newsfirstkannada.com

×

ಅಮೆರಿಕಾದಲ್ಲಿ ಭಾರತೀಯ ಮೂಲದ ಉದ್ಯಮಿ ಬರ್ಬರ ಹತ್ಯೆ; ಸಿಸಿಟಿವಿಯಲ್ಲಿ ಹಂತಕನ ದೃಶ್ಯ ಸೆರೆ

Share :

Published February 10, 2024 at 11:58am

    ವಾಷಿಂಗ್ಟನ್ ಸ್ಟ್ರೀಟ್‌ನಲ್ಲಿ ಅಪರಿಚಿತ ವ್ಯಕ್ತಿಯಿಂದ ಮಾರಣಾಂತಿಕ ಹಲ್ಲೆ

    ಉದ್ಯಮಿಯ ತಲೆಯನ್ನು ಪಾದಚಾರಿ ಮಾರ್ಗದ ಮೇಲೆ ಚಚ್ಚಿದ ಹಂತಕ

    ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ದಾಖಲಾಗಿದ್ದ ಉದ್ಯಮಿ ವಿವೇಕ್ ತನೇಜಾ

ವಾಷಿಂಗ್ಟನ್‌: ಅಮೆರಿಕಾದಲ್ಲಿ ಭಾರತೀಯರ ಸಾವಿನ ಸರಣಿ ಮುಂದುವರಿದಿದೆ. ಸಾಲು, ಸಾಲು ಭಾರತೀಯ ವಿದ್ಯಾರ್ಥಿಗಳ ಹತ್ಯೆಯ ಬೆನ್ನಲ್ಲೇ ಮತ್ತೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ವಾಷಿಂಗ್ಟನ್ ಸ್ಟ್ರೀಟ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಭಾರತೀಯ ಮೂಲದ ಉದ್ಯಮಿಯ ಮೇಲೆ ಹಲ್ಲೆ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ವಿವೇಕ್ ತನೇಜಾ ಸಾವನ್ನಪ್ಪಿದ್ದಾರೆ.

ಭಾರತೀಯ ಮೂಲದ 41 ವರ್ಷದ ಉದ್ಯಮಿ ವಿವೇಕ್ ತನೇಜಾ ಅವರು ಅಮೆರಿಕಾದ ವರ್ಜೀನಿಯಾದಲ್ಲಿ ನೆಲೆಸಿದ್ದರು. ಕಳೆದ ಫೆಬ್ರವರಿ 2ರಂದು ಇವರು ಜಪಾನೀಸ್ ರೆಸ್ಟೋರೆಂಟ್‌ಗೆ ತೆರಳಿದ್ದಾರೆ. ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ವಿವೇಕ್ ತನೇಜಾ ಮೇಲೆ ಅಪರಿಚಿತ ವ್ಯಕ್ತಿ ಹಲ್ಲೆ ಮಾಡಿದ್ದಾರೆ. ವಿವೇಕ್ ಅವರನ್ನು ನೆಲಕ್ಕೆ ಬಡಿದು, ಪಾದಚಾರಿ ಮಾರ್ಗದ ಮೇಲೆ ತಲೆಯನ್ನು ಚಚ್ಚಿದ್ದಾನೆ.

ಇದನ್ನೂ ಓದಿ: ಒಬ್ಬರಾದ ಮೇಲೆ ಮತ್ತೊಬ್ಬರು.. ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಾವಿಗೆ ಕಾರಣವೇನು?

ಗಂಭೀರವಾಗಿ ಹಲ್ಲೆಗೊಳಗಾದ ವಿವೇಕ್ ತನೇಜಾ ಅವರನ್ನು ಆಸ್ಪತ್ರೆಗೆ ಸಾಗಿಸಲಾದ್ರೂ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಸಿಸಿಟಿವಿಯಲ್ಲಿ ಹಲ್ಲೆ ಮಾಡಿದವನ ಗುರುತು ಪತ್ತೆಯಾಗಿದ್ದು ಪೊಲೀಸರು ಶಂಕಿತ ವ್ಯಕ್ತಿಯ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಇತ್ತೀಚೆಗೆ ಅಮೆರಿಕಾದಲ್ಲಿ ನಡೆಯುತ್ತಿರುವ ಭಾರತೀಯರ ಬರ್ಬರ ಹತ್ಯೆಗಳು ಬೆಚ್ಚಿ ಬೀಳಿಸುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮೆರಿಕಾದಲ್ಲಿ ಭಾರತೀಯ ಮೂಲದ ಉದ್ಯಮಿ ಬರ್ಬರ ಹತ್ಯೆ; ಸಿಸಿಟಿವಿಯಲ್ಲಿ ಹಂತಕನ ದೃಶ್ಯ ಸೆರೆ

https://newsfirstlive.com/wp-content/uploads/2024/02/American-Indian-Death.jpg

Load More