newsfirstkannada.com

ದರ್ಶನ್‌ಗೆ ವಿಡಿಯೋ ಕಾಲ್‌ ಮಾಡಿದ ಸೀಕ್ರೆಟ್ ಬಯಲು.. ಬಿಲ್ಡಪ್ ಕೊಟ್ಟು ಸಿಕ್ಕಿಬಿದ್ದಿದ್ದೇ ರೋಚಕ ಸತ್ಯ!

Share :

Published August 25, 2024 at 11:11pm

    ವಿಡಿಯೋ ಕಾಲ್‌ನಲ್ಲಿ ಕಾಣಿಸಿಕೊಂಡ ರೌಡಿಶೀಟರ್‌ ಯಾರು ಗೊತ್ತಾ?

    ಕಲಾಸಿಪಾಳ್ಯದ ಕೆಲ ಹುಡುಗರಿಗೂ ವಿಡಿಯೋ ಕಳಿಸಿದ್ದ ರೌಡಿ ಸತ್ಯ!

    ದರ್ಶನ್ ನಮ್ಮ ಸೆಲ್ ಪಕ್ಕದಲ್ಲೇ ಇರೋದು ರಿಯಲ್ ರೌಡಿ ‘ಧರ್ಮ’

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಂಧನದಲ್ಲಿರುವ ನಟ ದರ್ಶನ್ ಅವರಿಗೆ ಜೈಲಿನಿಂದಲೇ ವಿಡಿಯೋ ಕಾಲ್ ಮಾಡಿದ ಸುದ್ದಿ ತೀವ್ರ ಸಂಚಲನ ಸೃಷ್ಟಿಸಿದೆ. ಜೈಲಿಂದಲೇ ವಿಡಿಯೋ ಕಾಲ್‌ನಲ್ಲಿ ದರ್ಶನ್ ಕಾಣಿಸಿಕೊಂಡ ವಿಡಿಯೋ ಲೀಕ್ ಆಗಿದ್ದು ಹೊಸ, ಹೊಸ ಚರ್ಚೆಗೆ ಗುರಿಯಾಗಿದೆ.

ಇದನ್ನೂ ಓದಿ: ಎಣ್ಣೆ ಮುಟ್ಟಲ್ಲ, ಧಮ್‌ ಹೊಡೆಯಲ್ಲ.. ದರ್ಶನ್‌ ಪಕ್ಕದಲ್ಲಿರೋ ವಿಲ್ಸನ್ ಗಾರ್ಡನ್ ನಾಗನಿಗಿದೆ 20 ವರ್ಷದ ರಕ್ತ ಚರಿತ್ರೆ! 

ಕೊಲೆ ಆರೋಪಿ ದರ್ಶನ್ ಜೈಲಿನ ಬ್ಯಾರಕ್‌ನಲ್ಲಿರುವಾಗ ವಿಡಿಯೋ ಕಾಲ್ ಮಾಡಿದ್ದು ಹೇಗೆ? ವಿಡಿಯೋ ಕಾಲ್‌ನಲ್ಲಿ ಕಾಣಿಸಿಕೊಂಡ ವ್ಯಕ್ತಿ ಯಾರು ಅನ್ನೋ ರಹಸ್ಯ ಇದೀಗ ಬಯಲಾಗಿದೆ. ದರ್ಶನ್ ವಿಡಿಯೋ ಕಾಲ್‌ನಲ್ಲಿ ಇರೋನು ಒಬ್ಬ ರೌಡಿಶೀಟರ್ ಮಗ. ಬ್ಯಾಡರಹಳ್ಳಿ ರೌಡಿಶೀಟರ್ ಜಾನಿ ಅಲಿಯಾಸ್‌ ಜನಾರ್ದನ್ ಅವರ ಮಗ ಸತ್ಯ ಎನ್ನಲಾಗಿದೆ.

ಜೈಲಿನಿಂದ ವಿಡಿಯೋ ಕಾಲ್ ಮಾಡಿ ದರ್ಶನ್‌ಗೆ ತೋರಿಸಿರೋದು ಕೂಡ ಒಬ್ಬ ರೌಡಿಶೀಟರ್. ಅವನ ಹೆಸರು ಧರ್ಮ. ಧರ್ಮ, ಕಳೆದ ಮೇ 07ರಂದು ಬಾಣಸವಾಡಿಯ ಕಾರ್ತಿಕೇಯನ್ ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿ ಜೈಲಿನಲ್ಲಿದ್ದಾನೆ.

ದರ್ಶನ್ ಹಾಗೂ ರೌಡಿಶೀಟರ್ ಜಾನಿ ಅಲಿಯಾಸ್‌ ಜನಾರ್ದನ್ ಅವರ ಮಗ ಸತ್ಯ

ಜಾನಿ ಮಗ ಸತ್ಯ ಕೂಡ ಇತ್ತೀಚೆಗೆ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ಮಾಡಿ ಜೈಲಿಗೆ ಹೋಗಿ ಬಂದಿದ್ದ. ಉಲ್ಟಾ ಮಚ್ಚಲ್ಲಿ ಕೆಎಲ್‌ಇ‌ ಕಾಲೇಜಿನ ವಿದ್ಯಾರ್ಥಿಗಳಿಗೆ ಸತ್ಯ ಹೊಡೆದಿದ್ದ ಸತ್ಯ. ಜೈಲಿಗೆ ಹೋಗಿ ಸದ್ಯ ಬೇಲ್ ಮೇಲೆ ಸತ್ಯ ಹೊರಗೆ ಬಂದಿದ್ದಾನೆ.

ಜೈಲಿನ ಹೊರಬಂದಿರುವ ಸತ್ಯ ಇತ್ತೀಚೆಗೆ ಮಾರ್ಕೆಟ್ ಧರ್ಮನಿಗೆ ವಿಡಿಯೋ ಕಾಲ್ ಮಾಡಿದ್ದ. ಆಗ ಮಾರ್ಕೆಟ್ ಧರ್ಮ, ದರ್ಶನ್ ನಮ್ಮ ಸೆಲ್ ಪಕ್ಕದಲ್ಲೇ ಇರೋದು ಎಂದಿದ್ದಾನೆ. ಕೂಡಲೇ ಇರು ತೋರಿಸ್ತಿನಿ ಎಂದು ದರ್ಶನ್ ಕೈಯಲ್ಲಿ ಹಾಯ್ ಹೇಳಿಸಿದ್ದಾನೆ.

ಇದನ್ನೂ ಓದಿ: ಕೈಯಲ್ಲಿ ಸಿಗರೇಟ್ ಹಿಡಿದ ದರ್ಶನ್ ಮುಖದಲ್ಲಿ ನಗು.. ಡಿ ಬಾಸ್​ ಫೋಟೋ ಹಿಂದಿನ 7 ರಹಸ್ಯಗಳು ಇಲ್ಲಿವೆ! 

ಇದೇ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ಸತ್ಯ ಏರಿಯಾದಲ್ಲಿ ಸಖತ್ ಬಿಲ್ಡಪ್ ಕೊಟ್ಟಿದ್ದಾನೆ. ಕಲಾಸಿಪಾಳ್ಯದ ಕೆಲ ಹುಡುಗರಿಗೂ ವಿಡಿಯೋ ಕಳಿಸಿದ್ದ. ಸೋಷಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಹಾಕಿಕೊಂಡಿದ್ದು, ಸತ್ಯ ವಿಡಿಯೋ ಕಾಲ್‌ನಿಂದ ದರ್ಶನ್ ಕೂಡ ಸಿಕ್ಕಿಬಿದ್ದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್‌ಗೆ ವಿಡಿಯೋ ಕಾಲ್‌ ಮಾಡಿದ ಸೀಕ್ರೆಟ್ ಬಯಲು.. ಬಿಲ್ಡಪ್ ಕೊಟ್ಟು ಸಿಕ್ಕಿಬಿದ್ದಿದ್ದೇ ರೋಚಕ ಸತ್ಯ!

https://newsfirstlive.com/wp-content/uploads/2024/08/Darshan-Video-Call-5.jpg

Load More