ತನಿಖೆ ಮಾಡುವಾಗ ಬೈಕ್ ಕಳ್ಳತನ ಮಾಡುತ್ತಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾನು ಊರಿಗೆ ಹೋಗಬೇಕು ಎಂದು ಹಣ ಕೇಳಿದ್ದ ಆರೋಪಿ ಹಖೀಬ್ ಖಾನ್
ಮಡಿವಾಳ ಠಾಣಾ ವ್ಯಾಪ್ತಿಯ ಖಾಸಗಿ ಹೋಟಲ್ ಕೆಲಸ ಮಾಡುತ್ತಿದ್ದ ಹಾಖೀಬ್
ಬೆಂಗಳೂರು: ಹೋಟೆಲ್ನಲ್ಲಿ ಕೆಲಸ ಮಾಡುತಿದ್ದವನು ಬೈಕ್ ಕಳ್ಳತನ ಮಾಡಿ ಪೊಲೀಸರ ಕೈಗೆ ಲಾಕ್ ಆದ ಘಟನೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಾಖೀಬ್ ಖಾನ್ ಬಂಧಿತ ಆರೋಪಿಯಾಗಿದ್ದಾನೆ. ಬಂಧಿತ ಆರೋಪಿ ಹಾಖೀಬ್ ಖಾನ್ ಕೇರಳ ಮೂಲದ ನಿವಾಸಿ.
ಇದನ್ನೂ ಓದಿ: ಹಾಸನ ಅಶ್ಲೀಲ ವಿಡಿಯೋ ಪ್ರಕರಣ.. ವಿಡಿಯೋ ನೋಡೋಕೆ ಧೈರ್ಯ ಮಾಡಿಲ್ಲ ಎಂದ ನಿಖಿಲ್ ಕುಮಾಸ್ವಾಮಿ
ಈತನು ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖಾಸಗಿ ಹೋಟಲ್ ಕೆಲಸ ಮಾಡುತಿದ್ದ. ಆದರೆ ಹೋಟೆಲ್ ಮ್ಯಾನೇಜ್ಮೆಂಟ್ ಒಂದು ತಿಂಗಳು ಸಂಬಳ ವಿಳಂಬ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮ್ಯಾನೇಜರ್ ಬಳಿ ಹೋಗಿ ನಾವು ಜೀವನ ಸಾಗಿಸುವುದು ಎಂದು ಪ್ರಶ್ನೆ ಮಾಡಿದ್ದನಂತೆ. ಜೊತೆಗೆ ಹಖೀಬ್ ಖಾನ್ ನಾನು ಊರಿಗೆ ಹೋಗ ಬೇಕು ಎಂದು ಹಣ ಕೇಳಿದ್ದನಂತೆ. ಆದರೆ ಆತನ ಮಾತಿಗೆ ಮ್ಯಾನೇಜರ್ ಇಲ್ಲಿ ಇಷ್ಟು ಬೈಕ್ ಇದೆ, ಯಾವುದಾದರೂ ಒಂದು ಕಳ್ಳತನ ಮಾಡಿ, ಅದನ್ನು ಮಾರಿ ಊರಿಗೆ ಹೋಗು ಅಂತ ತಮಾಷೆ ಮಾಡಿದ್ದನಂತೆ.
ಈ ಮಾತನ್ನು ಗಂಭೀರವಾಗಿ ತೆಗೆದುಕೊಂಡ ಆರೋಪಿ ಹಾಖೀಬ್ ಖಾನ್ ಯೂಟ್ಯೂಬ್ನಲ್ಲಿ ಬೈಕ್ ಲಾಕ್ ಓಪನ್ ಮಾಡುವು ನೋಡಿ ಆರ್ ಎಕ್ಸ್ 100 ಕಳ್ಳತನ ಮಾಡಿದ್ದಾನೆ. ಹೋಟೆಲ್ ಮುಂದೆ ಇರುವ ಪಾರ್ಕಿಂಗ್ನಲ್ಲಿ ಬೈಕ್ ಕಳ್ಳತನ ಮಾಡಿ ಬಳಿಕ 25 ಸಾವಿರಕ್ಕೆ ಡಾಕ್ಯುಮೆಂಟ್ ಇಲ್ಲದೆ ಬೈಕ್ ಮಾರಾಟ ಮಾಡಿದ್ದಾನೆ. ಇದಾದ ಬೆನ್ನಲ್ಲೇ ಬೈಕ್ ಕಳ್ಳತನವಾಗಿದೆ ಎಂದು ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಕೂಡಲೇ ತನಿಖೆ ನಡೆಸಿದಾಗ ಆರೋಪಿ ಬೈಕ್ ಕಳ್ಳತನ ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಳಿಕ ಆರೋಪಿ ಹಾಖೀಬ್ ಖಾನ್ನನ್ನು ಮಡಿವಾಳ ಪೊಲೀಸ್ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ