newsfirstkannada.com

ಮಿಡ್​ನೈಟ್​​ ನಟಿಯ ಮೇಲೆ ಹಲ್ಲೆಗೆ ಯತ್ನ.. ಬೈಕಿನಲ್ಲಿ ಬಂದು ಕಾರಿನ ಗಾಜು ಪುಡಿ ಮಾಡಿದ ದುಷ್ಕರ್ಮಿಗಳ

Share :

Published August 24, 2024 at 10:55am

    ನಟಿ ಪಾಯಲ್ ಮೇಲೆ ಹಲ್ಲೆಗೆ ಯತ್ನಿಸಿದ ದುಷ್ಕರ್ಮಿಗಳು

    ಕಣ್ಣೀರು ಹಾಕುತ್ತಾ ವಿಡಿಯೋ ಮಾಡಿದ ನಟಿ ಪಾಯಲ್​

    ದುಷ್ಕರ್ಮಿಗಳ ಮೃಗೀಯ ವರ್ತನೆಯನ್ನು ವಿವರಿಸಿದ ನಟಿ

ಇತ್ತೀಚೆಗೆ ರೋಡ್​ ರೇಜ್​ ಪ್ರಕರಣಗಳು ಹೆಚ್ಚುತ್ತಿವೆ. ಮನುಷ್ಯತ್ವವೇ ಇಲ್ಲದಂತೆ ವರ್ತಿಸುವ ಅನೇಕ ಘಟನೆಗಳು ಒಂದಾದ ಮೇಲೊಂದರಂತೆ ಬೆಳಕಿಗೆ ಬರುತ್ತಿವೆ. ಅದರಂತೆಯೇ ಇದೀಗ ನಟಿ ಮೇಲೆ ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಹಲ್ಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಬಂಗಾಳಿ ನಟಿ ಪಾಯಲ್​ ಮುಖರ್ಜಿ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಶುಕ್ರವಾರದಂದು ಕಾರಿನಲ್ಲಿ ಸಂಚರಿಸುವ ವೇಳೆ ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಮೃಗೀಯ ರೀತಿ ವರ್ತಿಸಿದ್ದಾರೆ. ಸದ್ಯ ಈ ಘಟನೆಯಿಂದ ನೊಂದ ನಟಿ ವಿಡಿಯೋ ರೆಕಾರ್ಡ್​​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಇಷ್ಟರಲ್ಲೇ ಮದುವೆ ಆಗ್ತೀನಿ ಎಂದ ಡಾಲಿ​​.. ಮ್ಯಾರೇಜ್ ಗುಟ್ಟು ಬಿಚ್ಚಿಟ್ಟ ನಟ ಧನಂಜಯ್

ಕೋಲ್ಕತ್ತಾದ ಸದರ್ನ್​​​ ಅವೆನ್ಯೂ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ದುಷ್ಕರ್ಮಿಗಳು ಕಾರಿನ ಗಾಜನ್ನು ಒಡೆದಿದ್ದಾರೆ. ನಟಿ ವಿಡಿಯೋದಲ್ಲಿ ದುಷ್ಕರ್ಮಿಗಳ ದಾಳಿಯಿಂದ ಡ್ಯಾಮೇಜ್​ ಆದ ಕಾರಿನ ದೃಶ್ಯವನ್ನು ತೋರಿಸಿದ್ದಾಳೆ. ಜೊತೆಗೆ ಅವರ ವರ್ತನೆಯ ಬಗ್ಗೆಯೂ ವಿವರಿಸಿದ್ದಾಳೆ. ದುಷ್ಕರ್ಮಿಗಳಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ವಿಡಿಯೋದಲ್ಲಿ ಒತ್ತಾಯಿಸಿದ್ದಾಳೆ.

ಇದನ್ನೂ ಓದಿ: ಸ್ಪೆಷಲ್ ದಿನದಂದೇ ಅದ್ಧೂರಿಯಾಗಿ ಬೇಬಿ ಶವರ್ ಪಾರ್ಟಿ ಮಾಡಿದ ನಟಿ ನೇಹಾ ಗೌಡ; ಯಾರೆಲ್ಲಾ ಬಂದಿದ್ರು?

ನಟಿ ಪಾಯಲ್​ ಹಂಚಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅನೇಕರು ಈ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ. ದೇಶದಲ್ಲಿ ಮಹಿಳೆಯರಿಗೆ ಸುರಕ್ಷತಾ ಕಡಿಮೆ ಇದೆ ಎಂದು ಕಿಡಿಕಾರಿದ್ದಾರೆ. ಇನ್ನು ಕೆಲವರು ರಾಜ್ಯದಲ್ಲಿ ಮಹಿಳಾ ಮುಖ್ಯಮಂತ್ರಿ ಇದ್ದರೂ ಸೂಕ್ತವಾದ ರಕ್ಷಣೆಯಿಲ್ಲ ಎಂದು ಟೀಕಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಿಡ್​ನೈಟ್​​ ನಟಿಯ ಮೇಲೆ ಹಲ್ಲೆಗೆ ಯತ್ನ.. ಬೈಕಿನಲ್ಲಿ ಬಂದು ಕಾರಿನ ಗಾಜು ಪುಡಿ ಮಾಡಿದ ದುಷ್ಕರ್ಮಿಗಳ

https://newsfirstlive.com/wp-content/uploads/2024/08/Actress-Payal.jpg

Load More