ಹೆಂಡತಿಗೆ ರೀಲ್ಸ್‌ ಹುಚ್ಚು.. ಉಡುಪಿಯಲ್ಲಿ ಗಂಡನಿಂದ ಕೊಲೆಯಾದ ಪತ್ನಿ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಅಸಲಿಗೆ ಆಗಿದ್ದೇನು?

author-image
admin
Updated On
ಹೆಂಡತಿಗೆ ಮೊಬೈಲ್‌, ರೀಲ್ಸ್ ಹುಚ್ಚು.. ಕೊಲೆ ಮಾಡಿ ಮನೆಯಲ್ಲೇ ಕೂತಿದ್ದ ಗಂಡ; ಆಮೇಲೇನಾಯ್ತು?
Advertisment
  • ರೀಲ್ಸ್, ರೀಲ್ಸ್ ಅಂತಿದ್ದ ಹೆಂಡತಿಯನ್ನು ಕೊಲೆ ಮಾಡಿದ್ನಾ ಗಂಡ?
  • ಮನೆಯಲ್ಲಿ ಮೊಬೈಲ್‌ ಗೀಳಿನಿಂದ ಪತಿ, ಪತ್ನಿ ನಡುವೆ ಆಗಾಗ ಜಗಳ
  • ಬೀದರ್ ಮೂಲದ ಯುವತಿಯನ್ನು ಮದುವೆಯಾಗಿದ್ದ ಆರೋಪಿ ಕಿರಣ್

ಸದಾ ಮೊಬೈಲ್​​ನಲ್ಲಿ ಬ್ಯುಸಿ ಇರುತ್ತಿದ್ದ ಹೆಂಡತಿಯನ್ನು ಗಂಡನೇ ಕೊಲೆ ಮಾಡಿರುವ ಪ್ರಕರಣ ಉಡುಪಿಯಲ್ಲಿ ಬೆಚ್ಚಿ ಬೀಳಿಸಿದೆ. ಪತ್ನಿ ಜಯಶ್ರೀಯನ್ನು ಕೊಚ್ಚಿ ಕೊಲೆ ಮಾಡಿರುವ ಗಂಡ ಕಿರಣ್ ಮನೆಯಲ್ಲೇ ಕೂತಿದ್ದ. ಮೊಬೈಲ್‌ನಲ್ಲಿ ರೀಲ್ಸ್, ರೀಲ್ಸ್ ಅಂತಿದ್ದ ಹೆಂಡತಿಯನ್ನು ಗಂಡನೇ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ತುಂಡಾಗಿದ್ದ ಕೈಯನ್ನು ಜೋಡಿಸುವಲ್ಲಿ ಯಶಸ್ವಿಯಾದ ಶಿವಮೊಗ್ಗ ವೈದ್ಯರು; ಆಪರೇಷನ್‌ ನಡೆದಿದ್ದೇ ರೋಚಕ!

ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಕಾರ್ಕಡದಲ್ಲಿ ಈ ಘಟನೆ ನಡೆದಿದೆ. ರೀಲ್ಸ್ ಪ್ರೇಮಿಯಾಗಿದ್ದ ಜಯಶ್ರೀ ಯಾವಾಗಲೂ ಮೊಬೈಲ್‌ನಲ್ಲಿ ಬ್ಯುಸಿ ಇರುತ್ತಿದ್ದಳಂತೆ. ಇದೇ ಕಾರಣಕ್ಕೆ ಪತಿ ಕಿರಣ್​ನಿಂದ ಪತ್ನಿ ಜಯಶ್ರೀಯ ಬರ್ಬರ ಹತ್ಯೆ ಎನ್ನಲಾಗಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

publive-image

ಕಿರಣ್ ಹಾಗೂ ಜಯಶ್ರೀ ಬ್ರಹ್ಮಾವರ ತಾಲೂಕಿನ ಕಾರ್ಕಡ ಅಂಗನವಾಡಿ ಕೇಂದ್ರದ ಸಮೀಪದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮೃತ ಜಯಶ್ರೀ ಅವರು ಬೀದರ್ ಜಿಲ್ಲೆಯ ದೊಣಗಪುರ ಮೂಲದವರು. ಜಯಶ್ರೀ ಪತಿ ಕಿರಣ್, ಗುರು ನರಸಿಂಹ ದೇವಸ್ಥಾನದಲ್ಲಿ ಕಳೆದ ಎರಡು ವರ್ಷದಿಂದ ಅಡುಗೆ ಕೆಲಸ ಮಾಡುತ್ತಿದ್ದ. ಕಳೆದ 2-3 ತಿಂಗಳ ಹಿಂದೆ ತಾರನಾಥ್ ಅವರ ಮನೆ ಬಾಡಿಗೆಗೆ ಪಡೆದಿದ್ದ.

ಇದನ್ನೂ ಓದಿ: ರೇಣುಕಾಸ್ವಾಮಿ ಪ್ರಜ್ಞೆ ತಪ್ಪಿ ಬಿದ್ದ ಮೇಲೂ ಕರೆಂಟ್‌ ಶಾಕ್? FSL ರಿಪೋರ್ಟ್‌ನಲ್ಲಿ ಸ್ಫೋಟಕ ಅಂಶಗಳು; ಏನದು?

ರೀಲ್ಸ್ ಮಾಡೋ ಹುಚ್ಚು ಇದ್ದ ಜಯಶ್ರೀ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಡಿಯೋಗಳನ್ನು ಪೋಸ್ಟ್‌ ಮಾಡಿದ್ದರು. ಪತ್ನಿಯ ಈ ಮೊಬೈಲ್‌ ಗೀಳು ಪತಿ, ಪತ್ನಿಯ ನಡುವೆ ಆಗಾಗ ಜಗಳಕ್ಕೆ ಕಾರಣವಾಗಿತ್ತು. ಗಂಡ, ಹೆಂಡತಿ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಅದು ಕೊಲೆಯಲ್ಲಿ ಅಂತ್ಯವಾಗಿರೋ ಅನುಮಾನ ವ್ಯಕ್ತವಾಗಿದೆ.

publive-image

ಪೊಲೀಸರು ಹೇಳಿದ್ದೇನು?
ಜಯಶ್ರೀ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನೆ ರಾತ್ರಿ ಗಂಡ ಮತ್ತು ಹೆಂಡತಿ ನಡುವೆ ಜಗಳ ನಡೆದಿತ್ತು. ಪತಿ-ಪತ್ನಿಯ ಈ ಜಗಳ ಅಕ್ಕಪಕ್ಕದ ಮನೆಯವರ ಗಮನಕ್ಕೂ ಬಂದಿತ್ತು. ಬೆಳಗಿನ ಜಾವ ಗಾಯಗೊಂಡಿದ್ದ ಹೆಂಡತಿಯನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಆ್ಯಂಬುಲೆನ್ಸ್‌ನಲ್ಲಿ ಹೆಂಡತಿಯನ್ನು ರವಾನಿಸುವಾಗ ಪೊಲೀಸ್ ಠಾಣೆಗೆ ಮಾಹಿತಿ ಸಿಕ್ಕಿದೆ.

publive-image

ತನಿಖೆಯಲ್ಲಿ ಪತಿಯೇ ಪತ್ನಿಯನ್ನು ಕೊಲೆಗೈದಿರುವುದು ಗಮನಕ್ಕೆ ಬಂದಿದೆ. ಕೋಟ ಪೊಲೀಸರು ಆರೋಪಿ ಕಿರಣ್ ಅನ್ನು ಬಂಧಿಸಿದ್ದಾರೆ. ಮೃತ ಜಯಶ್ರೀ ಕುಟುಂಬದವರಿಗೆ ಕೊಲೆಯ ಬಗ್ಗೆ ಮಾಹಿತಿ ರವಾನಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಾ.ಅರುಣ್ ಕುಮಾರ್ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment