/newsfirstlive-kannada/media/post_attachments/wp-content/uploads/2024/09/darshan-4.jpg)
ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್​​ ಬಳ್ಳಾರಿ ಜೈಲಿನಲ್ಲಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಗೆ ಶಿಫ್ಟ್​ ಆಗಿ 16ಕ್ಕೂ ಹೆಚ್ಚು ದಿನಗಳನ್ನು ಕಳೆದಿದ್ದಾರೆ. ಸದ್ಯ ಸೆರೆಮನೆ ವಾಸ ಮಾಡುತ್ತಿರುವ ದರ್ಶನ್​ಗೆ ಅಪರಿಚಿತ ವ್ಯಕ್ತಿಯೊಬ್ಬರು ಹನುಮಾನ್​ ಚಾಲೀಸ ಪುಸ್ತಕ ಕಳುಹಿಸಿಕೊಟ್ಟಿದ್ದರು. ಓದಿ ಮನೆ ಪರಿವರ್ತನೆ ಮಾಡಿಕೊಳ್ಳಿ ಎಂದು ಅದರಲ್ಲಿ ತಿಳಿಸಿದ್ದರು. ಆದರೆ ಇದೀಗ ದರ್ಶನ್​ಗೆ ಪತ್ರವೊಂದು ಬಂದಿದೆ.
​ಬಳ್ಳಾರಿ ಜೈಲಿನಲ್ಲಿರುವ ದರ್ಶನ್​ಗೆ ಕಾಗದ ಬಂದಿದೆ. ಬೆಂಗಳೂರಿನ ವಕೀಲರ ಮೂಲಕ ಈ ಲೇಟರ್ ಬಂದಿದೆ. ನಿನ್ನೆ ಸಂಜೆ ವೇಳೆ ಕೋರಿಯರ್ ಮೂಲಕ ದರ್ಶನ್​ಗೆ ಲೆಟರ್​ ಕಳುಹಿಸಲಾಗಿದೆ. ನಾಳೆ ಕೋರ್ಟ್ ವಿಚಾರಣೆ ಹಿನ್ನಲೆ ವಕೀಲರ ಮೂಲಕ ಲೇಟರ್ ಕಳುಹಿಸಲಾಗಿದೆ.
ಇದನ್ನೂ ಓದಿ: ಗಿಚ್ಚಿ ಗಿಲಿಗಿಲಿ ಗೆದ್ದ ಹುಲಿ ಕಾರ್ತಿಕ್, ರನ್ನರ್-ಅಪ್ ಯಾರು? ಸಿಕ್ಕ ಹಣವೆಷ್ಟು?
ನಿನ್ನೆ ಹೈ ಸೆಕ್ಯುರಿಟಿ ಸೆಲ್‌ನಲ್ಲಿ ಇರುವ ಜೈಲಾಧಿಕಾರಿಗಳು ಲೇಟರ್ ತಲುಪಿಸಿದ್ದಾರೆ. ಒಟ್ಟಿನಲ್ಲಿ ನಾಳೆ ರೇಣುಕಾಸ್ವಾಮಿ A2 ಕೊಲೆ ಆರೋಪಿ ವಿಚಾರಣೆ ಎದುರಿಸಲಿದ್ದಾರೆ.
ಇದನ್ನೂ ಓದಿ: ಇಂದಿಗೆ ಮುನಿರತ್ನ ಕಸ್ಟಡಿ ಅಂತ್ಯ, ಮುಂದೇನು ಕತೆ? ಪೊಲೀಸರ ಮುಂದೆ ಶಾಸಕ ತೋಡಿಕೊಂಡ ಅಳಲೇನು?
ಸದ್ಯ ದರ್ಶನ್​ ಬಳ್ಳಾರಿ ಜೈಲಿನಲ್ಲಿ ಟೈಂ ಪಾಸ್​ ಆಗದೆ ಪರದಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಅತ್ತ ಟಿವಿಯೂ ಸಿಗದೆ ತಲೆಕೆಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಮಂಗಳವಾರದಂದು ಟಿವಿ ರಿಪೇರಿಯಾಗಿ ದರ್ಶನ್​ ಸೆಲ್​ನಲ್ಲಿ ಅಳವಡಿಸಲಿದ್ದಾರೆ ಎನ್ನಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us