ಗಿಣಿರಾಮ ಧಾರಾವಾಹಿಯಲ್ಲಿ ಮಹತಿಯ ಪಾತ್ರದಲ್ಲಿ ಮಿಂಚಿದ್ದ ನಟಿ
ಗುರು ಹಿರಿಯರ ಸಮ್ಮುಖದಲ್ಲಿ ನಟಿ ನಯನಾ ನಾಗರಾಜ್ ಎಂಗೇಜ್ಮೆಂಟ್
ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ನಿಶ್ಚಿತಾರ್ಥದ ವಿಡಿಯೋ
ಕನ್ನಡ ಕಿರುತೆರೆಯ ಜನಪ್ರಿಯ ಸೂಪರ್ ಹಿಟ್ ಧಾರಾವಾಹಿ ಗಿಣಿರಾಮ. ಉತ್ತರ ಕರ್ನಾಟಕ ಭಾಷೆಯ ಸೊಗಡನ್ನ ಹೊಂದಿದ್ದ ಗಿಣಿರಾಮ ಸೀರಿಯಲ್ ನಟಿ ನಯನಾ ನಾಗರಾಜ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹೌದು, ನಟಿ ನಯನಾ ನಾಗರಾಜ್ ಗುರು ಹಿರಿಯರ ಸಮ್ಮುಖದಲ್ಲಿ ಸರಳವಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.
ಇದನ್ನು ಓದಿ: ಮುಕ್ತಾಯ ಹಂತದಲ್ಲಿ ಜನಪ್ರಿಯ ‘ಗಿಣಿರಾಮ’ ಧಾರಾವಾಹಿ! ಕಾರಣವೇನು..?
ನಟಿ ನಯನಾ ನಾಗರಾಜ್ ಅವರು ಸುಹಾಸ್ ಶಿವಣ್ಣ ಎಂಬುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ವಿಡಿಯೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್ನೂ ಈ ವಿಡಿಯೋ ನೋಡಿದ ಅಭಿಮಾನಿಗಳು ನಟಿ ನಯನಾ ನಾಗರಾಜ್ ಅವರಿಗೆ ಶುಭ ಕೋರುತ್ತಿದ್ದಾರೆ.
View this post on Instagram
ನಟಿ ನಯನಾ ನಾಗರಾಜ್ ಗಿಣಿರಾಮ ಧಾರಾವಾಹಿಯಲ್ಲಿ ಮಹತಿಯ ಪಾತ್ರ ನಿಭಾಯಿಸುತ್ತಿದ್ದರು. ಬಿಗ್ಬಾಸ್ ಸೀಸನ್ 8 ಮುಗಿದ ಬಳಿಕ ಮಿನಿ ಸೀಸನ್ನಲ್ಲಿ ನಯನ ನಾಗರಾಜ್ ಕಾಲಿಟ್ಟಿದ್ದರು. ಈ ಮೊದಲು ನಟಿ ನಯನ ನೈಜ ಘಟನೆಗಳಿಂದ ಪ್ರೇರಿತವಾದ ಕ್ರೈಂ ಕತೆ ಶಾಂತಂ ಪಾಪಂ ಮೂಲಕ ವೀಕ್ಷಕರ ಮನಸ್ಸನ್ನು ಗೆದ್ದಿದ್ದರು. ಇದಾದ ಬಳಿಕ ಪಾಪ ಪಾಂಡು, ಗಿಣಿರಾಮ ಸೀರಿಯಲ್ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ