ಬ್ರೆಜಿಲ್, ರಷ್ಯಾ, ಭಾರತ, ಚೀನಾ, ಮತ್ತು ದಕ್ಷಿಣ ಆಫ್ರಿಕಾ ಒಗ್ಗಟ್ಟು
ಡಾಲರ್‌ಗೆ ಪರ್ಯಾಯ ಹಣವನ್ನು ಬಳಸಬೇಕೆಂಬ ಗುರಿ ಆಗಿದ್ಯಾ?
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮಾಸ್ಟರ್ ಪ್ಲಾನ್ ಏನು?
ರಷ್ಯಾದ ಕಜಾನ್ ಪ್ರದೇಶದಲ್ಲಿ ಇತ್ತೀಚೆಗೆ ಪೂರ್ಣಗೊಂಡ ಬ್ರಿಕ್ಸ್ ಶೃಂಗಸಭೆಯ ವೇಳೆ ಒಂದು ಸಾಂಕೇತಿಕ ಬ್ಯಾಂಕ್ ನೋಟನ್ನು ಅನಾವರಣಗೊಳಿಸಲಾಯಿತು. ಈ ನೋಟು ಅಮೆರಿಕಾ ನೇತೃತ್ವದ ಪಾಶ್ಚಾತ್ಯ ದೇಶಗಳ ಪ್ರಾಬಲ್ಯಕ್ಕೆ ಸೆಡ್ಡು ಹೊಡೆಯುವ ಹೊಸ ಜಾಗತಿಕ ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಯೋಜನೆಯ ಭಾಗವಾಗಿದೆ. ಇಂದಿನ ತನಕ ಡಾಲರ್‌ನ ಪ್ರಾಬಲ್ಯವಿರುವ ಜಾಗತಿಕ ಹಣಕಾಸು ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ಬರುವ ಸಾಧ್ಯತೆಗಳಿವೆಯೇ ಎಂಬ ಸಂವಾದಕ್ಕೆ ಈ ನೋಟು ಹಾದಿ ಮಾಡಿಕೊಟ್ಟಿದೆ.
ಈ ಹಣ ಬ್ರೆಜಿಲ್, ರಷ್ಯಾ, ಭಾರತ, ಚೀನಾ, ಮತ್ತು ದಕ್ಷಿಣ ಆಫ್ರಿಕಾಗಳ ಧ್ವಜಗಳನ್ನು ಒಳಗೊಂಡಿದ್ದು, ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ವ್ಯವಹಾರಗಳಿಗೆ ಡಾಲರ್‌ಗೆ ಪರ್ಯಾಯ ಹಣವನ್ನು ಬಳಸಬೇಕೆಂಬ ಗುರಿಯನ್ನು ಈ ರಾಷ್ಟ್ರಗಳು ಹೊಂದಿರುವುದನ್ನು ಸಂಕೇತಿಸುತ್ತಿದೆ.
ಈ ವಿನೂತನ ಕ್ರಮ ಹೆಚ್ಚು ಸ್ವತಂತ್ರವಾದ ಆರ್ಥಿಕ ವ್ಯವಸ್ಥೆಯನ್ನು ರೂಪಿಸುವ ಮತ್ತು ಪಾಶ್ಚಾತ್ಯ ಹಣಕಾಸು ವಿಧಾನದ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವ ಬ್ರಿಕ್ಸ್ ಪ್ರಯತ್ನಕ್ಕೆ ಕೈಗನ್ನಡಿಯಾಗಿದೆ.
ಇದನ್ನೂ ಓದಿ: ಅಬ್ಬಬ್ಬಾ ಇದು ಕಣ್ರಿ ಲಾಟರಿ ಅಂದ್ರೆ.. 8 ನಿಮಿಷಗಳಲ್ಲೇ ₹8.5 ಕೋಟಿ ಗೆದ್ದ ಬಡ ಕಾರ್ಮಿಕ!
ಬ್ರಿಕ್ಸ್ ಬ್ಯಾಂಕ್ ನೋಟಿನ ವಿನ್ಯಾಸ ಮತ್ತು ವೈಶಿಷ್ಟ್ಯಗಳು
ರಷ್ಯಾದ ಮಾಧ್ಯಮ ಸಂಸ್ಥೆಯಾದ ಸ್ಫುಟ್ನಿಕ್ ಈ ಹಣದ ಚಿತ್ರವನ್ನು ಹಂಚಿಕೊಂಡಿದ್ದು, ಈ ಬ್ಯಾಂಕ್ ನೋಟು ಬ್ರಿಕ್ಸ್ ವ್ಯವಸ್ಥೆಯ ಒಳಗೆ ನಡೆಯುತ್ತಿರುವ ಜಂಟಿ ಪ್ರಯತ್ನವನ್ನು ಪ್ರತಿನಿಧಿಸುತ್ತಿದೆ ಎಂದಿದೆ.
ಈ ನೋಟಿನ ಮುಂಭಾಗದಲ್ಲಿ ಬ್ರಿಕ್ಸ್ ಒಕ್ಕೂಟದ ಸ್ಥಾಪಕ ಸದಸ್ಯ ರಾಷ್ಟ್ರಗಳಾದ ರಷ್ಯಾ, ಚೀನಾ, ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾಗಳ ಧ್ವಜವನ್ನು ಅಳವಡಿಸಲಾಗಿದೆ. ವರದಿಗಳ ಪ್ರಕಾರ, ಬುಧವಾರದಂದು ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ಒಂದು ಖಾಸಗಿ ಮಾತುಕತೆಯನ್ನೂ ಆಯೋಜಿಸಿದ್ದು, ಅದರಲ್ಲಿ ಬ್ರಿಕ್ಸ್ ಸದಸ್ಯ ರಾಷ್ಟ್ರಗಳಿಗೆ ಒಂದು ಸಾಮಾನ್ಯವಾದ ಹಣವನ್ನು ರೂಪಿಸುವ ಕುರಿತು ಚರ್ಚಿಸಲಾಗಿದೆ.
ಡಾಲರ್ ಪಾರಮ್ಯಕ್ಕೆ ಸವಾಲು ಹಾಕಲು ಪುಟಿನ್ ಕಾರ್ಯತಂತ್ರ
ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಮಾತನಾಡಿದ ವ್ಲಾಡಿಮಿರ್ ಪುಟಿನ್, ಬ್ರಿಕ್ಸ್ ರಾಷ್ಟ್ರಗಳು ಡಾಲರ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದಿಲ್ಲವಾದರೂ, ಡಾಲರ್ ಲಭ್ಯತೆಯ ಮೇಲೆ ಬಹಳಷ್ಟು ನಿರ್ಬಂಧಗಳಿರುವುದರಿಂದ ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುತ್ತಿರುವುದಾಗಿ ಹೇಳಿದ್ದಾರೆ.
ಡಾಲರ್ ಇಂದಿಗೂ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಮುಖ್ಯ ಸ್ಥಾನ ಹೊಂದಿದ್ದರೂ, ಅದನ್ನು ರಾಜಕೀಯ ಅಸ್ತ್ರವಾಗಿ ಬಳಸುತ್ತಿರುವುದರಿಂದ ಡಾಲರ್ ಮೇಲಿನ ಜಾಗತಿಕ ನಂಬಿಕೆ ಕಡಿಮೆಯಾಗಿದೆ ಎಂದು ಪುಟಿನ್ ಹೇಳಿದ್ದಾರೆ.
ಬ್ರಿಕ್ಸ್ ಡಾಲರ್ ಅನ್ನು ಎದುರಿಸುವ ಯೋಜನೆ ಹೊಂದಿಲ್ಲವಾದರೂ, ಅವಶ್ಯಕತೆ ಬಿದ್ದರೆ ಡಾಲರ್‌ಗೆ ಪರ್ಯಾಯ ವ್ಯವಸ್ಥೆಯನ್ನು ಹುಡುಕಬೇಕಾಗುತ್ತದೆ ಎಂದು ಪುಟಿನ್ ಹೇಳಿದ್ದಾರೆ. “ಅವರು ನಮ್ಮನ್ನು ತಡೆಗಟ್ಟಲು ಪ್ರಯತ್ನ ಪಟ್ಟರೆ, ನಾವು ಅವರಿಗೆ ಪರ್ಯಾಯ ಕ್ರಮಗಳನ್ನು ಹುಡುಕುತ್ತೇವೆ” ಎಂದು ಪುಟಿನ್ ಹೇಳಿದ್ದು, ಇದು ಪ್ರಸ್ತುತ ಸನ್ನಿವೇಶದ ಕುರಿತು ಬ್ರಿಕ್ಸ್ ಹೊಂದಿರುವ ಪ್ರಾಯೋಗಿಕ ನೋಟನ್ನು ಪ್ರದರ್ಶಿಸುತ್ತಿದೆ.
ಪುಟಿನ್ ಹೇಳಿಕೆಗಳು ರಷ್ಯಾ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ಕೇಂದ್ರೀಕರಿಸಿವೆ. ಇಂತಹ ಆರ್ಥಿಕ ನಿರ್ಬಂಧಗಳ ಕಾರಣದಿಂದಾಗಿ, ರಷ್ಯಾಗೆ ಮುಖ್ಯವಾಗಿ ಡಾಲರ್ ಮೇಲೆ ಅವಲಂಬಿತವಾಗಿರುವ ಜಾಗತಿಕ ಹಣಕಾಸು ವ್ಯವಸ್ಥೆಗಳನ್ನು ಬಳಸಲು ಕಷ್ಟಕರವಾಗಿದೆ.
ನಿರ್ಬಂಧಗಳಂತಹ ರಾಜಕೀಯ ನಿರ್ಧಾರಗಳಿಂದ ಸಮಸ್ಯೆಗೆ ತುತ್ತಾಗುವುದನ್ನು ಕಡಿಮೆಗೊಳಿಸುವ ಸಲುವಾಗಿ, ಬ್ರಿಕ್ಸ್ ಒಕ್ಕೂಟ ಪರ್ಯಾಯ ಹಣವನ್ನು ಹೊಂದಲು ಪ್ರಯತ್ನ ನಡೆಸುತ್ತಿದೆ.
ಇದನ್ನೂ ಓದಿ: ಅಮೆರಿಕಾ ಡಾಲರ್‌ಗೆ ಚೆಕ್ಮೇಟ್.. ಪುಟಿನ್ ಕೈಯಲ್ಲಿ ರಾರಾಜಿಸಿದ ಬ್ರಿಕ್ಸ್ ಕರೆನ್ಸಿ; ಏನಿದರ ತಾಕತ್ತು?
ಡಾಲರ್ ಅನ್ನು ಒಂದು ಹಣಕ್ಕಿಂತ ಹೆಚ್ಚಾಗಿ, ಆಯುಧವಾಗಿ ಬಳಸುತ್ತಿರುವ ಪರಿಣಾಮವಾಗಿ, ಹೊಸ ಹಣಕಾಸು ವ್ಯವಸ್ಥೆಗಳೆಡೆಗೆ ಜಗತ್ತು ಬೇಗ ಹೊರಳುವ ಸಾಧ್ಯತೆಗಳಿವೆ ಎಂದು ಪುಟಿನ್ ಭರವಸೆ ಹೊಂದಿದ್ದಾರೆ. ಬ್ರಿಕ್ಸ್ ಒಕ್ಕೂಟ ಹೆಚ್ಚು ನ್ಯಾಯಯುತವಾದ ಆರ್ಥಿಕ ವ್ಯವಸ್ಥೆಯನ್ನು ರೂಪಿಸುವತ್ತ ಕಾರ್ಯ ನಿರತವಾಗಿದೆ ಎಂದು ಪುಟಿನ್ ಹೇಳಿದ್ದಾರೆ.
ವಿಶೇಷ ವರದಿ: ಗಿರೀಶ್ ಲಿಂಗಣ್ಣ (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ