ಮದುವೆ ಆಗೋ ಬಗ್ಗೆ ಮಾತನಾಡಿದ ಡಾಲಿ
ಇಂಡಸ್ಟ್ರಿ ಬಗ್ಗೆ ಕೆಟ್ಟದಾಗಿ ಮಾತಾಡೋದು ಬಿಡಿ ಎಂದ ಧನಂಜಯ್
ಡಾಲಿ ಕೈಯಲ್ಲಿ ಎಷ್ಟು ಸಿನಿಮಾಗಳಿವೆ ಗೊತ್ತಾ? ಇಲ್ಲಿದೆ ಮಾಹಿತಿ
ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ಮದುವೆ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಮದುವೆ ಯಾವಾಗ ಆಗಲಿದ್ದೇನೆ ಎಂಬ ಬಗ್ಗೆಯೂ ಹೇಳಿದ್ದಾರೆ. ಜೊತೆಗೆ ಅವರ ಅಜ್ಜಿಯ ಆಸೆಯಂತೆ ಮದುವೆ ಆಗಬೇಕು ಎಂದಿದ್ದಾರೆ.
ಡಾಲಿ ಧನಂಜಯ್ ಮದುವೆ ವಿಚಾರ ಹಿಂದಿನಿಂದಲೂ ಕೇಳಿ ಬರುತ್ತಿದೆ. ಆದರೆ ಡಾಲಿ ಈ ಬಗ್ಗೆ ಅಷ್ಟೇನು ತಲೆ ಕೆಡೆಸಿಕೊಂಡಿರಲಿಲ್ಲ. ಆಗುವ ಸಮಯ ಬಂದಾಗ ಆಗೋದು ಎಂದು ಹೇಳುತ್ತಾ ಬಂದಿದ್ದಾರೆ. ಆದರೀಗ ಅಭಿಮಾನಿಗಳ ಕುತೂಹಲದ ಪ್ರಶ್ನೆಗೆ ಡಾಲಿ ಉತ್ತರಿಸಿದ್ದಾರೆ.
ಇದನ್ನೂ ಓದಿ: ಪ್ರೀತಿಯ ಗುಟ್ಟು ರಟ್ಟಾಯ್ತು.. ಆ್ಯಂಕರ್ ಅನುಶ್ರೀ ಮದುವೆಗೆ ಕಾಯ್ತಾ ಇದ್ದೀವಿ ಎಂದ ಫ್ಯಾನ್ಸ್!
ಡಾಲಿ ಮದುವೆ ವಿಚಾರವಾಗಿ ಮಾತನಾಡಿದ್ದು, ಇಷ್ಟರಲ್ಲೇ ಮದುವೆ ಆಗ್ತೀನಿ ಎಂದಿದ್ದಾರೆ. ನಾನು ಮದುವೆ ಆಗ್ಬೇಕು ಅನ್ನೋದು ನಮ್ಮ ಅಜ್ಜಿಯ ಆಸೆ. ಆದಷ್ಟು ಬೇಗ ನಾನೂ ಮದುವೆ ಆಗ್ತೀನಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆ್ಯಂಕರ್ ಅನುಶ್ರೀಗೆ ಹೊಸ ಪ್ರೀತಿ, ಹೊಸ ಮದುವೆ.. ಬಿಗ್ ಸರ್‌ಪ್ರೈಸ್ ಕೊಟ್ಟ ಸ್ಟಾರ್ ನಿರೂಪಕಿ; ಏನಿದು? VIDEO
ಬಳಿಕ ಮಾತನಾಡಿದ ಅವರು, ಇಂಡಸ್ಟ್ರಿ ಬಗ್ಗೆ ಕೆಟ್ಟದಾಗಿ ಮಾತಾಡೋದು ಬಿಡಿ. ನಾವೇ ನಮ್ಮ ಇಂಡಸ್ಟ್ರಿ ಬಗ್ಗೆ ನೆಗಟಿವ್ ಆಗಿ ಮಾತಾಡಬಾರದು. ನಿರಂತರವಾಗಿ ಕೆಲಸ ಮಾಡ್ಬೇಕು. ಅದರಿಂದಷ್ಟೇ ಇಂಡಸ್ಟ್ರಿ ಉಳಿಯೋದು ಎಂದು ಹೇಳಿದ್ದಾರೆ.
ಡಾಲಿ ಸಿನಿಮಾ ವಿಚಾರಕ್ಕೆ ಬರೋದಾದ್ರೆ. ಸದ್ಯ ಅಣ್ಣ ಫ್ರಮ್ ಮೆಕ್ಸಿಕೋ ಸಿನಿಮಾದಲ್ಲಿ ಡಾಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಜಿಂಗೋ ಸಿನಿಮಾ ಕೂಡ ಡಾಲಿ ಕೈಯಲ್ಲಿದೆ. ಇದಲ್ಲದೆ ನಾಡಪ್ರಭು ಕೆಂಪೇಗೌಡ, ಪುಷ್ಪ-2, ಉತ್ತರಖಾಂಡ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ