newsfirstkannada.com

×

ಹಸುವಿನ ಸಗಣಿಯಿಂದ ತಯಾರಿಸಲಾದ ಗಡಿಯಾರವಿದು.. ವಿದೇಶದಲ್ಲಿ ಇದಕ್ಕೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

Share :

Published October 26, 2024 at 2:58pm

Update October 26, 2024 at 2:59pm

    ಭಾರತದ ವಸ್ತುಗಳಿಗೆ ವಿದೇಶದಲ್ಲಿ ಭಾರೀ ಬೇಡಿಕೆ

    ವಿದೇಶಿಗರಿಗೆ ಪರಿಸರ ಸ್ನೇಹಿ ವಸ್ತುಗಳೇ ಬೇಕು

    ಮಹಿಳೆಯರು ತಯಾರಿಸುವ ವಸ್ತುಗಳಿಗೆ ಡಿಮ್ಯಾಂಡ್​

ಭಾರತೀಯರು ಸ್ವದೇಶಿ ವಸ್ತುಗಳನ್ನು ಬಿಟ್ಟು ವಿದೇಶಿ ವಸ್ತುಗಳ ಮೊರೆ ಹೋಗುತ್ತಿದ್ದಾರೆ. ಆದರೆ ವಿದೇಶಿಗರು ಭಾರತೀಯ ವಸ್ತುಗಳಿಗೆ ಈಗ ಮುಗಿಬೀಳುತ್ತಿದ್ದಾರೆ. ಅದರಲ್ಲೂ ಭಾರತದಲ್ಲಿ ಪರಿಸರ ಸ್ನೇಹಿ ವಸ್ತುಗಳಿಂದ ತಯಾರಾಗುವ ವಸ್ತುಗಳು ವಿದೇಶಿಗರ ಗಮನಸೆಳೆದಿದ್ದು, ಹಸುವಿನ ಸಗಣಿಯಿಂದ ತಯಾರಿಸಲಾದ ಗಡಿಯಾರಕ್ಕೆ ಅಮೆರಿಕಾ, ಬ್ರಿಟನ್​, ಆಸ್ಟ್ರೇಲಿಯಾ ದೇಶಗಳಿಂದ ಬೇಡಿಕೆ ಹೆಚ್ಚಾಗುತ್ತಿದೆ.

ಮಧ್ಯಪ್ರದೇಶದ ಸಾಗರ್​ ಜಿಲ್ಲೆಯಲ್ಲಿ ಮಹಿಳೆಯರು ಹಸುವಿನ ಸಗಣಿ ಬಳಸಿ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಅದರ ಜೊತೆಗೆ ಹಸುವಿನ ಸಗಣಿಯಿಂದ ಗಡಿಯಾರವನ್ನು ತಯಾರಿಸುತ್ತಿದ್ದಾರೆ. ಆದರೆ ಸಗಣಿಯಿಂದ ತಯಾರಿಸಿದ ಅಲಂಕಾರಿಕ ಗಡಿಯಾರಕ್ಕೆ ವಿದೇಶದಿಂದ ಬೇಡಿಕೆ ಬರುತ್ತಿದೆ.

ಇದನ್ನೂ ಓದಿ: ಐಫೋನ್​ ಕೊಡಿಸದ ಪೋಷಕರು.. ತನ್ನ ಮನೆಯಲ್ಲಿ ತಾನೇ ದರೋಡೆ ಮಾಡಿ ಸಿಕ್ಕಿ ಬಿದ್ದ ಮಗ!

ಗೋಡೆ ಗಡಿಯಾರವನ್ನು ಹಸುವಿನ ಸಗಣಿಯಿಂದ ಅಲಂಕರಿಸುವ ಮೂಲಕ ಮಧ್ಯಪ್ರದೇಶದ ಮಹಿಳೆಯರು ಪರಿಸರ ಸ್ನೇಹಿ ಉತ್ಪನ್ನಕ್ಕೆ ಹೆಚ್ಚು ಒತ್ತುನೀಡುತ್ತಿದ್ದಾರೆ. ನಗರದ 750 ಮಹಿಳೆಯರು ಈ ಉತ್ಪನ್ನ ತಯಾರಿಸುತ್ತಾ ಗಮನಸೆಳೆದಿದ್ದಾರೆ.

ದೀಪಾವಳಿಗೆ ಮುಂಚಿತವಾಗಿ ಮಹಿಳೆಯರ ಗುಂಪು ಸುಮಾರು 5 ಸಾವಿರ ಹಸುವಿನ ಸಗಣಿಯಿಂದ ಗೋಡೆ ಗಡಿಯಾರವನ್ನು ತಯಾರಿಸಿದ್ದಾರೆ. ಬೇಡಿಕೆ ಅನ್ವಯ ಶೇ90ರಷ್ಟು ಗಡಿಯಾರಗಳು ಮಾರಾಟಗೊಂಡಿವೆ. ಆಕರ್ಷಕ ವಿನ್ಯಾಸವನ್ನು ನೋಡಿ ವಿದೇಶಿಗರಂತು ಮನಸೋತಿದ್ದಾರೆ.

ಇದನ್ನೂ ಓದಿ: ಅಬ್ಬಾ.. ಬುರ್ಜ್ ಖಲೀಫಾಗೆ ಸೆಡ್ಡು; ಸೌದಿ ಅರೇಬಿಯಾದಲ್ಲಿ ತಲೆ ಎತ್ತಲಿದೆ ವಿಶ್ವದ ಅತಿ ದೊಡ್ಡ ಕಟ್ಟಡ! ಏನಿದರ ವಿಶೇಷ?

ಇನ್ನು ಈ ವರ್ಷ ಮಹಿಳೆಯರು 1.1 ಮಿಲಿಯನ್​​ ದೀಪಗಳನ್ನು ತಯಾರಿಸಿದ್ದಾರೆ. ಈಗಾಗಲೇ ಹಲವು ಜಿಲ್ಲೆಗಳಿಗೆ ಸರಬರಾಜು ಮಾಡಲಾಗಿದೆ. ಅಮೆರಿಕಾದಿಂದ ಹೆಚ್ಚಿನ ಬೇಡಿಕೆ ಬರುತ್ತಿದೆ. ಅಂದಹಾಗೆಯೇ ಶೇ70ರಷ್ಟು ಹಸುವಿನ ಸಗಣಿ ಮತ್ತು ಶೇ30 ರಷ್ಟು ಮಣ್ಣು ಬಳಸಿ ಗೋಡೆ ಗಡಿಯಾರವನ್ನು ವಿನ್ಯಾಸ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಸುವಿನ ಸಗಣಿಯಿಂದ ತಯಾರಿಸಲಾದ ಗಡಿಯಾರವಿದು.. ವಿದೇಶದಲ್ಲಿ ಇದಕ್ಕೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

https://newsfirstlive.com/wp-content/uploads/2024/10/Cow-Dung-Clock.jpg

Load More