ಮಗು ಪ್ರಾಣ ಬಿಟ್ಟಿದ್ರೆ ಇತ್ತ ತಂದೆ-ತಾಯಿ ಜೀವನ್ಮರಣ ಹೋರಾಟ
ಮಗುವನ್ನ ಕಳ್ಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ
ಯಾರೋ ಮಾಡಿದ ತಪ್ಪಿಗೆ ದಾರುಣ ಅಂತ್ಯ ಕಂಡ ಪುಟ್ಟ ಕಂದಮ್ಮ
ಮೈಸೂರು: ಬದುಕು ನೀರ ಮೇಲಿನ ಗುಳ್ಳೆ. ಯಾರು ಯಾವಾಗ ಹುಟ್ಟುತ್ತಾರೆ. ಯಾರ ಅಂತ್ಯ ಹೇಗೆ ಆಗುತ್ತೆ ಅನ್ನೋದು ಎಂದೆಂದಿಗೂ ನಿಗೂಢ. ಅದ್ರಂತೆ ತಾಯಿಯ ಮಡಿಲಲ್ಲಿದ್ದ ಪುಟ್ಟ ಕಂದಮ್ಮ ಯಾರೋ ಮಾಡಿದ ತಪ್ಪಿಗೆ ದಾರುಣ ಅಂತ್ಯ ಕಂಡಿದೆ.
ಈ ಮಗುವಿನ ಹೆಸರು ಲಿಖೇಶ್. ಎಂಥಾ ನೋವನ್ನೂ ಮರೆಸುವ ಈ ಮುಗ್ಧ ನಗು. ಕೃಷ್ಣನ ಅವತಾರದಲ್ಲಿ ಆಡಿದ್ದ ತುಂಟಾಟ. ಅಜ್ಜಿಯ ಜೊತೆಗೆ ತೊದಲು ನುಡಿಯನ್ನಾಡುತ್ತಾ ಇದ್ದ ಮಗು. ಆದ್ರೆ ಇವತ್ತು ಈ ಮಗುವಿನ ನಗುವನ್ನ ಸಹಿಸದ ಜವರಾಯ ಕಾರಿನ ರೂಪದಲ್ಲಿ ಬಂದು ಮಗುವಿನ ಪ್ರಾಣಪಕ್ಷಿಯನ್ನೇ ತೆಗೆದುಕೊಂಡು ಹೋಗಿದ್ದಾನೆ.
ಮೈಸೂರು ಹೊರವಲಯದ ಇಲವಾಲ ಸಮೀಪದಲ್ಲಿ ಈ ದಾರುಣ ಘಟನೆ ನಡೆದಿದೆ. ವೇಗವಾಗಿ ಹಿಂಬದಿಯಿಂದ ಬಂದ ಕಾರು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ರಕ್ತಸ್ರಾವದಿಂದ ಮಗು ಸ್ಥಳದಲ್ಲೇ ಪ್ರಾಣ ಬಿಟ್ಟಿದೆ. ಕಳೆದ ತಿಂಗಳಷ್ಟೆ ಮೊದಲನೇ ವರ್ಷದ ಹುಟ್ಟುಹಬ್ಬವನ್ನ ಆಚರಿಸಿಕೊಂಡ ಈ ಕಂದಮ್ಮನ ಪ್ರಾಣಪಕ್ಷಿ ಹಾರಿ ಹೋಗಿದೆ.
ಇದನ್ನೂ ಓದಿ: ಐ ಆ್ಯಮ್ ಸಾರಿ.. ದಿಲ್ ಸೆ ಸೋ ಸಾರಿ; ಕನ್ನಡಿಗರನ್ನು ಕೆಣಕಿದ ನಾರ್ಥ್ ಇಂಡಿಯಾ ನಾರಿಗೆ ಏನಾಯ್ತು? VIDEO
ಮಗು ಪ್ರಾಣ ಬಿಟ್ಟಿದ್ರೆ ಇತ್ತ ತಾಯಿ ಜೀವನ್ಮರಣ ಹೋರಾಟ ಮಾಡುತ್ತಾ ಐಸಿಯುನಲ್ಲಿದ್ದರೆ ತಂದೆ ಸ್ಥಿತಿ ಅತಂತ್ರವಾಗಿದೆ. ಪುತ್ತೂರಿನ ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡ್ತಿದ್ದ ಅಭಿಷೇಕ್ ಮತ್ತು ದಿವ್ಯ ವಾರಕ್ಕೊಮ್ಮೆ ಬಂದು ಮಗುವನ್ನ ನೋಡ್ಕೊಂಡ್ ಹೋಗ್ತಿದ್ರು. ದಿವ್ಯಾ ತಾಯಿ ಮಗು ಲಿಖೇಶ್ನನ್ನ ನೋಡಿಕೊಳ್ತಿದ್ರು. ಆದ್ರೆ ಈಗ ಈ ಅಪಘಾತದಲ್ಲಿ ಮಗುವನ್ನ ಕಳ್ಕೊಂಡ ದಿವ್ಯಾ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ಬಿಗ್‌ಬಾಸ್ ಸೀಸನ್ 11: ಶೋಗೂ ಮೊದಲೇ 5 ಸ್ಪರ್ಧಿಗಳ ಹೆಸರು ಫೈನಲ್! ಸ್ವರ್ಗಕ್ಕೆ ಯಾರು? ನರಕಕ್ಕೆ ಯಾರು?
ಘಟನೆಗೆ ಕಾರಣವಾದ ಕಾರು ಚಾಲಕ ಘಟನೆಯಾಗ್ತಿದ್ದಂತೆ ಕಾರನ್ನ ಅಲ್ಲೇ ಬಿಟ್ಟು ಓಡಿ ಹೋಗಿದ್ದಾನೆ. ಇಲವಾಲ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಚಾಲಕನ ಪತ್ತೆಗೆ ಮುಂದಾಗಿದ್ದಾರೆ. ಆದರೆ ತನ್ನದಲ್ಲದ ತಪ್ಪಿಗೆ ಬಾರದೂರಿಗೆ ಹೊರಟ ಪುಟ್ಟ ಕಂದಮ್ಮನ ಸಾವು ದುರಂತವಲ್ಲದೇ ಬೇರೇನೂ ಅಲ್ಲ. ಆ ಮಗು ಕಳೆದುಕೊಂಡು ಆಸ್ಪತ್ರೆ ಐಸಿಯುನಲ್ಲಿರುವ ತಾಯಿಯ ರೋಧನ ನಿಜಕ್ಕೂ ಹೇಳತೀರದು. ಆ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿನೀಡಲಿ ಅಂತ ಬೇಡಿಕೊಳ್ಳುವುದರ ಜೊತೆಗೆ ಹೇ, ವಿಧಿ ನೀನೆಷ್ಟು ಕ್ರೂರಿ ಅಂತ ಶಪಿಸದೆ ನಮಗೂ ಬೇರೇನೂ ಉಳಿದಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ