newsfirstkannada.com

×

ನಿದ್ದೆಯಿಲ್ಲದೇ ಬಳಲುತ್ತಿರುವವರಿಗೆ ಹೆಚ್ಚು ಮಾನಸಿಕ ಸಮಸ್ಯೆ! ಆ ಹೆಲ್ಪ್​ಲೈನ್ ನೀಡಿದ ಅಸಲಿ ಮಾಹಿತಿ ಏನು?

Share :

Published October 12, 2024 at 7:09pm

Update October 15, 2024 at 11:38am

    ನಿದ್ರಾಹೀನತೆಯಿಂದ ಅತಿಹೆಚ್ಚು ಮಾನಸಿಕ ಸಮಸ್ಯೆಗಳು ಸೃಷ್ಟಿ

    ಭಾರತದ ಟೆಲೆ ಮಾನಸಾ ಹೆಲ್ಪ್​ಲೈನ್ ತೆರೆದಿಟ್ಟ ಆ ವರದಿ ಏನು?

    ಭಾರತದಲ್ಲಿ ಎಷ್ಟು ಜನರು ನಿದ್ರೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ?

ನಿದ್ದೆ ಮನುಷ್ಯನ ಬದುಕಿಗೆ ಅತ್ಯಂತ ಪ್ರಮುಖವಾದದ್ದು. ಹಸಿವು ನೀರಡಿಕೆಯಂತೆಯೇ ಅದು ಕೂಡ ದೇಹ ಬಯಸುವ ಒಂದು ಬಯಕೆ. ನಿದ್ದೆಯನ್ನು ಕಡಿಮೆ ಮಾಡುವುದರಿಂದ ದೈಹಿಕ ಸಮಸ್ಯೆಗಳು ಮಾತ್ರವಲ್ಲ ಮಾನಸಿಕ ಸಮಸ್ಯೆಗಳು ಹೆಚ್ಚು ಸೃಷ್ಟಿಯಾಗುತ್ತವೆ ಅನ್ನೋದಕ್ಕೆ ಭಾರತದ ಟೆಲಿಮಾನಸಾ ಎಂಬ ಮಾನಸಿಕ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವ ಉಚಿತ ಹೆಲ್ಪಲೈನ್​ ನೀಡಿದ ವರದಿಯೇ ಸಾಕ್ಷಿ.

ಇದನ್ನೂ ಓದಿ: ಅಸಿಡಿಟಿ ಸಮಸ್ಯೆಗಳು ಶುರುವಾಗಲು ಕಾರಣವೇನು? ಅದರಿಂದ ಪಾರಾಗಲು ಇಲ್ಲಿ ಇವೆ ಐದು ಟಿಪ್ಸ್

ಮಾನಸಿಕ ಸಮಸ್ಯೆಗಳಿಗೆ ಪರಿಹಾರ ನೀಡಲೆಂದೇ 2022ರಲ್ಲಿ ಈ ಒಂದು ಹೆಲ್ಪ್​ಲೈನ್​ನನ್ನು ಲಾಂಚ್ ಮಾಡಲಾಗಿತ್ತು. ಇಲ್ಲಿಯವರೆಗೂ ದೇಶಾದ್ಯಂತದಿಂದ ಒಟ್ಟು 3.5 ಲಕ್ಷ ಜನರು ಈ ಹೆಲ್ಪ್​ಲೈನ್ ನಂಬರ್​ಗೆ ಕಾಲ್ ಮಾಡಿದ್ದಾರೆ. ಇವರಲ್ಲಿ ನಿದ್ದೆಯಿಲ್ಲದೇ ಬಳಲುತ್ತಿರುವರ ಕರೆಗಳು ಅತಿಹೆಚ್ಚು ಬಂದಿದ್ದು ಎಂದು ವರದಿ ಮಾಡಲಾಗಿದೆ. ಈ ಟೆಲೆ ಮಾನಸಾ ಹೆಲ್ಪ್​ಲೈನ್ ನೀಡಿದ ವರದಿ ಪ್ರಕಾರ ಅವರು ಸ್ವೀಕರಿಸಿದ ಕರೆಗಳಲ್ಲಿ ನಿದ್ದೆಯಿಲ್ಲದೇ ಬಳಲಿ ಮಾನಸಿಕ ಸಮಸ್ಯೆಯನ್ನು ಸೃಷ್ಟಿಮಾಡಿಕೊಂಡವರ ಸಂಖ್ಯೆ ಶೇಕಡಾ 14 ರಷ್ಟಿದ್ದಾರೆ. ಸದಾ ದುಃಖದ ಮನಸ್ಥಿತಿ(Sad mood)ಯಲ್ಲಿರುವವರ ಸಂಖ್ಯೆ ಶೇಕಡಾ 14ರಷ್ಟು,

ಇದನ್ನೂ ಓದಿ: Heart attack ಭುಜ ಮತ್ತು ತೋಳಿನ ನೋವು ಕೂಡ ಡೇಂಜರ್​; ಈ 6 ಲಕ್ಷಣ ಕಂಡರೆ ನಿರ್ಲಕ್ಷ್ಯ ಬೇಡ..

ಒತ್ತಡಕ್ಕೆ ಸಂಬಂಧಿಸಿದದಂತೆ ಕರೆ ಮಾಡಿದವರ ಸಂಖ್ಯೆ ಶೇಕಡಾ 11ರಷ್ಟು ಹಾಗೂ ಆತಂಕ (Anxiety) ಸಮಸ್ಯೆಯಿಂದ ಬಳಲುತ್ತಿದ್ದವರ ಸಂಖ್ಯೆ ಶೇಕಡಾ 9 ರಷ್ಟು ಎಂದು ವರದಿ ಮಾಡಲಾಗಿದೆ.
ಇವುಗಳಲ್ಲಿ ಇಟ್ಟು ಶೇಕಡಾ 3ರಷ್ಟು ಪ್ರಕರಣಗಳು ಆತ್ಮಹತ್ಯೆಗೆ ಸಂಬಂಧಿಸಿದ್ದವು ಎಂದು ಕೂಡ ಹೇಳಲಾಗಿದೆ. ಇನ್ನೂ ನಿದ್ರಾಹೀನೆಯಿಂದ ಬಳಲುತ್ತಿರುವವರು ಈ ಹೆಲ್ಪ್​ಲೈನ್​ಗೆ ಕರೆ ಮಾಡಿದವರಲ್ಲಿ ಹೆಚ್ಚು 20 ವರ್ಷದ ಯುವತಿಯರೇ, ಸರ್ಕಾರಿ ವರದಿ ಹೇಳುವ ಪ್ರಕಾರ ಇವರೆಲ್ಲರೂ ಹಾಸ್ಟೆಲ್​ನಲ್ಲಿ ಇರುವವರು. ವಿಪರೀತ ಮೊಬೈಲ್ ಹಾಗೂ ಲ್ಯಾಪ್​ಟಾಪ್ ಬಳಕೆಯಿಂದಾಗಿ ಅವರು ನಿದ್ರೆಯ ಸಮಸ್ಯೆಯಿಂದ ಹಲವು ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿದ್ದೆಯಿಲ್ಲದೇ ಬಳಲುತ್ತಿರುವವರಿಗೆ ಹೆಚ್ಚು ಮಾನಸಿಕ ಸಮಸ್ಯೆ! ಆ ಹೆಲ್ಪ್​ಲೈನ್ ನೀಡಿದ ಅಸಲಿ ಮಾಹಿತಿ ಏನು?

https://newsfirstlive.com/wp-content/uploads/2024/10/Disturbed-Sleep.jpg

Load More