newsfirstkannada.com

ವರನ ಕಡೆಯವ್ರಿಗೆ ಸ್ವೀಟ್ ಕೊಡದ್ದಕ್ಕೆ ಕಿರಿಕ್‌.. ಮುರಿದು ಬಿದ್ದ ಮದುವೆ; ವಧು ಮಾಡಿದ್ದೇನು ಗೊತ್ತಾ?

Share :

Published May 6, 2024 at 6:00pm

  ರಾತ್ರೋ ರಾತ್ರಿ ಉಂಗುರ ಕೊಟ್ಟು ನನಗೆ ಮದುವೆ ಬೇಡವೆಂದ ವರ

  ಕನ್ವೆನ್ಷನ್‌ ಹಾಲ್‌ನಲ್ಲಿ ದೊಡ್ಡ ಹೈಡ್ರಾಮಾ, ಸ್ಥಳಕ್ಕೆ ಬಂದ ಪೊಲೀಸರು

  ವಧುವಿನ ಕಡೆಯವರು, ವರನ ಕಡೆಯವ್ರಿಗೆ ಸಿಹಿತಿಂಡಿ ಕೊಡಲಿಲ್ಲವೇ?

ಕೊಡಗು: ಊಟದಲ್ಲಿ ಸಿಹಿ ತಿಂಡಿ ನೀಡಿಲ್ಲವೆಂದು ನೆಪ ಹೇಳಿ ನವವರನೊಬ್ಬ ಮದುವೆ ಮುರಿದುಕೊಂಡ ಘಟನೆ ಸೋಮವಾರಪೇಟೆಯ ಜಾನಕಿ ಕನ್ವೆನ್ಷನ್‌ ಹಾಲ್‌ನಲ್ಲಿ ನಡೆದಿದೆ.‌ ಈ ಸಂಬಂಧ ವರನ ಕುಟುಂಬದ ವಿರುದ್ಧ ವಧುವಿನ ಪೋಷಕರು ಆರೋಪ ಮಾಡಿದ್ದಾರೆ.

ಸೋಮವಾರಪೇಟೆಯ ಜಾನಕಿ ಕನ್ವೆನ್ಷನ್‌ ಹಾಲ್‌ನಲ್ಲಿ ಹಾನಗಲ್ಲು ಗ್ರಾಮದ ಸಿದ್ಧಾರ್ಥ ಬಡಾವಣೆ ಯುವತಿ ಹಾಗೂ ತುಮಕೂರಿನ ಯುವಕನ ಮದುವೆ ಅದ್ಧೂರಿಯಾಗಿ ನಡೆಸಲಾಗುತ್ತಿತ್ತು. ಇದಕ್ಕಾಗಿ ತುಮಕೂರಿನಿಂದ ಸೋಮವಾರಪೇಟೆಯ ಮಂಟಪಕ್ಕೆ ಆಗಮಿಸಿದ್ದ ವರನ ಕಡೆಯವರು, ಮದುವೆಯ ಹಿಂದಿನ ದಿನ ಚಪ್ಪರ ಶಾಸ್ತ್ರದ ವೇಳೆ ಊಟದಲ್ಲಿ ಸಿಹಿತಿಂಡಿ ನೀಡಿಲ್ಲ ಎಂದು ಸಣ್ಣ ಗಲಾಟೆ ಮಾಡಿದ್ದಾರೆ.

ಇದನ್ನೂ ಓದಿ: 120-130 ವರ್ಷ ಜೀವಿಸಬಹುದು.. ವಯಸ್ಸು ಜಾಸ್ತಿ ಮಾಡೋ ಔಷಧ ಸಂಶೋಧನೆ; ವಿಜ್ಞಾನಿಗಳು ಹೇಳಿದ್ದೇನು?

ಇದನ್ನೂ ಓದಿ: ಭವಾನಿ ರೇವಣ್ಣಗೂ ಕಾದಿದೆಯಾ ಸಂಕಷ್ಟ.. JDS ಮುಖಂಡರ ಜೊತೆ​ ಮಹತ್ವದ ಚರ್ಚೆ

ಮದುವೆಗೂ ಮೊದಲೇ ಚಿನ್ನ ಹಾಗೂ ಬೆಂಗಳೂರಿನಲ್ಲಿ ಸೈಟ್ ಅನ್ನು ವರದಕ್ಷಿಣೆಯಾಗಿ ಕೊಡುವಂತೆ ವರನ ಕಡೆಯವರು ಒತ್ತಾಯ ಮಾಡುತ್ತಿದ್ದರು. ಆದರೆ ಇದನ್ನು ಕೊಡಲು ವಧುವಿನ ಪೋಷಕರು ನಿರಾಕಣೆ ಮಾಡಿದ್ದರು. ಇದನ್ನೇ ಅಸ್ತ್ರವಾಗಿ ಪ್ರಯೋಗಿಸಿದ ವರ ಊಟದಲ್ಲಿ ಸಿಹಿತಿಂಡಿ ಕೊಟ್ಟಿಲ್ಲವೆಂದು ನೆಪ ಹೇಳಿ ಗಲಾಟೆ ತೆಗೆದಿದ್ದಾನೆ. ಹಾಕಿದ್ದ ಉಂಗುರವನ್ನು ರಾತ್ರೋ ರಾತ್ರಿ ಬಿಚ್ಚಿಕೊಟ್ಟು ನನಗೆ ಮದುವೆ ಬೇಡ ಅಂತ ಹೇಳಿ ಹೋಗಿದ್ದಾನೆ ಎಂದು ವಧುವಿನ ಪೋಷಕರು ಆರೋಪಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗರಿಗೆ ಗುಡ್‌ನ್ಯೂಸ್‌.. ವಾರವಿಡೀ ಮತ್ತೆ ಮಳೆರಾಯನ ಅಬ್ಬರ; ಎಲ್ಲಿ? ಯಾವಾಗ?

2024ರ ಮೇ 5ರಂದು ನಿಶ್ಚಯವಾಗಿದ್ದ ಮದುವೆ ಸದ್ಯ ಮುರಿದು ಬಿದ್ದಿದ್ದು ಪ್ರಕರಣ ಪೊಲೀಸ್‌ ಠಾಣೆಯ ಮೆಟ್ಟಿಲೇರಿದೆ. ಈ ಘಟನೆಯಿಂದ ಬೇಸತ್ತಿರುವ ವಧು ಕೂಡ ನನಗೂ ವಿವಾಹ ಬೇಡವೆಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವರನ ಕಡೆಯವ್ರಿಗೆ ಸ್ವೀಟ್ ಕೊಡದ್ದಕ್ಕೆ ಕಿರಿಕ್‌.. ಮುರಿದು ಬಿದ್ದ ಮದುವೆ; ವಧು ಮಾಡಿದ್ದೇನು ಗೊತ್ತಾ?

https://newsfirstlive.com/wp-content/uploads/2024/05/KDG_MADUVE.jpg

Load More