ಲಿ ಶೋಷಿಸಬಹುದು ಎಂಬ ಭಯವೊಂದಿದೆ.ಒಟ್ಟಾರೆ ಸದಾ ಕ್ರಿಯಾಶೀಲತೆಗೆ ಹೊಸತನಕ್ಕೆ ತುಡಿಯುವ ಚಿತ್ರರಂಗದಲ್ಲಿ ಇಂತಹದೊಂದು ವ್ಯವಸ್ಥೆ ಕಪ್ಪು ಚುಕ್ಕೆಯಾಗಿದೆ.ಮಲಯಾಳಂ ಚಿತ್ರರಂಗದ ಮತ್ತೊಂದು ಮುಖವನ್ನು ಹೇಮಾ ಸಮಿತಿ ವರದಿ ತೆರೆದಿಟ್ಟಿದೆ. ಈ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆಯೋ ನೋಡಬೇಕಿದೆ .

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಖ್ಯಾತ ನಟರಿಂದಲೇ ಲೈಂಗಿಕ ಕಿರುಕುಳ.. ಮಲಯಾಳಂ ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ಹೇಮಾ ಕಮಿಟಿ; ವರದಿಯಲ್ಲಿ ಏನಿದೆ?

https://newsfirstlive.com/wp-content/uploads/2024/08/hema-commission-report.jpeg

Load More