newsfirstkannada.com

ಎಣ್ಣೆ ಮುಟ್ಟಲ್ಲ, ಧಮ್‌ ಹೊಡೆಯಲ್ಲ.. ದರ್ಶನ್‌ ಪಕ್ಕದಲ್ಲಿರೋ ವಿಲ್ಸನ್ ಗಾರ್ಡನ್ ನಾಗನಿಗಿದೆ 20 ವರ್ಷದ ರಕ್ತ ಚರಿತ್ರೆ!

Share :

Published August 25, 2024 at 10:38pm

    ಯಾರಿವನು ವಿಲ್ಸನ್ ಗಾರ್ಡನ್ ನಾಗ? ಹೇಗಿದೆ ಇವನ 20 ವರ್ಷದ ರಕ್ತ‘ಚರಿತ್ರೆ‘

    ದರ್ಶನ್ ಜೊತೆ ಕುಳಿತಿದ್ದ ಮತ್ತೊಬ್ಬ ನಟೋರಿಯಸ್ ರೌಡಿ ಕುಳ್ಳ ಸೀನ ಯಾರು?

    ಜೈಲಿನಲ್ಲಿ ಬಾಸ್ ನೋಡಿಕೊಳ್ಳೋದಕ್ಕೆ ಶುರುವಾಗಿತ್ತು ರೌಡಿಗಳ ನಡುವೆ ಫೈಟ್​!

ಬೆಂಗಳೂರು: ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಜೈಲು ಸೇರಿ ಬರೋಬ್ಬರಿ 2 ತಿಂಗಳೇ ಅಂತ್ಯವಾಗಿದೆ. ಆಗಾಗ ಕುಟುಂಬದವ್ರು ಹೋಗಿ ಯೋಗಕ್ಷೇಮ ವಿಚಾರಿಸಿಕೊಂಡು ಬರ್ತಿದ್ದಾರೆ. ಚಿತ್ರರಂಗದ ಸ್ನೇಹಿತರು ಹೋಗಿ ಬಂದು ಕಣ್ಣೀರು ಹಾಕ್ತಿದ್ದಾರೆ. ಇದೆಲ್ಲವನ್ನು ನೋಡಿದಾಗ, ಕೇಳಿದಾಗ ದರ್ಶನ್‌ ಜೈಲಲ್ಲಿ ಅದೆಷ್ಟೋ ನೋವು ಅನುಭವಿಸ್ತಿದ್ದಾರೋ? ಅದೆಷ್ಟು ಪಶ್ಚಾತ್ತಾಪ ಪಡ್ತಿದ್ದಾರೋ? ಅನ್ನೋ ಪ್ರಶ್ನೆ ಇತ್ತು. ಆದ್ರೆ, ಇದೀಗ ನಟೋರಿಯಸ್‌ ರೌಡಿಗಳ ಜೊತೆ ಬಿಂದಾಸ್‌ ಆಗಿರೋ ಫೋಟೋ ಔಟ್‌ ಆಗಿದ್ದು, ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಅಷ್ಟಕ್ಕೂ ದರ್ಶನ್‌ ಜೊತೆ ಕುಳಿತ್ತಿದ್ದ ವಿಲ್ಸನ್‌ ಗಾರ್ಡನ್‌ ನಾಗಾ, ಕುಳ್ಳ ಸೀನನ ರಕ್ತಚರಿತ್ರೆ ಎಂಥದ್ದು? ದರ್ಶನ್‌ ನೋಡಿಕೊಳ್ಳಲು ಜೈಲಲ್ಲಿ ಯಾವ ಯಾವ ರೌಡಿಗಳ ಜೊತೆ ಪೈಪೋಟಿ ಇತ್ತಾ ಅನ್ನೋ ಅನುಮಾನಗಳು ಮೂಡಿದೆ.

ಇದನ್ನೂ ಓದಿ: ಚೆನ್ನಾಗಿದ್ದೀರಾ ಬಾಸ್.. ಹೂ ಚಿನ್ನ; ದರ್ಶನ್ ಬಿಂದಾಸ್ ಲೈಫ್‌ಗೆ ಹೊಸ ಟ್ವಿಸ್ಟ್‌; ವಿಡಿಯೋ ಕಾಲ್ ಮಾಡಿದ್ಯಾರು?

ಜೈಲಿನಲ್ಲಿ ದರ್ಶನ್ ಬಿಂದಾಸ್​ ಆಗಿರೋ ಫೋಟೋ ಸ್ಫೋಟಗೊಂಡ ಬೆನ್ನಲ್ಲೇ ರಾಜ್ಯದಲ್ಲೇ ತಲ್ಲಣ ಮೂಡಿದೆ. ಒಂದು ಕೈಯಲ್ಲಿ ಸಿಗರೇಟ್‌, ಇನ್ನೊಂದ್‌ ಕೈಯಲ್ಲಿ ಕಾಫಿ ಕಪ್‌, ಮುಖದಲ್ಲಿ ಏನೂ ಆಗೇ ಇಲ್ವೇನೋ ಅನ್ನೊ ರೀತಿಯಲ್ಲಿ ಪೋಸ್​ ಕೊಡ್ತಿರೋ ದರ್ಶನ್ ಜೈಲಿನಲ್ಲಿ ಎರಡು ತಿಂಗಳಿನಿಂದಲೂ ಹೀಗೆಯೇ ಇದ್ರಾ? ಇಷ್ಟು ಬಿಂದಾಸ್​ ಆಗಿದ್ರಾ ಎನ್ನುವ ಅನುಮಾನಗಳು ಮೂಡಿದೆ. ಅಷ್ಟೇ ಅಲ್ಲ 10ಕ್ಕೂ ಹೆಚ್ಚು ಮರ್ಡರ್‌ ಕೇಸ್‌ನಲ್ಲಿ ಜೈಲು ಸೇರಿರೋ ವಿಲ್ಸನ್‌ ಗಾರ್ಡನ್​ ನಾಗನ ಸಹವಾಸ ಮಾಡಿರೋದನ್ನ ನೋಡಿ ಅಭಿಮಾನಿಗಳು ಖುಷಿಪಡ್ತಾರಾ? ಇಲ್ಲ ಆತಂಕಕ್ಕೀಡಾಗ್ತಾರಾ ಗೊತ್ತಿಲ್ಲ. ಒಟ್ಟಾರೆ, ಈ ಫೋಟೋ ಮೇಲೆ ಒಂದರ ಹಿಂದೊಂದರಂತೆ ಯಕ್ಷ ಪ್ರಶ್ನೆಗಳು ಧುತ್ತನೆ ಮೂಡೋದಕ್ಕೆ ಶುರುವಾಗಿದೆ. ಅದ್ರಲ್ಲೂ ಮುಖ್ಯವಾದದ್ದು ಅಂದ್ರೆ, ದರ್ಶನ್​ ಜೊತೆಗೆ ಕಾಣಿಸಿಕೊಂಡಿರೋ ವಿಲ್ಸನ್ ಗಾರ್ಡನ್​ ನಾಗನ ಹಿಸ್ಟರಿ ನಿಜಕ್ಕೂ ಸಾಮಾನ್ಯವಾದದ್ದಲ್ಲ.

ಇದನ್ನೂ ಓದಿ: ವಿಗ್ ಲೆಸ್ ದರ್ಶನ.. ಜೈಲಿನಲ್ಲಿ A2 ಬಿಂದಾಸ್ ಲೈಫ್‌ನ ಅಸಲಿ ಮುಖ ಅನಾವರಣ; ಏನಿದರ ರಹಸ್ಯ?

ಈ ನಟೋರಿಯಸ್‌ ನಾಗನ ಕ್ರೈಮ್​ ಹಿಸ್ಟರಿ ಶುರುವಾಗೋದು 2004ರಲ್ಲಿ. 2004ನೇ ಇಸವಿಯಲ್ಲಿ ಮೊದಲು ಸಿದ್ದಾಪುರ ಠಾಣೆ ವ್ಯಾಪ್ತಿಯಲ್ಲಿ ರಾಬರಿ ಕೇಸ್‌ನಲ್ಲಿ ಇವ್ನು ಭಾಗಿಯಾಗ್ತಾನೆ. ಬಳಿಕ 2005ರಲ್ಲಿ ಆಡುಗೋಡಿ, ಎಸ್.ಆರ್.ನಗರ, ಬನಶಂಕರಿ ಠಾಣೆ ವ್ಯಾಪ್ತಿಯಲ್ಲಿ 6 ವಾಹನ ಕಳವು ಪ್ರಕರಣಗಳಲ್ಲಿ ಇವನ ಇನ್ವಾಲ್ವ್​ಮೆಂಟ್​ ಇರುತ್ತೆ. ಅಲ್ಲಿಂದ ಈತನ ಕ್ರೈಮ್‌ ಲೋಕದ ಎಂಟ್ರಿ ಶುರುವಾಗುತ್ತೆ. ಹಾಗೇ 2009ರಲ್ಲಿ ಕಲಾಸಿಪಾಳ್ಯದಲ್ಲಿ ಗೇಟ್ ಗಣೇಶ್ ಕೊಲೆ ಕೇಸ್.

ಇದನ್ನೂ ಓದಿ: ದರ್ಶನ್​ ರೆಸಾರ್ಟ್​​ನಲ್ಲಿದ್ದಾರೋ, ಜೈಲಿನಲ್ಲಿದ್ದಾರೋ; ಕಣ್ಣೀರು ಹಾಕುತ್ತ ರೇಣುಕಾಸ್ವಾಮಿ ತಂದೆ ಏನಂದ್ರು?

2012ರಲ್ಲಿ ಮಾಗಡಿರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡಕಾಯಿತಿ, 2012ರಲ್ಲಿ ಸಿದ್ದಾಪುರದಲ್ಲಿ ಮುರಳಿ ಎಂಬಾತನ ಕಿಡ್ನಾಪ್ ಕೇಸ್. 2012ರಲ್ಲಿ ಮಣಿ ಎಂಬುವನ ಮೇಲೆ ಮಾರಣಾಂತಿಕ ಹಲ್ಲೆ. ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾರಕಾಸ್ತ್ರಗಳೊಂದಿಗೆ ದರೋಡೆಗೆ ಸಂಚು. ಕಾಟನ್ ಪೇಟೆ ವ್ಯಾಪ್ತಿಯಲ್ಲಿ ರೌಡಿಶೀಟರ್ ಗುಪ್ಪನ ಕೊಲೆ ಹೀಗೆ ಸಾಲು ಸಾಲು ಕೇಸ್‌ನಲ್ಲಿ ನಾಗ ಫಿಟ್‌ ಆಗ್ತಾನೆ.
ಇದೀಗ ನಾಗ ಸಿದ್ದಾಪುರದ ರೌಡಿಶೀಟರ್‌ ಮಹೇಶ ಹತ್ಯೆ ಕೇಸ್‌ನಲ್ಲಿ ಜೈಲು ಸೇರಿದ್ದಾನೆ.2023ರಲ್ಲಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿದ್ದಾಪುರ ರೌಡಿಶೀಟರ್ ಮಹೇಶನ ಭೀಕರ ಕೊಲೆಯಾಯ್ತು.

ಮಹೇಶ ರಿಲೀಸ್ ಆಗಿ ಹೊರಬರ್ತಿದ್ದಂತೆ ನಾಗನ ಸಹಚರರು ಜೈಲು ಮುಂಭಾಗದಲ್ಲೇ ಅವನನ್ನ ಮುಗಿಸಿರ್ತಾರೆ.. ಈ ಪ್ರಕರಣದಲ್ಲಿ ಜೈಲು ಸೇರಿರೋ ನಾಗ ಇದೀಗ ಕೊಲೆ ಕೇಸ್​ನಲ್ಲಿ ಕಂಬಿ ಎಣಿಸ್ತಿರೋ ದರ್ಶನ್‌ಗೆ ಆಪ್ತವಾಗಿದ್ದಾನೆ. ಈ ನಾಗನ ಮತ್ತೊಂದು ಇಂಟರೆಸ್ಟಿಂಗ್​ ವಿಷ್ಯ ಅಂದ್ರೆ ಇವ್ನು ಎಣ್ಣೆ ಮುಟ್ಟಲ್ಲ, ಧಮ್‌ ಹೊಡೆಯೋದಿಲ್ಲ.

ದರ್ಶನ್ ಪಕ್ಕ ಇದ್ದ ಮತ್ತೊಬ್ಬ ನಟೋರಿಯಸ್ ಕುಳ್ಳ ಸೀನ
ದರ್ಶನ್‌ ಚೇರ್‌ನಲ್ಲಿ ಧಮ್‌ ಹೊಡೀತಾ ಕುಳಿತ್ತಿದ್ರೆ, ಇನ್ನು ಮೂವರು ಚೇರ್‌ನಲ್ಲಿ ಅಕ್ಕ ಪಕ್ಕ ಎದುರುಗಡೆ ಇದ್ರು. ಅದ್ರಲ್ಲಿ ಒಬ್ಬ ನಟೋರಿಯಸ್‌ ವಿಲ್ಸನ್‌ ಗಾರ್ಡನ್‌ ನಾಗ, ಇನ್ನೊಬ್ಬ ದರ್ಶನ್‌ ಮ್ಯಾನೇಜರ್‌ ಆಗಿದ್ದ ನಾಗರಾಜ್‌. ಬಟ್‌, ಮತ್ತೊಬ್ಬ ಯಾರು ಅನ್ನೋ ಪ್ರಶ್ನೆ ಇರುತ್ವಲ್ವಾ. ಅವನು ಬೇರಾರೂ ಅಲ್ಲ, ಮತ್ತೊಬ್ಬ ನಟೋರಿಯಸ್‌ ರೌಡಿ, ಹೆಸರು ಕುಳ್ಳ ಸೀನ, ಅಂದಹಾಗೇ, ಅವನೂ ಕೂಡ ಒಂದು ಕೊಲೆ ಪ್ರಕರಣದಲ್ಲಿ ಫಿಟ್​ ಆಗಿ ಜೈಲು ಸೇರಿದ್ದಾನೆ.

ಕನಕಪುರ ರೋಡ್‌ನವನಾಗಿರೋ ಈ ಕುಳ್ಳ ಸೀನ, ದೀರ್ಘ ಕಾಲದಿಂದ ಜೈಲಲ್ಲಿ ಇರುವವನು. ಹೀಗಾಗಿ ಇವ್ನಿಗೆ ಜೈಲಲ್ಲಿ ಹೇಗಿರ್ಬೇಕು? ಯಾವ್‌ ಅಧಿಕಾರಿಗಳ ಫ್ರೆಂಡ್ಶಿಪ್ ಹೇಗೆ ಬಳಸಬೇಕು.. ತಮ್ಮ ಕೆಲ್ಸವನ್ನ ಜೈಲಲ್ಲೇ ಇದ್ದುಕೊಂಡು ಹೇಗೆ ಮಾಡ್ಬೇಕು? ಅನ್ನೋದು ಪಕ್ಕಾ ಗೊತ್ತು. ಹೀಗಾಗಿ ಯಾವುದೇ ನಟೋರಿಯಸ್‌ ರೌಡಿಗಳು ಜೈಲಿಗೆ ಎಂಟ್ರಿಯಾದ ತಕ್ಷಣವೇ ಈ ಕುಳ್ಳ ಸೀನನ ಸಂಪರ್ಕ ಮಾಡ್ತಾರಂತೆ. ಇನ್ನೊಂದ್‌ ವಿಚಾರ ಅಂದ್ರೆ, ದರ್ಶನ್‌ಗೂ ಈತನಿಗೂ ಹಳೇ ಪರಿಚಯ ಅನ್ನೋ ಸುದ್ದಿಯೂ ಇದೆ. ಇದೇ ಹಿನ್ನೆಲೆಯಲ್ಲಿ ದರ್ಶನ್‌ ಜೈಲು ಸೇರಿದಾಗಿಂದ ಈತ ದರ್ಶನ್‌ ಬೆನ್ನಿಗೆ ನಿಂತುಕೊಂಡಿದ್ದಾನಂತೆ. ದರ್ಶನ್‌ ಯೋಗಕ್ಷೇಮವನ್ನು ನೋಡಿಕೊಳ್ತಿದ್ದಾನಂತೆ. ಇನ್ನು ವಿಲ್ಸನ್‌ ಗಾರ್ಡನ್‌ ನಾಗನಿಗೂ ಇವ್ನಿಗೂ ಕ್ಲೋಸ್‌ ಫ್ರೆಂಡ್ಸ್‌ಶಿಪ್‌ ಇದೆ ಅನ್ನೋ ವಿಚಾರವೂ ಗೊತ್ತಾಗಿದೆ.

ದರ್ಶನ್‌ ಆತಿಥ್ಯಕ್ಕೆ ನಾಗಾ, ಸೈಕಲ್‌ ರವಿ ಫೈಟ್‌!
ಒಂದ್‌ ವಿಷಯ ಏನು ಅಂದ್ರೆ ದರ್ಶನ್‌ ಆತಿಥ್ಯಕ್ಕಾಗಿ ಪರಪ್ಪನ ಅಗ್ರಹಾರದ ಸೆಂಟ್ರಲ್‌ ಜೈಲ್‌ನಲ್ಲಿಯೇ ರೌಡಿಗಳ ನಡುವೆ ಪೈಪೋಟಿ ಶುರುವಾಗಿತ್ತು. ನಾನು ದರ್ಶನ್‌ ನೋಡ್ಕೋತೀನಿ, ನಾನು ನೋಡ್ಕೋತೀನಿ ಅನ್ನೋ ಜಿದ್ದಿನಲ್ಲಿ ಇಬ್ಬರು ಕುಖ್ಯಾತ ರೌಡಿಗಳು ಪಣಕ್ಕೆ ಬಿದ್ದಿದ್ರು. ಹಾಗೇ ಜಿದ್ದಿಗೆ ಬಿದ್ದವ್ರು ನಾಗಾ ಮತ್ತು ಸೈಕಲ್‌ ರವಿ.

‘ದರ್ಶನ್‌ ಒಬ್ಬ ಜನಪ್ರಿಯ ವ್ಯಕ್ತಿ, ಸ್ಟಾರ್‌ ನಟ, ಹಣವಿರೋ ಕುಳ. ಹೀಗಾಗಿ ತಾವೇ ನೋಡ್ಕೋತೀವಿ ಅಂತಾ ಈ ಇಬ್ಬರು ರೌಡಿಗಳು ಪಣಕ್ಕೆ ಬಿದ್ದಿದ್ರು. ಅದೇನ್‌ ಅಂದ್ರೆ, ಜೈಲಲ್ಲಿ ದರ್ಶನ್‌ ವಾಕ್‌ ಮಾಡೋ ಸಂದರ್ಭದಲ್ಲಿ ಇಲ್ಲವೇ ಬೇರೆ ಯಾವುದಾದ್ರೂ ಸಂದರ್ಭದಲ್ಲಿ ಭದ್ರತೆ ನೀಡುವುದು. ಯಾರೂ ದರ್ಶನ್‌ ಬಳಿ ಸುಳಿಯದಂತೆ ನೋಡಿಕೊಳ್ಳುವುದು. ದರ್ಶನ್‌ಗೆ ಅಗತ್ಯವಾಗಿರೋ ಸಣ್ಣಪುಟ್ಟ ಕೆಲ್ಸಗಳನ್ನು ಮಾಡಿಕೊಡುವುದು. ಇದೆಲ್ಲವರನ್ನು ನಾಗನ ಗ್ಯಾಂಗ್‌ ಮಾಡ್ತಿದೆ ಅನ್ನೋದ್‌ ಪಕ್ಕಾ ಆಗಿದೆ. ಈ ಮುನ್ನ ಅಂದ್ರೆ 2011 ರಲ್ಲಿ ದರ್ಶನ್‌ ಜೈಲಿಗೆ ಹೋದಾಗ ಸೈಕಲ್‌ ರವಿ ಆಪ್ತನಾಗಿದ್ದ. ಆತನೇ ದರ್ಶನ್‌ ನೋಡಿಕೊಳ್ತಿದ್ದ. ಈ ಬಾರಿ ನಾಗ ಜೈಲಲ್ಲಿ ಇರೋದ್ರಿಂದ ಆತನೇ ನೋಡಿಕೊಳ್ತಿದ್ದಾನೆ.

ಜೈಲಿನಲ್ಲಿ ದರ್ಶನ್‌ ನೋಡಿಕೊಳ್ಳುವುದ್ರಿಂದ ರೌಡಿಗಳಿಗೆ ಏನ್‌ ಲಾಭ ಅನ್ನೋ ಪ್ರಶ್ನೆ ಖಂಡಿತವಾಗಿಯೂ ಇದ್ದೇ ಇರುತ್ತೆ. ಆದ್ರೆ, ರೌಡಿಗಳಿಗೆ ಲಾಭಕ್ಕಿಂತ ಹವಾ ಮುಖ್ಯ. ಜೈಲಿನಲ್ಲಿದ್ದಾಗ ದರ್ಶನ್‌ ನೋಡ್ಕೊಂಡಿದ್ದು ಇಂತಾ ಹೇಳಿದ್ರೆ ಬೆಂಗಳೂರಲ್ಲಿ ಆತನ ಹವಾ ಜೋರಾಗುತ್ತೆ. ಕಳೆದ ಬಾರಿ ಸೈಕಲ್‌ ರವಿ ನೋಡ್ಕೊಂಡಿದ್ದಕ್ಕೆ ಆತನಿಗೆ ಹೆಸ್ರು ಸಿಕ್ಕಿತ್ತು. ಈ ಬಾರಿ ಆ ಹವಾ ವಿಲ್ಸನ್ ಗಾರ್ಡನ್‌ ನಾಗನದ್ದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಣ್ಣೆ ಮುಟ್ಟಲ್ಲ, ಧಮ್‌ ಹೊಡೆಯಲ್ಲ.. ದರ್ಶನ್‌ ಪಕ್ಕದಲ್ಲಿರೋ ವಿಲ್ಸನ್ ಗಾರ್ಡನ್ ನಾಗನಿಗಿದೆ 20 ವರ್ಷದ ರಕ್ತ ಚರಿತ್ರೆ!

https://newsfirstlive.com/wp-content/uploads/2024/08/Darshan-New-Photo-In-Jail-2.jpg

Load More