/newsfirstlive-kannada/media/post_attachments/wp-content/uploads/2024/03/aadujeevitham.jpg)
ಬಹುಭಾಷಾ ನಟ ಪೃಥ್ವಿರಾಜ್​ ಸುಕುಮಾರನ್ ಹಾಗೂ ನಟಿ ಅಮಲಾ ಪೌಲ್​ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಸಿನಿಮಾ ‘ಆಡುಜೀವಿತಂ’. ಈ ಬಹುನಿರೀಕ್ಷಿತ ಸಿನಿಮಾ ಇಂದು ದೇಶಾದ್ಯಂತ ರಿಲೀಸ್ ಆಗಿದೆ. ಟ್ರೇಲರ್ ಮೂಲಕವೇ ಅತೀ ಹೆಚ್ಚು ನಿರೀಕ್ಷೆ ಮೂಡಿಸಿದ್ದ ಈ ಸಿನಿಮಾಗೆ ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್ ದೊರಕಿದೆ.
/newsfirstlive-kannada/media/post_attachments/wp-content/uploads/2024/03/The-GoatLife-1.jpg)
ಹೌದು, ಮಲಯಾಳಂ ನಟ ಪೃಥ್ವಿರಾಜ್​ ಸುಕುಮಾರನ್ ನಟನೆಯ ‘ಆಡುಜೀವಿತಂ’ ಸಿನಿಮಾ ಸದ್ಯ ಬಿಡುಗಡೆ ಆಗಿದೆ. 16 ವರ್ಷಗಳ ಶ್ರಮಕ್ಕೆ ಇಂದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಕಾದಂಬರಿ ಮಾತ್ರವಲ್ಲ, ನೈಜ್ಯ ಘಟನೆಯಾದರಿತ ಸಿನಿಮಾವಾಗಿ ಮೂಡಿಬಂದಿದೆ. ಇನ್ನು ಈ ಸಿನಿಮಾದಲ್ಲಿ ಪೃಥ್ವಿರಾಜ್​ ಸುಕುಮಾರನ್​ ಅವರು ವಿಭಿನ್ನ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಬ್ಲೆಸ್ಸಿ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಸಿನಿಮಾವನ್ನು ಫಸ್ಟ್​ ಡೇ ಫಸ್ಟ್​ ಶೋ ನೋಡಿದ ಪ್ರೇಕ್ಷಕರು ಸಾಮಾಜಿಕ​ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ.
We all know that @PrithviOfficial is a proven SUPERSTAR. #Aadujeevitham is just a film showing his true caliber yet again. Thank you for dubbing in Telugu too. ??
WHAT AN ACT!!!! ??#TheGoatLifepic.twitter.com/WzFfJf6gSQ
— Cinema Madness 24*7 (@CinemaMadness24)
We all know that @PrithviOfficial is a proven SUPERSTAR. #Aadujeevitham is just a film showing his true caliber yet again. Thank you for dubbing in Telugu too. 👏🏻
WHAT AN ACT!!!! 💥💥#TheGoatLifepic.twitter.com/WzFfJf6gSQ— Cinema Madness 24*7 (@CinemaMadness24) March 28, 2024
">March 28, 2024
ಇದನ್ನೂ ಓದಿ:The Goat Life ಸಿನಿಮಾಗಾಗಿ 16 ವರ್ಷಗಳನ್ನು ಮೀಸಲಿಟ್ಟಿದ್ದೇನೆ; ನಟ ಪೃಥ್ವಿರಾಜ್ ಸುಕುಮಾರನ್
ಈ ಸಿನಿಮಾವನ್ನು ಕಣ್ತುಂಬಿಕೊಂಡ ಪ್ರೇಕ್ಷಕರು ಎಂತಹ ಸಿನಿಮಾ ಇದು ನಿಜವಾಗಲೂ ಅದ್ಭುತವಾಗಿದೆ. ನಟ ಪೃಥ್ವಿರಾಜ್​ ಸುಕುಮಾರನ್ ನಟನೆ ಸೂಪರ್​, ನಿರೀಕ್ಷೆಗೆ ತಕ್ಕಂತೆ ಈ ಸಿನಿಮಾ ಮೂಡಿ ಬಂದಿದೆ. ಈ ಚಿತ್ರಕ್ಕೆ ನಿಜಕ್ಕೂ ಜನರ ಬೆಂಬಲ ಸಿಗಬೇಕು, ಯಾರು ಕೂಡ ಈ ಸಿನಿಮಾವನ್ನು ಮಿಸ್​ ಮಾಡಿಕೊಳ್ಳಬೇಡಿ ಎಂಬ ಮಾತುಗಳು ಪ್ರೇಕ್ಷಕರಿಂದ ಕೇಳಿ ಬರುತ್ತಿವೆ. ಈ ಸಿನಿಮಾದಲ್ಲಿ ಪೃಥ್ವಿರಾಜ್​ ಸುಕುಮಾರನ್​, ಅಮಲಾ ಪೌಲ್​, ಜಿಮ್ಮಿ ಜೀನ್​ ಲೂಯಿಸ್​, ಕೆ.ಆರ್​. ಗೋಕುಲ್​ ಮುಂತಾದವರು ಅಭಿನಯಿಸಿದ್ದಾರೆ. ಪ್ರೇಕ್ಷಕರಿಂದ ಸಿಗುತ್ತಿರೋ ಪ್ರತಿಕ್ರಿಯೆ ಸಿಗುತ್ತಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us