newsfirstkannada.com

ಖಾಸಗಿ ವಿಡಿಯೋ ವೈರಲ್​ ಬೆನ್ನಲ್ಲೇ ಎಚ್ಚೆತ್ತ ಜ್ಯೋತಿ ರೈ.. ನಟಿ ಕಾರ್ಯಕ್ಕೆ ಭಾರೀ ಮೆಚ್ಚುಗೆ!

Share :

Published May 10, 2024 at 5:29pm

Update May 10, 2024 at 5:31pm

  ಇದು ಕೇವಲ ಆರಂಭ ಎಂದು ಬರೆದುಕೊಂಡ ಬಹುಭಾಷಾ ನಟಿ ಜ್ಯೋತಿ ರೈ

  ಕೆಲಸವಿಲ್ಲದ ಫಾಲೋವರ್ಸ್​ಗಳಿಗಾಗಿ ಮಾತ್ರ ಈ ಅಂತ ಸವಾಲು ಹಾಕಿದ ನಟಿ

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ನಟಿಯ ಮತ್ತೊಂದು ವಿಡಿಯೋ

ಕನ್ನಡ ಕಿರುತೆರೆಯ ಕಿನ್ನರಿ ಸೀರಿಯಲ್ ನಟಿ ಹಾಗೂ ಬಹುಭಾಷಾ ಸಿನಿಮಾ ತಾರೆ ಜ್ಯೋತಿ ರೈ ವಿವಾದಕ್ಕೆ ಗುರಿಯಾಗಿದ್ದಾರೆ. ಇತ್ತೀಚೆಗೆ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ವೈರಲ್ ಆಗಿತ್ತು. ಇದರ ವಿರುದ್ಧ ಪೊಲೀಸರಿಗೆ ದೂರು ನೀಡಿರುವ ನಟಿ ಜ್ಯೋತಿ ರೈ ಅವರು ಇದೀಗ ಹೊಸ ವಿಡಿಯೋವೊಂದನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಅಶ್ಲೀಲ ವಿಡಿಯೋ ವೈರಲ್‌ ಕೇಸ್‌ಗೆ ಹೊಸ ಟ್ವಿಸ್ಟ್ ಕೊಟ್ಟ ನಟಿ ಜ್ಯೋತಿ ರೈ; ಅಸಲಿಗೆ ಆಗಿದ್ದೇನು?

ಹೌದು, ಬಹುಭಾಷಾ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಕೆಲ ಅಶ್ಲೀಲ ವಿಡಿಯೋಗಳು ವೈರಲ್ ಆಗಿದ್ದು, ಹಲ್ ಚಲ್ ಎಬ್ಬಿಸಿತ್ತು. ಈ ಸಂಬಂಧ ನಟಿ ಸೈಬರ್ ಕ್ರೈಂ ಪೊಲೀಸರಿಗೆ ದೂರು‌ ನೀಡಿದ್ದರು. ಇದಾದ ಬೆನ್ನಲ್ಲೇ ಇದೀಗ ನಟಿ ಜ್ಯೋತಿ ರೈ ಹೊಸ ವಿಡಿಯೋವನ್ನು ಶೇರ್​ ಮಾಡಿ ಟ್ರೋಲರ್ಸ್​ಗೆ ಓಪನ್​ ಚಾಲೆಂಜ್ ಮಾಡಿದ್ದಾರೆ. ಇತ್ತೀಚಿಗಷ್ಟೇ ತೆಲಂಗಾಣದ ಖ್ಯಾತ ಜಾನಪದ ಕಲಾವಿದ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ದರ್ಶನಂ ಮೊಗಿಲಯ್ಯ ಅವರು ಕಟ್ಟಡ ನಿರ್ಮಾಣ ಸ್ಥಳದಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಆ ವಿಡಿಯೋ ನೋಡಿದ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಬೇಸರ ಹೊರ ಹಾಕಿದ್ದರು. ಇದೀಗ ದರ್ಶನಂ ಮೊಗಿಲಯ್ಯ ಅವರಿಗೆ ನಟಿ ಜ್ಯೋತಿ ರೈ ಧನ ಸಹಾಯ ಮಾಡಿ ಆ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋ ಜೊತೆಗೆ ಈ ವಿಡಿಯೋವನ್ನು ವೈರಲ್ ಮಾಡಲು ನಿಮಗೆ ಧೈರ್ಯವಿದೆಯೇ? ಅಂತಾ ಓಪನ್​ ಚಾಲೆಂಜ್​ ಮಾಡಿದ್ದಾರೆ.

ಇದನ್ನೂ ಓದಿ: ಜೀವನಕ್ಕಾಗಿ ಕೂಲಿ ಕೆಲಸಕ್ಕಿಳಿದ ಪದ್ಮಶ್ರೀ ಪುರಸ್ಕೃತ.. ಅಸಲಿಗೆ ಆಗಿದ್ದೇನು?

ನಟಿ ಜ್ಯೋತಿ ರೈ ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಏನಿದೆ?

ಅಕ್ಷಯ ತೃತೀಯದ ಶುಭ ದಿನದಂದು, ವೃತ್ತಿಪರ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿರುವ ಶ್ರೀ ಪದ್ಮಶ್ರೀ ಕಿನ್ನೇರ ಮೊಗಲಯ್ಯ ಅವರಿಗೆ ₹50,000 ಆರ್ಥಿಕ ನೆರವು ನೀಡಿದ್ದೇನೆ. ಪತ್ರಿಕಾಗೋಷ್ಠಿ ನಡೆಸಿದ ಅವರು, ನನ್ನ ವೈಯಕ್ತಿಕ ಪ್ರಜಾಪ್ರತಿನಿಧಿಯ ಮೂಲಕ ಅವರ ಹೋರಾಟದ ಬಗ್ಗೆ ಅರಿವು ಮೂಡಿಸಿದ್ದರು. ಅವರು ಎದುರಿಸುತ್ತಿರೋ ಕಷ್ಟ ಕಂಡು ತಕ್ಷಣವೇ ಅವರನ್ನು ತಲುಪಲು ಪ್ರೇರೇಪಿಸಿತು. ಊಟದ ವ್ಯವಸ್ಥೆ ಮಾಡಿ ದೇಣಿಗೆ ನೀಡಿದ್ದೇನೆ. ನಾನು ಹೆಚ್ಚಿನ ಕೊಡುಗೆ ನೀಡಲು ಬಯಸುತ್ತಿರುವಾಗ, ನಾನು ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ. ಬೇರೆ ಯಾರಾದರೂ ಅವರನ್ನು ಬೆಂಬಲಿಸಲು ಬಯಸಿದರೆ, ನಾವು ಒಟ್ಟಾಗಿ ಸೇರಿ ಕೆಲಸ ಮಾಡೋಣ. ಈ ವೀಡಿಯೊವನ್ನು ವೈರಲ್ ಮಾಡಲು ನಿಮಗೆ ಧೈರ್ಯವಿದೆಯೇ? ಈ ಮೇಲಿನ ಸಾಲುಗಳು ಕೆಲವು ಕೆಲಸವಿಲ್ಲದ ಫಾಲೋವರ್ಸ್​ಗಳಿಗಾಗಿ ಮಾತ್ರ. ಇದು ಕೇವಲ ಆರಂಭ ಅಂತ ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಖಾಸಗಿ ವಿಡಿಯೋ ವೈರಲ್​ ಬೆನ್ನಲ್ಲೇ ಎಚ್ಚೆತ್ತ ಜ್ಯೋತಿ ರೈ.. ನಟಿ ಕಾರ್ಯಕ್ಕೆ ಭಾರೀ ಮೆಚ್ಚುಗೆ!

https://newsfirstlive.com/wp-content/uploads/2024/05/jothi-rai.jpg

Load More