newsfirstkannada.com

ಆರ್​​ಸಿಬಿಗೆ ಮತ್ತೆ ವಿರಾಟ್​ ಕೊಹ್ಲಿ ಕ್ಯಾಪ್ಟನ್​ ಎಂದ ಬ್ಯಾಟಿಂಗ್​ ಕೋಚ್​​​.. ದೊಡ್ಡ ಹಿಂಟ್​​ ಕೊಟ್ಟಿದ್ದೇಕೆ?

Share :

Published August 20, 2024 at 4:08pm

Update August 20, 2024 at 7:21pm

    17 ಸೀಸನ್​ಗಳಿಂದಲೂ ಕಪ್​ ಗೆಲ್ಲಲೇಬೇಕು ಎಂದಿರೋ ಆರ್​​ಸಿಬಿ ಟೀಮ್​​​

    ಕಳೆದ 8 ವರ್ಷಗಳಿಂದಲೂ ಫೈನಲ್​ಗೆ ಹೋಗದ ಆರ್​​ಸಿಬಿ ಕ್ರಿಕೆಟ್​ ತಂಡ..!

    ಮುಂದಿನ ಸೀಸನ್​ಗೆ ಆರ್​​ಸಿಬಿ ತಂಡ ಮುನ್ನಡೆಸಲಿರೋ ವಿರಾಟ್​ ಕೊಹ್ಲಿ

17 ಸೀಸನ್​ಗಳಿಂದಲೂ ಕಪ್​ ಗೆಲ್ಲಲೇಬೇಕು ಅನ್ನೋ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಕನಸು ಮುಂದುವರಿದಿದೆ. ಪ್ರತಿ ವರ್ಷವೂ ಈ ಸಲ ಕಪ್ ನಮ್ದೆ ಅನ್ನೋ ಆರ್​​ಸಿಬಿ ಫೈನಲ್​ಗೆ ಹೋಗದೆ ಬರೋಬ್ಬರಿ 8 ವರ್ಷಗಳು ಕಳೆದಿವೆ. ಕಳೆದ ಸೀಸನ್​ನಲ್ಲೂ ಆರ್​ಸಿಬಿ 14 ಪಂದ್ಯಗಳಲ್ಲಿ ಕೇವಲ 7 ಮ್ಯಾಚ್ ಗೆದ್ದು ಪ್ಲೇ ಆಫ್​ ಪ್ರವೇಶಿಸಿತ್ತು. ಹಾಗಾಗಿ ಮುಂದಿನ ಸೀಸನ್​ನಲ್ಲಿ ಆರ್​ಸಿಬಿ ತಂಡದ ನಾಯಕತ್ವ ಬದಲಾಗುವುದು ಬಹುತೇಕ ಖಚಿತವಾಗಿದೆ.

ಆರ್​ಸಿಬಿ ತಂಡದ ಪ್ರಸ್ತುತ ನಾಯಕ ಫಾಫ್ ಡುಪ್ಲೆಸಿಸ್​ಗೆ ಈಗ 40 ವರ್ಷ. ಹೀಗಾಗಿ ಮುಂದಿನ ಸೀಸನ್​ನಲ್ಲಿ ಆರ್​ಸಿಬಿ ಪರ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ. ಇತ್ತ ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದು, ಮತ್ತೆ ನಾಯಕತ್ವದ ಚರ್ಚೆ ಶುರುವಾಗಿದೆ. ಈ ಹಿಂದೆ ಟೀಮ್ ಇಂಡಿಯಾ ನಾಯಕತ್ವದ ಹೊರೆ ಕಾರಣಕ್ಕೆ ಕ್ಯಾಪ್ಟನ್ಸಿಗೆ ರಾಜೀನಾಮೆ ನೀಡಿದ್ದ ಕೊಹ್ಲಿ ಈಗ ಸಂಪೂರ್ಣ ಫ್ರೀ ಆಗಿದ್ದಾರೆ. ಹಾಗಾಗಿ ಕೊಹ್ಲಿ ಆರ್​ಸಿಬಿ ಪರ ಸಂಪೂರ್ಣ ತೊಡಗಿಸಿಕೊಳ್ಳಬಹುದು. ಮತ್ತೆ ಆರ್​ಸಿಬಿ ತಂಡದ ಕ್ಯಾಪ್ಟನ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಇದರ ಮಧ್ಯೆ ಆರ್​​ಸಿಬಿ ತಂಡದ ಮೆಂಟರ್​​ ಮತ್ತು ಬ್ಯಾಟಿಂಗ್​ ಕೋಚ್​​ ಆಗಿರೋ ದಿನೇಶ್​ ಕಾರ್ತಿಕ್​ ಸ್ಫೋಟಕ ಸುಳಿವು ನೀಡಿದ್ದಾರೆ.

ದಿನೇಶ್​ ಕಾರ್ತಿಕ್​ ಹೇಳಿದ್ದೇನು?

ನಿನ್ನೊಂದಿಗೆ ಕ್ರಿಕೆಟ್​​ ಆಡಿದ್ದು ಖುಷಿ ತಂದಿದೆ ಸ್ಕಿಪರ್​​​ (ಕ್ಯಾಪ್ಟನ್​​). 16 ವರ್ಷಗಳಾದ್ರೂ ಇನ್ನೂ ಬೆಂಕಿ ಉರಿಯುತ್ತಲೇ ಇದೆ. ಕ್ರಿಕೆಟ್​ನಲ್ಲಿ 16 ವರ್ಷ ಪೂರೈಸಿದ್ದಕ್ಕೆ ಅಭಿನಂದನೆಗಳು ಎಂದು ದಿನೇಶ್​ ಕಾರ್ತಿಕ್​​ ಟ್ವೀಟ್​ ಮಾಡಿದ್ದಾರೆ. ಇನ್ನು ದಿನೇಶ್​ ಕಾರ್ತಿಕ್​ ಟ್ವೀಟ್​​ ಕೊಹ್ಲಿ ಮತ್ತೆ ಆರ್​​ಸಿಬಿ ಕ್ಯಾಪ್ಟನ್​ ಆಗಬಹುದು ಅನ್ನೋ ಸುಳಿವು ಕೊಟ್ಟಿದೆ. ಹಾಗಾಗಿ ಆರ್​ಸಿಬಿ ಫ್ಯಾನ್ಸ್​ ಕೊಹ್ಲಿ ಮತ್ತೆ ಆರ್​ಸಿಬಿ ಕ್ಯಾಪ್ಟನ್​ ಎಂದು ಟ್ರೆಂಡ್​ ಮಾಡುತ್ತಿದ್ದಾರೆ.

ಕೊಹ್ಲಿ ಆರ್​​ಸಿಬಿ ಕ್ಯಾಪ್ಟನ್ಸಿ ರೆಕಾರ್ಡ್​​ ಏನು?

RCB ತಂಡವನ್ನು 143 ಪಂದ್ಯಗಳಲ್ಲಿ ಮುನ್ನಡೆಸಿರುವ ಕೊಹ್ಲಿ 66 ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದಾರೆ. ಕೊಹ್ಲಿ ನಾಯಕತ್ವದಲ್ಲೇ ಆರ್​ಸಿಬಿ 2016 ರಲ್ಲಿ ಫೈನಲ್​ಗೆ ಪ್ರವೇಶಿಸಿತ್ತು. ನಂತರ 3 ಬಾರಿ ಪ್ಲೇ ಆಫ್ಸ್ ಆಡಿತ್ತು. ಹೀಗಾಗಿ ಕೊಹ್ಲಿಗೆ ಮತ್ತೆ ನಾಯಕನ ಪಟ್ಟ ನೀಡುವ ಸಾಧ್ಯತೆಯಿದೆ.

ಇದನ್ನೂ ಓದಿ: KL ರಾಹುಲ್​ಗೆ ಮೋಸವಾಗುತ್ತಾ..? ಪಾಂಡ್ಯ ಖರೀದಿಗೆ ಕೋಟಿ ಕೋಟಿ ಹಣ ಸುರಿಯಲು​ ಮುಂದಾದ RCB

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಆರ್​​ಸಿಬಿಗೆ ಮತ್ತೆ ವಿರಾಟ್​ ಕೊಹ್ಲಿ ಕ್ಯಾಪ್ಟನ್​ ಎಂದ ಬ್ಯಾಟಿಂಗ್​ ಕೋಚ್​​​.. ದೊಡ್ಡ ಹಿಂಟ್​​ ಕೊಟ್ಟಿದ್ದೇಕೆ?

https://newsfirstlive.com/wp-content/uploads/2024/08/Kohli-2.jpg

Load More