newsfirstkannada.com

ಮುಖ್ಯಮಂತ್ರಿ ರೇಸ್​ನಲ್ಲಿ ಕಾಣಿಸಿದ ಮತ್ತೊಬ್ಬ ಲಿಂಗಾಯತ ಲೀಡರ್​; ಸಾಣೇಹಳ್ಳಿ ಶ್ರೀಗಳು ವಕಾಲತ್ತು

Share :

Published September 14, 2024 at 8:13am

    ಮುಡಾ ಕೇಸ್​ನಲ್ಲಿ ಅಲ್ಲಾಡ್ತಿರುವ ಸಿದ್ದರಾಮಯ್ಯ ಚೇರ್

    ಬೆಳಗಾವಿಗೆ ಮುಖ್ಯಮಂತ್ರಿ ಸ್ಥಾನ ಒಲಿದು ಬಂದ್ರೆ ಸ್ವಾಗತ

    ಸತೀಶ್​​ ಜಾರಕಿಹೊಳಿ ಪರ ಬಿಜೆಪಿ ಶಾಸಕನ ಬ್ಯಾಟಿಂಗ್​!

ಬಾಕಿ ಅವಧಿಗೂ ನಾನೇ ಸಿಎಂ ಅಂತ ಸಿದ್ದರಾಮಯ್ಯ ಮೊನ್ನೆಯಷ್ಟೇ ಹೇಳಿದ್ದರು. ಆದರೆ ಕುರ್ಚಿಗೆ ಹಗ್ಗ ಕಟ್ಟಿ ಎಳೆಯೋರ ಸಂಖ್ಯೆ ಹೆಚ್ಚುತ್ತಿದೆ. ನಿನ್ನೆ ಮಧ್ಯ ಕರ್ನಾಟಕದಲ್ಲಿ ಲಿಂಗಾಯತ ದಾಳ ಉರುಳಿದೆ.

ರೇಸ್​ನಲ್ಲಿ ಕಾಣಿಸಿದ ಮತ್ತೊಬ್ಬ ಲಿಂಗಾಯತ ಲೀಡರ್​!
ರಾಜ್ಯದಲ್ಲಿ ಖಾಲಿ ಇಲ್ಲದ ಸಿಎಂ ಕುರ್ಚಿಗಾಗಿ ಕಾಂಗ್ರೆಸ್​​ ಶಾಸಕರು, ಸಚಿವರ ಪೈಪೋಟಿ ಜೋರಾಗಿದೆ. ಒಬ್ಬೊಬ್ಬರದ್ದು ಒಂದೊಂದು ಲೆಕ್ಕ.. ಮುಡಾ ವ್ಯೂಹದಲ್ಲಿ ಸಿದ್ದರಾಮಯ್ಯ ಸಂಕಷ್ಟಕ್ಕೆ ಸಿಲುಕಿದ್ದರಿಂದ ಶುರುವಾದ ಈ ರೇಸ್​ಗೆ ಸ್ವಾಮೀಜಿಗಳ ಎಂಟ್ರಿ ಆಗಿದೆ. ಸಚಿವ ಮಲ್ಲಿಕಾರ್ಜುನಗೆ ಸಿಎಂ ಪಟ್ಟದ ರೇಸ್​ಗೆ ನೂಕಿದ ಸಾಣೇಹಳ್ಳಿ ಪಂಡಿತರಾಧ್ಯ ಶ್ರೀಗಳು ವಕಾಲತ್ತಿಗೆ ನಿಂತಿದ್ದಾರೆ.

ಇದನ್ನೂ ಓದಿ:‘ವ್ಯವಸ್ಥಿತ ಸಂಚು’! ನಾಗಮಂಗಲ ಪ್ರಕರಣಕ್ಕೆ ಚನ್ನಪಟ್ಟಣ ಬೈಎಲೆಕ್ಷನ್ ಲಿಂಕ್ ಕೊಟ್ಟ ಕುಮಾರಸ್ವಾಮಿ

ಒಬ್ಬ ನಿಜವಾದ ನೇತಾರ ಆಗುವಂತಹ, ಜವಾಬ್ದಾರಿ ನಿಮ್ಮದೆ ಇರೋದು. ಅಂತಹ ಅರ್ಹತೆ ಕೂಡ ನಿಮಗೆ ಇದೆ. ಮನಸ್ಸು ಮಾಡಿದರೆ ಮುಂದೆ ಮುಖ್ಯಮಂತ್ರಿ ಕೂಡ ಆಗಬಹುದು-ಸಾಣೇಹಳ್ಳಿ ಪಂಡಿತರಾಧ್ಯ ಶ್ರೀಗಳು

ಬೆಳಗಾವಿಗೆ ಮುಖ್ಯಮಂತ್ರಿ ಸ್ಥಾನ ಒಲಿದು ಬಂದ್ರೆ ಸ್ವಾಗತ!
ಬೆಳಗಾವಿ ರಾಜಕಾರಣ ಮಾತ್ರ ಭಿನ್ನ. ಪಕ್ಷ ಮೀರಿ ಸತೀಶ್​ ಜಾರಕಿಹೊಳಿ ಪರ ಬ್ಯಾಟಿಂಗ್​​ ಶುರುವಾಗಿದೆ.. ಬೆಳಗಾವಿ ಜಿಲ್ಲೆಯವರು ಯಾರೇ ಸಿಎಂ ಆದ್ರೂ ಸ್ವಾಗತಿಸ್ತೇನೆ ಅಂತ ರಾಯಬಾಗ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಹೇಳಿದ್ದಾರೆ. ಒಟ್ಟಾರೆ, ಸಿದ್ದರಾಮಯ್ಯ ಚೇರ್ ಅಲ್ಲಾಡ್ತಿದ್ಯೋ ಇಲ್ವೋ? ನಿತ್ಯವೂ ಜಾತಿ, ವಯೋಮಿತಿ, ಪಕ್ಷ ನಿಷ್ಠೆ, ಸೀನಿಯಾರಿಟಿ ದಾಳ ಉರುಳ್ತಿದೆ. ಹೀಗಾಗಿ ಸಿಎಂ ಪಟ್ಟದ ರೇಸ್​​ ಮಾತ್ರ ಕುತೂಹಲ ಹೆಚ್ಚಿಸ್ತಿದೆ.

ಇದನ್ನೂ ಓದಿ:ನಂದಿನಿ ಹಾಲಿನ ದರ ಏರಿಕೆ ಸುಳಿವು ಕೊಟ್ಟ ಸಿದ್ದರಾಮಯ್ಯ ಸರ್ಕಾರ; ಇದೇ ವೇಳೆ ರೈತರಿಗೂ ವಾಗ್ದಾನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಖ್ಯಮಂತ್ರಿ ರೇಸ್​ನಲ್ಲಿ ಕಾಣಿಸಿದ ಮತ್ತೊಬ್ಬ ಲಿಂಗಾಯತ ಲೀಡರ್​; ಸಾಣೇಹಳ್ಳಿ ಶ್ರೀಗಳು ವಕಾಲತ್ತು

https://newsfirstlive.com/wp-content/uploads/2024/09/CM-SIDDARAMAIAH.jpg

Load More