Advertisment

ದರ್ಶನ್ ಜೊತೆಯಲ್ಲೇ ಇರ್ತಾರೆ ಮೂವರು ದುಶ್ಮನ್​​ಗಳು.. ಪ್ರತಿ ಅನಾಹುತಗಳಿಗೂ ಕಾರಣ ಅವೇ..!

author-image
Ganesh
Updated On
ದರ್ಶನ್​​ಗೆ ಮತ್ತಷ್ಟು ಸಂಕಷ್ಟ.. ಪೊಲೀಸರಿಗೆ ಸಿಗ್ತಿದೆ ಬಲವಾದ ಸಾಕ್ಷಿಗಳು..!
Advertisment
  • ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ದರ್ಶನ್ ಅಂಡ್ ಗ್ಯಾಂಗ್ ಅರೆಸ್ಟ್
  • ಪೊಲೀಸ್ ಕಸ್ಟಡಿಯಲ್ಲಿರುವ ದರ್ಶನ್, ಪವಿತ್ರ ಗೌಡಗೆ ತೀವ್ರ ವಿಚಾರಣೆ
  • ದರ್ಶನ್ ನಡವಳಿಕೆಗೆ ತಿರುಗು ಬಾಣ ಆಗೋದು ಯಾರು ಗೊತ್ತಾ?

ಸ್ಯಾಂಡಲ್​ವುಡ್​ನಲ್ಲಿ ದರ್ಶನ್ ಅಂದ್ರೆ ಕಾಂಟ್ರೋವರ್ಸಿ. ಕಾಂಟ್ರೋವರ್ಸಿ ಅಂದ್ರೆ ದರ್ಶನ್ ಅನ್ನೋ ಆಗಿದೆ. ಯಾಕಂದ್ರೆ ದರ್ಶನ್​ ಸಿನಿಮಾಗಳಿಂದ ಸುದ್ದಿಯಾಗಿದ್ದಗಿಂತ ವಿವಾದಗಳಿಂದಲೇ ಸುದ್ದಿಯಾಗಿದ್ದು ಹೆಚ್ಚು. ಅಷ್ಟಕ್ಕೂ ದರ್ಶನ್​ ವಿವಾದಗಳಿಗೆ ಕಾರಣವಾಗಿರೋದು ಆ ಮೂರು ಅಂಶಗಳು. ಆ ಮೂರು ಮೇಜರ್‌ ಅಂಶಗಳಿಂದಲೇ ಇವತ್ತು ದರ್ಶನ್‌ಗೆ ಈ ಪರಿಸ್ಥಿತಿ ಬಂದಿರೋದು ಅಂತಾ ವಿಮರ್ಶಿಸಲಾಗ್ತಿದೆ.

Advertisment

ಒಂದು ಸಿನಿಮಾ ಹಿಟ್ ಆದ್ರೂ ಸಾಕು.. ದರ್ಶನ್ ಮತ್ತೆ ವಿವಾದಗಳಿಂದಲೇ ಸುದ್ದಿಯಾಗಿಬಿಡ್ತಾರೆ. ವಿವಾದಗಳು ಅವರನ್ನು ಹಿಂಬಾಲಿಸುತ್ತವೋ, ಅವರೇ ವಿವಾದಗಳನ್ನ ಹಿಂಬಾಲಿಸುತ್ತಾರೋ ಅನ್ನೋ ಮಟ್ಟಿಗೆ ದರ್ಶನ್ ವಿವಾದಿತ ಕಿಂಗ್ ಎಂದೇ ಬಿಂಬಿತರಾಗುತ್ತಿದ್ದಾರೆ.

ಇದನ್ನೂ ಓದಿ:ಸೂತ್ರಧಾರಿಗಳ ತಾಳಕ್ಕೆ ಕುಣಿದ ಪಾತ್ರಧಾರಿಗಳು.. ಯಾರು ಯಾವ ರೋಲ್ ನಿಭಾಯಿಸಿದರು..?

ದರ್ಶನ್​ ದುಶ್ಮನ್-1 ಅಸಹನೆ
ದರ್ಶನ್​ಗೆ ಸಹನೆ ಕಮ್ಮಿ ಅನ್ನೋದು ಎಲ್ಲರಿಗೂ ಗೊತ್ತು. ದರ್ಶನ್ ಸಹನೆ ಕಳ್ಕೊಂಡಾಗ ಅವರ ಬಾಯಿಂದ ಬರೋ ಮಾತುಗಳು ನಿಜಕ್ಕೂ ಭಯಂಕರವಾಗಿರುತ್ತೆ. ಎದುರಿಗಿದ್ದ ವ್ಯಕ್ತಿಗೆ ಉತ್ತರ ಕೊಡುವ ಭರದಲ್ಲಿ ನಾಲಿಗೆ ಹರಿಬಿಟ್ಟು ಮಾತನಾಡ್ತಾರೆ.. ದರ್ಶನ್ ಬದಲಾಗೋದಕ್ಕೂ ಕಾರಣವಿದೆ.

Advertisment

ದರ್ಶನ್​ ವೀಕನೆಸ್ ಅಂದ್ರೆ ಕೆಟ್ಟದನ್ನ ಕೆಟ್ಟ ರೀತಿಯಲ್ಲೇ ತೆಗೆದುಕೊಳ್ಳೋದು ಯಾವುದೇ ನೆಗೆಟಿವ್ ವಿಚಾರ ಬಂದ್ರೂ ಅದಕ್ಕೆ ರಿಯಾಕ್ಟ್ ಮಾಡುವಾಗ ಸಹನೆ ಕಳ್ಕೊಂಡು ಮಾತನಾಡೋ ಗುಣವೇ ದರ್ಶನ್​​ರ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆಯಾಗಿತ್ತು ಅಂದ್ರೂ ತಪ್ಪಾಗಲ್ಲ. ಅದಕ್ಕೆ ಬೆಸ್ಟ್ ಎಕ್ಸಾಂಪಲ್​ ಅಂದ್ರೆ ಮೊನ್ನೆ ಮೊನ್ನೆಯಷ್ಟೆ ನಡೆದಿದ್ದ ಕಾಟೇರ ಕತೆ ವಿಚಾರವಾಗಿ ಉಮಾಪತಿ ಮತ್ತು ದರ್ಶನ್ ನಡುವೆ ನಡೆದಿದ್ದ ಟಾಕ್ ವಾರ್.

ಇದನ್ನೂ ಓದಿ:‘ಮಗನ ಮದ್ವೆಗೆ ತಯಾರಿ ನಡೆದಿತ್ತು..’ ಒಬ್ಬಾಕೆಯಿಂದ ಏನೆಲ್ಲ ಆಗೋಯ್ತು..? ಪವಿತ್ರ ಗೌಡ ಕೊಟ್ಟ 10 ಪಂಚ್..!

ದರ್ಶನ್ ದುಶ್ಮನ್​ -2 ಕುಡಿತ
ದರ್ಶನ್​ ಕುಡಿತಾರೆ ಅನ್ನೋ ಹೊಸ ವಿಷ್ಯ ಏನಲ್ಲ.. ದರ್ಶನ್​ ಡ್ರಿಂಕ್ಸ್ ಮಾಡೋ ವಿಚಾರ ಇಂಡಸ್ಟ್ರಿಯಲ್ಲಿ ಎಲ್ಲರಿಗೂ ಗೊತ್ತಿರುವ ವಿಚಾರವೇ.. ಈ ಕುಡಿತ ಕೂಡ ದರ್ಶನ್​​ಗೆ ದೊಡ್ಡ ದುಶ್ಮನ್​.. ಯಾಕಂದ್ರೆ ದರ್ಶನ್​ ಕುಡ್ದಾಗ ಅವರ ಬಾಯಿಂದ ಬರೋ ಮಾತುಗಳು ಇರದೇ ಇರೋ ವಿವಾದಗಳನ್ನೆಲ್ಲ ಸೃಷ್ಟಿ ಮಾಡಿಬಿಡುತ್ತೆ.

Advertisment

ಕುಡ್ದಾಗ ದರ್ಶನ್ ಮಾತನಾಡುವ ರೀತಿ ಬೇರೆಯೇ ಆಗಿರುತ್ತೆ. ಅವರ ಮುಖದ ಭಾವ ಎಲ್ಲವೂ ಬದಲಾಗಿರುತ್ತೆ. ಅದಕ್ಕೆ ಉದಾಹರಣೆ ಮೈಸೂರಿನ ಸಂದೇಶ ಹೋಟೆಲ್​ನಲ್ಲಿ ನಡೆದಿದ್ದ ಗಲಾಟೆ.. ಸಂದೇಶ್​ ಹೋಟೆಲ್​ನಲ್ಲಿ ವೇಟರ್​ ಒಬ್ಬನ ಮೇಲೆ ದರ್ಶನ್ ಕುಡಿದು ಹಲ್ಲೆ ಮಾಡಿದ್ರು ಅನ್ನೋ ಸುದ್ದಿ ಹಲ್ ಚಲ್ ಸೃಷ್ಟಿಸಿಬಿಟ್ಟಿತ್ತು. ಅವತ್ತು ಹೋಟೆಲ್​ನಿಂದ ಬಂದು ಹೊರಗೆ ಮಾತನಾಡಿದ್ದ ದರ್ಶನ್​ ನಾಲಿಗೆ ಹರಿಬಿಟ್ಟಿದ್ದರು.

ಇದನ್ನೂ ಓದಿ:ಅಪ್ಪನ ಜೀವ ತೆಗೆದ ದರ್ಶನ್ ಮೇಲಿನ ಅಭಿಮಾನ.. ಪ್ರಕರಣದಲ್ಲಿ ಅನು ಪಾತ್ರ ಏನು..?

ಎತ್ತರವಾಗಿ ಬೆಳೆದಷ್ಟು ಎಚ್ಚರವಾಗಿರಬೇಕು. ಆದ್ರೆ ದರ್ಶನ್ ವಿಚಾರದಲ್ಲಿ ಎತ್ತರವಾಗಿ ಬೆಳೆದಷ್ಟು ಎಡವಿದ್ದೆ ಜಾಸ್ತಿ.. ಸೂಕ್ಷ್ಮೂ ವಿಚಾರಗಳಲ್ಲಿ ಮಾತನಾಡುವಾಗ ದರ್ಶನ್​ ಬಾಯ್ ಹರಿಬಿಟ್ಟಿದ್ದು ಎಷ್ಟೊ ವಿವಾದಗಳಿಗೆ ಕಾರಣವಾಗಿದೆ. ಅವರ ಒಳ್ಳೆ ಉದ್ದೇಶದಿಂದ ಹೇಳಿದ್ರೂ ಕೂಡ ಅದು ನೆಗೆಟಿವ್ ಶೇಡ್ ಪಡೆದಿರೋ ಉದಾಹರಣೆಯೂ ಇದೆ. ಮಾತನಾಡೋ ಭರದಲ್ಲಿ ಅದೃಷ್ಟ ಲಕ್ಷ್ಮೀ ಬಗ್ಗೆ ಮಾತನಾಡಿದ್ದ ದರ್ಶನ್ ಹೇಳಿಕೆ ದೊಡ್ಡ ಸಂಚಲನವನ್ನೆ ಸೃಷ್ಟಿ ಮಾಡಿಬಿಟ್ಟಿತ್ತು. ಅದೃಷ್ಟ ಲಕ್ಷ್ಮೀ ಬಗ್ಗೆ ಹೇಳುವಾಗ ದರ್ಶನ್ ನೀಡಿದ್ದ ಹೇಳಿಕೆ ಅದೆಷ್ಟೋ ವಿರೋಧಗಳಿಗೆ ಕಾರಣವಾಗಿತ್ತು.. ಮಹಿಳಾ ಸಂಘದವರು ದೂರು ಕೊಡೋ ಮೂಲಕ ಮತ್ತೆ ಕಾಂಟ್ರವರ್ಸಿ ಕ್ರಿಯೇಟ್ ಮಾಡಿತ್ತು.

Advertisment

ದರ್ಶನ್ ದುಶ್ಮನ್​ 3 ಕೋಪ
ದರ್ಶನ್ ಕೋಪಿಷ್ಟ ಅನ್ನೋ ವಿಚಾರ ಹೊಸದೇನಲ್ಲ. ಕೋಪದಲ್ಲಿ ಮಾತನಾಡುವಾಗ ದರ್ಶನ್ ಏನ್ ಮಾತಾಡ್ತಾರೆ ಅನ್ನೋದ ಅವರಿಗೂ ಗೊತ್ತಿರಲ್ಲ. ಸಣ್ಣ ವಿಚಾರಕ್ಕೂ ಸಹ ದರ್ಶನ್​ ಥಟ್ ಅಂತ ಕೋಪ ಮಾಡಿಕೊಳ್ಳುವ ಗುಣವೇ ಇವತ್ತು ರೇಣುಕಸ್ವಾಮಿ ಕೊಲೆಗೂ ಕಾರಣವಾಗಿದೆ. ಪವಿತ್ರಾಗೌಡ ವಿಚಾರದಲ್ಲಿ ದರ್ಶನ್ ತಾಳ್ಮೆಯಿಂದ ವರ್ತಿಸಿದ್ರೆ ಇವತ್ತು ಈ ಪರಿಸ್ಥಿತಿ ಬರ್ತಾ ಇರಲಿಲ್ಲ. ಕೋಪದಲ್ಲಿ ಮಾಡಿದ ಎಡವಟ್ಟು ಈಗ ದರ್ಶನ್ ಜೈಲಿನಲ್ಲಿ ಬಂಧಿಯಾಗುವಂತೆ ಮಾಡಿರೋದು ಅಂದ್ರೂ ತಪ್ಪಾಗಲ್ಲ ಎಂಬ ಮಾತುಗಳು ಕೇಳಿಬಂದಿವೆ.
ಮನುಷ್ಯ ಅಂದ್ಮೇಲೆ ಕೋಪ.. ಅಸಹನೆ ಅನ್ನೋದು ಎಲ್ಲ ಕಾಮನ್.. ಆದ್ರೆ ದರ್ಶನ್ ವಿಚಾರದಲ್ಲಿ ಈ ವಿಚಾರಗಳು ಲಿಮಿಟ್ ಮೀರಿವೆ. ಅದ್ರಲ್ಲೂ ಸ್ಟಾರ್ ಅನ್ನೋ ಪಟ್ಟ.. ವೈಯುಕ್ತಿಕ ಜೀವನದಲ್ಲಿ ಉಂಟಾದ ಏರುಪೇರು ಇವೆಲ್ಲ ದರ್ಶನ್​ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರಿರೋದಂತು ಸುಳ್ಳಲ್ಲ.

ಇದನ್ನೂ ಓದಿ:‘ಅವರಣ್ಣ ಉಂಟು, ಅವನುಂಟು.. ನಾವು ತಲೆನೇ ಕೆಡಿಸಿಕೊಳ್ಳಲ್ಲ’ ಆರೋಪಿ ಪವನ್ ತಂದೆ ಅಚ್ಚರಿ ಹೇಳಿಕೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment