newsfirstkannada.com

ಆಸ್ಕರ್ ವೇದಿಕೆಯಲ್ಲಿ ಅಯ್ಯಯ್ಯೋ ಜಾನ್ ಸೀನಾ.. ಇದು ಪ್ರಮಾದನಾ? ಚರ್ಚೆಯ ಚಂಪಾಕಲಿನಾ?

Share :

Published March 11, 2024 at 1:19pm

  ಜಾನ್ ಸೀನಾಗೆ ಭಾರತ ಸೇರಿ ಬೇರೇ ಬೇರೆ ದೇಶಗಳಲ್ಲೂ ಅಭಿಮಾನಿಗಳ ದಂಡು

  ಜಾನ್ ಸೀನಾ ಅವರ ಹೊಡಿಬಡಿ ಆಟದ ಜೊತೆಗೆ ಫೇಮಸ್ ಘೋಷಣೆ ಯಾವುದು?

  ಅಚ್ಚರಿ, ನಾಚಿಕೆ, ನಗೆಯ ಜೊತೆಗೆ ಜಾನ್ ಸೀನಾ ನೀಡಿದ ಸಂದೇಶ ಏನು?

ನಂಗೆ ಬಟ್ಟೆ ಬೇಡ ಅಂತ ಡೈಲಾಗ್ ಹೇಳ್ತಾ ಯೋಗರಾಜ್ ಭಟ್ ನಿರ್ದೇಶನದ ಮನಸಾರೆ ಸಿನಿಮಾದಿಂದ ಕರ್ನಾಟಕ ಫೇಮಸ್ ಆದ್ರು ಹಾಸ್ಯ ನಟ ಮಿತ್ರ. ಆದ್ರೆ ಇಲ್ಲೊಬ್ಬ ಹಾಲಿವುಡ್ ನಟ ಬಟ್ಟೆ ಹಾಕದೆ ಬಂದು ವಿಶ್ವ ಮಟ್ಟದಲ್ಲಿ ನೋಡುವ ವೇದಿಕೆಯ ಮೇಲೆ ಬಂದು ವೈರಲ್ ಆಗ್ತಾ ಇದ್ದಾರೆ.

ಇವ್ರು ಯಾರು ಅನ್ನೋದು ನಿಮಗೆ ಖಂಡಿತ ಗೊತ್ತಿರುತ್ತದೆ. ಹಾಲಿವುಡ್ ಸಿನಿಮಾ ನೋಡುರಿಗೂ ಈ ವ್ಯಕ್ತಿ ಗೊತ್ತು.. WWE ನೋಡೋರಿಗೂ ಚೆನ್ನಾಗೆಗೊತ್ತು.. ಜಾನ್ ಸೀನ.. ‘ಜಾನ್ ಫೇಲಿಕ್ಸ್ ಅಂಟೋನಿ ಸೀನ’.. ವಿಶ್ವವಿಖ್ಯಾತ ರೆಸ್ಲರ್.. ಯು.ಎಸ್ ಮೂಲದವರಾಗಿದ್ದರು ನಮ್ಮ ಭಾರತ ಸೇರಿದಂತೆ ನಾನಾ ದೇಶದಲ್ಲೂ ಜಾನ್ ಸೀನಗೆ ಅಪ್ಪಟ್ಟ ಅಭಿಮಾನಿಗಳಿದ್ದಾರೆ. ಜಾನ್ ಸೀನಾ ಅವರ ಹೊಡಿಬಡಿ ಆಟದ ಜೊತೆಗೆ ‘ಯೂ ಕ್ಯಾನ್ ಸೀ ಮಿ’ , ‘ನೇವರ್ ಗಿವ್ ಅಪ್’ ಅನ್ನೋ ಸ್ಲೋಗನ್​ ಗಳು ವಿಶ್ವವಿಖ್ಯಾತಗೊಂಡಿವೆ.

ಇದನ್ನೂ ಓದಿಆಸ್ಕರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಬಟ್ಟೆ ಇಲ್ಲದೇ ವೇದಿಕೆಗೆ ಎಂಟ್ರಿ ಕೊಟ್ಟ WWE ಸ್ಟಾರ್ ಜಾನ್ ಸೀನಾ..! Video

ಇಂತಿಪ್ಪ ಬರೋಬ್ಬರಿ 13 ಬಾರಿ ವಲ್ಡ್ ಹೈವಿವೆಟ್ ಚಾಂಪಿಯನ್​ ಬೆಲ್ಟ್ ಅನ್ನ ಗೆದ್ದಿರುವ ಜಗಜಟ್ಟಿ 20ಕ್ಕೂ ಹೆಚ್ಚು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ಫೇಮಸ್ ಸೂಪರ್ ಸ್ಟಾರ್ ಬಟ್ಟೆ ಇಲ್ದಂಗೆ ಬೆತ್ತಲೆಯಾಗಿ 94ನೇ ಆಸ್ಕರ್ ವೇದಿಕೆಯ ಅಂಗಳದ ಮೇಲೆ ಹೋಗ್ತಾರೆ ಅಂದ್ರೆ ಇಂಟರ್​ನ್ಯಾಷನಲ್ ಸುದ್ದಿ ಆಗ್ದೆ ಇರುತ್ತಾ ಹೇಳಿ..!!!?

ಹೌದು.. ನೆನ್ನೆ ನಡೆದ 2024ರ ಆಸ್ಕರ್ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಜಾನ್ ಸೀನ ಬಟ್ಟೆ ಇಲ್ಲದೆ ವೇದಿಕೆಯ ಮೇಲೆ ಹೋಗಿ ಪ್ರಶಸ್ತಿಯನ್ನ ಅನೌನ್ಸ್ ಮಾಡಿದ್ದಾರೆ.. ಕಟ್ಟು ಮಸ್ತ್ ದೇಹವನ್ನ ನೋಡಿದ್ದ ಅಭಿಮಾನಿಗಳು ಅಥವಾ ಸೆಲೆಬ್ರಿಟಿ ಸ್ನೇಹಿತರು ಜಾನ್ ಸೀನ ಅವರನ್ನ ತುಂಡು ಬಟ್ಟೆಯೂ ಇಲ್ದಂಗೆ ನೋಡಿ ಅಚ್ಚರಿ, ಆಶ್ಚರ್ಯ, ನಾಚಿಕೆ, ನಗೆ ಎಲ್ಲವೂ ಒಟ್ಟಿಗೆ ಆಗಿದೆ..

ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಪ್ರತಿಬಾರಿಯಂತೆ ಈ ಬಾರಿಯೂ ಕೋಲಾಹಲ ಸೃಷ್ಟಿಯಾಗಿದೆ. ಈ ವೇದಿಕೆ ಮೇಲೆ ಏನಾದರೂ ಒಂದು ಅನಿರೀಕ್ಷತ ಬೆಳವಣಿಗೆ ಸೃಷ್ಟಿಯಾಗೋದು ಮಾಮೂಲಿ. ಕಳೆದ ವರ್ಷ, ವಿಲ್ ಸ್ಮಿತ್, ಕ್ರಿಸ್ ರಾಕ್‌ಗೆ ಕಪಾಳಮೋಕ್ಷ ಮಾಡಿದ್ದರು. ಈ ಸಲ WWE ಜನಪ್ರಿಯ ಸ್ಟಾರ್​ ಜಾನ್​ ಸೀನಾ ಅವರ ಸೂಪರ್ ಸರದಿ.

ಇದನ್ನೂ ಓದಿOscars 2024: ಭಗವದ್ಗೀತೆ ವಿಚಾರದಲ್ಲಿ ವಿವಾದ ಸೃಷ್ಟಿಸಿದ್ದ ಓಪನ್ಹೈಮರ್ ಚಿತ್ರಕ್ಕೆ 7 ಆಸ್ಕರ್ ಅವಾರ್ಡ್..!

ಆಸ್ಕರ್ ಅವಾರ್ಡ್ಸ್ ವೇದಿಕೆಗೆ ಜಾನ್ ಸೀನಾ ಅವರು ‘ಬೆಸ್ಟ್​ ಕಾಸ್ಟ್ಯೂಮ್ ಅವಾರ್ಡ್’​ಗೆ ನಾಮಿನೇಟ್ ಆದವರ ಹೆಸರನ್ನು ಘೋಷಣೆ ಮಾಡಲು ಬಂದಿದ್ದರು. ಗಣ್ಯರು ತುಂಬಿದ್ದ ವೇದಿಕೆ ಮೇಲೆ ಜಾನ್​ ಸೀನಾ ಮೈಮೇಲೆ ಬಟ್ಟೆ ಇಲ್ಲದೇ ಬೆತ್ತಲಾಗಿ ಬಂದು ಅಚ್ಚರಿ ಮೂಡಿಸಿದ್ದಾರೆ. ಅತ್ಯುತ್ತಮ ಕಾಸ್ಟ್ಯೂಮ್ ಅವಾರ್ಡ್​​ ನಾಮನಿರ್ದೇಶಿತರ ಹೆಸರನ್ನು ವಿಭಿನ್ನವಾಗಿ ಹೇಳಲು ಪ್ರಯತ್ನಿಸಿ, ಟೀಕೆ ಟಿಪ್ಪಣಿಗೆ ಗುರಿಯಾಗಿದ್ದಾರೆ.

ಬಟ್ಟೆ ಇಲ್ಲದೇ ವೇದಿಕೆ ಮೇಲೆ ಬಂದ ಜಾನ್ ಸೀನಾರನ್ನು ಕಂಡು ಗಣ್ಯರು ಮುಜುಗರಕ್ಕೆ ಒಳಗಾಗಿದ್ದಾರೆ. ಕೆಲವರು ನಾಚಿಕೆಯಿಂದ ಜೋರಾಗಿ ನಕ್ಕಿದ್ದಾರೆ. ಎಲ್ಲರೂ ನಗುತ್ತಿದ್ದಂತೆಯೇ ಕೊಂಚ ಸುಧಾರಿಸಿಕೊಂಡು ಸೀನಾ ಅವರು ಮಾತನಾಡಲು ಶುರು ಮಾಡಿದರು. ‘ಕಾಸ್ಟ್ಯೂಮ್ ತುಂಬಾನೇ ಮುಖ್ಯ. ಬಹುಶಃ ಅತ್ಯಂತ ಮುಖ್ಯವಾದದ್ದು’ ಎನ್ನುತ್ತಾರೆ.. ಆಗ ವೇದಿಕೆ ಮೇಲಿದ್ದವರು ಮತ್ತಷ್ಟು ಜೊರಾಗಿ ನಗುತ್ತಾರೆ. ಆಗ ನಿರೂಪಕ ಜಿಮ್ಮಿ ಕಿಮ್ಮೆಲ್‌ ವೇದಿಕೆಗೆ ಆಗಮಿಸಿ, ‘ಪುರುಷ ದೇಹವು ಜೋಕ್ ಅಲ್ಲ. ಬಟ್ಟೆಯಿಲ್ಲದೇ ವೇದಿಕೆಯನ್ನು ತಲುಪಿದ ಜಾನ್ ಸೆನಾ ಅವರ ಉದ್ದೇಶ ಬಟ್ಟೆ ಎಷ್ಟು ಮುಖ್ಯ ಎಂದು ಜನರಿಗೆ ತಿಳಿಸುವುದಾಗಿದೆ ಎನ್ನುತ್ತಾರೆ. ಆಗ ಲೈಟ್​​ಗಳನ್ನು ಡಿಮ್ ಮಾಡಿ ಜಾನ್​ ಸೀನಾ ಅವರಿಗೆ ಬಟ್ಟೆಗಳನ್ನು ತೊಡಿಸಲಾಗುತ್ತದೆ. ಜಾನ್ ಸೀನಾ ಬಟ್ಟೆ ಇಲ್ಲದೆ ಬಂದದ್ದು ಎಲ್ಲರಿಗೂ ಶಾಕ್ ಆಗಿತ್ತು.

ಈ ಆಸ್ಕರ್ ಪ್ರಶಸ್ತಿ ಪ್ರಸಂಗ ಈಗ ವಿಶ್ವಾದ್ಯಂತ ವೈರಲ್ ಆಗ್ತಾ ಇದೆ.. ಕೆಲವರಿಗೆ ಛಾಯ್ ಪೇ ಚರ್ಚೆಗೂ ಕಾರಣವಾಗಿದೆ.. ಈ ಹಿಂದೆನೂ ಹಿಂಗೆ ಒಬ್ಬ ಹಾಲಿವುಡ್ ಸ್ಟಾರ್ ಮಾಡಿದ್ರಂತೆ.. ಒಟ್ಟಿನಲ್ಲಿ ಆಸ್ಕರ್ ಆಂಗಳದಲ್ಲಿ ಏನಾದ್ರೊಂದು ಈ ರೀತಿ ಚರ್ಚೆಯ ಚಂಪಾಕಲಿ ಸೃಷ್ಟಿಯಾಗುತ್ತಲೆ ಇರುತ್ತದೆ.

ವಿಶೇಷ ವರದಿ: ಶ್ರೀಧರ್ ಶಿವಮೊಗ್ಗ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಸ್ಕರ್ ವೇದಿಕೆಯಲ್ಲಿ ಅಯ್ಯಯ್ಯೋ ಜಾನ್ ಸೀನಾ.. ಇದು ಪ್ರಮಾದನಾ? ಚರ್ಚೆಯ ಚಂಪಾಕಲಿನಾ?

https://newsfirstlive.com/wp-content/uploads/2024/03/John-cena.jpg

Load More