ಜೈಲು ಬ್ಯಾರಕ್ ಮುಂದೆ ಆರೋಪಿ ನಟ ದರ್ಶನ್ ತೂಗದೀಪ ಮೋಜು
ವಿಲ್ಸನ್ ಗಾರ್ಡನ್ ರೌಡಿ ಜೊತೆ ದರ್ಶನ್ ಅದೇನದು ಖಾಸ್‌ಬಾತ್?
ಕೊಲೆ ಕೇಸ್ನಲ್ಲಿರುವ ದರ್ಶನ್ ಮುಖದಲ್ಲಿ ನಗು, ಇಲ್ವಾ ಪಶ್ಚಾತ್ತಾಪ?
ಬೆಂಗಳೂರು: ಜೈಲಿನಲ್ಲಿ ಬಿಂದಾಸ್ ದರ್ಶನದ ಫೋಟೋ, ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಸಿಗರೇಟ್ ಸೇದುವ, ನಟೋರಿಯಸ್ ರೌಡಿಶೀಟರ್ ಜೊತೆ ಹರಟೆ ಹೊಡೆಯುವ ಶಾಕಿಂಗ್ ಫೋಟೋ ಸ್ಫೋಟಗೊಂಡಿದೆ. ಹಾಗಾದ್ರೆ, ದರ್ಶನ್ ವೈರಲ್ ಫೋಟೋದ ರಹಸ್ಯವೇನು? ಆ ಬೆಚ್ಚಿ ಬೀಳಿಸೋ, ನಂಬಲಿಕ್ಕೆ ಕಷ್ಟ ಆಗುವಂಥಾ ಫೋಟೋ ಕೊಟ್ಟಿರೋ 7 ಸುಳಿವುಗಳು ಇಲ್ಲಿವೆ.
1. ಕೈಯಲ್ಲಿ ಸಿಗರೇಟ್, ಮುಖದಲ್ಲಿ ಸ್ಮೈಲ್!
ವೈರಲ್ ಆಗಿರುವ ದರ್ಶನ್ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದ್ರೆ, ಬಲಗೈನಲ್ಲಿ ಕಾಫಿ ಮಗ್, ಎಡಗೈನಲ್ಲಿ ಸಿಗರೇಟ್, ಮುಖದಲ್ಲಿ ಮಂದಹಾಸ, ಪಕ್ಕದಲ್ಲೇ ಚೇರ್ ಹಾಕ್ಕೊಂಡು ಕೂತಿರೋ ಕುಖ್ಯಾತ ರೌಡಿಶೀಟರ್. ಇದು ಯಾವ್ದೋ ಸಿನಿಮಾ ಶೂಟಿಂಗ್ ಸೆಟ್ನಲ್ಲಿ ವಿರಾಮದ ಸಮಯದಲ್ಲಿ ತೆಗೆದ ಫೋಟೋ ತರ ಇದೆ ಆದ್ರೆ. ಇದು ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಬಿಂದಾಸ್ ಆಗಿ ದರ್ಶನ್ ಕುಳಿತಿರುವ ಫೋಟೋ.
ಇದನ್ನೂ ಓದಿ: ಕಾರಾಗೃಹದ ಯಾವ ಕಾನೂನು ದರ್ಶನ್‌ಗೆ ಅನ್ವಯ ಆಗಲ್ವಾ? ಜೈಲಿನಲ್ಲೂ ಜಾಲಿಯಾಗಿರೋದು ಹೇಗೆ ‘ಸ್ವಾಮಿ‘?
ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಸೇರಿದ ಬಳಿಕ ದರ್ಶನ್ ಹಾಕ್ಕೊಂಡಿದ್ದ ವಿಗ್ ಕಳಚಿಟ್ಟಿದ್ದಾರೆ.ಆದ್ರೆ ಇವತ್ತು ಅವರ ಇನ್ನೊಂದು ಮುಖವಾಡ ಕೂಡ ಕಳಚಿ ಬಿದ್ದಿದೆ. ಕೊಲೆ ಕೇಸ್‌ನಲ್ಲಿ ಆರೋಪಿಯಾಗಿ ಜೈಲುಪಾಲಾಗಿರೋ ದರ್ಶನ್‌ಗೆ ಜೈಲಿನ ಒಳಗೆ ಎಂಥಾ ರಾಜಮರ್ಯಾದೆ, ರಾಜವೈಭೋಗ ಸಿಗ್ತಿದ್ಯಾ ಎಂಬ ಪ್ರಶ್ನೆ ಹುಟ್ಟುವಂತೆ ಮಾಡಿರೋ ಈ ಫೋಟೋ ರಾಜ್ಯವಷ್ಟೇ ಅಲ್ಲ.. ಇಡೀ ದೇಶದೆಲ್ಲೆಡೆ ಸಂಚಲನ ಸೃಷ್ಟಿಸಿದೆ.
ಇದನ್ನೂ ಓದಿ:ದರ್ಶನ್ ರೆಸಾರ್ಟ್ನಲ್ಲಿದ್ದಾರೋ, ಜೈಲಿನಲ್ಲಿದ್ದಾರೋ; ಕಣ್ಣೀರು ಹಾಕುತ್ತ ರೇಣುಕಾಸ್ವಾಮಿ ತಂದೆ ಏನಂದ್ರು?
2. ರೌಡಿಶೀಟರ್ ಜೊತೆ ಖಾಸ್‌ಬಾತ್!
ಕೊಲೆ ಕೇಸ್ ಆರೋಪಿ ನಟ ದರ್ಶನ್ ನಾಲ್ವರ ಜೊತೆ ಕೂತು ಬಿಂದಾಸ್ ಹರಟೆ ಹೊಡಿತಿರೋ ಶಾಕಿಂಗ್ ಫೋಟೋದ ರಹಸ್ಯವಿದು. ನಿಮಗೆಲ್ಲಾ ಗೊತ್ತಿರೋ ಹಾಗೆ ದರ್ಶನ್ ಸಾಹೇಬ ಜೈಲು ಸೇರಿದ್ಮೇಲೆ ಜೈಲೂಟ ತಿನ್ನೋಕಾಗ್ತಿಲ್ಲ ಸ್ವಾಮಿ ಅಂತಾ ಕೋರ್ಟ್ ಮೆಟ್ಟಿಲೇರಿದ್ದು ಏರಿದ್ದೇನೂ. ಕೋರ್ಟ್ ಕೂಡ ಎರಡ್ಮೂರು ಬಾರಿ ವಿಚಾರಣೆಗಳನ್ನ ಕೂಡ ನಡೆಸಿದ್ದೇನೂ.. ಆರೋಗ್ಯ ಸರಿಯಿಲ್ಲ ಸ್ವಾಮಿ, ಊಟ ತಿಂದ್ರೆ ಬೇದಿ ಬರುತ್ತೆ ಸ್ವಾಮಿ, ಮನೆಯಿಂದ ಊಟಕ್ಕೆ ಅವಕಾಶ ಕೊಡಿಸಿ ಅಂತಾ ಅಂಗಲಾಚಿ ಬೇಡಿಕೊಂಡಿದ್ದೇನೂ. ನಿಮಗೆ ಗೊತ್ತಿದ್ದೇ ಇದೆ.
ಆದ್ರೆ, ಊಟದ ವಿಚಾರವನ್ನ ಡಿಸೈಡ್ ಮಾಡೋ ವಿಚಾರಣೆಯನ್ನ ಕೋರ್ಟ್ ಮುಂದೂಡುತ್ತಲೇ ಬರ್ತಿದೆ. ದರ್ಶನ್‌ಗೆ ಮೇಲಿಂದ ಮೇಲೆ ಶಾಕ್ ಅಂತೆಲ್ಲಾ ಚರ್ಚೆಗಳೂ ಕೂಡ ನಡೀತಿವೆ. ಇಷ್ಟೆಲ್ಲದರ ನಡುವೆ, ಥೇಟ್ ದರ್ಶನ್ ಸಿನಿಮಾಗಳಲ್ಲಿ ಬರೋ ಟ್ವಿಸ್ಟ್‌ನಂತೆಯೇ ಈ ಫೋಟೋ ಸ್ಫೋಟಗೊಂಡಿದೆ. ದರ್ಶನ್ ಜೊತೆ ಮೂವರು ಕುರ್ಚಿ ಮೇಲೆ ಕುಳಿತು ಹರಟೆ ಹೊಡಿತಿರೋ ಈ ಫೋಟೋ ಹೇಳ್ತಿರೋದು ಒಂದೆರಡಲ್ಲಾ. ಬರೋಬ್ಬರಿ ಶಾಕಿಂಗ್ 7 ರಹಸ್ಯಗಳು!
3. ಜೈಲು ಬ್ಯಾರಕ್ ಮುಂದೆ ಆರೋಪಿ ದರ್ಶನ್ ತೂಗದೀಪ ಮೋಜು!?
ನೀವು ನೋಡಿರೋ ಈ ಫೋಟೋವನ್ನ ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಇರೋ ಜೈಲಿನ ಬ್ಯಾರಕ್ ಮುಂದೆ ತೆಗೆಯಾಗಿದೆ ಅಂತಾ ಹೇಳಲಾಗಿದೆ. ನಾಲ್ಕು ಕುರ್ಚಿಗಳು.. ದರ್ಶನ್ ಸಮೇತ ನಾಲ್ವರು ಆರೋಪಿಗಳು. ಮುಂದೆ ಟೀಪಾಯಿ. ಈ ಫೋಟೋದಲ್ಲಿ ದರ್ಶನ್ ವಿಗ್ ಧರಿಸಿಲ್ಲ. ಯಾರಿಗಾದ್ರೂ ಈ ಫೋಟೋನ ತೋರ್ಸಿ, ನೋಡು ಗುರು ದರ್ಶನ್ ಜೈಲಲ್ಲಿರೋ ಪೋಟೋ ಅಂತ ಹೇಳಿಬಿಟ್ರೆ.. ಅದ್ಯಾವ ದಿಕ್ಕಿಗೆ ಮುಖ ಮಾಡ್ಕೊಂಡು ನಗ್ತಾರೋ ಗೊತ್ತಿಲ್ಲ. ಯಾಕಂದ್ರೆ, ಇದು ಜೈಲು ಸ್ವಾಮಿ. ಜೈಲಂದ್ರೆ ನರಕ ಅಂತಾರೆ. ಕತ್ತಲೆ ಕೋಣೆಯ ನರಕ ಅಂತಾರೆ. ಬಟ್.. ದರ್ಶನ್ ಪಾಲಿಗೆ ಜೈಲು ಪಿಕ್‌ನಿಕ್ ಸ್ಪಾಟ್ ಆಗಿಬಿಡ್ತಾ? ಹೌದು ಎನ್ನುತ್ತಿದೆ ಈ ಫೋಟೋ!
ಇದನ್ನೂ ಓದಿ: ಸಿಗರೇಟ್ ಪಾರ್ಟಿಯಲ್ಲಿ ದರ್ಶನ್ ಜೊತೆ ಕುಳಿತ ರೌಡಿಶೀಟರ್.. ವಿಲ್ಸನ್ ಗಾರ್ಡನ್ ನಾಗನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ
4. ಒಂದು ಕೈಲಿ ಕಾಫಿ.. ಮತ್ತೊಂದು ಕೈಲಿ ಸಿಗರೇಟ್!
ಜೈಲಲ್ಲಿ ಕೊಡ್ತಿರೋ ಊಟ ತಿಂದ್ರೆ ಜೀರ್ಣ ಆಗ್ತಿಲ್ಲ ಅಂತಾ ನೆಪ ಹೇಳ್ಕೊಂಡು ಕೋರ್ಟ್ ಮೊರೆ ಹೋಗಿರೋ ದರ್ಶನ್‌ಗೆ ಇಷ್ಟು ದಿನ ಮಾಡಿದ್ದಲ್ಲಾ ಡ್ರಾಮನಾ? ಹೌದು ಅಂತಾ ಹೇಳ್ತಿರೋದು ಸ್ಫೋಟಗೊಂಡಿರೋ ಈ ಫೋಟೋ. ನೋಡಿ, ಮೂವರು ಆರೋಪಿಗಳ ಜೊತೆ ಕುರ್ಚಿಯಲ್ಲಿ ಕುಳಿತು ಹರಟೆ ಹೊಡಿತಿರೋ ದರ್ಶನ್ ಒಂದು ಕೈಲಿ ಕಾಫಿ ಮಗ್ ಹಿಡ್ಕೊಂಡಿದ್ದಾರೆ. ಮತ್ತೊಂದು ಕೈಲಿರೋದೇನು ಗೊತ್ತಾ… ಧಮ್ಮು, ಅರ್ಥಾತ್ ಸಿಗರೇಟು! ಅದೂ ಕೂಡ ಪರಪ್ಪನ ಅಗ್ರಹಾರ ಜೈಲೊಳಗೆ ದರ್ಶನ್ ಕೈಲಿ ಸಿಗರೇಟು. ಹೌದು ವೀಕ್ಷಕರೆ, ನಂಬಲಿಕ್ಕೆ ಕಷ್ಟವಾದ್ರೂ ಇದು ಸತ್ಯ. ಈ ಫೋಟೋದಲ್ಲಿ ದರ್ಶನ್ ತಮ್ಮ ಎಡಗೈನಲ್ಲಿ ಸಿಗರೇಟ್ ಹಿಡ್ಕೊಂಡು ಕೂತಿದ್ದಾರೆ. ದಾಸ ಜೈಲೊಳಗೆ ಧಮ್ ಹೊಡಿತಿದ್ದಾರೆ. ಸಾರ್ವಜನಿಕವಾಗಿಯೇ ಸಿಗರೇಟ್ ಸೇದಂಗಿಲ್ಲ. ಯಾರಾದ್ರೂ ಟೀ ಅಂಗಡಿ ಮುಂದೆ ಧಮ್ ಹೊಡಿತಾ ನಿಂದ್ರೆ ಪೊಲೀಸ್ರು ಬಂದು ಮನಸ್ಸಿಗೆ ಬಂದಂಗೆ ಮಾತಾಡಿ, ಫೈನ್ ಹಾಕಿ ಹೋಗ್ತಾರೆ. ಅಂಥಾದ್ರಲ್ಲಿ, ಪಾಪಕೃತ್ಯ ಎಸಗಿರೋ ಪಾಪಿಗಳನ್ನ ಹಾಕಿ ಮನಪರಿವರ್ತನೆ ಮಾಡಿಸೋ ಜೈಲೊಳಗೆ ದರ್ಶನ್ ಕೈಲಿ ಸಿಗರೇಟ್ ಇರೋದು ನಿಜಕ್ಕೂ ಶಾಕಿಂಗ್!
5. ವಿಲ್ಸನ್ ಗಾರ್ಡನ್ ರೌಡಿ ಜೊತೆ ದರ್ಶನ್ ಮಾತು
ಸಿಗರೇಟ್ ಸೇದ್ಕೊಂಡು, ಕಾಫಿ ಕುಡ್ಕೊಂಡು ಕೂತಿರೋ ದರ್ಶನ್ ಪಕ್ಕದಲ್ಲಿರೋನು ಒಬ್ಬ ಕುಖ್ಯಾತ ರೌಡಿ ಶೀಟರ್. ಇವನ ಹೆಸರು ವಿಲ್ಸನ್ ಗಾರ್ಡನ್ ನಾಗ. ಅಸಲಿಗೆ, ದರ್ಶನ್ ಜೈಲಿ ಸೇರಿದ ಪ್ರಾರಂಭದಲ್ಲೇ ವಿಲ್ಸನ್ ಗಾರ್ಡನ್ ನಾಗನ ಮೀಟ್ ಮಾಡಿದ್ರು ಅನ್ನೋ ಮಾಹಿತಿಯಿತ್ತು. ವಿಲ್ಸನ್ ಗಾರ್ಡನ್ ನಾಗನೇ ದರ್ಶನ್‌ರ ಯೋಗಕ್ಷೇಮ ನೋಡಿಕೊಳ್ಳೋದಾಗಿ ಹೇಳಿದ್ದಾನೆ ಎಂಬ ಸುದ್ದಿಗಳಿದ್ವು. ಅದು ಈ ಫೋಟೋ ಮೂಲಕ ಸತ್ಯವಾಗಿದೆ. ಈತ, ನಟೋರಿಯಸ್ ರೌಡಿ ಶೀಟರ್.
ಬೇರೊಂದು ಕೇಸ್‌ನಲ್ಲಿ ಆರೋಪಿಯಾಗಿ ಜೈಲು ಸೇರಿರೋ ಈತ ದರ್ಶನ್ ಪಕ್ಕದಲ್ಲಿ ಕೂತು ಹರಟೆ ಹೊಡೆಯುತ್ತಿದ್ದಾನೆ. ಒಬ್ಬ ನಟೋರಿಯಸ್ ರೌಡಿನ ಕೊಲೆ ಕೇಸ್ ಆರೋಪಿ ದರ್ಶನ್ ಜೊತೆ ಕೂರೋಕೆ, ಹರಟೆ ಹೊಡೆಯೋಕೆ, ಮಾತನಾಡೋಕೆ ಇಷ್ಟು ಸುಲಭವಾಗಿ ಬಿಟ್ಟುಬಿಡ್ತಾರಾ ಎಂಬ ಪ್ರಶ್ನೆ ಹುಟ್ತಿದೆ.
ಇದನ್ನೂ ಓದಿ: ಜೈಲೊಳಗೆ ಬಿಂದಾಸ್ ದರ್ಶನ.. ದುಡ್ಡಿದ್ರೆ ಏನ್ ಬೇಕಾದ್ರೂ ಸಿಗುತ್ತಾ? ಕಷ್ಟಪಟ್ಟು ಅರೆಸ್ಟ್ ಮಾಡಿದ ಪೊಲೀಸ್ ಕಥೆ ಏನು?
6. ಕೊಲೆ ಕೇಸ್‌ನ ಇಬ್ಬರು ಆರೋಪಿಗಳ ಬಿಂದಾಸ್!
ಎಡಗಡೆಯಿಂದ ಮೊದಲನೆಯವನು ಬೇಱರೂ ಅಲ್ಲ. ದರ್ಶನ್ ಮ್ಯಾನೇಜರ್ ನಾಗರಾಜ. ಈತನೂ ಕೂಡ ಕೊಲೆ ಕೇಸ್‌ನಲ್ಲಿ ಆರೋಪಿಯಾಗಿ ಜೈಲು ಸೇರಿದ್ದಾನೆ. ದರ್ಶನ್ ಜೈಲು ಸೇರೋಕೂ ಮುನ್ನ ಬಟ್ಟಂಗಿಯಂತೆ ಓಡಾಡ್ಕೊಂಡಿದ್ದವ. ಜೈಲೊಳಗೂ ದರ್ಶನ್ ಹಿಂದಿದೆ, ಪಕ್ಕ ಪಕ್ಕದಲ್ಲೇ ಸುತ್ತಾಡ್ತಿದ್ದಾನೆ. ಬಾಸ್ ಬೆನ್ನಿಗೆ ನಿಂತಿದ್ದಾನೆ. ಆದ್ರೆ, ಇಲ್ಲೊಂದು ಆಘಾತಕಾರಿ ವಿಚಾರ ಅಂದ್ರೆ, ಒಂದೇ ಕೇಸ್‌ನ ಇಬ್ಬರು ಆರೋಪಿಗಳನ್ನು ಇಷ್ಟು ಸುಲಭವಾಗಿ, ಇಷ್ಟು ಸರಳವಾಗಿ ಕೂತು ಚರ್ಚಿಸೋಕೆ ಬಿಡೋಕೆ ಸಾಧ್ಯನಾ? ಅನ್ನೋದು, ದರ್ಶನ್ ವಿಚಾರದಲ್ಲಿ ಅದು ಸಾಧ್ಯವಾಗಿದೆ ಅಂದ್ರೆ ಇದಕ್ಕಿಂತ ಶಾಕಿಂಗ್ ವಿಚಾರ ಮತ್ತೊಂದಿಲ್ಲ.
ಅಷ್ಟೇ ಅಲ್ಲ, ದರ್ಶನ್ ಮ್ಯಾನೇಜರ್ ನಾಗನ ಪಕ್ಕದಲ್ಲಿ ಕುಳಿತಿರೋನು ಕೂಡ ಡೆಡ್ಲಿ ರೌಡಿ. ಈತನ ಹೆಸರು ಕುಳ್ಳ ಸೀನ. ಬೇರೊಂದು ಕೇಸ್‌ನಲ್ಲಿ ಜೈಲು ಪಾಲಾಗಿರೋ ಕುಳ್ಳ ಸೀನ ನಟೋರಿಯಸ್ ರೌಡಿ. ಬೆಂಗಳೂರಿನ ಟಾಪ್ ರೌಡಿಗಳ ಲಿಸ್ಟ್‌ನಲ್ಲಿ ಈ ವಿಲ್ಸನ್ ನಾಗ ಮತ್ತು ಕುಳ್ಳ ಸೀನ ಇದ್ದಾರೆ. ಅಂಥಾ ನಟೋರಿಯಸ್ ಕ್ರಿಮಿನಲ್‌ಗಳ ಪಕ್ಕದಲ್ಲಿ ದರ್ಶನ್ ಕೂತು ಮಾತಾಡೋಕೆ ಅವಕಾಶ ಕೊಟ್ಟಿರೋದು ದೊಡ್ಡ ಅನುಮಾನ ಹುಟ್ಟಿಸಿದೆ.
7. ಕೊಲೆ ಕೇಸ್ನಲ್ಲಿರುವ ದರ್ಶನ್‌ಗೆ ಇಲ್ವಾ ಪಶ್ಚಾತ್ತಾಪ!?
ದರ್ಶನ್ ಮುಖದಲ್ಲಿ ನಗು.. ತಾನೊಬ್ಬ ಕನ್ನಡದ ಟಾಪ್ ಸೆಲೆಬ್ರಿಟಿಯಾಗಿ ಕೊಲೆ ಕೇಸ್‌ನಲ್ಲಿ ತಗ್ಲಾಕ್ಕೊಂಡು ಜೈಲು ಸೇರಿದ್ದೇನೆ ಅನ್ನೋ ಕಿಂಚಿತ್ತೂ ಪಶ್ಚಾತ್ತಾಪ ಇಲ್ಲದಂತೆ ದರ್ಶನ್ ಹೇಗೆ ಆ ಫೋಟೋದಲ್ಲಿ ನಗ್ತಿದ್ದಾರೆ ನೋಡಿ. ರೇಣುಕಾಸ್ವಾಮಿ ಕೊಲೆಯಲ್ಲಿ ದರ್ಶನ್ ಪಾತ್ರ ಇದೆಯೋ? ಇಲ್ವೋ ಅನ್ನೋದನ್ನ ಕೋರ್ಟ್ ಡಿಸೈಡ್ ಮಾಡುತ್ತೆ. ಆದ್ರೆ, ರೇಣುಕಾಸ್ವಾಮಿ ಸತ್ತುಹೋದ, ಗರ್ಭಿಣಿ ಗಂಡನನ್ನು ಕಳೆದುಕೊಂಡಳು. ತನ್ನಿಂದಾಗಿ, ಹತ್ತಾರು ಕುಟುಂಬಗಳು ಬದುಕೋದಕ್ಕೂ ಪರದಾಡುವ ಸ್ಥಿತಿಗೆ ಬಂದಿವೆ ಎಂಬ ಕೊರಗು ಕೂಡ ದರ್ಶನ್‌ಗೆ ಇಲ್ವಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ