/newsfirstlive-kannada/media/media_files/2025/10/30/gilli-6-2025-10-30-16-08-04.jpg)
ಬಿಗ್‌ಬಾಸ್ ಕ್ಯಾಂಪಸ್‌ನಲ್ಲಿ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳೋಕೆ ಎಲ್ಲರೂ ಯತ್ನ ಮಾಡ್ತಿದ್ರೆ ಗಿಲ್ಲಿ ಮಾತ್ರ ಡಿಬಾರ್ ಮಾಡಿ ಸರ್ ಎಂದು ಪ್ರಿನ್ಸಿಪಾಲ್ ಹಿಂದೆ ಬಿದ್ದಿದ್ದಾರೆ. ಯಾಕೆ ಹೀಗೆ..?
ಬಿಗ್‌ಬಾಸ್ ಮನೆಯಲ್ಲಿ ಈ ವಾರದ ಹೊಸ ಹೊಸ ಟಾಸ್ಕ್‌ಗಳಿಂದ ಕೆಲವು ಹೊಸ ಸ್ನೇಹ ಬೆಳೆದಿದೆ. ಇನ್ನೂ ಕೆಲವು ಗಾಢವಾದ ಸ್ನೇಹ ಅಂದುಕೊಂಡಿದ್ದದ್ದು ಕೂಡ ಕಡಿದು ಹೋಗಿದೆ. ಇದೀಗ ಹೊಸ ಟಾಸ್ಕ್ ನೀಡಿದ್ದು ತಮ್ಮ ತಾಕತ್ತಿನ ಬಗ್ಗೆ ಸ್ಪರ್ಧಿಗಳಿಗೆ ಹೇಳಲು ಸೂಚಿಸಲಾಗಿದೆ.
ಇದನ್ನೂ ಓದಿ: ಪತಿಯನ್ನೇ ಮುಗಿಸಲು ಪತ್ನಿ ಸ್ಕೆಚ್.. ಪಕ್ಕಾ ಸಿನಿಮೀಯ ಶೈಲಿಯಲ್ಲಿ ಪ್ಲಾನ್..!
/filters:format(webp)/newsfirstlive-kannada/media/media_files/2025/10/29/ashwini-and-jahnvi-1-2025-10-29-16-25-05.jpg)
ಈ ವೇಳೆ ಗಿಲ್ಲಿ ತಮ್ಮ ತಂಡದ 7 ಜನರು ಒಂದಾಗಿ ಒಬ್ಬರನ್ನು ಸ್ಟೂಡೆಂಟ್ ಆಫ್ ದಿ ವೀಕ್ ಅನ್ನಾಗಿ ಮಾಡಬೇಕು ಅಂದುಕೊಂಡಿದ್ದರೂ ತಾನೊಬ್ಬನೇ ತನ್ನ ಪರವಾಗಿ ಗಟ್ಟಿಯಾಗಿ ನಿಂತೆ. ಅದೇ ನಿಜವಾದ ಡೇರಿಂಗ್‌ನೆಸ್ ಅಂದ್ರೆ ಎಂದು ಹೇಳುತ್ತಾರೆ. ಅವರ ಬಳಿಕ ಮಾತನಾಡುವ ಅಶ್ವಿನಿ ಗೌಡ, ಅಶ್ವಿನಿ ಗೌಡ ಅಂದ್ರೇನೆ ತಾಕತ್ತು, ತಾಕತ್ತು ಅಂದ್ರೆ ಅಶ್ವಿನಿ ಗೌಡ ಎಂದು ಹೇಳುತ್ತಾರೆ.
ಅವರ ಈ ಮಾತನ್ನು ಕೇಳುತ್ತಿದ್ದಂತೆಯೇ ಪ್ರಿನ್ಸಿಪಾಲ್ ರಘು ಬಳಿ ಹೋಗೋ ಗಿಲ್ಲಿ ಡಿಬಾರ್ ಮಾಡಿ ಸರ್ ನನ್ನ ಬೇರೆ ಯಾವುದಾದರೂ ಕಾಲೇಜ್‌ಗೆ ಸೇರಿಕೊಳ್ತೀನಿ ಎಂದು ಹೇಳುತ್ತಾರೆ. ಗಿಲ್ಲಿಯ ಈ ಮಾತು ತಮಾಷೆಯಲ್ಲೇ ಮುಕ್ತಾಯವಾಗುತ್ತಾ ಅಥವಾ ಇನ್ಯಾವುದಾದರು ಹೊಸ ಕ್ಯಾತೆಗೆ ಕಾರಣವಾಗುತ್ತಾ ಅನ್ನೋದನ್ನು ಇವತ್ತಿನ ಬಿಗ್‌ಬಾಸ್ ಎಪಿಸೋಡ್‌ನಲ್ಲಿ ನೋಡಲೇಬೇಕು.
ಅಶ್ವಿನಿ ಗೌಡ ತಾಕತ್ತಿಗೆ ಸಿಂಗಲ್ ಸಿಂಹ ಗಿಲ್ಲಿ ಸವಾಲ್
— Colors Kannada (@ColorsKannada) October 30, 2025
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKSPpic.twitter.com/YGKc1rLw4e
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us