Advertisment

ಪತಿಯನ್ನೇ ಮುಗಿಸಲು ಪತ್ನಿ ಸ್ಕೆಚ್.. ಪಕ್ಕಾ ಸಿನಿಮೀಯ ಶೈಲಿಯಲ್ಲಿ ಪ್ಲಾನ್..!

ಹೆಂಡತಿ ಗಂಡನನ್ನ ನಂಬಂಗಿಲ್ಲ. ಗಂಡ ಹೆಂಡತಿಯನ್ನ ನಂಬಂಗಿಲ್ಲ. ಇವತ್ತಿನ ಕಾಲದಲ್ಲಿ ನಂಬಿಕೆ ಅನ್ನೋದೇ ಹೊರಟು ಹೋದಂತಿದೆ. ಯಾರು ಎಷ್ಟೊತ್ತಿಗೆ, ಯಾವಾಗ ಮುಹೂರ್ತ ಇಡ್ತಾರೋ ಅನ್ನೋದೇ ದೊಡ್ಡ ಆತಂಕವಾಗಿದೆ.

author-image
Ganesh Kerekuli
Mysore sangita
Advertisment

ಹೆಂಡತಿ ಗಂಡನನ್ನ ನಂಬಂಗಿಲ್ಲ. ಗಂಡ ಹೆಂಡತಿಯನ್ನ ನಂಬಂಗಿಲ್ಲ. ಇವತ್ತಿನ ಕಾಲದಲ್ಲಿ ನಂಬಿಕೆ ಅನ್ನೋದೇ ಹೊರಟು ಹೋದಂತಿದೆ. ಯಾರು ಎಷ್ಟೊತ್ತಿಗೆ, ಯಾವಾಗ ಮುಹೂರ್ತ ಇಡ್ತಾರೋ ಅನ್ನೋದೇ ದೊಡ್ಡ ಆತಂಕವಾಗಿದೆ. 

Advertisment

Mysore sangita (2)

ಇದಕ್ಕೆ ಸಾಕ್ಷಿ ಎನ್ನುವಂತೆ ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿ ಪ್ರಕರಣವೊಂದು ನಡೆದಿದೆ. ಗಂಡನ ಕೊ*ಲೆಗೆ ಪತ್ನಿ ಯೋಜನೆ ರೂಪಿಸಿ, ಆ ಪ್ಲಾನ್ ಫೇಲ್ ಆಗಿ ಪೊಲೀಸರಿಗೆ ಶರಣಾಗಿದ್ದಾಳೆ. 

ಯಾರು ಈಕೆ..? 

ಸಂಗೀತಾ ಗಂಡನ ಮುಗಿಸಲು ಪ್ಲಾನ್ ಮಾಡಿದ ಆರೋಪಿ. ಈಕೆ ಪತಿಯ ಜೀವ ತೆಗೆಯಲು ಸಹೋದರರನ್ನೇ ಬಳಸಿಕೊಂಡಿರುವ ಆರೋಪ ಇದೆ. ಪ್ರಕರಣ ಸಂಬಂಧ ಈಕೆಯ ಸಹೋದರ ಸಂಜಯ್, ಸಹೋದರನ ಸ್ನೇಹಿತ ವಿಘ್ನೇಶ್ ಹಾಗೂ ಓರ್ವ ಅಪ್ರಾಪ್ತ ಸೇರಿ ನಾಲ್ವರನ್ನು ನಂಜನಗೂಡು ಪೊಲೀಸರು ಬಂಧಿಸಿದ್ದಾರೆ. 

ಇದನ್ನೂ ಓದಿ: ಅಯ್ಯೋ ದೇವರೇ.. ನಾಳೆ ಮದುವೆ ಆಗಬೇಕಿದ್ದ ಯುವತಿ ದಾರುಣ ಸಾವು

Mysore sangita (1)

ಗಂಡನ ಹ*ತ್ಯೆಗೆ ದರೋಡೆ ಬಲೆ

ಸಂಗೀತಾ, ರಾಜೇಂದ್ರ ಎಂಬಾತನ ಮದುವೆ ಆಗಿದ್ದಳು. ಇಬ್ಬರ ಸಂಸಾರ ಆರಂಭದಲ್ಲಿ ಚೆನ್ನಾಗಿಯೇ ಇತ್ತು. ಕೆಲವು ತಿಂಗಳುಗಳಿಂದ ಕೌಟುಂಬಿಕ ಕಲಹ ಉಂಟಾಗಿತ್ತು. ಅದೇ ಕಾರಣಕ್ಕೆ ಸಂಗೀತಾ ಗಂಡನ ಮುಗಿಸಲು ಪ್ಲಾನ್ ಮಾಡಿದ್ದಾಳೆ. ಸಹೋದರನ ಜೊತೆ ಸೇರಿಕೊಂಡು ದರೋಡೆ ಪ್ಲಾನ್ ರೂಪಿಸಿ ಹತ್ಯೆ ಮಾಡಲು ನಿರ್ಧರಿಸಿದ್ದಳು. ಅದರಂತೆ ಅಕ್ಟೋಬರ್ 25 ರಂದು ರಾಜೇಂದ್ರ- ಸಂಗೀತಾ ಸ್ಕೂಟರ್​ನಲ್ಲಿ ತೆರಳುತ್ತಿದ್ದರು. 

Advertisment

ಸ್ಕೂಟರ್​ನಲ್ಲಿ ಹೋಗ್ತಿದ್ದಾಗ ಪ್ಲಾನ್ ಪ್ರಕಾರವೇ ದರೋಡೆ ಗ್ಯಾಂಗ್ ಎಂಟ್ರಿಯಾಗಿತ್ತು. ಸಂಗೀತಾಳ ಚಿನ್ನದ ಸರ ಕಸಿಯಲು ಪ್ರಯತ್ನಿಸುತ್ತಾರೆ. ಅದನ್ನು ತಡೆಯಲು ರಾಜೇಂದ್ರ ಮುಂದೆ ಬಂದಿದ್ದಾನೆ. ಆಗ ರಾಜೇಂದ್ರನಿಗೆ ಡ್ರ್ಯಾಗರ್​​ನಿಂದ ಓರ್ವ ಇರಿದಿದ್ದಾನೆ. ಅಷ್ಟೊತ್ತಿಗೆ ಬೇರೊಂದು ವಾಹನ ಬರುವ ಸದ್ದು ಕೇಳಿದೆ. ಗಾಬರಿಯಾದ ದರೋಡೆ ಗ್ಯಾಂಗ್ ಅಲ್ಲಿಂದ ಪರಾರಿ ಆಗಿತ್ತು.  

ಇದನ್ನೂ ಓದಿ: KKR​ ತಂಡದ ದುಬಾರಿ ಆಟಗಾರನ ಖರೀದಿಗೆ ಆರ್​ಸಿಬಿ ಡೀಲ್..! ಪ್ಲಾನ್ ಏನು?

Mysore sangita (3)

ಘಟನೆಯ ನಂತರ ರಾಜೇಂದ್ರ ನಂಜನಗೂಡು ಪೊಲೀಸರಿಗೆ ಮಾಹಿತಿ ನೀಡಿದ್ದ. ಪ್ರಕರಣವನ್ನು ಕುಲಂಕುಶವಾಗಿ ತನಿಖೆ ಮಾಡಿದಾಗ ಪೊಲೀಸರಿಗೆ ಒಂದಷ್ಟು ಅನುಮಾನ ಬಂದಿದೆ. ಕೊನೆಗೆ ತಮ್ಮದೇ ಶೈಲಿಯಲ್ಲಿ ಸಂಗೀತಾಳನ್ನ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಸತ್ಯ ಬೆಳಕಿಗೆ ಬಂದಿದೆ. 

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Mysore Mysore news
Advertisment
Advertisment
Advertisment