newsfirstkannada.com

×

PhDಗಾಗಿ ₹1 ಕೋಟಿಗೂ ಹೆಚ್ಚು ಖರ್ಚು.. ಹೇಳದೆ, ಕೇಳದೆ ಭಾರತೀಯ ವಿದ್ಯಾರ್ಥಿನ ತೆಗೆದು ಹಾಕಿದ ಆಕ್ಸ್‌ಫರ್ಡ್ ವಿವಿ

Share :

Published October 27, 2024 at 9:32pm

    ಯಾವುದೇ ಮುನ್ಸೂಚನೆ ನೀಡದೆ ತೆಗೆದು ಹಾಕಿದ ವಿವಿ

    ಭಾರತೀಯ ವಿದ್ಯಾರ್ಥಿನಿಗೆ ಮೋಸ ಮಾಡಿತಾ ಆಕ್ಸ್‌ಫರ್ಡ್?

    ಆಕ್ಸ್‌ಫರ್ಡ್ ವಿದ್ಯಾರ್ಥಿನಿ ಭಾರತದ ಯಾವ ರಾಜ್ಯದವರು..?

ನವದೆಹಲಿ: ಪಿಎಚ್‌ಡಿಗಾಗಿ ₹1 ಕೋಟಿಗೂ ಹೆಚ್ಚು ಖರ್ಚು ಮಾಡಿದ್ದ ಭಾರತೀಯ ವಿದ್ಯಾರ್ಥಿನಿ ಒಬ್ಬರನ್ನ ಲಂಡನ್​​ನ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ಬಲವಂತವಾಗಿ ಸ್ನಾತಕೋತ್ತರ ಹಂತದ ಪದವಿಗೆ ವರ್ಗಾವಣೆ ಮಾಡಿದೆ ಎಂದು ತಿಳಿದು ಬಂದಿದೆ.

ತಮಿಳುನಾಡು ಮೂಲದ ಲಕ್ಷ್ಮಿ ಬಾಲಕೃಷ್ಣನ್‌ ಎನ್ನುವ ವಿದ್ಯಾರ್ಥಿನಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್‌ನಲ್ಲಿ ಷೇಕ್ಸ್‌ಪಿಯರ್ ಸಂಶೋಧನೆಯನ್ನ ಸ್ವೀಕರಿಸಿ ಪಿಹೆಚ್​ಡಿ ಅಧ್ಯಯನ ಮಾಡುತ್ತಿದ್ದರು. ಆದರೆ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸಿಬ್ಬಂದಿ ಷೇಕ್ಸ್‌ಪಿಯರ್ ಸಂಶೋಧನೆಯು ಪಿಎಚ್‌ಡಿ ಮಟ್ಟದ ಕೆಲಸವಲ್ಲ ಎಂದು ಹೇಳಿ ಅವರನ್ನು ಪಿಹೆಚ್​ಡಿಯಿಂದ ತೆಗೆದು ಹಾಕಿದೆ. ಲಕ್ಷ್ಮಿ ಬಾಲಕೃಷ್ಣನ್​ರನ್ನ ಪಿಹೆಚ್​ಡಿಯಿಂದ 4ನೇ ವರ್ಷದ ಸ್ನಾತಕೋತ್ತರ ಪದವಿಗೆ ವರ್ಗಾವಣೆ ಮಾಡಲಾಗಿದೆ. ಆದರೆ ಈ ರೀತಿ ವರ್ಗಾವಣೆ ಮಾಡುವಾಗ ಯಾವುದೇ ಮನ್ಸೂಚನೆ ಕೊಟ್ಟಿಲ್ಲ. ಅಲ್ಲದೇ ಈ ಬಗ್ಗೆ ಲಕ್ಷ್ಮಿ ಬಾಲಕೃಷ್ಣನ್​ ಒಪ್ಪಿಗೆಯಿಲ್ಲದೆ ಸ್ನಾತಕೋತ್ತರ ಕೋರ್ಸ್‌ಗೆ ವರ್ಗಾಯಿಸಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ONGC; ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.. SSLC, PUC, ಐಟಿಐ ಸೇರಿ ಪದವೀಧರರಿಗೂ ಅವಕಾಶ

ಈ ಬಗ್ಗೆ ಮಾತನಾಡಿರುವ ವಿದ್ಯಾರ್ಥಿನಿ ಲಕ್ಷ್ಮಿ ಬಾಲಕೃಷ್ಣನ್‌ ಅವರು, ಈಗಾಗಲೇ ನಾನು ಭಾರತದಲ್ಲಿ ಎರಡು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದೇನೆ. ಹೀಗಾಗಿ ಪಿಹೆಚ್​ಡಿ ಮಾಡಬೇಕು ಎಂದು 1 ಕೋಟಿ ರೂಪಾಯಿಗೂ ಅಧಿಕ ಹಣ ಖರ್ಚು ಮಾಡಿ ಈ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡಿದ್ದೆ. ಆದರೆ ಇವರು ನನ್ನನ್ನು ಬಲವಂತವಾಗಿ ಪಿಹೆಚ್‌ಡಿ ಇಂದ ತೆಗೆದು ಹಾಕಿ, ನನ್ನ ಒಪ್ಪಿಗೆಯಿಲ್ಲದೆ ಸ್ನಾತಕೋತ್ತರ ಪದವಿಗೆ ವರ್ಗಾಯಿಸಿದ್ದಾರೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PhDಗಾಗಿ ₹1 ಕೋಟಿಗೂ ಹೆಚ್ಚು ಖರ್ಚು.. ಹೇಳದೆ, ಕೇಳದೆ ಭಾರತೀಯ ವಿದ್ಯಾರ್ಥಿನ ತೆಗೆದು ಹಾಕಿದ ಆಕ್ಸ್‌ಫರ್ಡ್ ವಿವಿ

https://newsfirstlive.com/wp-content/uploads/2024/10/oxford_university.jpg

Load More