/newsfirstlive-kannada/media/post_attachments/wp-content/uploads/2024/06/Vinod-Prabhakar-On-Darshan-1.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಅವರನ್ನು ಇಂದು ಕುಟುಂಬ ಸದಸ್ಯರು, ಆತ್ಮೀಯರು ಭೇಟಿಯಾಗಿದ್ದಾರೆ. ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮೀ ಭೇಟಿಯಾದ ಜೊತೆಗೆ ನಟ ವಿನೋದ್ ಪ್ರಭಾಕರ್ ಅವರು ಭೇಟಿಯಾಗಿ ದರ್ಶನ್ ಹೇಗಿದ್ದಾರೆ ಅನ್ನೋ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಜೈಲಲ್ಲಿ 2ನೇ ರಾತ್ರಿ ಕಳೆದ ದರ್ಶನ್.. ಸರಿಯಾಗಿ ಊಟ, ನಿದ್ದೆ ಇಲ್ಲದ ‘ಕಾಟೇರ’ನ ಕತೆ-ವ್ಯಥೆ ಹೀಗಿದೆ
ಬೆಳಗ್ಗೆ ದರ್ಶನ್ ಅವರನ್ನ ಭೇಟಿಯಾಗಲು ಪರಪ್ಪನ ಅಗ್ರಹಾರಕ್ಕೆ ತೆರಳಿದ್ದ ವಿನೋದ್ ಪ್ರಭಾಕರ್ ಅವರು ಅಧಿಕಾರಿಗಳು ಫ್ಯಾಮಿಲಿ ಸದಸ್ಯರಿಗೆ ಮಾತ್ರ ಇವತ್ತು ಭೇಟಿಯಾಗಲು ಅವಕಾಶ ನೀಡಿದ್ದಾರೆ. ಆದರೂ ದರ್ಶನ್ ಭೇಟಿಯಾಗಲು ಪ್ರಯತ್ನ ಮಾಡ್ತೀನಿ ಅಂತಾ ಹೇಳಿ ಒಳಗೆ ಹೋಗಿದ್ದರು.
ಕಾರಾಗೃಹದಲ್ಲಿ ಕೊನೆಗೂ ದರ್ಶನ್ ಅವರನ್ನು ಭೇಟಿಯಾಗಿ ಬಂದ ವಿನೋದ್ ಪ್ರಭಾಕರ್ ಅವರು, ಮೊದಲನೆಯದಾಗಿ ಮೃತ ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಬೇಕು. ಅವರ ತಂದೆ, ತಾಯಿ, ಅಜ್ಜಿ, ಪತ್ನಿಗೆ ಭಗವಂತ ಧೈರ್ಯ ಕೊಡಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಸೌಂದರ್ಯ ಜಗದೀಶ್ ಮೇಲೆ ದರ್ಶನ್ ಒತ್ತಡ.. ಪವಿತ್ರಾ ಗೌಡ ಮನೆ ಖರೀದಿಗೆ ₹2 ಕೋಟಿ ಕೊಟ್ರಾ?
ದರ್ಶನ್ ಅವ್ರನ್ನು ಭೇಟಿ ಆಗಬೇಕು ಅಂತ ಬಂದಿದ್ದೆ. ಜೈಲಿನ ನಿಯಮಾವಳಿ ಪ್ರಕಾರವೇ ಮನವಿ ಮಾಡಿಕೊಂಡೆ. ಕೇವಲ ಎರಡೇ ಎರಡು ಸೆಕೆಂಡ್ ಮಾತ್ರ ದರ್ಶನ್ ಸಾರ್ ಮಾತಾಡೋಕೆ ಸಿಕ್ಕಿದ್ದರು. ದರ್ಶನ್ ಮುಖದಲ್ಲಿ ಮೌನ ಇತ್ತು. ಏನನ್ನೂ ಮಾತಾಡಲಿಲ್ಲ. ಮಂಕಾಗಿಯೇ ದರ್ಶನ್ ಇದ್ದರು. ನಾನು ಬಾಸ್ ಅಂತ ಕರೆದೆ ಅದಕ್ಕೆ ಅವರು ಟೈಗರ್ ಅಂದು ಶೇಕ್ ಹ್ಯಾಂಡ್ ಮಾಡಿದರು ಅಷ್ಟೇ ಎಂದು ವಿನೋದ್ ಪ್ರಭಾಕರ್ ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ಬೆಳಕಿಗೆ ಬಂದ ಮೇಲೆ ವಿನೋದ್ ಪ್ರಭಾಕರ್ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಬಗ್ಗೆ ಮಾತನಾಡಿದ ವಿನೋದ್ ಪ್ರಭಾಕರ್, ನಾನು ಯಾಕಿನ್ನೂ ಈ ಘಟನೆ ಬಗ್ಗೆ ಮಾತಾಡ್ಲಿಲ್ಲ ಅಂದ್ರೆ ಮೊದಲು ದರ್ಶನ್ ಭೇಟಿ ಆಗಬೇಕು ಅಂತ ಕಾಯ್ತಿದ್ದೆ. ಆ ಕಾರಣಕ್ಕೆ ಎಲ್ಲೂ ರಿಯಾಕ್ಟ್ ಮಾಡಿರಲಿಲ್ಲ ಎಂದರು.
ಇನ್ನು, ದರ್ಶನ್ ಅವರನ್ನ ನಾನು ಭೇಟಿಯಾಗಿ 4 ತಿಂಗಳಾಗಿತ್ತು. ಅವರ ಬರ್ತ್ ಡೇ ನಂತರ ಒಂದು ಪಾರ್ಟಿಯಲ್ಲಿ ಸಿಕ್ಕಿದ್ವಿ ಅಷ್ಟೇ. ನಿಮಗೆಷ್ಟು ಗೊತ್ತಿದ್ಯೋ ಅಷ್ಟೇ ನನಗೂ ಗೊತ್ತಿರೋದು. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಹೋಗಲು ಪ್ರಯತ್ನಿಸಿದ್ದೆ. ದರ್ಶನ್ ಅವರನ್ನ ಭೇಟಿಯಾಗಲು ದೇವರ ಹತ್ರ ಬೇಡಿಕೊಂಡು ಬಂದಿದ್ದೆ. ಭೇಟಿಯಾಗಿದ್ದೇನೆ. ಎಲ್ಲರಿಗೂ ನ್ಯಾಯ ಸಿಗಲಿ ಎಂದು ವಿನೋದ್ ಪ್ರಭಾಕರ್ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ